ಮಾಹಿತಿ@ತಂತ್ರಜ್ಞಾನ ಅಂಕಣ – 88, ವಿಜಯ ಕರ್ನಾಟಕ, ಆಗಸ್ಟ್ 11, 2014
ಈ ರೀತಿ 2ಜಿ ಸಂಪರ್ಕದಲ್ಲಿ ಕೂಡ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡುವ ಹೊಸದೊಂದು ಆ್ಯಪ್ ಬಂದಿದೆ. ಇದರ ಹೆಸರು ‘ನಾನು’ (nanu). ಬೇರೆಯವರು nanu ಆ್ಯಪ್ ಹೊಂದಿರದಿದ್ದರೆ ಕೂಡ ಮಾತ್ರವೇ ಅಲ್ಲದೆ ಯಾವುದೇ ಲ್ಯಾಂಡ್‌ಲೈನ್ ಫೋನ್‌ಗೂ ಈ ಆ್ಯಪ್ ಮೂಲಕ ಉಚಿತವಾಗಿ ಕರೆ ಮಾಡಬಹುದು. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಇಂಟರ್ನೆಟ್ ಸಂಪರ್ಕವಿದ್ದರೆ ಸಾಕು. ನಿಮ್ಮ ಸ್ನೇಹಿತರ ಫೋನ್‌ನಲ್ಲಿಯೂ ಇಂಟರ್ನೆಟ್ ಸಂಪರ್ಕ ಹಾಗೂ nanu ಆ್ಯಪ್ ಇದ್ದರೆ, ಅವರೊಂದಿಗೆ ಎಷ್ಟು ಬೇಕಾದರೂ ಮಾತನಾಡಬಹುದು. ಸದ್ಯಕ್ಕೆ nanu ಆ್ಯಪ್ ಇಲ್ಲದವರೊಂದಿಗೆ ಮಾತನಾಡಲು ಮಿತಿ ಹೇರಲಾಗಿದೆ. ಅಂದರೆ 15 ನಿಮಿಷ ಮಾತ್ರ ಮಾತನಾಡಬಹುದು. ಬಳಕೆದಾರರ ಸಂಖ್ಯೆ ಹೆಚ್ಚಾದಂತೆ nanu ಇಲ್ಲದವರಿಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಹೆಚ್ಚಿಸುವುದಾಗಿ ಸಿಂಗಾಪುರ ಮೂಲದ ಜೆಂಟೇ ಕಮ್ಯುನಿಕೇಶನ್ಸ್ ಸಂಸ್ಥೆ ಹೇಳಿಕೊಂಡಿದೆ.
2ಜಿ ನೆಟ್‌ವರ್ಕ್‌ನಲ್ಲಿಯೂ ಸ್ಪಷ್ಟ ಕರೆಗಳನ್ನು ಮಾಡಲು ಈ ಆ್ಯಪ್ ರೂಪಿಸಲಾಗಿದೆ. ರೋಮಿಂಗ್‌ನಲ್ಲಿರುವಾಗ (ನಿಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ ಹೋಗುವಾಗ) ಇದು ಹೆಚ್ಚು ಅನುಕೂಲ. ಬೇರೆಲ್ಲಾ ಇಂಟರ್ನೆಟ್ ಕರೆ ಮಾಡುವ ಆ್ಯಪ್‌ಗಳಂತೆಯೇ ‘ನಾನು’ ಮೂಲಕ ಕರೆ ಮಾಡಿದರೆ ಕೂಡ ರೋಮಿಂಗ್ ಚಾರ್ಜ್ ಅನ್ವಯವಾಗುವುದಿಲ್ಲ. ಯಾಕೆಂದರೆ ಈ ಕರೆ ಟೆಲಿಕಾಂ ಆಪರೇಟರ್ ಮೂಲಕ ಹೋಗುವುದಿಲ್ಲ, ಬದಲಾಗಿ ಇಂಟರ್ನೆಟ್ ಮೂಲಕವಾಗಿ ಕರೆ ಮಾಡಲಾಗುತ್ತದೆ.
ನೀವು ಕರೆ ಮಾಡಿದಾಗ, ಆ ಕಡೆಯವರು ಉತ್ತರಿಸುವವರೆಗೆ ಅವರ ಕಾಲರ್ ಟ್ಯೂನ್ ಬದಲಾಗಿ ಜಾಹೀರಾತು ಕೇಳಿಸುತ್ತದೆ. ಸ್ಕ್ರೀನ್ ಮೇಲೂ ಜಾಹೀರಾತು ಲಿಂಕ್ ಇರುತ್ತದೆ. ಅದರಿಂದ ಬರುವ ಆದಾಯವೇ ಈ ಕಂಪನಿಗೆ ಲಾಭ. Nanu-Nanu ಕರೆ ಉಚಿತವಾಗಿದ್ದು, nanu ಇಲ್ಲದವರ ಮೊಬೈಲಿಗೆ ಕರೆ ಮಾಡಿದರೆ, ಸದ್ಯಕ್ಕೆ 15 ನಿಮಿಷ ಮಾತ್ರ ಮಾತನಾಡಬಹುದು. ಅದು ಕೂಡ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೊದಲ 10 ಲಕ್ಷ ಬಳಕೆದಾರರಿಗೆ ಮಾತ್ರ ಎಂದಿದೆ ಕಂಪನಿ. ಉಚಿತ ಸಂದೇಶ ಸೇವೆಯೂ ಶೀಘ್ರದಲ್ಲೇ ಲಭ್ಯವಾಗಲಿದೆ. ಜಾಸ್ತಿ ಜನ ಇದನ್ನು ಬಳಸಲಾರಂಭಿಸಿದಷ್ಟೂ ಉಚಿತ ಸೇವೆಯನ್ನು ವಿಸ್ತರಿಸಲು ಅನುಕೂಲವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಭಾರತ, ಹಂಗೆರಿ, ಜರ್ಮನಿ, ಐರ್ಲೆಂಡ್, ಇಸ್ರೇಲ್, ಸಿಂಗಾಪುರ, ಸ್ಪೇನ್, ಥಾಯ್ಲೆಂಡ್, ಅಮೆರಿಕ, ಯುಕೆ ಸೇರಿದಂತೆ 41 ದೇಶಗಳಲ್ಲಿ ಉಚಿತ ಕರೆಗೆ nanu ಅವಕಾಶ ಮಾಡಿಕೊಡುತ್ತದೆ. ಪ್ರಸ್ತುತ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಅನ್‌ಲಿಮಿಟೆಡ್ ಡೇಟಾ (ಇಂಟರ್ನೆಟ್) ಪ್ಯಾಕ್ ಇದ್ದವರಿಗೆ ಸಮಸ್ಯೆಯಿಲ್ಲ. ಉಳಿದವರಿಗಾದರೆ, ಹತ್ತು ನಿಮಿಷ ಕರೆ ಮಾಡಿದಿರೆಂದಾದರೆ, 1 ಎಂಬಿ ಡೇಟಾ ಖರ್ಚಾಗುತ್ತದೆ. ಅಂದರೆ 1 ಜಿಬಿ ಡೇಟಾ ಪ್ಲ್ಯಾನ್ ಇದ್ದಲ್ಲಿ, ಬರೇ ‘ನಾನು’ ಉಪಯೋಗಿಸಿದಲ್ಲಿ 10 ಸಾವಿರ ನಿಮಿಷ ಮಾತನಾಡಬಹುದು.
ಪ್ಲೇ ಸ್ಟೋರ್‌ನಲ್ಲಿ nanu ಅಂತ ಹುಡುಕಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಯಾವುದೇ nanu ಸದಸ್ಯರಿಗೆ ಕರೆ ಮಾಡಬೇಕಿದ್ದರೆ ಪ್ಲಸ್ (+) ಹಾಗೂ ಕೋಡ್ (ಉದಾ: ಭಾರತದಲ್ಲಾದರೆ +91) ಹಾಕಿದ ಮೇಲೆ ಮೊಬೈಲ್ ನಂಬರ್ ಟೈಪ್ ಮಾಡಿ ಕರೆ ಬಟನ್ ಒತ್ತಬೇಕು. ಲ್ಯಾಂಡ್‌ಲೈನ್ ದೂರವಾಣಿಗೆ ಮಾಡಬೇಕಿದ್ದರೆ ಪ್ಲಸ್ (+) ಚಿಹ್ನೆ, ದೇಶದ ಕೋಡ್ (ಭಾರತ 91) ಹಾಗೂ ಏರಿಯಾ ಕೋಡ್ ನಮೂದಿಸಬೇಕು.
ಟೆಕ್ ಟಾನಿಕ್
ಫೇಸ್‌ಬುಕ್ ವೈರಸ್: ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ನ ಬಣ್ಣ ಬದಲಾಯಿಸಿ ಅಂತ ಕೆಲವೊಂದು ಸೂಚನೆಗಳು ಬರುತ್ತಿರುತ್ತವೆ. ಅದನ್ನು ಕ್ಲಿಕ್ ಮಾಡಲು ನೋಡಿದ್ದೀರಾ? ಅದು ಬೇರೇನೂ ಅಲ್ಲ, ಮಾಲ್‌ವೇರ್! ಹಿಂದಿನಿಂದಲೂ ಈ ವೈರಸ್ ಇತ್ತಾದರೂ, ಅದಕ್ಕೆ ಫೇಸ್‌ಬುಕ್ ಪರಿಹಾರ ಕಲ್ಪಿಸಿತ್ತು. ಆದರೆ ಈಗ, ಮತ್ತೆ ಕಾಣಿಸಿಕೊಂಡಿದೆಯಂತೆ. ಅದು ಟ್ಯುಟೋರಿಯಲ್ ವೀಡಿಯೋ ವೀಕ್ಷಿಸಲು ಪ್ರೇರೇಪಿಸುತ್ತದೆ. ಅದನ್ನು ನೋಡುತ್ತಿರುವಾಗ ನಿಮ್ಮ ಸ್ನೇಹಿತರ ಖಾತೆಗೆ ಸಂಪರ್ಕಿಸುತ್ತದೆ ಈ ವೈರಸ್. ವೀಡಿಯೋ ನೋಡದಿದ್ದರೆ, “ವೈರಸ್ ದಾಳಿ ಆಗಿದೆ, ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸರಿಪಡಿಸಿಕೊಳ್ಳಿ” ಅಂತ ಹೇಳುವ ಮೂಲಕ ಆ್ಯಪ್ ಡೌನ್‌ಲೋಡ್ ಮಾಡುವಂತೆ ಪ್ರೇರೇಪಿಸುತ್ತದೆ. ಈಗಾಗಲೇ ಅದನ್ನು ಡೌನ್‌ಲೋಡ್ ಮಾಡಿಕೊಂಡಿದ್ದರೆ, ಅನ್‌ಇನ್‌ಸ್ಟಾಲ್ ಮಾಡಿ, ತಕ್ಷಣ ಫೇಸ್‌ಬುಕ್ ಪಾಸ್‌ವರ್ಡ್ ಬದಲಿಸಿ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…