ಆ್ಯಪಲ್ ಕಂಪನಿಯು ತನ್ನ ಹೊಚ್ಚ ಹೊಸ ಆ್ಯಪಲ್ ವಾಚ್ 7 ಸರಣಿಯ ಸ್ಮಾರ್ಟ್ ವಾಚ್‌ಗಳನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂರು ವಾರಗಳ ಕಾಲ ಅದನ್ನು ಬಳಸಿ ನೋಡಿದಾಗ ಈ ವಾಚ್‌ನ ಹೊಸ ಸಾಧ್ಯತೆಗಳು, ಹಿಂದಿನ 6ನೇ ಸರಣಿಗಿಂತ ಯಾವ ರೀತಿ ಭಿನ್ನವಾಗಿದೆ ಎಂಬುದು ಅರಿವಿಗೆ ಬಂತು. ಇಲ್ಲಿದೆ ವಿವರವಾದ ಮಾಹಿತಿ.
7ನೇ ಸರಣಿಯ ಆ್ಯಪಲ್ ವಾಚ್‌ಗಳು 2 ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿವೆ. 41ಮಿಮೀ ಮತ್ತು 45 ಮಿಮೀ ಕೇಸ್ ಉಳ್ಳದ್ದು. ಸೀರೀಸ್ 6 ವಾಚುಗಳಿಗಿಂತ ಸ್ವಲ್ಪ ವ್ಯತ್ಯಾಸಗಳಿರುವುದರಿಂದ, ಹೋಲಿಕೆ ಮಾಡಿಯೇ ವಿಮರ್ಶೆ ಮಾಡುವುದು ಸೂಕ್ತ ಎನಿಸುತ್ತದೆ. ಗಾತ್ರವನ್ನು ಗಮನಿಸಿದರೆ, ಹಿಂದಿನ ವಾಚ್‌ಗಿಂತ ಇದು ತಲಾ 1 ಮಿಮೀ ದೊಡ್ಡದು. ಜೊತೆಗೆ, ಬೆಝೆಲ್ (ಸ್ಕ್ರೀನ್ ಸುತ್ತಲಿರುವ ಖಾಲಿ ಜಾಗ) ಕಡಿಮೆಯಾಗಿರುವುದರಿಂದ, ಡಿಸ್‌ಪ್ಲೇ ಸ್ಕ್ರೀನ್ ಶೇ.20ರಷ್ಟು ದೊಡ್ಡದಿದೆ. ಹೀಗಾಗಿ, ವಾಚ್‌ನಲ್ಲಿ ಫೊಟೋಗಳು, ಮ್ಯಾಪ್ ವೀಕ್ಷಣೆಗೆ ಹೆಚ್ಚು ಅನುಕೂಲವಿದೆ. ಸ್ಕ್ರೀನ್ ಮೇಲಿರುವ ಬಟನ್‌ಗಳು ಕೂಡ ದೊಡ್ಡದಾಗಿರುವುದರಿಂದ, ಟ್ಯಾಪ್ ಮಾಡಲು ಅನುಕೂಲವಾಗಿದ್ದು, ಸಂದೇಶಗಳ ಪಠ್ಯವೂ ಹೆಚ್ಚು ಕಾಣಿಸುತ್ತದೆ, ಓದಲು ಅನುಕೂಲ. ಅಷ್ಟೇ ಅಲ್ಲ, 7ನೇ ಸರಣಿಯ ವಾಚ್‌ನಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದೆಂದರೆ, ಕ್ವೆರ್ಟಿ ಮಾದರಿಯ ಕೀಬೋರ್ಡ್. ಹೀಗಾಗಿ ಸಂದೇಶಗಳಿಗೆ ಉತ್ತರಿಸುವುದು, ವಾಚ್‌ನಲ್ಲೇ ಟೈಪ್ ಮಾಡುವುದು ಸುಲಭವಾಗುತ್ತದೆ.
ಸೀರೀಸ್ 7ರ ವಾಚ್‌ಗಳಿಗಾಗಿಯೇ ಸಾಕಷ್ಟು ವಾಚ್ ಫೇಸ್‌ಗಳು (ವಾಚ್ ಸ್ಕ್ರೀನ್ ಅನ್ನು ಅಲಂಕರಿಸುವ ಹಿನ್ನೆಲೆ) ಸಿದ್ಧವಾಗಿದ್ದು, ವೈಶಿಷ್ಟ್ಯಪೂರ್ಣವೂ, ಆಕರ್ಷಕವಾಗಿಯೂ ಇವೆ.
ಕಾರ್ಯಾಚರಣೆ, ಬ್ಯಾಟರಿ
ಹಿಂದಿನ ವಾಚ್‌ಗೆ ಹೋಲಿಸಿದರೆ, ಅತ್ಯಾಧುನಿಕ ಎಸ್7 ಚಿಪ್‌ಸೆಟ್‌ನಿಂದಾಗಿ ಕಾರ್ಯಾಚರಣೆಯು ಅತ್ಯಂತ ಸುಲಲಿತವಾಗಿದ್ದು, ವೇಗವಾಗಿದೆ. ನಿದ್ರೆಯನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಇದರ ‘ಹೆಲ್ತ್’ ಆ್ಯಪ್‌ನಲ್ಲಿ ಅಡಕವಾಗಿದ್ದು, ಇದರ ಬಳಕೆಯೂ ಸೇರಿದಂತೆ ಸುಮಾರು ಒಂದುವರೆ ದಿನ ಬ್ಯಾಟರಿ ಚಾರ್ಜ್ ಇರುತ್ತದೆ. ಸುಮಾರು ಅರ್ಧ ಗಂಟೆಯ ನಡಿಗೆಯನ್ನು ದಾಖಲಿಸಿದರೆ, ಶೇ.7ರಷ್ಟು ಬ್ಯಾಟರಿ ಚಾರ್ಜ್ ಖರ್ಚಾಗುತ್ತದೆ.
ಆ್ಯಪಲ್ ಐಫೋನ್ 13ರಂತೆಯೇ ಇಲ್ಲೂ ಕೂಡ ಶೇ.100ರಷ್ಟು ಮರುಬಳಕೆಯ ಅಲ್ಯುಮೀನಿಯಂ, ಶೇ.100ರಷ್ಟು ಟಿನ್, ಶೇ.99ರಷ್ಟು ಮರುಬಳಕೆಯ ಟಂಗ್‌ಸ್ಟನ್ ಮತ್ತಿತರ ಮೂಲವಸ್ತುಗಳನ್ನು ವಾಚ್ ತಯಾರಿಕೆಯಲ್ಲಿ ಬಳಸಲಾಗಿದೆ. ಇದು ಪರಿಸರಕ್ಕೆ ಪೂರಕವಾದ ಅಂಶ. ಆ್ಯಪಲ್ ಹಳೆಯ ಫೋನ್ ಮತ್ತು ವಾಚ್‌ಗಳನ್ನು ಸಂಗ್ರಹಿಸಿ ಮರುಬಳಕೆಗೆ ಉಪಯೋಗಿಸುತ್ತದೆ.
ಆರೋಗ್ಯ
ಇದರ ಕಾರ್ಯಾಚರಣಾ ವ್ಯವಸ್ಥೆಯು ವಾಚ್ ಒಎಸ್8 ಸರಣಿಯದ್ದು. ವಾಚ್ 6 ಸರಣಿಯಂತೆ, ಆರೋಗ್ಯದ ಬಗ್ಗೆ ಹೊಸ ವಾಚ್‌ನಲ್ಲೂ ಗಮನ ಹರಿಸಲಾಗಿದ್ದು, ಧ್ಯಾನದ ಆ್ಯಪ್ ಇದೆ. ಇದು ಉಚ್ಛ್ವಾಸ – ನಿಶ್ವಾಸ (ಉಸಿರಾಟ)ದ ಸಮರ್ಥ ವಿಧಾನದ ಮೂಲಕ ಏಕಾಗ್ರತೆಗೆ ತರಬೇತಿ ನೀಡುತ್ತದೆ. ಹಿಂಭಾಗದಲ್ಲಿ ಆರೋಗ್ಯವನ್ನು ಟ್ರ್ಯಾಕ್ ಮಾಡುವ ವೈಶಿಷ್ಟ್ಯಗಳಿವೆ. ಹೃದಯದ ಬಡಿತ ತಿಳಿಯಲು ಇಸಿಜಿ, ರಕ್ತದ ಆಮ್ಲಜನಕ ಪ್ರಮಾಣ ಅಳೆಯುವ ವ್ಯವಸ್ಥೆ, ಫಿಟ್ನೆಸ್ ಅಳೆಯುವುದು, ಸೈಕ್ಲಿಂಗ್, ನಡಿಗೆ, ಓಟವನ್ನು ದಾಖಲಿಸುವ ವ್ಯವಸ್ಥೆಯಿದೆ.
ನಿದ್ದೆ ಮಾಡುವಾಗಲೂ ಆ್ಯಪಲ್ ವಾಚ್ ಕಟ್ಟಿಕೊಂಡರೆ, ಅದರಲ್ಲಿರುವ ಹೆಲ್ತ್ ಆ್ಯಪ್ ಮೂಲಕ ನಮ್ಮ ದೇಹದ ಚಲನೆ ಆಧರಿಸಿ ನಿದ್ದೆಯನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯಿದೆ. ಅಲ್ಲದೆ, ಉಸಿರಾಟದ ಏರಿಳಿತವನ್ನೂ ಅಳೆದು, ನಿದ್ದೆ ಉತ್ತಮವಾಗಿದೆಯೇ, ಇಲ್ಲವೇ ಎಂದು ಪತ್ತೆ ಮಾಡಿ ತೋರಿಸುತ್ತದೆ.
ಜೊತೆಗೆ ಈ ಬಾರಿಯ ಅನುಕೂಲವೆಂದರೆ, ಕೊರೊನಾ ಕಾಲದಲ್ಲಿ ಮಾಸ್ಕ್ ಧರಿಸಿರುವಾಗ, ಐಫೋನ್‌ಗೆ ಮುಖ ಗುರುತಿಸುವುದು ಕಷ್ಟವಾಗಬಹುದು. ಅಂಥ ಸಂದರ್ಭದಲ್ಲಿ, ಸಮೀಪದಲ್ಲೇ ವಾಚ್ ಇದ್ದರಾಯಿತು, ಫೋನನ್ನು ಸುಲಭವಾಗಿ ಅನ್‌ಲಾಕ್ ಮಾಡಬಹುದು. ಜಲನಿರೋಧಕತೆ, ಧೂಳು ನಿರೋಧಕತೆ ವೈಶಿಷ್ಟ್ಯವನ್ನು ಆ್ಯಪಲ್ ವಾಚ್ 7 ಹೊಂದಿದೆ.
ಬೆಲೆ
ಎರಡು ಗಾತ್ರಗಳಲ್ಲಿ, ಮೂರು ವಿಭಿನ್ನ ಮಾದರಿಗಳಲ್ಲಿ ಆ್ಯಪಲ್ ವಾಚ್ 7 ಲಭ್ಯವಿದೆ. 4ಜಿ ಲಭ್ಯತೆ ಇರುವ ವಾಚ್‌ನಲ್ಲಿ ಇ-ಸಿಮ್ (ಎಲೆಕ್ಟ್ರಾನಿಕ್ ಸಿಮ್) ಅಳವಡಿಸಬಹುದು. ಆದರೆ ಅದಕ್ಕೆ ತಕ್ಕಂತೆ ಫೋನ್ ಪ್ಲ್ಯಾನ್ ಕೂಡ ಬೇಕಾಗುತ್ತದೆ. ಅಲ್ಯೂಮೀನಿಯಂ 41 ಮಿಮೀ ಬೆಲೆ ₹41,900 ಹಾಗೂ 45ಮಿಮೀ ಆವೃತ್ತಿಗೆ ₹44,900. 4ಜಿ, ಸ್ಟೇನ್‌ಲೆಸ್ ಸ್ಟೀಲ್, ಟೈಟಾನಿಯಂ ಮಾಡೆಲ್‌ಗಳಿಗೆ ₹83,900ವರೆಗೂ ಇದೆ.
ಪ್ರಮುಖ ವೈಶಿಷ್ಟ್ಯಗಳು
ಕೇಸ್ ಗಾತ್ರ: 41 ಅಥವಾ 45 ಮಿಮೀ
ತೂಕ: 32/38.8 ಗ್ರಾಂ, 42.3/51.5 ಗ್ರಾಂ ಅಥವಾ 37/45.1 ಗ್ರಾಂ
ಪ್ರೊಸೆಸರ್: S7
RAM: 1 ಜಿಬಿ
ಸ್ಟೋರೇಜ್: 32 ಜಿಬಿ
ಕಾರ್ಯಾಚರಣಾ ವ್ಯವಸ್ಥೆ: ವಾಚ್OS 8
ಜಲನಿರೋಧಕತೆ: 50 ಮೀಟರ್
ಸಂಪರ್ಕ: ಬ್ಲೂಟೂತ್ 5, ವೈಫೈ, NFC, ಐಚ್ಛಿಕ 4ಜಿ/ಇ-ಸಿಮ್
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು