ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ (ಫೆಬ್ರವರಿ 3, 2014)
ಟಚ್ ಸ್ಕ್ರೀನ್ ಮೊಬೈಲ್‌ಗಳ ಕ್ರೇಜ್ ಹೆಚ್ಚಾಗಿದೆ. ನೀವು ಕೂಡ ಅಂಥದ್ದೇ ಆಕರ್ಷಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕೊಂಡಿದ್ದೀರಿ, ಹೇಗೆ ಪ್ರಾರಂಭಿಸಬೇಕು, ಏನೆಲ್ಲಾ ಮಾಡಬಹುದು ಎಂಬುದು ತಿಳಿಯುತ್ತಿಲ್ಲವೇ? ಮುಂದೆ ಓದಿ.
ಇಂಟರ್ನೆಟ್ ಇದ್ದರೆ ಮಾತ್ರ ಸ್ಮಾರ್ಟ್‌ಫೋನಿನ ಪರಿಪೂರ್ಣ ಪ್ರಯೋಜನ ಪಡೆಯಬಹುದು ಎಂಬುದು ತಿಳಿದಿರಲಿ. ಹೀಗಾಗಿ ನಿಮ್ಮ ಸಿಮ್ ಕಾರ್ಡ್‌ನಲ್ಲಿ ಇಂಟರ್ನೆಟ್ ಸಂಪರ್ಕ ಹಾಗೂ ನಿಮಗೊಂದು ಜಿಮೇಲ್ ಖಾತೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆಂಡ್ರಾಯ್ಡ್ ಎಂಬುದು ಗೂಗಲ್ ಒಡೆತನದ ಕಾರ್ಯಾಚರಣೆ ವ್ಯವಸ್ಥೆಯಾಗಿರುವುದರಿಂದ ಜಿಮೇಲ್ ಐಡಿ ಇದ್ದರೆ ಮಾತ್ರ ನಿಮಗೆ ಬೇಕಾದ ಆ್ಯಪ್‌ಗಳನ್ನು ಗೂಗಲ್‌ನ ‘ಪ್ಲೇ ಸ್ಟೋರ್’ನಿಂದ ಇನ್‌ಸ್ಟಾಲ್ ಮಾಡಿಕೊಳ್ಳಬಹುದು ಮತ್ತು ಸ್ಮಾರ್ಟ್‌ಫೋನನ್ನು ಪೂರ್ಣವಾಗಿ ಆನಂದಿಸಬಹುದು.
ಇಂಟರ್ನೆಟ್ ಸಂಪರ್ಕ ಆನ್ ಮಾಡಲು ಹೀಗೆ ಮಾಡಿ: ಸೆಟ್ಟಿಂಗ್ಸ್ ಐಕಾನ್ ಕ್ಲಿಕ್ ಮಾಡಿದರೆ, ‘Wireless & Networks’ ಎಂದಿರುವಲ್ಲಿ, ಡೇಟಾ ಕನೆಕ್ಷನ್ ಅಥವಾ ಯೂಸ್ ಪ್ಯಾಕೆಟ್ ಡೇಟಾ ಅಂತ ಇರಬಹುದು (ವಿಭಿನ್ನ ಬ್ರ್ಯಾಂಡ್‌ನ ಫೋನ್ ಮಾಡೆಲ್‌ಗಳಲ್ಲಿ ಬೇರೆ ಬೇರೆ ಇರುತ್ತದೆ). ಒಟ್ಟಿನಲ್ಲಿ ಡೇಟಾ ಎಂದರೆ ಬೇರೇನಲ್ಲ, ಅದುವೇ ಇಂಟರ್ನೆಟ್ ಸಂಪರ್ಕ. ಅಲ್ಲಿಂದಲೇ ಆನ್ ಅಥವಾ ಆಫ್ ಮಾಡಬಹುದು.
ಶಾರ್ಟ್‌ಕಟ್: ಫೋನ್ ಆನ್ ಮಾಡಿದ ತಕ್ಷಣ ಸ್ಕ್ರೀನ್‌ನಲ್ಲಿ ಮೇಲ್ಭಾಗದಿಂದ (ಇದನ್ನು ನೋಟಿಫಿಕೇಶನ್ ಏರಿಯಾ ಅಂತಲೂ ಕರೆಯುತ್ತಾರೆ) ಕೆಳಕ್ಕೆ ಬೆರಳಿನಲ್ಲಿ ಎಳೆದಾಗ ಹಲವು ಶಾರ್ಟ್‌ಕಟ್‌ಗಳು ಕಾಣಿಸುತ್ತವೆ. ಈ ಶಾರ್ಟ್‌ಕಟ್‌ಗಳಲ್ಲಿ ಪ್ರಮುಖವಾಗಿ ವೈ-ಫೈ, ಬ್ಲೂಟೂತ್, ಡೇಟಾ ಕನೆಕ್ಷನ್, ಸ್ಕ್ರೀನ್ ಬ್ರೈಟ್‌ನೆಸ್, ಆಟೋ ರೊಟೇಶನ್ ಮುಂತಾದವುಗಳಿರುತ್ತವೆ. ಬೆರಳಿನಿಂದ ಸ್ಪರ್ಶಿಸಿದರೆ ಇವು ಆನ್ ಅಥವಾ ಆಫ್ ಆಗುತ್ತವೆ. ಡೇಟಾ ಸಂಪರ್ಕ ಆನ್ ಅಥವಾ ಆಫ್ ಮಾಡಲು ಈ ಶಾರ್ಟ್‌ಕಟ್ ಬಳಸಬಹುದು. ಬೇಕಾದಾಗ ಮಾತ್ರ ಆನ್ ಮಾಡಿದಲ್ಲಿ, ಇಂಟರ್ನೆಟ್ ವೆಚ್ಚದಲ್ಲಿ ಉಳಿತಾಯ ಮಾಡಬಹುದು. ಅನ್‌ಲಿಮಿಟೆಡ್ ಡೇಟಾ ಪ್ಯಾಕೇಜ್ ಇದೆ ಎಂದುಕೊಂಡು ಸದಾ ಕಾಲ ಆನ್ ಇಟ್ಟರೆ ಬ್ಯಾಟರಿ ಬೇಗನೇ ಖರ್ಚಾಗುತ್ತದೆ.
ಫೋನ್ ಸುರಕ್ಷತೆ: ನಿರ್ದಿಷ್ಟ ಸಮಯದ ಬಳಿಕ ನಿಮ್ಮ ಫೋನ್‌ನ ಸ್ಕ್ರೀನ್ ಆಫ್/ಲಾಕ್ ಮಾಡಬೇಕಾದುದು ಅಗತ್ಯ (ಹಳೆಯ ಫೋನ್‌ಗಳಲ್ಲಿ ಕೀಪ್ಯಾಡ್ ಲಾಕ್ ಇರುವಂತೆ). ಅದಕ್ಕೆ ನೀವು ಮಾಡಬೇಕಾದುದೆಂದರೆ, ಸೆಟ್ಟಿಂಗ್ಸ್‌ನಲ್ಲಿ, ಸೆಕ್ಯುರಿಟಿ ಎಂಬಲ್ಲಿ, Screen Lock ಕ್ಲಿಕ್ ಮಾಡಿ. ಅಲ್ಲಿ Pattern ಎಂಬುದನ್ನು ಕ್ಲಿಕ್ ಮಾಡಿದರೆ, ಯಾವುದಾದರೂ ವಿನ್ಯಾಸದಲ್ಲಿ ಗೆರೆ ಎಳೆದು, ಸ್ಲೈಡ್ ಮಾಡಿ, ಕ್ಯಾಮರಾ ಮೂಲಕ ಮುಖ ನೋಡಿ, ಧ್ವನಿ ಮೂಲಕ, ಪಿನ್ ನಂಬರ್ ಅಥವಾ ಪಾಸ್‌ವರ್ಡ್ ಮೂಲಕವೂ ಅನ್‌ಲಾಕ್ ಮಾಡುವ ಆಯ್ಕೆಗಳಿರುತ್ತವೆ. ನಿಮಗೆ ಬೇಕಾದುದನ್ನು ಆಯ್ದುಕೊಳ್ಳಿ. ಜತೆಗೇ 15-30 ಸೆಕೆಂಡುಗಳ ಬಳಿಕ ಸ್ಕ್ರೀನ್ ಲಾಕ್ ಆಗುವಂತೆ ಹೊಂದಿಸಿ. ಈಗ ನಿಮ್ಮ ಫೋನನ್ನು ಬೇರೆಯವರು ದುರ್ಬಳಕೆ ಮಾಡುವ ಅಪಾಯವೂ ತಪ್ಪುತ್ತದೆ, ಅನಗತ್ಯವಾಗಿ ಸ್ಕ್ರೀನ್ ಆನ್ ಇರುವಾಗ ಬ್ಯಾಟರಿ ಖರ್ಚಾಗುವುದೂ ತಪ್ಪುತ್ತದೆ.
ಇತ್ತೀಚಿನ ಆಂಡ್ರಾಯ್ಡ್ ಫೋನ್‌ಗಳ ಸೆಟ್ಟಿಂಗ್‌ನಲ್ಲಿ Android Device Manager ಎಂಬ ಆಯ್ಕೆಯೊಂದಿದೆ. ಮರೆತುಬಿಟ್ಟ ಇಲ್ಲವೇ ಎಲ್ಲಾದರೂ ಕಳೆದುಹೋದ ಫೋನ್ ಎಲ್ಲಿದೆ ಎಂಬುದರ ಜಾಡು ಹಿಡಿಯಲು ಇದು ಸಹಾಯ ಮಾಡುತ್ತದೆ. ಗೂಗಲ್ ಸಹಾಯದಿಂದ ಅದರಲ್ಲಿರುವ ದತ್ತಾಂಶವನ್ನು (ಫೈಲ್, ಮಾಹಿತಿ, ಸಂಪರ್ಕ ಸಂಖ್ಯೆ ಇತ್ಯಾದಿ) ಡಿಲೀಟ್ ಮಾಡಬಹುದು ಅಥವಾ ಫೋನನ್ನು ಲಾಕ್ ಕೂಡ ಮಾಡಬಹುದು.
ಪ್ಲೇ ಸ್ಟೋರ್: ಸ್ಮಾರ್ಟ್‌ಫೋನ್ ಆನ್ ಮಾಡಿದ ಬಳಿಕ, ಮೆನು ಬಟನ್ ಒತ್ತಿದರೆ, ಅಪ್ಲಿಕೇಶನ್‌ಗಳ (ಆ್ಯಪ್) ಐಕಾನ್‌ಗಳು ಹಲವಾರು ಪುಟಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆ್ಯಪ್ ಜಾಸ್ತಿ ಇದ್ದಷ್ಟೂ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಫೇಸ್‌ಬುಕ್, ಟ್ವಿಟರ್, ಒಪೆರಾ ಮಿನಿ ಬ್ರೌಸರ್, ಯೂಟ್ಯೂಬ್ ಮುಂತಾದ ಕೆಲವು ಆ್ಯಪ್‌ಗಳು (ಅಪ್ಲಿಕೇಶನ್‌ಗಳೆಂಬ ಕಿರು ತಂತ್ರಾಂಶಗಳು) ಮೊದಲೇ ಇರುತ್ತವೆ.
ಇಂಟರ್ನೆಟ್ ಸಂಪರ್ಕ ಆನ್ ಮಾಡಿ, ಮೊದಲು Play Store ಐಕಾನ್ ಕ್ಲಿಕ್ ಮಾಡಿ. ಸೈನ್ ಇನ್ ಆಗಬೇಕೆಂದು ಕೇಳುತ್ತದೆ. ನಿಮ್ಮ ಜಿಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ನಮೂದಿಸಿದರೆ ಆಯಿತು. ಈಗಾಗಲೇ ಇರುವ ಆ್ಯಪ್‌ಗಳ ಪರಿಷ್ಕೃತ ಆವೃತ್ತಿ ಲಭ್ಯವಿದ್ದರೆ, ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ನಿಮ್ಮ ಫೋನೇ ನಿಮಗೆ ಸೂಚಿಸುತ್ತದೆ. ಬಳಿಕ ಇದೇ ಪ್ಲೇ ಸ್ಟೋರ್‌ನಿಂದ ನಿಮಗೆ ಬೇಕಾದಾಗ ಒಂದೊಂದೇ ಆ್ಯಪ್‍ಗಳನ್ನು ಹುಡುಕಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು