ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಪ್ರೈವೆಸಿ ಅಥವಾ ನಮ್ಮ ಸ್ವಂತ ವಿಷಯಗಳ ಕುರಿತಾದ ಗೌಪ್ಯತೆ (ಖಾಸಗಿ ಮಾಹಿತಿಯ ರಕ್ಷಣೆ) ಎಂಬುದರ ಬಗ್ಗೆ ಈಗ ಜಾಗೃತಿ ಮೂಡಿದೆ. ಆದರೂ ನಾವೇ ತಪ್ಪು ಮಾಡುತ್ತಿದ್ದೇವೆ. ವಿಶೇಷವಾಗಿ ಈಗಿನ ಮೊಬೈಲ್ ಫೋನ್‌ಗಳಲ್ಲಿ ಮತ್ತೊಬ್ಬರಿಗೆ ಇಷ್ಟವಾದ, ಭಾರಿ ಸದ್ದು ಮಾಡುತ್ತಿರುವ ಆ್ಯಪ್ ಅಂತ ನಾವು ಕೂಡ ಇನ್‌ಸ್ಟಾಲ್ ಮಾಡಿಕೊಂಡಿರುತ್ತೇವೆ. ನಮಗೆ ಬೇಕುಬೇಕಾದ ಮತ್ತು ಬೇಡವಾದ ಆ್ಯಪ್‌ಗಳನ್ನೂ ಅಳವಡಿಸಿಕೊಂಡು, ಅದು ಕೇಳಿದ ಅನುಮತಿಗಳಿಗೆಲ್ಲಾ (ಹೆಚ್ಚಿನ ಸಮಯದಲ್ಲಿ ಅದು ಏನನ್ನು ಕೇಳುತ್ತಿದೆ ಎಂಬುದನ್ನು ಓದದೆಯೇ) ‘ಯಸ್, ಯಸ್’ ಅಂತ ಕ್ಲಿಕ್ ಮಾಡುತ್ತಾ ಹೋಗಿರುತ್ತೇವೆ. ಇಲ್ಲಿ ನಮ್ಮ ಪ್ರೈವೆಸಿಗೆ ಹಾನಿಯಾಗುತ್ತಿದೆ ಎಂಬುದರ ಕುರಿತು ಎಚ್ಚರಿಕೆಯಾಗಲೀ, ಕಾಳಜಿಯಾಗಲೀ ತೋರುವುದೇ ಇಲ್ಲ.
ಪ್ರೈವೆಸಿಗೆ ಧಕ್ಕೆ ಹೇಗೆ?: ಒಂದು ಕಾರಣ ಇಲ್ಲಿದೆ. ನಿಮ್ಮ ಮೊಬೈಲ್ ಫೋನ್‌ನಲ್ಲಿ ಆ್ಯಪ್‌ಗಳನ್ನು ನೀವು ಇನ್‌ಸ್ಟಾಲ್ ಮಾಡಿಕೊಳ್ಳುವಾಗ, ಅವು ನಿಮ್ಮ ಇಮೇಲ್, ಫೋನ್ ನಂಬರ್, ಕಾಂಟ್ಯಾಕ್ಸ್ಟ್ ಲಿಸ್ಟ್, ಮೆಸೇಜಸ್, ಸ್ಟೋರೇಜ್, ಸೋಷಿಯಲ್ ಮೀಡಿಯಾ ಖಾತೆಗಳು, ಲೊಕೇಶನ್… ಹೀಗೆ ಬೇಕಾದ, ಬೇಡವಾದ ಎಲ್ಲ ರೀತಿಯ ನಿಮ್ಮ ಖಾಸಗಿ ಮಾಹಿತಿಗೆ ಆ್ಯಕ್ಸೆಸ್ (ಪ್ರವೇಶಾನುಮತಿ) ಕೇಳಿರುತ್ತದೆ. ನೀವು ಗೊತ್ತಿದ್ದೋ, ಗೊತ್ತಿಲ್ಲದೆಯೋ ‘ಯಸ್’ ಅಂತ ಒಪ್ಪಿಗೆ ನೀಡಿರುತ್ತೀರಿ. ಕೆಲವು ಆ್ಯಪ್‌ಗಳು ನಮ್ಮ ಈ ಖಾಸಗಿ ಮಾಹಿತಿಯನ್ನು ಸಂಗ್ರಹಿಸಿ, ಮಾರುಕಟ್ಟೆ ಪ್ರಚಾರದಲ್ಲಿ ತೊಡಗುವ ಇತರರಿಗೆ ಮಾರಾಟ ಮಾಡಿರುತ್ತವೆ ಎಂಬುದು ನೆನಪಿರಲಿ. ಅಥವಾ ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯಲೆಂದೇ ಕೆಲವು ಆ್ಯಪ್‌ಗಳು ರೂಪುಗೊಂಡಿರುತ್ತವೆ.
ಗೂಗಲ್ ಈ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುತ್ತದೆ, ಕಳೆದ ವಾರ 22ರಷ್ಟು ಇಂಥ ಫೀಶಿಂಗ್ (ನಿಮ್ಮ ಮಾಹಿತಿಗೆ ಕನ್ನ ಹಾಕುವ) ಆ್ಯಪ್‌ಗಳನ್ನು ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಿಂದಲೇ ಗೂಗಲ್ ಕಿತ್ತುಹಾಕಿದೆ. ತಿಂಗಳ ಹಿಂದೆಯೂ 19 ಆ್ಯಪ್‌ಗಳಿಗೆ ಗೇಟ್‌ಪಾಸ್ ನೀಡಿತ್ತು. ಈ ಆ್ಯಪ್‌ಗಳನ್ನು ಹ್ಯಾಕರ್‌ಗಳು ಜಾಹೀರಾತು ಮೂಲಕ ವಂಚನೆ ಎಸಗಲು ಬಳಸುತ್ತಿದ್ದಾರೆ ಎಂದು ಸೋಫೋಸ್ ಎಂಬ ಸೆಕ್ಯುರಿಟಿ ಸಂಶೋಧನಾ ಸಂಸ್ಥೆಯ ವರದಿಯೇ ಇದಕ್ಕೆ ಕಾರಣ. ಕೆಲವಂತೂ ಪ್ಲೇಸ್ಟೋರ್‌ನಲ್ಲಿ 20 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಡೌನ್‌ಲೋಡ್ ಆದಂಥವು, ಮತ್ತು ಉಪಯುಕ್ತವಾದ ಆ್ಯಪ್‌ಗಳ ಕೆಟಗರಿಗೆ ಸೇರಿದವು. ಅವು ನಿರಂತರವಾಗಿ ಹಿನ್ನೆಲೆಯಲ್ಲಿ ಕಾರ್ಯಾಚರಿಸುತ್ತಿರುತ್ತವೆ. ಇದರಿಂದ ಬ್ಯಾಟರಿ ಬೇಗನೇ ಖಾಲಿಯಾಗುತ್ತದೆ ಎಂಬುದಷ್ಟೇ ನಮಗೆ ಮೇಲ್ನೋಟಕ್ಕೆ ಕಾಣುವ ಸಮಸ್ಯೆ. ಹ್ಯಾಕರ್‌ಗಳ ಸರ್ವರ್‌ಗೆ ನಮ್ಮ ಫೋನ್‌ನ ಮಾಹಿತಿಯೆಲ್ಲವನ್ನೂ ರವಾನಿಸುವ ಸಾಧ್ಯತೆಗಳಿವೆ. ಜತೆಗೆ, ಆ ಸರ್ವರ್‌ಗೆ ಸಂಪರ್ಕಿಸುವ ಮೂಲಕ, ನಮಗೆ ತಿಳಿಯದಂತೆ ಮಾಲೀಶಿಯಸ್ (ದುರುದ್ದೇಶ ಸಾಧನೆಗಾಗಿ) ಆ್ಯಪ್‌ಗಳನ್ನೂ ಅಳವಡಿಸಿ, ನಮ್ಮ ಫೋನ್‌ಗಳನ್ನು ನಿಯಂತ್ರಿಸುವ ಅಪಾಯವೂ ಇದೆ.
ಫೋಟೋ ಎಡಿಟಿಂಗ್, ಗೇಮ್ಸ್, ಗಣಿತದ ಆಟ ಇತ್ಯಾದಿ ರೂಪದಲ್ಲಿರುವ ಈ ‘ಉಪಯುಕ್ತ’ ಆ್ಯಪ್‌ಗಳ ಹೆಸರು ಇಲ್ಲಿದೆ. ನಿಮ್ಮ ಫೋನ್‌ನಲ್ಲಿದ್ದರೆ ಡಿಲೀಟ್ ಮಾಡಿಕೊಳ್ಳಿ. ಯಾವುದೇ ಆ್ಯಪ್ ಅಳವಡಿಸಿಕೊಳ್ಳುವ ಮುನ್ನ ಕಟ್ಟೆಚ್ಚರ ವಹಿಸಿ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 10 ಡಿಸೆಂಬರ್ 2018
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು