ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ, ಆಗಸ್ಟ್ 12, 2013
ವಿಂಡೋಸ್ ಎಕ್ಸ್‌ಪಿ ಕಂಪ್ಯೂಟರ್ ಸಿಸ್ಟಂಗಳಲ್ಲಿ ಯುನಿಕೋಡ್ ಕನ್ನಡ ಅಕ್ಷರಗಳು ಕಾಣಿಸಬೇಕಿದ್ದರೆ ಏನು ಮಾಡಬೇಕೆಂದು ಕಳೆದ ವಾರ ಓದಿದ್ದೀರಿ. Inscript ಎಂಬ ಕೀಬೋರ್ಡ್ ವಿನ್ಯಾಸದ ಅರಿವು ಇರುವವರಿಗೆ ಟೈಪ್ ಮಾಡಲೂ ಅದು ಅನುಕೂಲ ಮಾಡುತ್ತದೆ. ಆದರೆ, Inscript ತಿಳಿಯದವರಿಗೆ ಮತ್ತು ಕೆಜಿಪಿ/ನುಡಿ ಕೀಬೋರ್ಡ್ ಟೈಪಿಂಗ್ ಶೈಲಿ ಗೊತ್ತಿರುವವರಿಗೆ ಕನ್ನಡದಲ್ಲಿ ಟೈಪ್ ಮಾಡುವುದು ಕಷ್ಟವಾಗುತ್ತದೆಯಲ್ಲವೇ? ಅದರ ನಿವಾರಣೆಗಾಗಿ ಮೈಕ್ರೋಸಾಫ್ಟ್ ಕಂಪನಿಯೇ ಒಂದು ಇನ್‌ಪುಟ್ ಮೆಥಡ್ ಎಡಿಟರ್ (IME) ಅನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ಒದಗಿಸುತ್ತಿರುವುದು ಹೆಚ್ಚಿನವರಿಗೆ ತಿಳಿದಿಲ್ಲ. ಎಲ್ಲ ಭಾಷೆಗಳಿಗೂ ಲಭ್ಯವಿರುವ ಈ ಉಚಿತ ಟೂಲ್‌ಗಳಲ್ಲಿ ಕನ್ನಡದ IME ಡೌನ್‌ಲೋಡ್ ಮಾಡಿಕೊಂಡು (http://www.bhashaindia.com/Downloads/pages/home.aspx) ಇನ್‌ಸ್ಟಾಲ್ ಮಾಡಿಕೊಂಡರೆ ನಿಮ್ಮ ಕೆಲಸ ಸುಲಭ.
ಡೌನ್‌ಲೋಡ್ ಮಾಡಿದ ಕನ್ನಡ ಸೆಟಪ್ ಎಂಬ EXE ಫೈಲನ್ನು ರನ್ ಮಾಡಿದ ಬಳಿಕ ನಿಮ್ಮ ಕಂಪ್ಯೂಟರನ್ನು ರೀಸ್ಟಾರ್ಟ್ ಮಾಡಿ. ನಂತರ, ಕಂಟ್ರೋಲ್ ಪ್ಯಾನೆಲ್‌ಗೆ ಹೋಗಿ, Regional And Language Options ಎಂಬಲ್ಲಿ ಹೋಗಿ, Languages ಟ್ಯಾಬ್‌ನಲ್ಲಿ Details ಕ್ಲಿಕ್ ಮಾಡಿದಾಗ ಕಾಣಿಸಿಕೊಳ್ಳುವ ಪಾಪ್-ಅಪ್ ವಿಂಡೋದಲ್ಲಿ ಮಧ್ಯೆ ಒಂದು ಕಡೆ Add ಎಂಬ ಬಟನ್ ಇರುತ್ತದೆ. ಅಲ್ಲಿ Input Language ಎಂಬಲ್ಲಿ ಕನ್ನಡ ಆಯ್ದುಕೊಳ್ಳಿ, Keyboard layout/IME ಎಂದಿರುವಲ್ಲಿ Kannada Indic IME 1 ಎಂಬುದನ್ನು ಆಯ್ಕೆ ಮಾಡಿ. ಅದನ್ನು ಅಪ್ಲೈ ಮಾಡಿದ ಬಳಿಕ ಕನ್ನಡ ಟೈಪಿಂಗ್ ಸಾಧ್ಯವಾಗುತ್ತದೆ.
ಅದು ಹೇಗೆಂದರೆ, ಬರವಣಿಗೆ ತಂತ್ರಾಂಶಗಳಾದ ನೋಟ್‌ಪ್ಯಾಡ್, ವರ್ಡ್, ಎಕ್ಸೆಲ್ ಯಾವುದನ್ನಾದರೂ ಓಪನ್ ಮಾಡಿದಾಗ ನಿಮ್ಮ ಇನ್‌ಪುಟ್ ಮೆಥಡ್ ಎಡಿಟರ್ ಸಕ್ರಿಯವಾಗುತ್ತದೆ. Alt+Shift ಒತ್ತಿದರೆ, ಕೆಳ-ಬಲ ಮೂಲೆಯಲ್ಲಿನ ಸಿಸ್ಟಂ ಟ್ರೇಯಲ್ಲಿ ಐಕಾನ್‌ನ ಸಾಲು ಕಾಣಿಸುತ್ತದೆ (ಚಿತ್ರ ನೋಡಿ). ಅದರಲ್ಲಿ ಕೀಬೋರ್ಡ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ, ನಿಮಗೆ ತಿಳಿದಿರುವ ಕೀಬೋರ್ಡ್ ವಿನ್ಯಾಸಗಳ ಪಟ್ಟಿ ಕಾಣಿಸುತ್ತದೆ. ಕನ್ನಡ ಟ್ರಾನ್ಸ್‌ಲಿಟರೇಶನ್ (ಲಿಪ್ಯಂತರ), ಕೆಜಿಪಿ, ಇನ್‌ಸ್ಕ್ರಿಪ್ಟ್ ಮತ್ತು ಟೈಪ್‌ರೈಟರ್ ಶೈಲಿಗಳಲ್ಲಿ ಒಂದನ್ನು ಒಮ್ಮೆ ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಕಂಪ್ಯೂಟರ್ ಅದನ್ನು ನೆನಪಿಟ್ಟುಕೊಳ್ಳುತ್ತದೆಯಾದುದರಿಂದ, ನೀವು ಪದೇ ಪದೇ ಈ ವಿಧಿಯನ್ನು ಮಾಡಬೇಕಾಗಿರುವುದಿಲ್ಲ. ಎರಡನೇ ಬಾರಿ Alt+Shift ಕೀಲಿ ಒತ್ತಿದರೆ ಮರಳಿ ಇಂಗ್ಲಿಷ್ ಟೈಪ್ ಮಾಡಬಹುದು.
ವಿಂಡೋಸ್ ಎಕ್ಸ್‌ಪಿಗೆ ಅಲ್ಲದೆ, ಮುಂದಿನ ಆವೃತ್ತಿಗಳಾದ ವಿಂಡೋಸ್ ವಿಸ್ತಾ ಹಾಗೂ ವಿಂಡೋಸ್ 7 ಆವೃತ್ತಿಗಳಿಗೂ ಪ್ರತ್ಯೇಕ IME ಮೇಲೆ ತಿಳಿಸಿದ ಯುಆರ್‌ಎಲ್‌ನಲ್ಲಿಯೇ ದೊರೆಯುತ್ತದೆ.
ಇನ್ನೇಕೆ ತಡ? ಟೈಪಿಂಗ್ ಮಾಡಲು ಆರಂಭಿಸಿ. ಫೇಸ್‌ಬುಕ್ – ಟ್ವಿಟರ್‌ಗಳಲ್ಲಿಯೋ, ಇಮೇಲ್‌ಗಳಲ್ಲಿಯೋ, ಓದುವವರಿಗೆ ಬಹಳ ತ್ರಾಸ ನೀಡುವ ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ) ಬರೆಯುವುದನ್ನು ತಕ್ಷಣದಿಂದ ನಿಲ್ಲಿಸಿಬಿಡಿ!
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.