ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-23 (ಫೆಬ್ರವರಿ 11, 2013)
ಬ್ಲೂಟೂತ್ ಮೂಲಕ, ವೈ-ಫೈ ಮೂಲಕ ಯಾವುದೇ ವೈರ್ (ಅಥವಾ ಕೇಬಲ್) ಸಂಪರ್ಕವಿಲ್ಲದೆಯೇ ಮೊಬೈಲ್ ಫೋನ್‌ಗಳ ನಡುವೆ ಯಾವುದೇ ಹಾಡುಗಳು, ಚಿತ್ರಗಳು ಮತ್ತಿತರ ಫೈಲುಗಳನ್ನು ಶೇರ್ ಮಾಡಿಕೊಳ್ಳುವುದು ಬಹುಶಃ ಹೆಚ್ಚಿನವರಿಗೆ ಗೊತ್ತಿದೆ. ಈಗ ಸ್ಮಾರ್ಟ್‌ಫೋನ್‌ಗಳಲ್ಲಿ (ಅಂದರೆ ಇಂಟರ್ನೆಟ್ ಸಂಪರ್ಕವಿರುವ, ವೈ-ಫೈ ತಂತ್ರಜ್ಞಾನವುಳ್ಳ ಹಾಗೂ ಹಲವು ಆಧುನಿಕ ತಂತ್ರಜ್ಞಾನ ಕಾರ್ಯಗಳನ್ನು ಮಾಡಬಲ್ಲ ಮೊಬೈಲ್ ಫೋನ್‌ಗಳು) ಹೊಸದೊಂದು ಸ್ಪೆಸಿಫಿಕೇಶನ್ ಕೇಳಿಬರುತ್ತಿದೆ. ಅದುವೇ ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯುನಿಕೇಷನ್).
ಇದರರ್ಥ ಯಾವುದೇ ಎರಡು ಮೊಬೈಲ್ ಫೋನ್‌ಗಳಲ್ಲಿ ಎನ್ಎಫ್‌ಸಿ ವ್ಯವಸ್ಥೆ ಇದೆಯೆಂದಾದರೆ, ಅವುಗಳನ್ನು ಒಂದಿಷ್ಟು ನಿರ್ದಿಷ್ಟ ಅಂತರದೊಳಗೆ ಪರಸ್ಪರ ಇರಿಸಿದರೆ ಅಥವಾ ಪರಸ್ಪರ ತಗುಲಿಸಿದರೆ, ಯಾವುದೇ ಫೈಲ್‌ಗಳನ್ನು ಶೇರ್ ಮಾಡಿಕೊಳ್ಳುವುದು (ಹಂಚುವುದು) ಸುಲಭ. ಇದನ್ನು ತಂತ್ರಜ್ಞಾನದ ಪರಿಭಾಷೆಯಲ್ಲಿ ‘ಡೇಟಾ ಎಕ್ಸ್‌ಚೇಂಜ್’ ಅಂತಾನೂ ಕರೀತಾರೆ.
ವೈ-ಫೈ ಅಥವಾ ಬ್ಲೂಟೂತ್ ತಂತ್ರಜ್ಞಾನಗಳಿಗೆ ಹೋಲಿಸಿದರೆ ಇದು ಅತ್ಯಂತ ಸರಳ. ಈಗ ಮಾರುಕಟ್ಟೆಯಲ್ಲಿರುವ ಸಾಕಷ್ಟು ಬಗೆಯ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವಂತಾಗಲು, ಪ್ರಮುಖ ಮೊಬೈಲ್ ತಯಾರಿಕಾ ಕಂಪನಿಗಳಾದ ನೋಕಿಯಾ, ಫಿಲಿಪ್ಸ್, ಸೋನಿ ಮುಂತಾದ 160 ಕಂಪನಿಗಳು ಸೇರಿಕೊಂಡು 2004ರಲ್ಲೇ ಎನ್‌ಎಫ್‌ಸಿ ಫೋರಂ ಎಂಬ ಸಂಘಟನೆಯೊಂದನ್ನು ಕಟ್ಟಿಕೊಂಡಿದ್ದವು. ಹೀಗಾಗಿ ಮುಂಬರುವ ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಎನ್ಎಫ್‌ಸಿ ಎಂಬುದು ಹೊಸ ಅನುಕೂಲಕರ ಸೌಲಭ್ಯವಾಗಲಿದೆ.
ತೀರಾ ಸಮೀಪದಲ್ಲಿ ಎರಡು ಎನ್‌ಎಫ್‌ಸಿ ಸಾಧನಗಳನ್ನು ಇರಿಸಿದಾಗ ಮಾತ್ರವೇ ಫೈಲುಗಳನ್ನು ಹಂಚಲು ಅಥವಾ ಬೇರಾವುದೇ ಕಾರ್ಯ ಮಾಡಲು ಸಾಧ್ಯವಾಗುವುದರಿಂದಾಗಿ, ಸುರಕ್ಷತೆ ಹೆಚ್ಚು. (ವೈ-ಫೈ ಅಥವಾ ಬ್ಲೂಟೂತ್‌ಗಳು ಆನ್ ಆಗಿದ್ದರೆ, ಬೇರೆ ಸಾಧನಗಳ ಕಣ್ಣಿಗೆ ಬೀಳುವ ಮತ್ತು ಅವುಗಳಿಂದ ವೈರಸ್‌ಗಳು ಇಲ್ಲವೇ ಅನಗತ್ಯ ಫೈಲುಗಳು ಬರುವ ಸಾಧ್ಯತೆ ಇರುತ್ತವೆ). ಇಲ್ಲಿ ಒಂದೆರಡು ಸೆಂಟಿಮೀಟರು ಅಂತರದೊಳಗೇ ಎರಡೂ ಫೋನುಗಳು ಅಥವಾ ಸಾಧನಗಳು ಇರಬೇಕಾಗುತ್ತದೆ.
ವೈರ್‌ಲೆಸ್ ಚಾರ್ಜಿಂಗ್
ವೈರ್‌ಲೆಸ್ ಚಾರ್ಜಿಂಗ್ ಕೂಡ ಹೊಸ ತಂತ್ರಜ್ಞಾನ. ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ವೈರ್‌ಲೆಸ್ ಚಾರ್ಜಿಂಗ್ (ಅಂದರೆ ಚಾರ್ಜರ್ ವೈರ್ ಇಲ್ಲದೆಯೇ ಬ್ಯಾಟರಿ ಚಾರ್ಜ್ ಮಾಡುವ ಪ್ರಕ್ರಿಯೆ) ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಬರಲಾರಂಭಿಸಿವೆ.
Qi (ಉಚ್ಚಾರಣೆ ‘ಚೀ’) ತಂತ್ರಜ್ಞಾನದ ಒಂದು ತೆಳು ಹಾಳೆಯ ಮೇಲೆ ನಿಮ್ಮ ಫೋನನ್ನು ಇರಿಸಿದರೆ ಆಯಿತು, ತಾನಾಗಿಯೇ ಚಾರ್ಜ್ ಆಗುತ್ತದೆ. ಅದಕ್ಕೆ ಮತ್ತು ಮೊಬೈಲ್ ಸಾಧನಕ್ಕೆ ಪರಸ್ಪರ ಪಿನ್, ವೈರ್ ಜೋಡಿಸುವ, ತೆಗೆಯುವ ತ್ರಾಸ ಇರುವುದಿಲ್ಲ.
ಇದರೊಂದಿಗೆ, ಮತ್ತೊಂದು ಆಧುನಿಕ ವ್ಯವಸ್ಥೆಯೂ ಕಾಣಿಸಿಕೊಳ್ಳತೊಡಗಿದೆ. ಅದೆಂದರೆ ಪವರ್‌ಅಪ್ ವೈರ್‌ಲೆಸ್ ಚಾರ್ಜಿಂಗ್ ಸ್ಪೀಕರ್ ಅಂತ. ಅಂದರೆ, ನಿಮ್ಮ ಫೋನಿನಲ್ಲಿ ಎನ್‌ಎಫ್‌ಸಿ ತಂತ್ರಜ್ಞಾನವಿದ್ದು, ಸಾಕಷ್ಟು ಹಾಡುಗಳಿವೆಯೆಂದಾದರೆ, ಈ ಸ್ಪೀಕರ್ ಖರೀದಿಸಿ, ಅದರ ಮೇಲಿಟ್ಟರೆ, ಸ್ಪೀಕರ್ ಮೂಲಕ ನಿಮ್ಮ ಫೋನಿನಲ್ಲಿರುವ ಹಾಡನ್ನೂ ಕೇಳಬಹುದು, ಜತೆಜತೆಗೇ Qi ತಂತ್ರಜ್ಞಾನದ ಮೂಲಕ ನಿಮ್ಮ ಫೋನ್ ಜಾರ್ಜ್ ಕೂಡ ಆಗಬಹುದು!
ಈಗ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಕೂಡ ಈ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕ ಕಂಪನಿಗಳ ಕೂಟದಲ್ಲಿ ಸೇರಿಕೊಂಡಿದ್ದು, ಕಾರುಗಳಲ್ಲಿಯೂ ಚಾರ್ಜಿಂಗ್‌ಗೆ ಅಥವಾ ಇತರ ಸಂವಹನಕ್ಕೆ ಈ ತಂತ್ರಜ್ಞಾನ ಅಳವಡಿಸಲು ಮುಂದಾಗಿವೆ. ಹೀಗಾಗಿ, ಸ್ಮಾರ್ಟ್‌ಫೋನ್ ಖರೀದಿಸಲು ತೊಡಗುವಾಗ, ಎನ್‌ಎಫ್‌ಸಿ ತಂತ್ರಜ್ಞಾನವಿದೆಯೇ ಅಂತ ಕೇಳಿಕೊಂಡೇ ಮುಂದುವರಿದರೆ ಒಳ್ಳೆಯದು. ಗೂಗಲ್ ನೆಕ್ಸಸ್, ನೋಕಿಯಾ ಮತ್ತು ಎಚ್‌ಟಿಸಿಯ ಕೆಲವು ವಿಂಡೋಸ್ 8 ಫೋನುಗಳು, ಮೋಟೋರೋಲಾ, ಸೋನಿಯ ಕೆಲವು ಎಕ್ಸ್‌ಪೆರಿಯಾದ ಕೆಲವು ಮಾಡೆಲ್‌ಗಳು ಮುಂತಾದವುಗಳಲ್ಲಿ ಈ ಸೌಲಭ್ಯ ಈಗಾಗಲೇ ಲಭ್ಯ. ಅಲ್ಲದೆ ನೆಕ್ಸಸ್ ಟ್ಯಾಬ್ಲೆಟ್‌ಗಳಲ್ಲಿಯೂ ಇವೆ. ವೈರ್‌ಲೆಸ್ ಚಾರ್ಜರ್/ಅಥವಾ ಸ್ಪೀಕರ್‌ಗಳನ್ನು ಖರೀದಿಸಿದರೆ ಮಾತ್ರ ಇದರ ಪ್ರಯೋಜನ.
ಹೀಗಾಗಿ, ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸಲು ಹೊರಟಿದ್ದರೆ, ಇದೊಂದು ಸ್ಪೆಸಿಫಿಕೇಶನ್ನು ನಿಮ್ಮ ಪಟ್ಟಿಗೆ ಹೊಸ ಸೇರ್ಪಡೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು