ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಏಪ್ರಿಲ್ 21, 2014
ಬಹುತೇಕ ಮಂದಿ ತಮ್ಮ ಕಂಪ್ಯೂಟರ್‌ನಲ್ಲಿ ಹೊಂದಿರುವ ವಿಂಡೋಸ್ ಎಕ್ಸ್‌ಪಿ ಎಂಬ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ – OS) ಗೆ ಅದರ ಕಂಪನಿ ಮೈಕ್ರೋಸಾಫ್ಟ್ ನೀಡುತ್ತಿರುವ ಅಪ್‌ಡೇಟ್‌ಗಳ ಬೆಂಬಲವು ಏಪ್ರಿಲ್ 8ಕ್ಕೆ ಸ್ಥಗಿತಗೊಂಡಿದೆ. ಇದರಿಂದ ಎಕ್ಸ್‌ಪಿ ಸಿಸ್ಟಮ್ಮೇ ಕೆಲಸ ಮಾಡುವುದಿಲ್ಲ, ಯಾವಾಗ ಬೇಕಾದರೂ ನಿಲ್ಲಬಹುದು ಎಂಬುದು ತಪ್ಪು ಕಲ್ಪನೆ. ಕಾಲಕಾಲಕ್ಕೆ ವಿಭಿನ್ನ ರೀತಿಯ ವೈರಸ್‌ಗಳು, ಮಾಲ್‌ವೇರ್‌ಗಳು, ಸ್ಪೈವೇರ್‌ಗಳೆಂಬ ನಮ್ಮ ಮಾಹಿತಿ ಕದಿಯುವ ತಂತ್ರಾಂಶಗಳು ಸಿಸ್ಟಂಗೆ ಸೋಕದಂತೆ ತಡೆಯುವ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್ ಇದುವರೆಗೆ ‘ಅಪ್‌ಡೇಟ್’ಗಳ ರೂಪದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿತ್ತು. ಅಂತಹಾ ಆಧುನಿಕ ತಂತ್ರಜ್ಞಾನದ ಭದ್ರತೆ ಇನ್ನು ಮುಂದೆ ವಿಂಡೋಸ್ ಎಕ್ಸ್‌ಪಿಗೆ ಇರುವುದಿಲ್ಲ. ಹಾಗಾಗಿ, ವಿಂಡೋಸ್ ಎಕ್ಸ್‌ಪಿ ಸಿಸ್ಟಂಗಳನ್ನು ಹೊಂದಿರುವವರು ಏನು ಮಾಡಬೇಕು? ಇಂಥವರಿಗಾಗಿ ಮುಖ್ಯವಾಗಿ ಮೂರು ಆಯ್ಕೆಗಳಿವೆ.
1. ಇರುವ ಸಿಸ್ಟಮ್ಮನ್ನೇ ವಿಂಡೋಸ್ 8.1ಕ್ಕೆ ಅಪ್‌ಗ್ರೇಡ್ ಮಾಡಿಕೊಳ್ಳುವುದು.
2. ಇರುವ ಎಕ್ಸ್‌ಪಿಯಲ್ಲೇ ಮುಂದುವರಿದು, ಎಚ್ಚರಿಕೆಯಿಂದ ಇಂಟರ್ನೆಟ್ ಬಳಸುವುದು ಅಥವಾ ಇಂಟರ್ನೆಟ್ ತಂಟೆಗೇ ಹೋಗದಿರುವುದು.
3. ಹೊಸ ಕಂಪ್ಯೂಟರ್ ಖರೀದಿಸುವುದು.
ಅಪ್‌ಗ್ರೇಡ್: ಮೊದಲು, ವಿಂಡೋಸ್ 8.1 ಎಂಬ ಮೈಕ್ರೋಸಾಫ್ಟ್‌ನ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆಗೆ ನಿಮ್ಮಲ್ಲಿರುವ ಕಂಪ್ಯೂಟರ್ ಹೊಂದಿಕೊಳ್ಳುತ್ತದೆಯೇ ಎಂದು ನೋಡಲು http://go.microsoft.com/fwlink/p/?LinkId=321548 ಎಂಬಲ್ಲಿಂದ ‘ವಿಂಡೋಸ್ ಅಪ್‌ಗ್ರೇಡ್ ಅಸಿಸ್ಟೆಂಟ್’ ಕಿರು ತಂತ್ರಾಂಶ ಡೌನ್‌ಲೋಡ್ ಮಾಡಿಕೊಂಡು, ರನ್ ಮಾಡಿ. ಆಧುನಿಕ ತಂತ್ರಜ್ಞಾನಕ್ಕೆ ಸೂಕ್ತವಾದ ಹಾರ್ಡ್‌ವೇರ್ ನಿಮ್ಮ ಕಂಪ್ಯೂಟರಲ್ಲಿದೆಯೇ ಎಂಬ ವರದಿಯನ್ನು ಅದು ನಿಮಗೊಪ್ಪಿಸುತ್ತದೆ. ಎಲ್ಲವೂ ಹೊಂದಿಕೆಯಾಗುತ್ತದೆ ಅಂತ ರಿಪೋರ್ಟ್ ಬಂದರೆ, ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಈ ಹಿಂದೆ 699 ರೂ.ಗೆ ವಿಂಡೋಸ್ ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶದ ಬಗ್ಗೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಿದಾಗ ಎಷ್ಟು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೋ ಗೊತ್ತಿಲ್ಲ. ಉಪಯೋಗಿಸಿಕೊಳ್ಳದಿದ್ದವರು ಬಹುಶಃ ಈಗ ಕೈಕೈ ಹಿಸುಕಿಕೊಳ್ಳಬೇಕಾಗುತ್ತದೆ. ಇದಕ್ಕೆ ಕಾರಣವೆಂದರೆ, ವಿಂಡೋಸ್ 7 ಅಥವಾ ವಿಂಡೋಸ್ 8 ಓಎಸ್ ಖರೀದಿಗೆ ಈಗ ತೆರಬೇಕಾದ ಹಣ ಕನಿಷ್ಠವೆಂದರೆ 4ರಿಂದ 10 ಸಾವಿರ ರೂ.!
ಎರಡನೇ ಸಾಧ್ಯತೆ, ಎಕ್ಸ್‌ಪಿಯನ್ನೇ ಬಳಸುವುದು. ಇದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಕಾರ್ಯಾಚರಣೆ ವ್ಯವಸ್ಥೆ ಎಕ್ಸ್‌ಪಿ ಆಗಿದ್ದರೂ, ಇಂಟರ್ನೆಟ್ ಜಾಲಾಡಲು ಮೈಕ್ರೋಸಾಫ್ಟ್‌ನ ‘ಇಂಟರ್ನೆಟ್ ಎಕ್ಸ್‌ಪ್ಲೋರರ್’ ಬಳಸಬಾರದು. ಒಂದು ಅತ್ಯುತ್ತಮ, ವಿಶ್ವಾಸಾರ್ಹ ಆ್ಯಂಟಿ ವೈರಸ್ ತಂತ್ರಾಂಶವೊಂದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಬಳಿಕ, ಇಂಟರ್ನೆಟ್ ಎಕ್ಸ್‌ಪ್ಲೋರರ್ ಬದಲು ಮೊಝಿಲ್ಲಾ ಫೈರ್‌ಫಾಕ್ಸ್ ಅಥವಾ ಗೂಗಲ್‌ನ ಕ್ರೋಮ್ ಬ್ರೌಸರ್ ಅಳವಡಿಸಿಕೊಂಡು, ಅದರ ಮೂಲಕವೇ ಇಂಟರ್ನೆಟ್‌ನಲ್ಲಿ ಜಾಲಾಡಬೇಕು. ಇಂಟರ್ನೆಟ್ ಬಳಸದೇ ಇದ್ದರೆ ಹಾಗೂ ಅದಕ್ಕೆ ಬೇರಾವುದೇ ಬಾಹ್ಯ ಸಾಧನಗಳು (ಪೆನ್ ಡ್ರೈವ್, ಕ್ಯಾಮರಾ, ಮೊಬೈಲ್) ಇತ್ಯಾದಿಗಳನ್ನು ಸಂಪರ್ಕಿಸದೇ ಇದ್ದರೆ, ಎಕ್ಸ್‌ಪಿಯನ್ನು ಮುಂದುವರಿಸಬಹುದು. ಆದರೆ, ಹೆಚ್ಚಿನ ಹೊಸ ತಂತ್ರಾಂಶಗಳನ್ನು ಈಗ ಹೊಚ್ಚ ಹೊಸ ವಿಂಡೋಸ್ ಆವೃತ್ತಿಗಳಿಗಾಗಿಯೇ ರೂಪಿಸಲಾಗುತ್ತಿರುವುದರಿಂದ, ಎಕ್ಸ್‌ಪಿಯಲ್ಲಿ ಅವುಗಳು ಕೆಲಸ ಮಾಡದಿರುವ ಸಾಧ್ಯತೆಯೂ ಇದೆ.
ಮೂರನೇ ಸಾಧ್ಯತೆ ಎಂದರೆ, ಹೊಸ ವಿಂಡೋಸ್ 8 ಸಿಸ್ಟಂ ಖರೀದಿಸುವುದು. ಇದರ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ.
12 ವರ್ಷಗಳಿಂದ ನಮ್ಮೊಡನಿದ್ದ ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆ ನಿಧಾನವಾಗಿ ತೆರೆಮರೆಗೆ ಸರಿಯುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ, ತಂತ್ರಜ್ಞಾನದಲ್ಲಿ ಆಗುತ್ತಿರುವ ನವೀನ ಬದಲಾವಣೆಗಳು. ಹೊಸ ತಂತ್ರಾಂಶಗಳು ಹಳೆಯ ಎಕ್ಸ್‌ಪಿ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕೆಲಸ ಮಾಡದಿರುವ ಸಾಧ್ಯತೆಗಳೂ ಇವೆ.
ಒಂದು ಆಶಾದಾಯಕ ಮಾತಿದೆ. ವಿಂಡೋಸ್ 8ರ ಬೇಸಿಕ್ ಕಾರ್ಯಾಚರಣಾ ವ್ಯವಸ್ಥೆಯನ್ನು ಉಚಿತವಾಗಿಯೇ ಆ ಕಂಪನಿಯು ಒದಗಿಸುವ ಸಾಧ್ಯತೆಗಳಿವೆ. ಆದರೆ, ಇದು ಓಎಸ್ ಅನ್ನು ಎಲ್ಲರಿಗೂ ಉಚಿತವಾಗಿ ನೀಡುತ್ತದೆಯೋ, ಅಥವಾ ಹೊಸ ಕಂಪ್ಯೂಟರ್ ಖರೀದಿಸುವವರಿಗೆ ಮಾತ್ರ ಈ ಕೊಡುಗೆಯೋ, ಸ್ಪಷ್ಟವಾಗಿಲ್ಲ. ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಜನರು ವಿಂಡೋಸ್ ಬದಲು, ಆ್ಯಪಲ್ ಕಂಪನಿಯ ಮ್ಯಾಕ್ ಹಾಗೂ ಉಚಿತವಾಗಿಯೇ ಲಭ್ಯವಿರುವ ಉಬುಂಟು (http://www.ubuntu.com/) ಕಾರ್ಯಾಚರಣಾ ವ್ಯವಸ್ಥೆಗಳತ್ತ ಮುಖ ಮಾಡದಂತಿರಲು ಮೈಕ್ರೋಸಾಫ್ಟ್ ಈ ಕ್ರಮಕ್ಕೆ ಮುಂದಾಗುತ್ತಿದೆ ಎನ್ನಲಾಗುತ್ತಿದೆ. ಈ ಊಹಾಪೋಹ ಎಷ್ಟು ನಿಜ ಎಂಬುದಕ್ಕಾಗಿ ಸ್ವಲ್ಪ ದಿನ ಕಾದು ನೋಡಬೇಕು.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು