ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣವು ಈಗ ಫೇಕ್‌ಬುಕ್ ಆಗುತ್ತಿರುವುದು ಅದರಲ್ಲಿ ಹರಿದಾಡುತ್ತಿರುವ ಮಾಹಿತಿ, ಪೋಸ್ಟ್‌ಗಳನ್ನು ಗಮನಿಸುತ್ತಲೇ ಭ್ರಮನಿರಸನಗೊಂಡವರಿಗೆ ತಿಳಿದಿರುವ ವಿಚಾರ. ಒಂದು ರಾಜಕೀಯ ಕಾಮೆಂಟ್‌ನಿಂದ ಸ್ನೇಹಿತರಿಂದಲೇ ದೂರವಾದ ಪ್ರಕರಣಗಳೂ ಇವೆ. ಇಷ್ಟೇ ಅಲ್ಲ, ಒಂದು ಸಲ ಫೇಸ್‌ಬುಕ್ ಆ್ಯಪ್ ಓಪನ್ ಮಾಡಿಟ್ಟುಕೊಂಡರೆ, ಗಂಟೆ ಕಳೆದದ್ದೇ ಗೊತ್ತಾಗುವುದಿಲ್ಲ. ಆ ಒಂದು ಗಂಟೆಯಲ್ಲಿ ನಾನೇನು ಮಾಡಿದೆ? ಏನೂ ಇಲ್ಲ ಅನ್ನಿಸಿದಾಗ, ಸಮಯ ವ್ಯರ್ಥವಾಗಿರುವುದರ ಚಿಂತೆ ಶುರುವಾಗುತ್ತದೆ. ಇವೆಲ್ಲದರ ಗೊಡವೆಯೇ ಬೇಡ. ನಮಗೆ ಆನ್‌ಲೈನ್‌ನ ಸ್ನೇಹವೂ ಫೇಕ್ ಸ್ನೇಹವೂ ಬೇಡ, ನೇರವಾಗಿಯೇ ಫೋನ್ ಮೂಲಕ ಸಂಪರ್ಕದಲ್ಲಿದ್ದುಕೊಂಡು ಶಾಂತಿಯಿಂದಿರೋಣ ಎಂದುಕೊಂಡವರಿಗಾಗಿ ಇಲ್ಲಿದೆ ಮಾಹಿತಿ.
ಫೇಸ್‌ಬುಕ್‌ನಲ್ಲಿ ಅಷ್ಟೊಂದು ಫ್ರೆಂಡ್ಸ್ ಇದ್ದಾರಲ್ವಾ, ಅವರನ್ನೆಲ್ಲಾ ಹೇಗೆ ಒಂದೇ ಬಾರಿಗೆ ಕೈಬಿಡುವುದು? ಅಂತ ಯೋಚನೆ ಮಾಡುವವರಿಗೆ ಇರುವ ಒಂದು ಆಯ್ಕೆಯೆಂದರೆ, ಸೀಮಿತ ಸಮಯಕ್ಕೆ ಫೇಸ್‌ಬುಕ್ ಸಾಮಾಜಿಕ ಜಾಲತಾಣದಿಂದ ಹೊರನಡೆಯುವುದು. ಆಫ್‌ಲೈನ್ ಪ್ರಪಂಚದಲ್ಲಿ ಎಲ್ಲವೂ ಸ್ತಿಮಿತಕ್ಕೆ ಬಂದ ಬಳಿಕ, ಮತ್ತೆ ಆನ್‌ಲೈನ್ ಜಗತ್ತನ್ನು ಸರಿಪಡಿಸಿಕೊಳ್ಳೋಣ ಅಂತ ನೀವು ಭಾವಿಸಿದರೆ, ಸ್ವಲ್ಪ ದಿನ ಬ್ರೇಕ್ ತೆಗೆದುಕೊಳ್ಳಲು, ನೀವು ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು. ಆಗ ನಿಮ್ಮ ಫೋಟೋ, ವೀಡಿಯೊಗಳೆಲ್ಲ ಅಲ್ಲಿಯೇ ಇರುತ್ತವೆ, ಆದರೆ ನಿಮ್ಮ ಪ್ರೊಫೈಲ್ ಯಾರಿಗೂ ಕಾಣಿಸುವುದಿಲ್ಲ. ಆದರೂ ನೀವು ಫೇಸ್‌ಬುಕ್ ಮೆಸೆಂಜರ್ ಬಳಸಬಹುದು.
ತಾತ್ಕಾಲಿಕವಾಗಿ ಎಫ್‌ಬಿ ಬಂದ್ ಮಾಡಲು ಹೀಗೆ ಮಾಡಿ: ಫೇಸ್‌ಬುಕ್ ಸೆಟ್ಟಿಂಗ್ಸ್‌ನಲ್ಲಿ (ಬಲ ಮೇಲ್ತುದಿಯಲ್ಲಿ ತಲೆಕೆಳಗಾದ ತ್ರಿಕೋನ ಬಟನ್ ಕ್ಲಿಕ್ ಮಾಡಿದಾಗ ಕಾಣಿಸುತ್ತದೆ), ಎಡ ಮೇಲ್ಭಾಗ ನೋಡಿದರೆ, ‘ಯುವರ್ ಫೇಸ್‌ಬುಕ್ ಇನ್ಫಾರ್ಮೇಶನ್’ ಟ್ಯಾಬ್ ಒತ್ತಿದಾಗ, ಬಲ ಬದಿಯಲ್ಲಿ ಕೆಳಭಾಗದಲ್ಲಿ ‘ಡಿಲೀಟ್ ಯುವರ್ ಅಕೌಂಟ್ ಆ್ಯಂಡ್ ಇನ್ಫಾರ್ಮೇಶನ್’ ಕ್ಲಿಕ್ ಮಾಡಿ. ಆಗ ಕಾಣಿಸಿಕೊಳ್ಳುವ ಪುಟದಲ್ಲಿ, ಮೆಸೆಂಜರ್‌ನಲ್ಲಿ ಮಾತ್ರ ಇದ್ದು, ಖಾತೆ ನಿಷ್ಕ್ರಿಯಗೊಳಿಸಲು ‘ಡೀಆ್ಯಕ್ಟಿವೇಟ್ ಅಕೌಂಟ್’ ಆಯ್ಕೆ ಗೋಚರಿಸುತ್ತದೆ. 2ನೇ ಆಯ್ಕೆಯಲ್ಲಿ, ನಿಮ್ಮ ಮಾಹಿತಿಯ ಬ್ಯಾಕಪ್ ಅನ್ನು ನಿಮ್ಮ ಕಂಪ್ಯೂಟರಿನಲ್ಲಿ ಇರಿಸಿಕೊಳ್ಳುವ ಆಯ್ಕೆ ಇರುತ್ತದೆ. 3ನೇ ಆಯ್ಕೆಯಲ್ಲಿ ನೀವು ಯಾವುದಾದರೂ ಫೇಸ್‌ಬುಕ್ ಪುಟದ ನಿರ್ವಾಹಕರಾಗಿದ್ದರೆ (ಆ್ಯಡ್ಮಿನ್), ಅದರ ‘ಆಡಳಿತ’ವನ್ನು ಬೇರೆಯವರಿಗೆ ಒಪ್ಪಿಸಿ ನೀವು ನಿರ್ಗಮಿಸಬಹುದು. ಇಲ್ಲವೆಂದಾದರೆ, ಆ ಪುಟವೂ ನಿಷ್ಕ್ರಿಯವಾಗಿಬಿಡುತ್ತದೆ.
ಕೊನೆಯ ಬಟನ್ ಖಾತೆಯನ್ನೇ ಡಿಲೀಟ್ ಮಾಡಿಸುತ್ತದೆ. ಇದು ಶಾಶ್ವತವಾಗಿ ಖಾತೆ ತೆಗೆಯುವ ಆಯ್ಕೆಯಾಗಿರುವುದರಿಂದ ಮತ್ತೊಮ್ಮೆ ಪಾಸ್‌ವರ್ಡ್ ನಮೂದಿಸಬೇಕಾಗುತ್ತದೆ. ಡೀಆ್ಯಕ್ಟಿವೇಟ್ ಮಾಡಿದ ಖಾತೆಯನ್ನು ನೀವು ಮರಳಿ, ಇದೇ ಸೆಟ್ಟಿಂಗ್ಸ್ ಮೂಲಕ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ಆದರೆ ಡಿಲೀಟ್ ಮಾಡಿದ ಖಾತೆ ಮರಳಿ ಪಡೆಯುವುದು ಸಾಧ್ಯವಿಲ್ಲ. ಇಷ್ಟು ಕಾಲದಿಂದ ಬಳಸುತ್ತಿದ್ದ ಫೇಸ್‌ಬುಕ್‌ನಿಂದ ಸಂನ್ಯಾಸ ಪಡೆಯಲು ಗಟ್ಟಿ ಮನಸ್ಸು ಬೇಕು!
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…