ಆಧುನಿಕ ಆಂಡ್ರಾಯ್ಡ್ ಫೋನ್‌ಗಳಲ್ಲಿ, ಗೂಗಲ್ ಕೀಬೋರ್ಡ್‌ನಲ್ಲಿ ಕನ್ನಡವನ್ನು (ಮಾತ್ರವಲ್ಲದೆ ಭಾರತದ ಪ್ರಮುಖ ಭಾಷೆಗಳಾದ ಹಿಂದಿ, ತಮಿಳು, ಮಲಯಾಳಂ, ತೆಲುಗು ಕೂಡ) ಎನೇಬಲ್ ಮಾಡಿಕೊಂಡರೆ ಸಾಕು. ಇಂಗ್ಲಿಷ್‌ನಲ್ಲಾದರೆ ಧ್ವನಿ ಆದೇಶ ಆಧಾರಿತ (ನೀವು ಹೇಳಿದ್ದನ್ನು ನಿಮ್ಮ ಸಾಧನವೇ ಅರ್ಥ ಮಾಡಿಕೊಂಡು, ಟೈಪ್ ಮಾಡಿಕೊಂಡುಬಿಡುತ್ತದೆ) ಟೈಪಿಂಗ್ ವ್ಯವಸ್ಥೆಯಿದೆ. ಇದಕ್ಕೆ Voice input ಎಂದು ಹೆಸರು. ಇದಕ್ಕೆ ನಿಮ್ಮ ಸ್ಮಾರ್ಟ್ ಫೋನ್‌ನ ಸೆಟ್ಟಿಂಗ್ಸ್ ವಿಭಾಗದಲ್ಲಿ ಹೋಗಿ, Language and Inputs ಎಂದಿರುವಲ್ಲಿ, ಗೂಗಲ್ ವಾಯ್ಸ್ ಟೈಪಿಂಗ್ ಎಂಬುದನ್ನು ಎನೇಬಲ್ (Google Voice typing ಎಂದಿರುವ ಚೆಕ್ ಬಾಕ್ಸ್‌ನಲ್ಲಿ ಚೆಕ್ ಗುರುತು ಇರುವಂತೆ) ಮಾಡಬೇಕಾಗುತ್ತದೆ. ಇದಕ್ಕಾಗಿ ಇನ್‌ಪುಟ್ ವಿಧಾನವನ್ನು English (India) ಎಂದು ಸೆಟ್ ಮಾಡಿದರೆ ಮಾತ್ರ ಭಾರತೀಯ ಇಂಗ್ಲಿಷ್ ಉಚ್ಚಾರಣೆಯನ್ನು ಗೂಗಲ್ ಅರ್ಥ ಮಾಡಿಕೊಳ್ಳುತ್ತದೆ.
ಹೊಸ ವಿಧಾನ: ತಂತ್ರಜ್ಞಾನ ಇರುವುದೇ ನಮ್ಮ ದಿನ ನಿತ್ಯ ಕಾರ್ಯಗಳನ್ನು ಸುಲಭವಾಗಿಸಲು. ಈ ನಿಟ್ಟಿನಲ್ಲಿ ಬರವಣಿಗೆಯನ್ನು ಗೂಗಲ್ ಮತ್ತಷ್ಟು ಸುಲಭವಾಗಿಸಿದೆ. ನಿಮಗೆ ಕೈಯಲ್ಲಿ ಅಥವಾ ಪೆನ್ನಿನಲ್ಲಿ ಬರೆಯುವುದು ಇಷ್ಟವೆಂದಾದರೆ ಮೊಬೈಲ್ ಫೋನ್ ಸ್ಕ್ರೀನ್ ಮೇಲೆ ಬೆರಳಿನಿಂದ ಅಥವಾ ಅದಕ್ಕಾಗಿಯೇ ದೊರೆಯುವ ಸ್ಟೈಲಸ್ ಎಂದು ಕರೆಯಲಾಗುವ ವಿಶೇಷ ಪೆನ್ ಬಳಸಿ ಬರೆಯಲು ಗೂಗಲ್ ಈಗ ಕನ್ನಡ ಹಾಗೂ ಇತರ ಭಾರತೀಯ ಭಾಷಾ ಬಳಕೆದಾರರಿಗೂ ಅವಕಾಶ ಕೊಟ್ಟಿದೆ. ಅಷ್ಟೇ ಅಲ್ಲದೆ, ಸ್ಮೈಲೀಗಳೆಂಬ ಚಿಹ್ನೆಗಳನ್ನೂ ಕೈಬೆರಳಿನಲ್ಲಿ ಬರೆಯುವ ಮೂಲಕವೇ ಸೇರಿಸಬಹುದು. ಸ್ಟೈಲಸ್ ಮಾರುಕಟ್ಟೆಯಲ್ಲಿ ರೂ. 150 ಮೇಲ್ಪಟ್ಟ ಬೆಲೆಯಲ್ಲಿ ದೊರೆಯುತ್ತದೆ; ಕೊಳ್ಳುವಾಗ ನಿಮ್ಮ ಸ್ಮಾರ್ಟ್‌ಫೋನ್‌ಗೆ ಹೊಂದುತ್ತದೆಯೇ ಅಂತ ಪರೀಕ್ಷಿಸಿಯೇ ತೆಗೆದುಕೊಳ್ಳಿ.
ಬರೆಯಲು ಹೀಗೆ ಮಾಡಿ:
Google Play Store ನಿಂದ Google Handwriting Input ಅಂತ ಸರ್ಚ್ ಮಾಡಿ, ಆ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ (ಲಿಂಕ್: http://bit.ly/GoogleKN). ಅದನ್ನು ಓಪನ್ ಮಾಡಿದಾಗ 3 ಆಯ್ಕೆಗಳು ಗೋಚರಿಸುತ್ತವೆ. 1ನೆಯದು, Enable Google Handwriting Input ಅಂತ ಇರುತ್ತದೆ, ಕ್ಲಿಕ್ ಮಾಡಿದ ಬಳಿಕ Google Handwriting Input ಪಕ್ಕ ಇರುವ ಚೆಕ್ ಬಾಕ್ಸ್ ಮೇಲೆ ಚೆಕ್ ಗುರುತು ಹಾಕಿ. ಬಳಿಕ 2ನೇ ಆಯ್ಕೆ Enable Your Language ಅಂತ ಕ್ಲಿಕ್ ಮಾಡಿದ ಬಳಿಕ ಬರುವ ಸ್ಕ್ರೀನ್‌ನಲ್ಲಿ English ಆಯ್ಕೆ ಮಾಡಿ, ಕೆಳಗೆ ಸ್ಕ್ರಾಲ್ ಮಾಡಿ, ಮತ್ತೊಂದು ಭಾಷೆಯಾಗಿ Kannada ವನ್ನೂ ಅಲ್ಲೇ ಆಯ್ಕೆ ಮಾಡಿಕೊಳ್ಳಿ. ಬಳಿಕ ಬ್ಯಾಕ್ ಬಟನ್ ಒತ್ತಿರಿ. ಆಗ, 2ನೇ ಅಂಶದಲ್ಲೇ, Download Languages ಅಂತ ಗೋಚರಿಸುತ್ತದೆ. ಕ್ಲಿಕ್ ಮಾಡಿ, 7.2 ಎಂಬಿ ಪ್ರಮಾಣದ ಕನ್ನಡ ಡೇಟಾ ಡೌನ್‌ಲೋಡ್ ಆಗುತ್ತದೆ. ಡೌನ್‌ಲೋಡ್ ಆದ ಬಳಿಕ (ನಿಮ್ಮ ಇಂಟರ್ನೆಟ್ ವೇಗವನ್ನು ಆಧರಿಸಿ ಕೆಲವು ನಿಮಿಷಗಳು ಬೇಕಾಗಬಹುದು), 3ನೇ ಆಯ್ಕೆಯಾದ Select Google Handwriting Input ಅಂತ ಬರೆದಿರುವುದನ್ನು ಒತ್ತಿದರೆ ಆಯ್ಕೆಗಳು ದೊರೆಯತ್ತವೆ. ಸರಿಯಾಗಿ ಓದಿ, Google Kannada Handwriting Input ಅಂತ ಕ್ಲಿಕ್ ಮಾಡಿ. ಆಗ 3ನೇ ಆಯ್ಕೆಯೂ ಹಸಿರಾಗುತ್ತದೆ. ಅಲ್ಲೇ ಬರವಣಿಗೆ ಟೆಸ್ಟ್ ಮಾಡಬಹುದು. ಅಷ್ಟೆ.
ಸ್ಪೇಸ್‌ಬಾರ್ ಪಕ್ಕದಲ್ಲಿರುವ ಭೂಗೋಳ ಐಕಾನ್ ಮುಟ್ಟಿದರೆ, ಇಂಗ್ಲಿಷ್ ಹಾಗೂ ಕನ್ನಡ ಕೀಬೋರ್ಡ್‌ಗೆ ಬದಲಾಗಬಹುದು. ಕೈಬರಹ ವ್ಯವಸ್ಥೆ ಬೇಡವೆಂದಾದರೆ, ಸ್ಪೇಸ್ ಬಾರ್ ಒತ್ತಿ ಹಿಡಿದುಕೊಂಡರೆ, Google Keyboard ಆಯ್ಕೆ ಮಾಡುವ ಅವಕಾಶವೂ ದೊರೆಯುತ್ತದೆ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಏಪ್ರಿಲ್ 27, 2015
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಕನ್ನಡವೇನೋ ಟೈಪ್ ಆಯ್ತು..ಆದ್ರೆ ಬರೆದುದೆಲ್ಲಾ ಎಲ್ಲಿ save ಆಗುತ್ತಿದೆ? ಒಂದು ಪೇಜ್ create ಆಗುತ್ತದಾ? email ಕಳಿಸಬೇಕೆಂದಿದ್ದರೆ ಹೇಗೆ?
ಇದು ಯಾವುದೇ ಬರವಣಿಗೆ ಅಪ್ಲಿಕೇಶನ್ ಉಪಯೋಗಿಸಿದಾಗ (ಮೆಸೇಜಿಂಗ್, ಫೇಸ್‌ಬುಕ್, ಇಮೇಲ್) ಕೀಬೋರ್ಡ್ appear ಆಗುತ್ತಲ್ಲವಾ? ಆ ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಸೋ, ಪ್ರತ್ಯೇಕವಾಗಿ ಸೇವ್ ಮಾಡುವ ಅಗತ್ಯವಿಲ್ಲ. ಇಮೇಲ್ App ಓಪನ್ ಮಾಡಿ, ಬರವಣಿಗೆ ಪ್ರಾರಂಭಿಸಿದಾಗ, ಈ ಕೀಬೋರ್ಡ್ ಕಾಣಿಸುತ್ತದೆ.
ನಾನು ಬಹಳ ದಿನಗಳಿ೦ದ ಹುಡುಕಾಡುತ್ತಿದ್ದ,
ವಿಚಾರ ನಿಮ್ಮಿ೦ದ ತಿಳಿಯಿತು.
ಮೊಬೈಲ್ ನಲ್ಲಿ ಕನ್ನಡದಲ್ಲಿ ಬರೆಯುವ ಬಗ್ಗೆ ಬಹಳ ಜನರಲ್ಲಿ ಕೇಳಿದ್ದೆ.
ಧನ್ಯವಾದಗಳು.
-ಶಿವಶ೦ಕರ್ ಮಧುವನಹಳ್ಳಿ.
ಧನ್ಯವಾದಗಳು ಸರ್.
ಜತೆಗೆ JustKannada ಅಂತ ಕೀಬೋರ್ಡ್ ಇದೆ, ಚೆನ್ನಾಗಿದೆ.