ಮೊಬೈಲ್‌ನಲ್ಲಿ ಕನ್ನಡ ವೆಬ್‌ಸೈಟ್‌ ಹೀಗೆ ನೋಡಿ

ಜನಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ-6 (ವಿಜಯ ಕರ್ನಾಟಕ ಅಂಕಣ 01-ಅಕ್ಟೋಬರ್-2012)

How to View Kannada in your Mobile?

ಮೊತ್ತಮೊದಲನೆಯದಾಗಿ ವಿಜಯ ಕರ್ನಾಟಕ ಓದುಗರಿಗೊಂದು ಸಿಹಿ ಸುದ್ದಿ. ನಿಮ್ಮ ನೆಚ್ಚಿನ ‘ವಿಕ’ ಅಂತರಜಾಲ ತಾಣವು ಮೊಬೈಲ್‌ನಲ್ಲಿಯೂ ಲಭ್ಯ. http://www.mobilevk.com ಗೆ ಹೋದರೆ,ಯಾವುದೇ ರೀತಿಯ ಸೆಟ್ಟಿಂಗ್‌ ಬದಲಾವಣೆ ಮಾಡಿಕೊಳ್ಳದೆಯೇ ಇದನ್ನು ಯಾವುದೇ ಮೊಬೈಲ್‌, ಸ್ಮಾರ್ಟ್‌ ಫೋನ್‌, ಟ್ಯಾಬ್ಲೆಟ್‌ಗಳಲ್ಲಿ ನೋಡಬಹುದಾಗಿದೆ.

ದೇಶದಲ್ಲಿ ಇಂಟರ್ನೆಟ್‌ ಕ್ರಾಂತಿ ನಡೆದ 90ರ ದಶಕದ ಆಸುಪಾಸು ಪ್ರಾದೇಶಿಕ ಭಾಷೆಗಳು ಕೊಂಚ ಹಿನ್ನಡೆ ಎದುರಿಸಿದ್ದು ಸತ್ಯ. ಈಗ ಪರಿಸ್ಥಿತಿ ಬದಲಾಗಿದೆ. ಕನ್ನಡವು ಕೂಡ ಇಂಟರ್ನೆಟ್‌ನಲ್ಲಿ ಮಿಂಚುತ್ತಿದೆ. ಈಗ ಜನರ ಗಮನ ಕಂಪ್ಯೂಟರ್‌ನಿಂದ ಚಿಕ್ಕದಾದ ಮೊಬೈಲ್‌ ಫೋನ್‌ನತ್ತ ಹೊರಳಿಬಿಟ್ಟಿದೆ. ಅಂಗೈಯಲ್ಲಿ ಅರಮನೆ ತೋರಿಸುವ, ಎಲ್ಲವೂ ಇರುವ ಮೊಬೈಲ್‌ನಲ್ಲಿ ಕನ್ನಡದ ವೆಬ್‌ ಸೈಟುಗಳನ್ನು ನೋಡುವುದು ಹೇಗೆ, ಫೇಸ್‌ಬುಕ್‌ ಅಥವಾ ಟ್ವಿಟರಿನಲ್ಲಿ ಕನ್ನಡದಲ್ಲಿ ಟೈಪ್‌ ಮಾಡಿರುವುದನ್ನು ನಮ್ಮ ಮೊಬೈಲುಸಾಧನಗಳಲ್ಲಿ ನೋಡುವುದು ಹೇಗೆ ಎಂದೆಲ್ಲಾ ಚಿಂತಿಸುತ್ತಿರುವವರಿಗಾಗಿ ಇಲ್ಲೊಂದು ಮಾಹಿತಿ.

ಇಂಟರ್ನೆಟ್‌ ಜಾಲಾಡಲು ಆಯಾ ಮೊಬೈಲುಗಳು ತಮ್ಮದೇ ಬ್ರೌಸರ್‌ ಒದಗಿಸುತ್ತವೆ. ಅವುಗಳ ಬದಲಾಗಿ, ಒಪೆರಾ ಕಂಪನಿಯು ಮೊಬೈಲ್‌ಗಾಗಿಯೇ ಅಭಿವೃದ್ಧಿಪಡಿಸಿದ ಒಪೆರಾ ಮಿನಿ ಎಂಬ ಬ್ರೌಸರ್‌ ಒಂದು ಪ್ರಾದೇಶಿಕ ಭಾಷೆಗಳಲ್ಲಿ ವೆಬ್‌ಸೈಟುಗಳನ್ನು ಸಂದರ್ಶಿಸುವವರಲ್ಲಿ ಜನಪ್ರಿಯವಾಗಿಬಿಟ್ಟಿದೆ. ಇದಕ್ಕೆ ಕಾರಣ, ಅದರಲ್ಲಿ ಕೊಂಚ ಸೆಟ್ಟಿಂಗ್‌ ಬದಲಾವಣೆ ಮಾಡಿಕೊಂಡರೆ ಕನ್ನಡ ಮಾತ್ರವೇ ಅಲ್ಲ, ಜಗತ್ತಿನ ಯಾವುದೇ ಭಾಷೆಯ, ಯಾವುದೇ ಫಾಂಟ್‌ನಲ್ಲಿರುವ ವೆಬ್‌ಸೈಟುಗಳನ್ನು ನೋಡಬಹುದು.

ಅದು ಹೇಗೆ?
ನೋಕಿಯಾ ಸ್ಟೋರ್‌, ಆ್ಯಪಲ್‌ ಸ್ಟೋರ್‌ ಅಥವಾ ಆಂಡ್ರಾಯ್ಡ್‌ನ ಗೂಗಲ್‌ ಪ್ಲೇ ಎಂಬ ಅಪ್ಲಿಕೇಶನ್‌ ಸ್ಟೋರ್‌ಗಳಿಂದ Opera Mini ಬ್ರೌಸರನ್ನು ಡೌನ್‌ಲೋಡ್‌ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿಕೊಳ್ಳಿ. ಇದು ಉಚಿತವಾಗಿ ಲಭ್ಯ. ಒಪೆರಾ ಬ್ರೌಸರ್‌ ಬಳಸಿದರೆ ಸೈಟುಗಳು ವೇಗವಾಗಿ ತೆರೆದುಕೊಳ್ಳುತ್ತವೆ, ಡೇಟಾ ವೆಚ್ಚ ತಗ್ಗಿಸಬಹುದು. ಹೀಗಾಗಿ ಬೇರಾವುದೇ ಸೈಟುಗಳನ್ನು ನೋಡುವಂತಾಗಲು ಅದನ್ನೇ ನಿಮ್ಮ ಡೀಫಾಲ್ಟ್ ಬ್ರೌಸರ್‌ ಆಗಿ ಮಾಡಿಕೊಳ್ಳಬಹುದು.

ಒಪೆರಾ ಬ್ರೌಸರ್‌ ಇನ್‌ಸ್ಟಾಲ್‌ ಆದ ಬಳಿಕ, ಅದರ ಅಡ್ರೆಸ್‌ ಬಾರ್‌ನಲ್ಲಿ (ಯುಆರ್‌ಎಲ್‌ ಟೈಪ್‌ ಮಾಡುವ ಜಾಗ) about:config ಅಂತ ಟೈಪ್‌ ಮಾಡಿ, Go ಎಂಬುದನ್ನು ಒತ್ತಿರಿ. ಆಗ ತೆರೆದುಕೊಳ್ಳುವ ಒಂದು ವಿಂಡೋದಲ್ಲಿ, Use bitmap fonts for complex scripts ಅಂತ ಇರುವ ಕಡೆ, Yes ಎಂಬ ಡ್ರಾಪ್‌ಡೌನ್‌ ಮೆನುವನ್ನು ಆರಿಸಿಕೊಳ್ಳಿ. ಆ ಬಳಿಕ save ಬಟನ್‌ ಅದುಮಿದರೆ ಮುಗಿಯಿತು. ಈಗ ಯಾವುದೇ ಕನ್ನಡ ಸೈಟನ್ನು ಆ ಬ್ರೌಸರಿನಲ್ಲಿ ತೆರೆದರೆ ಸುಲಲಿತವಾಗಿ ಕನ್ನಡ ಓದಬಹುದು. ಇಂಗ್ಲಿಷ್‌ ಸೈಟುಗಳಿಗೆ ಇಂತಹಾ ಯಾವುದೇ ಕಟ್ಟುಪಾಡುಗಳಿರುವುದಿಲ್ಲ. ಆದರೆ ಭಾಷಾ ಸೈಟುಗಳಿಗೆ ಮಾತ್ರ ಈ ಅಡಚಣೆ.

ಇದು ಹೇಗೆ?
ನಿಮ್ಮ ಮೊಬೈಲಿನಲ್ಲಿ ಯಾವುದೇ ಕನ್ನಡ ಫಾಂಟ್‌ ಇಲ್ಲ, ಇದು ಹೇಗೆ ಸಾಧ್ಯ ಎಂಬ ಅಚ್ಚರಿಯೇ? ಕಾರಣ ಸಿಂಪಲ್‌. ಒಪೆರಾ ಬ್ರೌಸರಿನಲ್ಲಿ ನೀವು ಮೇಲೆ ಹೇಳಿದಂತೆ ಮಾಡಿಕೊಂಡ ವ್ಯವಸ್ಥೆಯು ಇಡೀ ಪುಟವನ್ನು bitmap ಚಿತ್ರದ ರೂಪಕ್ಕೆ ಪರಿವರ್ತಿಸುತ್ತದೆ. ಚಿತ್ರಗಳು ಯಾವುದೇ ಬ್ರೌಸರಿನಲ್ಲಿ ಕಾಣಿಸುತ್ತವೆ.

ಆದರೆ ಕೆಲವು ಸೈಟುಗಳು ಮೊಬೈಲ್‌ಗಾಗಿಯೇ ಪ್ರತ್ಯೇಕ ಸೈಟುಗಳನ್ನು ಮಾಡಿಕೊಂಡಿವೆ. ಪ್ರಮುಖವಾಗಿ ಎರಡು ಕಾರಣಗಳು, ಒಂದನೆಯದು, ಡೇಟಾ ವೆಚ್ಚ ಉಳಿತಾಯವಾಗಲು (ಈ ಸೈಟುಗಳು ‘ಹಗುರ’ವಾಗಿರುತ್ತವೆ) ಮತ್ತು ಸಂಕೀರ್ಣ ಲಿಪಿಗಳು ಕಾಣುವಂತೆ ಇಮೇಜ್‌ ರೂಪದ ತಾಣಗಳು. ಯುನಿಕೋಡ್‌ ಅಕ್ಷರಗಳನ್ನು ಸ್ವಯಂಚಾಲಿತವಾಗಿಯೇ ಚಿತ್ರಗಳ ರೂಪಕ್ಕೆ ಪರಿವರ್ತಿಸುವ ಸೈಟುಗಳು ಕೂಡ ಓದುಗರಿಗೆ ಅನುಕೂಲ ಒದಗಿಸಿಕೊಟ್ಟಿವೆ. ಆದರೆ ಈ ವ್ಯವಸ್ಥೆ ಓದಲು ಮಾತ್ರವೇ ಹೊರತು ಬರೆಯುವುದಕ್ಕಲ್ಲ ಎಂಬುದು ನೆನಪಿನಲ್ಲಿರಲಿ.

00
Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

5 days ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

4 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

5 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago