ಫೇಸ್‌ಬುಕ್‌ನಲ್ಲಿನ್ನು ಕಂಗ್ಲಿಷ್ ಬೇಡ, ಬಂದಿದೆ ಸುಲಭ ಕನ್ನಡ ‘ಪದ’

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-13 (ನವೆಂಬರ್ 19, 2012)

ಕಂಪ್ಯೂಟರಿನಲ್ಲಿ ಕನ್ನಡ ಯುನಿಕೋಡ್ ಟೈಪ್ ಮಾಡುವುದೆಂದರೆ ಹಲವರಿಗೆ ದ್ರಾವಿಡ ಪ್ರಾಣಾಯಾಮದಂತೆ. ಇಂಗ್ಲಿಷ್ ಲಿಪಿಯಲ್ಲಿ ಕನ್ನಡವನ್ನು ಓದುವವರಿಗಂತೂ ಅಸಾಧ್ಯ ಕಿರಿಕಿರಿ. ಇನ್ನು ಮುಂದೆ ಕನ್ನಡ ಬರೆಯುವುದು ಗೊತ್ತಿಲ್ಲ ಎಂಬ ನೆಪ ಹೇಳುವಂತಿಲ್ಲ, ಇದೋ ಬಂದಿದೆ ಹೊಸದೊಂದು ತಂತ್ರಾಂಶ – ‘ಪದ’.

ಹಿಂದಿನ ಅಂಕಣದಲ್ಲಿ ವಿವರಿಸಿದಂತೆ ಯುನಿಕೋಡ್ ಎಂಬುದು ಭವಿಷ್ಯದ ಫಾಂಟ್. ಬ್ಲಾಗು, ಫೇಸ್‌ಬುಕ್, ಟ್ವಿಟರ್ ಇತ್ಯಾದಿಗಳಲ್ಲಿಯೂ, ಅನ್ಯ ವೆಬ್‌ಸೈಟುಗಳಲ್ಲಿಯೂ ಇದೇ ಇರುವುದರಿಂದ, ನುಡಿ, ಬರಹ ತಂತ್ರಾಂಶಕರ್ತರು ಕೂಡ ಅದರಲ್ಲಿ ಯುನಿಕೋಡ್ ಟೈಪಿಸಲು, ಕನ್ವರ್ಟ್ ಮಾಡಲು ಟೂಲ್‌ಗಳನ್ನು ಸೇರಿಸಿ ಕೊಡುತ್ತಿದ್ದಾರೆ. ಜೊತೆಗೆ ಗೂಗಲ್ ಟ್ರಾನ್ಸ್‌ಲಿಟರೇಶನ್ ಟೂಲ್ (ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲಿಯೂ ಲಭ್ಯ), ವಿಂಡೋಸ್ IME (ಇನ್‌ಪುಟ್ ಮೆಥಡ್ ಎಂಜಿನ್), ಫೈರ್‌ಫಾಕ್ಸ್ ಬ್ರೌಸರ್‌ಗೆ ‘ಪ್ರಮುಖ್’ ಪ್ಲಗ್‌ಇನ್ ಮುಂತಾದವು ಇವೆಯಾದರೂ, ಬಳಕೆ ಕಷ್ಟ ಅಂದುಕೊಂಡವರಿಗೆ ‘ಪದ’ ಸೂಕ್ತ! ಇಂಥದ್ದೊಂದು ಯುನಿಕೋಡ್‌ನಲ್ಲಿ ಟೈಪಿಸುವ ತಂತ್ರಾಂಶವನ್ನು ಕನ್ನಡಿಗರಿಗೆ ನೀಡಿರುವವರು ದಾವಣಗೆರೆ ಮೂಲದ, ಈಗ ಬೆಂಗಳೂರಿನಲ್ಲಿರುವ ಸಾಫ್ಟ್‌ವೇರ್ ತಂತ್ರಜ್ಞ ಲೋಹಿತ್ ಡಿ. ಶಿವಮೂರ್ತಿ.

www.pada.pro/download ತಾಣದಲ್ಲಿ ನೀವು ಪದ ತಂತ್ರಾಂಶವನ್ನು ಭಟ್ಟಿ ಇಳಿಸಿಕೊಳ್ಳಬಹುದು. ಕಂಪ್ಯೂಟರಿಗೆ PadaKannda Setup ಸ್ಥಾಪಿಸಿಕೊಳ್ಳುವುದು ಬೇಡವೆಂದಾದರೆ, Install ಮಾಡುವ ಅಗತ್ಯವೇ ಇಲ್ಲದ Zipped Version ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅದನ್ನು ಪೆನ್ ಡ್ರೈವ್‌ನಲ್ಲಿ ಹಾಕಿಕೊಂಡು ಹೋದಲ್ಲೆಲ್ಲಾ ಒಯ್ಯಬಹುದು. ಅದನ್ನು ಒಂದು ಫೋಲ್ಡರಿಗೆ Unzip ಮಾಡಿ. ಆ ಫೋಲ್ಡರಿನೊಳಗೆ, Pada, PadaIME ಮತ್ತು PadaKosha ಎಂಬ ಮೂರು ಫೈಲ್‌ಗಳನ್ನು ಡೆಸ್ಕ್‌ಟಾಪ್‌ಗೆ ಶಾರ್ಟ್‌ಕಟ್ ಮಾಡಿಟ್ಟುಕೊಳ್ಳಿ. ಈ ಮೂರರ ಬಗ್ಗೆ ಪ್ರತ್ಯೇಕವಾಗಿ ತಿಳಿಯೋಣ.

Pada ಎಂಬ ಅಪ್ಲಿಕೇಶನ್ ಕ್ಲಿಕ್ ಮಾಡಿದರೆ, ‘ಪದ ಎಡಿಟರ್’ ತೆರೆದುಕೊಳ್ಳುತ್ತದೆ. ಮೇಲ್ಭಾಗದಲ್ಲಿ Keyboard ಎಂದಿರುವಲ್ಲಿ ಕ್ಲಿಕ್ ಮಾಡಿದರೆ, ಫೋನೆಟಿಕ್, ನುಡಿ (ಕೆ.ಪಿ.ರಾವ್), ಫೋನೆಟಿಕ್2, ಟ್ರಾನ್ಸ್‌ಲಿಟರೇಶನ್ ಎಂಬ ನಾಲ್ಕು ಕೀಬೋರ್ಡ್ ವಿನ್ಯಾಸಗಳಲ್ಲಿ (ಬರವಣಿಗೆ ಶೈಲಿ) ನಿಮಗೆ ತಿಳಿದಿರುವುದನ್ನು ಆರಿಸಿಕೊಂಡು ಟೈಪ್ ಮಾಡಬಹುದು.

* ಇಲ್ಲಿ ಯುನಿಕೋಡ್ ಟೈಪ್ ಮಾಡಿ ಫೇಸ್‌ಬುಕ್, ಟ್ವಿಟರ್, ಬ್ಲಾಗ್ ಮುಂತಾದೆಡೆ ಪೇಸ್ಟ್ ಮಾಡಬಹುದು.

* ಫೈಲನ್ನು ಟೆಕ್ಸ್ಟ್, ಆರ್‌ಟಿಎಫ್, ಹೆಚ್‌ಟಿಎಂಎಲ್ ಮುಂತಾದ ಫಾರ್ಮ್ಯಾಟ್‌ಗಳಲ್ಲಿ ಸೇವ್ (Save As) ಮಾಡಬಹುದು.

* ಮತ್ತೊಂದು ಅನುಕೂಲವೆಂದರೆ ಫೈಲ್‌ಗಳನ್ನು ಪಿಡಿಎಫ್ ರೂಪಕ್ಕೂ ಪರಿವರ್ತಿಸಬಹುದು.

* ನೀವು ಟೈಪ್ ಮಾಡುತ್ತಿರುವಂತೆಯೇ ಅದು ಪದಸಲಹೆಗಳನ್ನೂ (Word Suggestions) ನೀಡುತ್ತದೆ.

* ಈಗಾಗಲೇ ಬರಹ (.BRH) ಅಥವಾ ನುಡಿಯಲ್ಲಿ (.NUDI) ಬರೆದಿರುವ ANSI ಫೈಲ್‌ಗಳನ್ನು ಪದ ಎಡಿಟರ್‌ನಲ್ಲಿ ತೆರೆದರೆ ಅಥವಾ Drag and Drop ಮಾಡಿದರೆ, ಅದು ತ್ರಾಸವಿಲ್ಲದೆಯೇ ಯುನಿಕೋಡ್‌ಗೆ ಪರಿವರ್ತನೆಯಾಗುವ (Font Conversion) ಅವಕಾಶ ಇದರಲ್ಲಿದೆ. ಹೀಗಾಗಿ ಹಳೆಯ ಲೇಖನಗಳನ್ನು ಈಗ ಬ್ಲಾಗಿಗೆ ಹಾಕುವುದಾದರೆ, ಫಾಂಟ್ ಪರಿವರ್ತಿಸಿ ಹಾಕಬಹುದು.

* ಇದರೊಂದಿಗೆ, ಇಂಟರ್ನೆಟ್ ಸಂಪರ್ಕ ಹೊಂದಿದ್ದರೆ ವಿಕ್ಷನರಿ (ಆನ್‌ಲೈನ್‌ನಲ್ಲಿ ಲಭ್ಯವಿರುವ ಡಿಕ್ಷನರಿ) ಸಹಾಯವು ಟೈಪಿಸುವಾಗಲೇ ದೊರೆಯುತ್ತದೆ. ಸುಮಾರು 2 ಲಕ್ಷ ಪದಗಳುಳ್ಳ PadaKosha ಎಂಬ ಆಫ್‌ಲೈನ್ ಡಿಕ್ಷನರಿಯೂ (ಇಂಗ್ಲಿಷ್-ಕನ್ನಡ) ಇದೆ. ಒಟ್ಟಿನಲ್ಲಿ ಕನ್ನಡಿಗರು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಸಮೃದ್ಧ ತಂತ್ರಾಂಶವಾಗಿಬಿಟ್ಟಿದೆ ಇದು.

Pada ಎಡಿಟರ್ ಬೇಡವೆಂದಾದರೆ, PadaIME ರನ್ ಮಾಡಿ. ಮಾನಿಟರ್‌ನ ಕೆಳ-ಬಲ ಮೂಲೆಯಲ್ಲಿರುವ ಟಾಸ್ಕ್‌ಬಾರ್‌ನಲ್ಲಿ ಬರುವ ಅದರ ಐಕಾನ್ ಕ್ಲಿಕ್ ಮಾಡಿ.ಯಾವ ಭಾಷೆ ಬೇಕೆಂದು ಆಯ್ಕೆ ಮಾಡುವ ಅವಕಾಶ (ಕನ್ನಡ, ತೆಲುಗು, ಮಲಯಾಳಂ, ಒರಿಯಾ, ಹಿಂದಿ, ಗುಜರಾತಿ, ಬಂಗಾಳಿ, ಗುರುಮುಖಿ, ತಮಿಳು, ಇಂಗ್ಲಿಷ್) ದೊರೆಯುತ್ತದೆ. ಮಧ್ಯೆ ಮಧ್ಯೆ ಇಂಗ್ಲಿಷ್ ಅಕ್ಷರಗಳನ್ನು ಸೇರಿಸಬೇಕೆಂದಿದ್ದರೆ, Ctrl+F11 ಒತ್ತಿದರಾಯಿತು. ಇದನ್ನು ಮಾತ್ರವೇ ರನ್ ಮಾಡಿದರೆ ಎಂಎಸ್-ವರ್ಡ್, ಎಕ್ಸೆಲ್ ಮುಂತಾದ ಬರವಣಿಗೆಯ ಪ್ರೋಗ್ರಾಂಗಳಲ್ಲಿ ಅಥವಾ ಬ್ರೌಸರುಗಳಲ್ಲಿ (ನೇರವಾಗಿ ಫೇಸ್‌ಬುಕ್, ಬ್ಲಾಗ್, ಟ್ವಿಟರ್ ಇತ್ಯಾದಿ) ಟೈಪ್ ಮಾಡಬಹುದು. ಅಂಕಿಗಳನ್ನು ಕನ್ನಡ ಅಥವಾ ಇಂಗ್ಲಿಷಿನಲ್ಲಿ ಬರೆಯುವ ಆಯ್ಕೆಯೂ ಇಲ್ಲುಂಟು. ಇನ್ನೇಕೆ ತಡ, ಕಂಗ್ಲಿಷನ್ನು ಬಿಟ್ಟುಬಿಡಿ, ಕನ್ನಡ ‘ಪದ’ಬಳಸಿ!

00
Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ತುಂಬಾ ಧನ್ಯವಾದಗಳು, ಈಗ ಇನ್ನಷ್ಟು ಬಲ ಬಂತು ನಮಗೆ :)

  • ನಾನು ಪದ ಐ ಎಮ್ ಇ ಬಳಸಿದ್ದೇನೆ. ಒಳ್ಳೆದುಂಟು. kannadaslate.com ಸಹಾ ಒಳ್ಳೆ ಸೈಟ್, ಕೇವಲ ಜಾವಾಸ್ಕ್ರಿಪ್ಟ್ ಉಪಯೋಗಿಸಿ ಇವರು ಕನ್ನಡ ಸ್ಲೇಟ್ ಮಾಡಿದ್ದಾರೆ.

    • ಹೌದು... ಈಗ ಸಾಕಷ್ಟಿವೆ... ಆದ್ರೂ ಜನ ಕಂಗ್ಲಿಷ್ ಬರೆಯೋದು ಬಿಟ್ಟಿಲ್ಲ... :)

  • ಕನ್ನಡ ಪತ್ರಿಕೆಗಳಲ್ಲಿ( ತರಂಗ, ಉತ್ಥಾನ ಇತ್ಯಾದಿ) ಲೇಖನಗಳನ್ನು ನುಡಿ/ ಬರಹ ತಂತ್ರಾಂಶದಲ್ಲಿ ಕೇಳಿದರೆ, ಪ್ರಿಂಟಿಂಗ್ ಪ್ರೆಸ್ಸ್ ಪುಸ್ತಕ ಪ್ರಿಂಟ್ ಮಾಡಲು ನುಡಿ ಒಂದನ್ನೇ ಕೇಳುತ್ತಾರೆ. ಏಕೆಂದರೆ ಅವರೆಲ್ಲಾ ಅಡೋಬ್ ಪೇಜ್ ಮೇಕರ್ ಬಳಸುತ್ತಾರೆ... ಹೀಗಾಗಿ ಯೂನಿಕೊಡ್ ಬರವಣಿಗೆ ಕೇವಲ ನಮ್ಮಂತವರ ನೆಟ್ ಗೆ ಮಾತ್ರವೇ ಸೀಮಿತ. ನಮಗೆ ನಿಜಕ್ಕೂ ಬೇಕಿರುವುದು ಯೂನಿಕೋಡ್ -> ನುಡಿ ಪರಿವರ್ತಕ, ಅದರ ವಿರುದ್ಧವಾದದ್ದು ಮಾತ್ರ ಲಭ್ಯವಿದೆ

    • ಎಲ್ಲ ಪ್ರಕಾಶನದ ಮಂದಿಯೂ ಯುನಿಕೋಡಿನಿಂದ ನುಡಿಗೆ ಪರಿವರ್ತಿಸುವ ತಂತ್ರಾಂಶ ಇಟ್ಕೊಂಡಿರುತ್ತಾರೆ... ಹೀಗಾಗಿ ಸಮಸ್ಯೆಯಾಗುವುದಿಲ್ಲ ಸರ್.

      • ನೋಡಿ, ನೀವು ನೇರವಾಗಿ ನನ್ನ ಮಾತನ್ನು ಅಲ್ಲಗೆಳೆಯುತ್ತಿದ್ದೀರಿ!!.. ನಾನು ನಿಮ್ಮಂತೆ "ಎಲ್ಲರ ಬಳಿ ಇರಬಹುದು ಎಂಬ" ಥಿಯರಿ ಹೇಳುತ್ತಿಲ್ಲ. ಸ್ವಾನುಭವದಿಂದ ಉದಾಹಹರಣೆಗಳನ್ನು ಇತ್ತು ಹೇಳಿದ್ದೇನೆ. ಎಲ್ಲರ ಬಳಿ ಅಲ್ಲ, ಕೇವಲ ಒಂದೆರಡು ಪತ್ರಿಕೆಗಳವರು ಮಾತ್ರ ಯುನಿಕೋಡ್ ಕಳಿಸಿದಾಗ "ಸಹಿಸಿಕೊಂಡರು"ಅಷ್ಟೆ...ಮಿಕ್ಕವರು ನುಡಿ ೦೧ ಇ ಆನ್ಸಿ ಫ಼ಾಂಟ್ ಬೇಕೆಂದು ನೇರವಾಗಿ ಕೇಳಿದ್ದಾರೆ. ಕೆಲವರು ಬರಹ ಫಾಂಟ್ ಓಕೆ ಎಂದಿದ್ದಾರೆ. ಇಲ್ಲದಿದ್ದರೆ ಲೇಖನಗಳು ರಿಜೆಕ್ಟ್ ಆಗುತ್ತವೆ!. ನಾನು ಮಾತಾಡುತ್ತಿರುವುದು ೨೦೧೫ ಡಿಸೆಂಬರ್- ೨೦೧೬ ಜನವರಿ ವರೆಗಿನ ಸ್ಥಿತಿ..ನಿಮಗೆ ಅದಕ್ಕಿಂತಾ ಲೇಟೆಸ್ಟ್ ತಿಳಿದಿರಲಾರದು ಎಂದು ನನ್ನ ಭಾವನೆ!.. ಯಾವುದಾದರು ಕನ್ನಡ ಹಸ್ತಪ್ರತಿಯನ್ನು ಪ್ರಿಂಟಿಂಗ್ ಪ್ರೆಸ್ಸಿಗೆ ಯೂನಿಕೋಡ್ ನಲ್ಲಿ ಕಳಿಸಿ, ತಕ್ಷಣ ಈ ಬೇಡಿಕೆ ಬರುತ್ತದೆ!
        ಮೊದಲು ತಂತ್ರಾಂಶ ತಜ್ಞರು ಈ ಬಗ್ಗೆ ಗಮನ ಹರಿಸಿ ಯೂನಿಕೋಡ್-->ನುಡಿ( ANSI/ASCII) ಪರಿವರ್ತಕ ಬೆಳಕಿಗೆ ತಂದರೆ ನನ್ನಂತಾ ಲೇಖಕರಿಗೆ ಸಹಾಯ. ಇಲ್ಲವಾದರೆ ಯೂನಿಕೊಡ್ ವೆಬ್ ತಾಣ ಮತ್ತು ಇ ಮೈಲ್ ಗಳಿಗೆ ಮಾತ್ರ ಸೀಮಿತವಾಗುತ್ತದೆ.

        • ಹೌದು ಸರ್. ಕೆಲವು ನಿಯತಕಾಲಿಕಗಳು ಸ್ವಲ್ಪ ಹಿಂದುಳಿದಿವೆ. ಬಹುತೇಕ ದೈನಿಕಗಳಲ್ಲಿ ಈ ಪರಿವರ್ತಕಗಳಿವೆ. ಈ ತಂತ್ರಾಂಶದ ಬಗ್ಗೆ ಇನ್ನೊಂದು ದಿನ ಬರೆದು ತಿಳಿಸುವೆ.

Recent Posts

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

2 weeks ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

5 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago