ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -89 ಆಗಸ್ಟ್ 18, 2014
ಇದರಲ್ಲಿ ಒಂದಿಷ್ಟು ಸುಲಭವಾದ ಕಸರತ್ತು ಮಾಡಬೇಕಾಗುತ್ತದೆ ಮತ್ತು ಒಂದು ಬಾರಿ ಇದಕ್ಕಾಗಿ ಸಮಯ ವ್ಯಯಿಸಿದರೆ ಸಾಕಾಗುತ್ತದೆ. ಬಳಿಕ ಎಲ್ಲ ಮೇಲ್‌ಗಳನ್ನೂ ಜಿಮೇಲ್ ಖಾತೆಯಿಂದಲೇ ಕಳುಹಿಸಬಹುದು. ಅಂದರೆ ನೀವು ಜಿಮೇಲ್ ಮೂಲಕವಾಗಿ ಉತ್ತರಿಸಿದರೂ, ಅದು ಆಯಾ ಇಮೇಲ್ ಐಡಿಗಳ (ಯಾಹೂ, ಕಚೇರಿ ಮೇಲ್, ಔಟ್‌ಲುಕ್ ಇತ್ಯಾದಿ) ಮೂಲಕವೇ ಸಂಬಂಧಪಟ್ಟವರಿಗೆ ತಲುಪುತ್ತದೆ. ಇಲ್ಲವಾದರೆ, ಪ್ರತ್ಯೇಕ ಆ್ಯಪ್‌ಗಳನ್ನು ತೆರೆದುಕೊಂಡು, ಮತ್ತು ಹಲವಾರು ವಿಂಡೋಗಳನ್ನು ತೆರೆದಿಟ್ಟುಕೊಂಡು ಒಂದೊಂದಾಗಿ ಮೇಲ್ ಕಳುಹಿಸಬೇಕಾಗುತ್ತದೆ.
ಜಿಮೇಲ್ ಖಾತೆಯೊಳಗಿನಿಂದಲೇ ನಿಮ್ಮ ಎಲ್ಲ ಇಮೇಲ್ ವಿಳಾಸಗಳ ಮೂಲಕವಾಗಿ ಮೇಲ್ ಕಳುಹಿಸಬೇಕಿದ್ದರೆ ಅದರಲ್ಲಿಯೇ ಒಂದು ಆಯ್ಕೆ ಇದೆ. ಅಂದರೆ, ನೀವು ಜಿಮೇಲ್ ಖಾತೆಯಿಂದ ಇಮೇಲ್ ಕಳುಹಿಸಿದರೂ, ಅದು ನಿಮ್ಮ ಬೇರೆ ಮೇಲ್ ಸರ್ವರ್ ಮೂಲಕವೇ ಕಳುಹಿಸಿದ್ದೆಂಬಂತೆ ಬೇರೆಯವರಿಗೆ ಕಾಣಿಸುತ್ತದೆ. ಇದಕ್ಕಾಗಿ ಕಂಪ್ಯೂಟರಿನಲ್ಲಿ ಜಿಮೇಲ್‌ಗೆ ಲಾಗಿನ್ ಆಗಿ, ಬಲ ಮೇಲ್ಭಾಗದಲ್ಲಿ ಕಾಣಿಸುವ ಗಿಯರ್ ಐಕಾನ್ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ. ಅದರಲ್ಲಿ ಹಲವಾರು ಟ್ಯಾಬ್‌ಗಳಿರುತ್ತವೆ. General, Labels, Inbox ಆದಮೇಲೆ ಕಾಣಿಸುವ Accounts and Import ಎಂಬ ಟ್ಯಾಬ್ ಆಯ್ಕೆ ಮಾಡಿಕೊಳ್ಳಿ.
ಕೆಳಗೆ ನೋಡಿದರೆ, Send mail as ಎಂಬ ವಿಭಾಗ ಕಾಣಿಸುತ್ತದೆ. ಅದರಲ್ಲಿ, Add another email address you own ಎಂಬ ಆಯ್ಕೆ ಲಭ್ಯವಾಗುತ್ತದೆ. ಅದನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಇಮೇಲ್ ಐಡಿ ದಾಖಲಿಸಿ. ಮುಂದಿನ ಹಂತಕ್ಕೆ ಹೋಗಿ. ನಿಮ್ಮ ಹೆಸರು ನಮೂದಿಸಬೇಕಾಗುತ್ತದೆ. ನಿಮ್ಮ ಇಮೇಲ್ ವಿಳಾಸವೂ ಇರುತ್ತದೆ. ಆದರೆ, ಈ ವಿಳಾಸವನ್ನು ಆಲಿಯಾಸ್ ವಿಳಾಸ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಯಾಹೂ, ರಿಡಿಫ್, ಔಟ್‌ಲುಕ್ ಮುಂತಾದ ಇಮೇಲ್ ಪ್ರೊವೈಡರ್‌ಗಳಲ್ಲಿರುವ ಖಾತೆಗಳನ್ನು ಜಿಮೇಲ್ ತಾನಾಗಿಯೇ ಕಾನ್ಫಿಗರ್ ಮಾಡಿಕೊಳ್ಳುತ್ತದೆ. ನೀವು ಆ ಅನ್ಯ ಇಮೇಲ್ ಖಾತೆಯ ಪಾಸ್‌ವರ್ಡ್ ದಾಖಲಿಸಬೇಕಾಗುತ್ತದೆ. ಮುಂದಿನ ಹಂತಗಳನ್ನು ನಿಧಾನವಾಗಿ ಓದಿಯೇ ಕ್ಲಿಕ್ ಮಾಡುತ್ತಾ ಹೋಗಿ. Add Account ಅಂತ ಕ್ಲಿಕ್ ಮಾಡಬೇಕು. ಆಗ, ನಿಮ್ಮ ಅನ್ಯ ಇಮೇಲ್ ಖಾತೆಗೊಂದು ದೃಢೀಕರಣ ಇಮೇಲ್ ಕಳುಹಿಸಲಾಗುತ್ತದೆ. ಅದನ್ನು ತೆರೆದು, ಲಿಂಕ್ ಕ್ಲಿಕ್ ಮಾಡಬಹುದು ಅಥವಾ ಅದರಲ್ಲಿರುವ ಕೋಡ್ ಅನ್ನು ಇಲ್ಲಿನ ಸೆಟ್ಟಿಂಗ್‌ನಲ್ಲಿ ನಮೂದಿಸಿದರೂ ಸಾಕಾಗುತ್ತದೆ. ಇದು ಯಾಕೆಂದರೆ, ನೀವು ನಮೂದಿಸಿರುವ ಇಮೇಲ್ ಖಾತೆಯು ನಿಜವಾಗಿಯೂ ನಿಮ್ಮದೇ ಒಡೆತನದಲ್ಲಿದೆ ಎಂಬುದನ್ನು ಗೂಗಲ್ ಖಚಿತಪಡಿಸಿಕೊಳ್ಳಲು. ಇದು ಕೆಲವೊಮ್ಮೆ Spam ಫೋಲ್ಡರ್‌ನಲ್ಲೂ ಇರುವ ಸಾಧ್ಯತೆಗಳಿವೆ. ಸರಿಯಾಗಿ ನೋಡಿಕೊಳ್ಳಿ.
ಈಗ ಸೆಟಪ್ ಪೂರ್ಣಗೊಂಡಿತು. ಇನ್ನು ಜಿಮೇಲ್ ಒಳಗಿನಿಂದಲೇ ನೀವು ನಿಮ್ಮ ಮತ್ತೊಂದು ಇಮೇಲ್ ವಿಳಾಸವನ್ನು ಆಯ್ದುಕೊಂಡು, ಅದರ ಪರವಾಗಿ ಇಮೇಲ್ ಕಳುಹಿಸಬಹುದಾಗಿದೆ.
ಆದರೆ ನೆನಪಿಡಿ, ನೀವು ಜಿಮೇಲ್ ಮೂಲಕ ಕಳುಹಿಸುವ ಇಮೇಲ್, ನಿಮ್ಮ ಬೇರೆ ಖಾತೆಯಲ್ಲಿ ಸಿಂಕ್ರನೈಜ್ ಆಗಿರುವುದಿಲ್ಲ. ಅತ್ಯಂತ ಅಗತ್ಯ ಬಿದ್ದಾಗ, ನಿಮ್ಮ ಅನ್ಯ ಮೇಲ್ ಖಾತೆಯಿಂದ ಸಂದೇಶ ಕಳುಹಿಸಲು ಈ ವ್ಯವಸ್ಥೆಯನ್ನು ಬಳಸಬಹುದು.
ಈ ರೀತಿ ಕಂಪ್ಯೂಟರ್ ಬ್ರೌಸರ್‌ನಲ್ಲಿ ಒಮ್ಮೆ ಸೆಟ್ಟಿಂಗ್ ಮಾಡಿಕೊಂಡರೆ, ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ಮೇಲ್ ಕಳುಹಿಸುವಾಗ, ಯಾವ ಮೇಲ್ ಐಡಿಯಿಂದ ಕಳುಹಿಸಬೇಕು ಎಂದು ಆಯ್ಕೆ ಮಾಡುವ ಅವಕಾಶ ದೊರೆಯುತ್ತದೆ.
ಟೆಕ್-ಟಾನಿಕ್
ಆ್ಯಪ್‌ಗಳನ್ನು ಗುಂಪುಗೂಡಿಸಿ
ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಹೋಂ ಸ್ಕ್ರೀನ್‌ನಲ್ಲಿ ಆ್ಯಪ್‌ಗಳ ಸಂಖ್ಯೆ ಕಡಿಮೆ ಮಾಡಿ, ಬ್ಯಾಕ್‌ಗ್ರೌಂಡ್ ಚಿತ್ರ ಚೆನ್ನಾಗಿ ಕಾಣಿಸುವಂತೆ ಮಾಡಬಹುದು. ಸಂಬಂಧಿತ ಆ್ಯಪ್‌ಗಳನ್ನು ಗುಂಪುಗೂಡಿಸುವ ಮೂಲಕ ಇದು ಸಾಧ್ಯ. ಉದಾಹರಣೆಗೆ, ಎಲ್ಲ ಇಮೇಲ್ ಆ್ಯಪ್‌ಗಳು ಅಥವಾ ಮೆಸೇಜಿಂಗ್ ಆ್ಯಪ್‌ಗಳನ್ನು ಗುಂಪು ಮಾಡಿ, ಅದಕ್ಕೆ ಇಮೇಲ್ ಅಥವಾ ಮೆಸೇಜ್ ಅಂತ ಹೆಸರಿಡಬಹುದು. ಇದನ್ನು ಮಾಡಲು, ನಿಮಗೆ ಅಗತ್ಯವಿರುವ ಎಲ್ಲ ಆ್ಯಪ್‌ಗಳನ್ನು ಹೋಂ ಸ್ಕ್ರೀನ್‌ಗೆ ತನ್ನಿ. ಅಲ್ಲಿ ಒಂದೇ ರೀತಿಯ ಆ್ಯಪ್‌ಗಳನ್ನು ಡ್ರ್ಯಾಗ್ ಮಾಡಿ, ಒಂದರ ಮೇಲೊಂದರಂತೆ ಎಳೆದು ಬಿಡಿ. ಅವುಗಳು ಎಲ್ಲವೂ ಒಂದೇ ಆ್ಯಪ್‌ನ ಜಾಗದಲ್ಲಷ್ಟೇ ಗುಂಪಾಗಿರುತ್ತವೆ. ಆ ಗುಂಪಿನ ಹೆಸರು ಟಚ್ ಮಾಡಿದರೆ, ಅದನ್ನು ನಿಮಗೆ ಬೇಕಾದಂತೆ ಬದಲಿಸಲು ಅವಕಾಶ ಲಭ್ಯವಾಗುತ್ತದೆ.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.