ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-19 (ಜನವರಿ 07, 2013)
ಬ್ಲಾಗ್ ಬರೆಯುವುದು, ಅದನ್ನು ಡ್ರಾಫ್ಟ್‌ನಲ್ಲಿ ಸೇವ್ ಮಾಡಿಡುವುದು, ಬೇಕಾದಾಗ ತಿದ್ದುವುದು… ಇವೆಲ್ಲಕ್ಕೂ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ. ಪದೇ ಪದೇ ಅದನ್ನು ಸಂಪರ್ಕಿಸುವುದು ದೊಡ್ಡ ತಲೆನೋವು. ಎಲ್ಲವೂ ಆದ ಮೇಲೆ ಒಂದೇ ಬಾರಿ ಪೋಸ್ಟ್ ಮಾಡಿದರಾಯಿತು ಎಂದುಕೊಳ್ಳುವವರಿಗೆ ಮೈಕ್ರೋಸಾಫ್ಟ್ ಒಂದು ಒಳ್ಳೆಯ ಪ್ರೋಗ್ರಾಮನ್ನು ರೂಪಿಸಿದೆ. ವಿಂಡೋಸ್ 7 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಡೀಫಾಲ್ಟ್ ಆಗಿ ಬಂದಿರುವ ಇದರ ಹೆಸರು ವಿಂಡೋಸ್ ಲೈವ್ ರೈಟರ್ (Windows Live Writer).
ಸರಿಯಾಗಿ ಹೇಳುವುದಾದರೆ ಇದೊಂದು ಡೆಸ್ಕ್‌ಟಾಪ್ ಬ್ಲಾಗ್ ಪಬ್ಲಿಶಿಂಗ್ ಅಪ್ಲಿಕೇಶನ್. ಅಂದರೆ ನಿಮ್ಮ ಕಂಪ್ಯೂಟರಿನ ಡೆಸ್ಕ್‌ಟಾಪಿನಲ್ಲೇ ಏನೆಲ್ಲಾ ತಿದ್ದುಪಡಿ ಮಾಡಿ, ಬಳಿಕ ಅದನ್ನು ಬ್ಲಾಗಿಗೆ ಪೋಸ್ಟ್ ಮಾಡಲು ಅನುಕೂಲ ಮಾಡುವ ವ್ಯವಸ್ಥೆ. ನಿಖರವಾಗಿ ಹೇಳಬೇಕೆಂದರೆ, ಆಫ್‌ಲೈನ್‌ನಲ್ಲಿ ಎಲ್ಲವನ್ನೂ ಮಾಡಿಕೊಂಡು ಬಳಿಕ ಆನ್‌ಲೈನ್‌ಗೆ ಪಬ್ಲಿಷ್ ಮಾಡುವುದು.
ಹೆಚ್ಚಿನವರು ವರ್ಡ್‌ಪ್ರೆಸ್ ಮತ್ತು ಬ್ಲಾಗರ್ ಎಂಬ ಬ್ಲಾಗಿಂಗ್ ವೇದಿಕೆಗಳಲ್ಲಿಯೇ ತಮ್ಮ ಬ್ಲಾಗುಗಳನ್ನು ಬರೆಯುತ್ತಾರೆ. ಇದಲ್ಲದೆ, ಲೈವ್‌ಜರ್ನಲ್, ಟೈಪ್‌ಪ್ಯಾಡ್, ಬ್ಲಾಗೆಂಜಿನ್, ವಿಂಡೋಸ್ ಲೈವ್ ಸ್ಪೇಸಸ್ ಮುಂತಾದ ಬ್ಲಾಗಿಂಗ್ ವೇದಿಕೆಗಳನ್ನೂ ಇದು ಬೆಂಬಲಿಸುತ್ತದೆ.
Windows Live Essentials ಜೊತೆಗೆ ಇದು ಅಳವಡಿಕೆಯಾಗಿಯೇ ಬರುತ್ತದೆ. ಇಲ್ಲವಾದರೆ, ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯ. ಮೈಕ್ರೋಸಾಫ್ಟ್ ಡಾಟ್ ಕಾಂ ಅಥವಾ Filehippo ಡಾಟ್ ಕಾಂಗಳಿಂದ ಇದನ್ನು ಇಳಿಸಿಕೊಂಡು ಅಳವಡಿಸಿಕೊಳ್ಳಬಹುದು. ವಿಂಡೋಸ್ 7, ವಿಂಡೋಸ್ 8 ಮತ್ತು ವಿಂಡೋಸ್ ಸರ್ವರ್ 2008 ಆವೃತ್ತಿಗಳಲ್ಲಿ ಮಾತ್ರ ಇದು ಕೆಲಸ ಮಾಡುತ್ತದೆ.
ಹೇಗೆ?: ಇಂಟರ್ನೆಟ್ ಸಂಪರ್ಕ ಹೊಂದಿರುವ ನಿಮ್ಮ ಕಂಪ್ಯೂಟರಿನ ಪ್ರೋಗ್ರಾಂಗಳು ಎಂಬಲ್ಲಿಗೆ ಹೋಗಿ ‘ವಿಂಡೋಸ್ ಲೈವ್’ ಆಯ್ಕೆ ಮಾಡಿದ ತಕ್ಷಣ, ಮೊದಲು ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಹಲವು ಆಯ್ಕೆಗಳು ತೋರಿಸುತ್ತವೆ. ಅಂದರೆ ಬ್ಲಾಗರ್, ವರ್ಡ್‌ಪ್ರೆಸ್ ಅಥವಾ ನಿಮ್ಮ ಬೇರಾವುದೇ ಬ್ಲಾಗ್ ವೇದಿಕೆಯನ್ನು ಕ್ಲಿಕ್ ಮಾಡಿರಿ. ಇಲ್ಲವೇ, ವರ್ಡ್‌ಪ್ರೆಸ್‌ನ ಹೊಸ ಬ್ಲಾಗ್ ಕ್ರಿಯೇಟ್ ಮಾಡಲೂ ಅಲ್ಲಿಂದಲೇ ಅವಕಾಶ ಲಭ್ಯ.
ಈಗಾಗಲೇ ಇರುವ ಬ್ಲಾಗ್ ಆದರೆ, ಮುಂದಿನ ವಿಂಡೋದಲ್ಲಿ ನಿಮ್ಮ ಬ್ಲಾಗ್ ಹೆಸರು ನಮೂದಿಸಿ. ಅದರಲ್ಲಿ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಕೂಡ ಸೇರಿಸಿ. ಬೇಕಿದ್ದರೆ ಮತ್ತು ನಿಮ್ಮದೇ ಸ್ವಂತ ಕಂಪ್ಯೂಟರ್/ಲ್ಯಾಪ್‌ಟಾಪ್ ಆಗಿದ್ದರೆ, ‘Remember my password” ಒತ್ತಿದರೆ, ಪದೇ ಪದೇ ಅವುಗಳನ್ನು ಟೈಪ್ ಮಾಡುವ ಅನಿವಾರ್ಯತೆ ಇರುವುದಿಲ್ಲ. ನಂತರ ಅದು ನಿಮ್ಮನ್ನು ತಾನಾಗಿ ಕರೆದೊಯ್ಯುತ್ತದೆ.
ಆವಾಗ, ಆಯಾ ಬ್ಲಾಗಿನ ಸೆಟ್ಟಿಂಗ್‌ಗಳು, ಪ್ಲಗ್-ಇನ್ ಇತ್ಯಾದಿಗಳೆಲ್ಲವನ್ನೂ ನಿಮ್ಮ ಕಂಪ್ಯೂಟರಿಗೆ ಡೌನ್‌ಲೋಡ್ ಮಾಡಿಕೊಳ್ಳುತ್ತದೆ. ಅಲ್ಲಿಗೆ ಸೆಟಪ್ ಮುಗಿಯಿತು.
ಇನ್ನು ಯಾವುದೇ ಬ್ಲಾಗ್ ಬರೆಯಬೇಕೆಂದರೆ, ವಿಂಡೋಸ್ ಲೈವ್ ಫೋಲ್ಡರ್‌ನೊಳಗಿರುವ ‘ವಿಂಡೋಸ್ ಲೈವ್ ರೈಟರ್’ ಮೇಲೆ ಕ್ಲಿಕ್ ಮಾಡಿದಾಗ, ಬ್ಲಾಗ್ ಬರೆಯುವ ಫಾರ್ಮ್ ತೆರೆದುಕೊಳ್ಳುತ್ತದೆ. ಅಲ್ಲಿ ಪೋಸ್ಟ್‌ನ ಶೀರ್ಷಿಕೆ, ಮತ್ತು ನೀವು ಈಗಾಗಲೇ ಬ್ಲಾಗಿನಲ್ಲಿ ಕ್ರಿಯೆಟ್ ಮಾಡಿರುವ ಕೆಟಗರಿಗಳನ್ನು ಆಯ್ಕೆ ಮಾಡುವ, ಯಾವಾಗ ಪ್ರಕಟವಾಗಬೇಕೆಂದು ಆರಿಸುವ ಆಯ್ಕೆಗಳಿರುತ್ತವೆ. ಟ್ಯಾಗ್‌ಗಳನ್ನೂ ಹಾಕಬಹುದಾಗಿದೆ.
ಇದಲ್ಲದೆ, ಫಾಂಟ್‌ಗಳ ಗಾತ್ರ, ಬಣ್ಣ ಬದಲಾವಣೆ, ಚಿತ್ರ/ವೀಡಿಯೋ ಸೇರ್ಪಡೆ, ಲಿಂಕ್ ಸೇರ್ಪಡೆ ಇತ್ಯಾದಿ ಎಲ್ಲವನ್ನೂ ವಿಂಡೋಸ್ ಲೈವ್ ರೈಟರ್‌ನಲ್ಲೇ ಮಾಡಬಹುದಾಗಿದೆ. ಬಳಿಕ Ctrl+S ಮಾಡಿದರೆ ನಿಮ್ಮ ಕಂಪ್ಯೂಟರಿನಲ್ಲಿ ಸೇವ್ ಆಗಿರುತ್ತದೆ. ಅಥವಾ ಆನ್‌ಲೈನ್‌ನಲ್ಲಿ ಬ್ಲಾಗಿನ ಡ್ರಾಫ್ಟ್ ಆಗಿಯೂ ಸೇವ್ ಮಾಡಿಕೊಳ್ಳಬಹುದಾಗಿದೆ.
ಅರ್ಧ ಪೂರ್ಣಗೊಂಡ ಇದೇ ಲೇಖನವನ್ನು ಮುಂದುವರಿಸಬೇಕೆಂದಾದರೆ, ಫೈಲ್ ಎಂಬಲ್ಲಿಗೆ ಹೋಗಿ, “ಓಪನ್ ಲೋಕಲ್ ಡ್ರಾಫ್ಟ್” ಅಥವಾ “ಓಪನ್ ರೀಸೆಂಟ್ ಪೋಸ್ಟ್” ಎಂಬುದನ್ನು ಕ್ಲಿಕ್ ಮಾಡಿದರೆ, ಅವುಗಳನ್ನು ತಿದ್ದುವ ಅವಕಾಶವೂ ದೊರೆಯುತ್ತದೆ. ಪೂರ್ಣವಾಗಿ ತಿದ್ದುಪಡಿ ಮಾಡಿದ ಬಳಿಕ ಮೇಲ್ಭಾಗದಲ್ಲಿರುವ “Publish” ಬಟನ್ ಕ್ಲಿಕ್ ಮಾಡಿದರಾಯಿತು. ನೇರವಾಗಿ ನಿಮ್ಮ ಆನ್‌ಲೈನ್ ಬ್ಲಾಗಿಗೆ ಪೋಸ್ಟ್ ಆಗುತ್ತದೆ.
ಎಡಿಟಿಂಗ್ (ಬರವಣಿಗೆ + ತಿದ್ದುಪಡಿ) ಮಾಡಬೇಕಿದ್ದರೆ ಇಂಟರ್ನೆಟ್ ಸಂಪರ್ಕ ಬೇಕಾಗಿಲ್ಲ. ಆದರೆ ಪಬ್ಲಿಷ್ ಮಾಡಲು ಬೇಕಾಗುತ್ತದೆ. ಹಲವು ಬ್ಲಾಗುಗಳಿದ್ದರೆ Add blog Account ಎಂಬಲ್ಲಿಗೆ ಹೋಗುವುದರ ಮೂಲಕ ಅವುಗಳನ್ನೂ ಸೇರಿಸಿಕೊಳ್ಳಬಹುದು. ತುಂಬಾ ಸರಳವಾಗಿರುವುದರಿಂದ ಓದುಗರಿಗೆ ಇದನ್ನು ಇಲ್ಲಿ ಪರಿಚಯಿಸಲಾಗಿದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು