ನಿಮ್ಮ ವಿಂಡೋಸ್ ಸಿಸ್ಟಂನಲ್ಲೇ ಇದೆ ಕನ್ನಡ ಕೀಬೋರ್ಡ್…

ಮಾಹಿತಿ@ತಂತ್ರಜ್ಞಾನ – 35 (ಮೇ 20, 2013ರ ವಿಜಯ ಕರ್ನಾಟಕ ಅಂಕಣ)

ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆ (OS) ಇರುವ ಕಂಪ್ಯೂಟರ್‌ಗಳಿಗೆ ಮೈಕ್ರೋಸಾಫ್ಟ್ ತನ್ನ ಬೆಂಬಲವನ್ನು 2014ರ ಏಪ್ರಿಲ್ 8ರಿಂದ ನಿಲ್ಲಿಸಲಿದೆ. ಅಂದರೆ XP ಕಾರ್ಯಾಚರಣೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದಿಲ್ಲ, ಸಾಫ್ಟ್‌ವೇರ್/ಅಪ್ಲಿಕೇಶನ್/ಪ್ರೋಗ್ರಾಂಗಳ ಸುಧಾರಿತ ರೂಪಗಳೂ, ಅವುಗಳಿಗೆ ಬೆಂಬಲವೂ ಸಿಗುವುದಿಲ್ಲ ಹಾಗೂ ವೈರಸ್, ಫೀಶಿಂಗ್ ಮತ್ತಿತರ ಅಪಾಯ ತಡೆಗೆ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ಒದಗಿಸುವುದಿಲ್ಲ. ಬದಲಾಗಿ ವಿಂಡೋಸ್ 7 ಹಾಗೂ ವಿಂಡೋಸ್ 8 ವ್ಯವಸ್ಥೆಗಳನ್ನೇ ಮುಂದುವರಿಸುತ್ತದೆ. ಈ ಸಂಗತಿ ಹೆಚ್ಚಿನವರಿಗೆ ತಿಳಿದಿರಲಾರದು.

ಈ ಮಾಹಿತಿಯೊಂದಿಗೆ, ವಿಂಡೋಸ್ XPಯಲ್ಲಿಯೂ ಯುನಿಕೋಡ್‌ನಲ್ಲಿ ಬ್ಲಾಗ್ ಬರೆಯಲು, ಫೇಸ್‌ಬುಕ್‌ಗೆ ಕಾಮೆಂಟ್ ಹಾಕಲು ಕನ್ನಡದ ಕೀಬೋರ್ಡ್ ವ್ಯವಸ್ಥೆಯೊಂದು ಇತ್ತು ಮತ್ತು ಅದೇ ವ್ಯವಸ್ಥೆಯನ್ನು ವಿಂಡೋಸ್ 7 ಅಥವಾ 8ರಲ್ಲಿ ಮತ್ತಷ್ಟು ಸುಲಭವಾಗಿ ಆ್ಯ್ಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ, ಇದಕ್ಕೆ ಯಾವುದೇ ಸಾಫ್ಟ್‌ವೇರ್ ಅಳವಡಿಸಿಕೊಳ್ಳಬೇಕಿಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಇದು INSCRIPT (ಇನ್‌ಸ್ಕ್ರಿಪ್ಟ್) ಎಂಬ ಕೀಬೋರ್ಡ್ ಶೈಲಿಯನ್ನು ಆಧರಿಸಿದ್ದಾಗಿದೆ. ಈ ಶೈಲಿಯಲ್ಲಿ ಸ್ವರ ಹಾಗೂ ವ್ಯಂಜನಾಕ್ಷರಗಳು ಕೀಬೋರ್ಡ್‌ನಲ್ಲಿ ಪ್ರತ್ಯೇಕ ಗುಂಪಾಗಿ ಅಕ್ಕಪಕ್ಕ ಹರಡಿಕೊಂಡಿರುತ್ತವೆ. ಇನ್‌ಸ್ಕ್ರಿಪ್ಟ್‌ನಲ್ಲಿ ಕಡಿಮೆ ಕೀಲಿಗಳ ಬಳಕೆಯಿಂದ ವೇಗದ ಟೈಪಿಂಗ್ ಸಾಧ್ಯ. ಈಗಾಗಲೇ ಬರಹ/ಕಗಪ ಕೀಬೋರ್ಡ್ ಶೈಲಿಯಲ್ಲೋ, ಟ್ರಾನ್ಸ್‌ಲಿಟರೇಶನ್ (ಲಿಪ್ಯಂತರ- ಕನ್ನಡ ಬರೆಯಬೇಕಿದ್ದರೆ kannaDa ಅಂತ ಟೈಪ್ ಮಾಡುವುದು) ಟೈಪ್ ಮಾಡುವವರಿಗೆ ಆರಂಭದಲ್ಲಿ ಕಷ್ಟವಾಗಬಹುದು. ಆದರೂ ಪ್ರಯತ್ನಿಸಿನೋಡಿ.

ವಿಂಡೋಸ್ 7ನಲ್ಲಿ ಕನ್ನಡ ಕೀಬೋರ್ಡನ್ನು ಬಳಸಲು ಹೀಗೆ ಮಾಡಿ:

ನಿಮ್ಮ ಕಂಪ್ಯೂಟರ್‌ನ ಕಂಟ್ರೋಲ್ ಪ್ಯಾನೆಲ್‌ಗೆ ಹೋಗಿ, ಅಲ್ಲಿ Region and Language ಎಂಬಲ್ಲಿ ಕ್ಲಿಕ್ ಮಾಡಿ. ತೆರೆದುಕೊಳ್ಳುವ ಪಾಪ್-ಅಪ್ ವಿಂಡೋದಲ್ಲಿ Keyboards and Languages ಎಂಬ ಟ್ಯಾಬ್ ಕ್ಲಿಕ್ ಮಾಡಿ. ಬಳಿಕ Change Keyboards ಎಂಬಲ್ಲಿ ಕ್ಲಿಕ್ ಮಾಡಿದಾಗ ಬೇರೊಂದು ವಿಂಡೋ ಪಾಪ್ಅಪ್ ಆಗುತ್ತದೆ. ಅಲ್ಲಿ ಬಲ-ಮಧ್ಯಭಾಗದಲ್ಲಿ Add ಎಂಬ ಬಟನ್ ಒತ್ತಿ. ತೆರೆಯುವ ವಿಂಡೋದಲ್ಲಿ ನಿಮಗೆ ಬೇಕಾದ ಭಾಷೆಯನ್ನು (ಇಲ್ಲಿ ಕನ್ನಡ) ಆಯ್ಕೆ ಮಾಡಿ ಮುಂದುವರಿಸಿದರೆ ನಿಮ್ಮ ಕೆಲಸವಾಯಿತು. ನಿಮ್ಮ ಕಂಪ್ಯೂಟರ್ ಪರದೆಯ ಕೆಳಭಾಗದ (ಟಾಸ್ಕ್‌ಬಾರ್) ಬಲಮೂಲೆಯಲ್ಲಿ EN ಅಂತ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಎರಡು ಆಯ್ಕೆಗಳು ಗೋಚರಿಸುತ್ತವೆ (EN-English ಮತ್ತು KN – Kannada).

ನೋಟ್‌ಪ್ಯಾಡ್ ಅಥವಾ ವರ್ಡ್‌ಪ್ಯಾಡ್/ವರ್ಡ್/ಎಕ್ಸೆಲ್ ಇತ್ಯಾದಿ ಬರವಣಿಗೆ ತಂತ್ರಾಂಶಗಳನ್ನು ತೆರೆದು, KN ಕ್ಲಿಕ್ ಮಾಡಿದರೆ ಕನ್ನಡದಲ್ಲಿ ಟೈಪ್ ಮಾಡಬಹುದು. ಇದಕ್ಕೂ ಒಂದು ಶಾರ್ಟ್‌ಕಟ್ ಇದೆ. Alt +Shift ಒತ್ತಿದರೆ ಇಂಗ್ಲಿಷಿನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್‌ಗೆ ಬದಲಾಯಿಸಿಕೊಳ್ಳಬಹುದು.

INSCRIPT ಕೀಬೋರ್ಡ್‌ನಲ್ಲಿ ಯಾವ ಇಂಗ್ಲಿಷ್ ಕೀ ಒತ್ತಿದರೆ, ಯಾವ ಕನ್ನಡ ಅಕ್ಷರ ಬರುತ್ತದೆ ಎಂದು ತಿಳಿಯುತ್ತಿಲ್ಲವೇ? ಅದಕ್ಕೆ ಹೀಗೆ ಮಾಡಿ:

ಕೀಬೋರ್ಡ್ ಅಥವಾ ಟಾಸ್ಕ್‌ಬಾರ್‌ನಲ್ಲಿರುವ Windows ಲೋಗೋ ಕ್ಲಿಕ್ ಮಾಡಿದ ತಕ್ಷಣ ಕೆಳಭಾಗದ ಎಡಮೂಲೆಯಲ್ಲಿ ವಿಂಡೋ ಕಾಣಿಸಿಕೊಳ್ಳುತ್ತದೆ, ಅಲ್ಲಿ ಕೆಳಭಾಗದ ಬಾಕ್ಸ್‌ನಲ್ಲಿ ‘search programs and files’ ಅಂತ ಇರುವಲ್ಲಿ osk ಎಂದು (osk = On Screen Keyboard) ಟೈಪ್ ಮಾಡಿ, ಕ್ಲಿಕ್ ಮಾಡಿ. ಸ್ಕ್ರೀನ್ ಮೇಲೆ ಕೀಬೋರ್ಡ್ ಕಾಣಿಸುತ್ತದೆ. ಅದರಲ್ಲಿರುವ ಇಂಗ್ಲಿಷ್ ಅಕ್ಷರಗಳನ್ನು ಕನ್ನಡಕ್ಕೆ ಬದಲಾಯಿಸಲು Alt+Shift ಕೀ ಒತ್ತಿ. ಅದನ್ನು ಸಾವಧಾನವಾಗಿ ಓದಿ ಕರಗತ ಮಾಡಿಕೊಂಡರೆ, ಬೇರಾವುದೇ ವಿಶೇಷ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡದೆಯೇ ನಿಮ್ಮ ಕಂಪ್ಯೂಟರಿನಲ್ಲಿ ಸುಲಲಿತವಾಗಿ ನೀವು ಟೈಪ್ ಮಾಡಬಹುದು. ಇದು ಯುನಿಕೋಡ್ ಆಗಿರುವುದರಿಂದ ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳ, ತಮಿಳು, ಹಿಂದಿ ಮುಂತಾಗಿ ಬೇರಾವುದೇ ಭಾರತೀಯ ಭಾಷೆಗಳಿಗೂ ಉಪಯೋಗವಾಗುತ್ತದೆ. ಕೀಬೋರ್ಡ್ ಶೈಲಿಯಲ್ಲಿ ಬದಲಾವಣೆಯಾಗುವುದಿಲ್ಲ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

5 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago