ಹೌದು, ಈಗ ತಂತ್ರಜ್ಞಾನ ಮುಂದುವರಿದಂತೆ ಸೈಬರ್ ವಂಚಕರು ಕೂಡ ಅತ್ಯಾಧುನಿಕತೆಗೆ ತಮ್ಮನ್ನು ಒಗ್ಗಿಸಿಕೊಂಡು, ಪ್ರತಿಯೊಂದರಲ್ಲಿಯೂ ಅವಸರ ತೋರಿಸಲೇಬೇಕಾದ ಅನಿವಾರ್ಯತೆ ಇರುವ ಈ ಕಾಲವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಇಮೇಲ್, ಎಸ್ಸೆಮ್ಮೆಸ್ ಹಾಗೂ ವಾಟ್ಸ್ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ವಂಚಕರು ತಮ್ಮ ಬೇಳೆ ಬೇಯಿಸಿಕೊಂಡುಬಿಡುತ್ತಾರೆ. ಒಂದು ಸಣ್ಣ ಕ್ಲಿಕ್‌ನಿಂದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೆಲ್ಲ ಕಳೆದುಕೊಳ್ಳದಂತೆ ಸುರಕ್ಷಿತವಾಗಿರುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ವಂಚನಾ ವಿಧಾನಗಳಲ್ಲಿ ಮಾಲ್‌ವೇರ್, ವೈರಸ್, ಆ್ಯಡ್‌ವೇರ್, ಸ್ಕಿಮ್ಮಿಂಗ್ ಮುಂತಾದವುಗಳೊಂದಿಗೆ ಫೀಶಿಂಗ್ (Phishing) ಕೂಡ ಒಂದು. ಅಂದರೆ, ಗಾಳದಲ್ಲಿ ಆಹಾರ ಇರಿಸಿ ಮೀನು ಹಿಡಿಯುವಂತೆಯೇ, ನಂಬಿಕೆ ಹುಟ್ಟಿಸಿ ಮಾಹಿತಿ ಕದಿಯುವ ಬಗೆಯಿದು.
ಹೇಗೆ?
ನಿಮ್ಮ ಸ್ನೇಹಿತರ ಹೆಸರಿನಲ್ಲಿ ಬರುವ ಇಮೇಲ್‌ನಲ್ಲಿ, “ನಾನು ವಿದೇಶದಲ್ಲಿದ್ದೇನೆ, ಪರ್ಸ್ ಕಳವಾಗಿದೆ. ನನ್ನ ಈ ಖಾತೆಗೆ ಆದಷ್ಟು ಬೇಗ ಹಣ ತುಂಬಿಸಿ, ಬಂದ ಕೂಡಲೇ ವಾಪಸ್ ಕೊಡುತ್ತೇನೆ’ ಎಂಬ ಒಕ್ಕಣೆ. ನೀವು ನಂಬಿ, ಅವರು ಹೇಳಿದ ಖಾತೆಗೆ ಹಣ ಕಳಿಸುತ್ತೀರಿ. ಅದು ವಂಚಕರ ಬ್ಯಾಂಕ್ ಖಾತೆ ಆಗಿರುತ್ತದೆ. ಸ್ನೇಹಿತರ ಮೇಲ್ ಹ್ಯಾಕ್ ಮಾಡಿಯೋ ಅಥವಾ ಸ್ನೇಹಿತರನ್ನೇ ಹೋಲುವಂತೆ ಸೃಷ್ಟಿಸಿದ ಇಮೇಲ್ ಖಾತೆಯಿಂದಲೋ ಈ ರೀತಿ ಕೋರಿಕೆ ಬಂದಿರಬಹುದು. ಎಚ್ಚರಿಕೆಯಿರಿ.
ಲಿಂಕ್‌ಗಳ ಬಗ್ಗೆ ಎಚ್ಚರೆಚ್ಚರ!
ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ಇಮೇಲ್ ಬರಬಹುದು. ‘ಕಳೆದ ಹಣಕಾಸು ವರ್ಷದಲ್ಲಿ ಪಾವತಿಸಿದ ಆದಾಯ ತೆರಿಗೆ ಹಣವನ್ನು ನಿಮಗೆ ವಾಪಸ್ ಮಾಡಲಾಗುತ್ತದೆ, ನಿಮ್ಮ ಖಾತೆಯ ವಿವರಗಳನ್ನು ಇಲ್ಲಿ ತುಂಬಿರಿ’ ಎಂಬ ಒಕ್ಕಣೆಯೊಂದಿಗೆ ಒಂದು ಲಿಂಕ್ ಇರುತ್ತದೆ. ಅದರಲ್ಲಿ ಹೆಸರು, ಖಾತೆ ಹೆಸರು, ಫೋನ್ ಸಂಖ್ಯೆ, ಆಧಾರ್… ಹೀಗೆ ಏನೇನೋ ವೈಯಕ್ತಿಕ ವಿವರಗಳನ್ನು ದಾಖಲಿಸಲು ಆಯ್ಕೆಗಳಿರುತ್ತವೆ. ನೀವು ಎಲ್ಲ ವಿವರ ಭರ್ತಿ ಮಾಡುತ್ತೀರಿ. ಕೆಲವೇ ಕ್ಷಣಗಳಲ್ಲಿ ಆ ಬ್ಯಾಂಕ್ ಖಾತೆಯಲ್ಲಿ ಇರುವ ಹಣವೂ ಮಾಯವಾಗಿರುತ್ತದೆ.
ಇದು ಹೇಗೆ ಸಾಧ್ಯ?
ನಮಗೆ ಬಂದಿರುವ ಇಮೇಲ್ ಎಲ್ಲಿಂದ ಬಂದಿದೆ ಮತ್ತು ಅದರಲ್ಲಿರುವ ಲಿಂಕ್ ಎಲ್ಲಿಯದು ಎಂದು ತಿಳಿದುಕೊಳ್ಳಬೇಕಾದುದು ಅತ್ಯಂತ ಮುಖ್ಯ. ಏನೇನೋ ಹೆಸರುಗಳಲ್ಲಿ, ಯಾವ್ಯಾವುದೋ ಡೊಮೇನ್ ಹೆಸರುಗಳ ಮೂಲಕ ಇಂಥಹ ಇಮೇಲ್ ಬಂದಿರಬಹುದು. ಅಥವಾ ನಿಮ್ಮ ಬ್ಯಾಂಕಿನ ಡೊಮೇನ್ (URL) ಹೋಲುವ, ತಕ್ಷಣಕ್ಕೆ ಕಣ್ಣಿಗೆ ಕಾಣಿದಂತಹಾ ಸಣ್ಣಪುಟ್ಟ ಅಕ್ಷರ ತಪ್ಪು ಇರುವ, ಉದಾಹರಣೆಗೆ, rbi.org ಅಥವಾ rbi.in ಅಥವಾ reservebankofindia.org, indianreserveban.org ಎಂಬಿತ್ಯಾದಿ ಹೆಸರಿನಲ್ಲಿ ಇಮೇಲ್ ಬರಬಹುದು ಅಥವಾ ಲಿಂಕ್ ಕೂಡ ಇರಬಹುದು. ಆದರೆ, ಭಾರತೀಯ ರಿಸರ್ವ್ ಬ್ಯಾಂಕಿನ ದೃಢೀಕೃತ ವೆಬ್ ತಾಣ rbi.org.in ಎಂಬುದಾಗಿದೆ.
ಅದೇ ರೀತಿ, ತೆರಿಗೆ ಇಲಾಖೆ ಹೆಸರಿನಲ್ಲಿಯೂ ಇಮೇಲ್ ಬರಬಹುದು. ತೆರಿಗೆ ಹಣ ಮರುಪಾವತಿಸುತ್ತೇವೆ ಎಂಬ ಒಕ್ಕಣೆಯ ಆಮಿಷವಿರುತ್ತದೆ. ಬ್ಯಾಂಕಿನ ಅಥವಾ ಆದಾಯ ತೆರಿಗೆ ಇಲಾಖೆಯದ್ದೇ ಯುಆರ್‌ಎಲ್ ಕಾಣಿಸುವಂತಾಗಲು Punycode ಎಂಬ ವಂಚನಾ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆದರೆ ನೆನಪಿಡಿ, ಸರಿಯಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸಿದ ಬಳಿಕ ತೆರಿಗೆ ಹಣವು ನೇರವಾಗಿ, ಈ ಮೊದಲೇ ಸಂಯೋಜಿಸಿದ ನಮ್ಮ ಬ್ಯಾಂಕ್ ಖಾತೆಗೆ ಮರುಪಾವತಿಯಾಗುತ್ತದೆ. ಇದು ಸೂಕ್ಷ್ಮವಾಗಿ ಗಮನಿಸದಿದ್ದರೆ ಗೊತ್ತಾಗುವುದೇ ಇಲ್ಲ.
ಹೇಗೆ ಸುರಕ್ಷಿತವಾಗುವುದು?
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…