ಗೂಗಲ್‌ನಲ್ಲಿರುವ ಹೊಸ ಸೆಟ್ಟಿಂಗ್ಸ್: ಪ್ರಯೋಜನ ಪಡೆದುಕೊಳ್ಳಿ, ಸುರಕ್ಷಿತವಾಗಿರಿ

ಜಿಮೇಲ್ ಬಳಕೆದಾರರಿಗೆ, ಅದರಲ್ಲಿಯೂ ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುತ್ತಿರುವವರಿಗೆ ಗೂಗಲ್ ಎಂಬುದೊಂದು ಪ್ರತ್ಯೇಕ ಪ್ರಪಂಚವಾಗಿಬಿಟ್ಟಿದೆ. ನಾವೆಲ್ಲಿ ಹೋಗುತ್ತಿದ್ದೇವೆ ಎಂಬುದರಿಂದ ಹಿಡಿದು, ಆನ್‌ಲೈನ್‌ನಲ್ಲಿ ನಾವೇನನ್ನು ನೋಡುತ್ತೇವೆ, ಎಲ್ಲಿ ಊಟ ಮಾಡಿದ್ದೇವೆ, ಯಾರೊಂದಿಗೆ ಮಾತನಾಡಿದ್ದೇವೆ, ಯಾವುದು ಇಷ್ಟ ಎಂಬ ಮಾಹಿತಿಯನ್ನೆಲ್ಲಾ ನಮಗೆ ಅರಿವಿಲ್ಲದಂತೆಯೇ ಗೂಗಲ್‌ಗೆ ಬಿಟ್ಟುಕೊಡುತ್ತಿದ್ದೇವೆ.

ಇಂಟರ್ನೆಟ್‌ಗೆ ಸಂಪರ್ಕಿಸುವ ಮೂಲಕ ಗೂಗಲ್ ಮ್ಯಾಪ್ಸ್, ಜಿಮೇಲ್, ಯೂಟ್ಯೂಬ್, ಗೂಗಲ್ ನ್ಯೂಸ್, ಗೂಗಲ್ ಕ್ರೋಮ್, ಚಾಟ್ (ಹ್ಯಾಂಗೌಟ್ಸ್), ಫೋಟೋಸ್, ಗೂಗಲ್ ಡ್ರೈವ್, ಗೂಗಲ್ ಬ್ಲಾಗ್, ಪ್ಲೇಸ್ಟೋರ್, ಗೂಗಲ್ ಬುಕ್ಸ್, ಗೂಗಲ್ ಮ್ಯೂಸಿಕ್… ಹೀಗೆ ನಮ್ಮ ಪ್ರತಿದಿನದ ಪ್ರತಿ ಚಲನೆಯೂ ಗೂಗಲ್‌ಗೆ ಗೊತ್ತಾಗಿಬಿಡುತ್ತದೆ. ಇದಕ್ಕೆಲ್ಲ ಕಾರಣವೇನೆಂದರೆ, ನಾವು ಸೈನ್-ಅಪ್ (ಅಂದರೆ ನೋಂದಣಿ) ಮಾಡಿಕೊಂಡಿರುವಾಗ, ಷರತ್ತುಗಳ ಸ್ಕ್ರೀನ್ ಮೇಲೆ ಏನೆಲ್ಲಾ ಮಾಹಿತಿ ಪ್ರದರ್ಶನವಾಗಿದೆ ಎಂಬುದನ್ನು ನೋಡುವುದರ ಗೋಜಿಗೆ ಹೋಗುವುದಿಲ್ಲ. ಅಲ್ಲಿರುವ Yes ಎಂಬ ಬಟನ್ ಮಾತ್ರವೇ ನಮ್ಮ ಕಣ್ಣಿಗೆ ಕಂಡಿರುತ್ತದೆ. ಹೀಗೆ ಎಲ್ಲದಕ್ಕೂ Yes ಅಥವಾ Next ಅಂತ ಏನೇನನ್ನೂ ಓದದೆಯೇ ಕ್ಲಿಕ್ ಮಾಡುತ್ತಾ ಹೋಗಿರುತ್ತೇವೆ.

ಇದರಿಂದಾಗಿ, ನಮ್ಮ ಫೋನ್‌ನ ಸಂಪರ್ಕ ಸಂಖ್ಯೆಗಳೆಲ್ಲವೂ ಜಿಮೇಲ್‌ನಲ್ಲಿ ಕಾಣಿಸುತ್ತಿದೆ – ಇದು ಹೇಗೆ ಅಂತಲೋ, ನೀವು ಮೊಬೈಲ್‌ನಲ್ಲಿ ತೆಗೆದ ಫೋಟೋಗಳು ಗೂಗಲ್ ಫೋಟೋಸ್‌ನಲ್ಲಿ ಹೇಗೆ ಬಂತು ಅಂತಲೋ, ಅಥವಾ ನೀವು ಎಲ್ಲಿಗೆ ಹೋಗಿದ್ದೀರೆಂಬುದು ಗೂಗಲ್ ಮ್ಯಾಪ್ಸ್‌ನಲ್ಲಿ ದಾಖಲಾಗಿರುತ್ತದೆಯಲ್ಲಾ, ಅದು ಹೇಗೆ ಅಂತಲೋ… ಯಾವಾಗಲಾದರೊಮ್ಮೆ ನೀವೇ ಅಚ್ಚರಿ ಪಟ್ಟಿರುತ್ತೀರಿ. ಇದೂ ಅಲ್ಲದೆ, ನೀವು ಯಾವುದಾದರೂ ವೆಬ್‌ಸೈಟ್ ಬ್ರೌಸ್ ಮಾಡುತ್ತಿರುವಾಗ, ನಿಮಗಿಷ್ಟದ ವಿಷಯಗಳ ಜಾಹೀರಾತು ತಾನಾಗಿ ಹೇಗೆ ಕಾಣಿಸಿಕೊಳ್ಳುತ್ತಿದೆ ಅಂತ ನೀವು ಅಚ್ಚರಿ ಪಟ್ಟಿರಬಹುದು. ಇದಕ್ಕೆಲ್ಲ ಕಾರಣವೆಂದರೆ, ಕಣ್ಣು ಮುಚ್ಚಿ ನಾವು Yes Yes Yes ಅಂತ ಕ್ಲಿಕ್ ಮಾಡುತ್ತಾ ಹೋಗಿದ್ದು! ಈ ಪರಿಯ ನಮ್ಮ ವೈಯಕ್ತಿಕ ಮಾಹಿತಿಯನ್ನು ಬಟಾಬಯಲಾಗಿಸದಂತೆ ಮಾಡುವುದು ಕೂಡ ಸಾಧ್ಯವಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಇದುವೇ ಪ್ರೈವೆಸಿ ಸೆಟ್ಟಿಂಗ್.

ಗೂಗಲ್ ವೈವಿಧ್ಯಮಯ ಮತ್ತು ಅಗತ್ಯ ಸೇವೆಯನ್ನೇ ನೀಡುತ್ತಿದ್ದು, ಒಂದೊಂದರ ಪ್ರೈವೆಸಿ ಸೆಟ್ಟಿಂಗ್ ಒಂದೊಂದು ಕಡೆ ಬದಲಾಯಿಸಬೇಕಾಗುತ್ತಿತ್ತು. ಆದರೆ ನಮ್ಮ ಪ್ರೈವೆಸಿಯನ್ನು ಒಂದೇ ಸ್ಥಳದಲ್ಲಿ ಕಾಪಾಡಿಕೊಳ್ಳಲು, ಎಡಿಟ್ ಮಾಡಿಕೊಳ್ಳಲು ಗೂಗಲ್ ಈಗ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಕೆಲವರ ಜಿಮೇಲ್‌ಗೆ ಈಗಾಗಲೇ ಈ ಕುರಿತು Your account settings in one place at My Account ಎಂಬ ಮೇಲ್ ಬಂದಿರಬಹುದು. ಅದರಲ್ಲಿನ VISIT MY ACCOUNT ಅಂತ ಕ್ಲಿಕ್ ಮಾಡಿದರೆ, ಇಲ್ಲವೇ myaccount.google.com ಎಂಬಲ್ಲಿಗೆ ಹೋಗಿ ಲಾಗಿನ್ ಆದರೆ, ನಿಮಗೆ ಬೇಕಾದಂತೆ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು.

ಇದರಲ್ಲಿ ಮೂರು ಮುಖ್ಯ ವಿಭಾಗಗಳಿರುತ್ತವೆ. 1. ಸೈನ್ ಇನ್ ಆ್ಯಂಡ್ ಸೆಕ್ಯುರಿಟಿ (ಸೈನ್ ಇನ್ ಹಾಗೂ ಭದ್ರತೆ); 2. ಪರ್ಸನಲ್ ಇನ್ಫೋ ಆ್ಯಂಡ್ ಪ್ರೈವೆಸಿ (ವೈಯಕ್ತಿಕ ಮಾಹಿತಿ, ಖಾಸಗಿತನ) ಹಾಗೂ 3. ಅಕೌಂಟ್ ಪ್ರಿಫರೆನ್ಸಸ್ (ಆದ್ಯತೆಗಳು).

ಮೂರನ್ನು ಕ್ಲಿಕ್ ಮಾಡಿದರೂ, ಅದರಲ್ಲಿರುವ Get Started ಎಂಬ ಬಟನ್ ಕಾಣಿಸುತ್ತದೆ. ಸ್ವಲ್ಪ ಸಮಯ ಮೀಸಲಾಗಿಟ್ಟುಕೊಂಡು, ಒಂದೊಂದಾಗಿ ಸರಿಯಾಗಿ ಓದುತ್ತಾ, ಕ್ಲಿಕ್ ಮಾಡುತ್ತಾ ಹೋದರೆ ನಿಮ್ಮ ಜಿಮೇಲ್ ಖಾತೆ ಸುಭದ್ರವಾಗಿರುತ್ತದೆ.

ಇವುಗಳಲ್ಲಿ, ನಿಮ್ಮ ಜಿಮೇಲ್ ಖಾತೆಯು ಎಷ್ಟು ಸಾಧನಗಳಲ್ಲಿ, ಎಲ್ಲಿ, ಯಾವಾಗ ಬಳಕೆಯಾಗಿದೆ ಅಂತ ತೋರಿಸುತ್ತದೆ. ಇದರಲ್ಲೇನಾದರೂ ನಿಮಗೆ ಶಂಕೆಗಳು ಬಂದರೆ, ತಕ್ಷಣ ಅದನ್ನು ಸೈನ್ಔಟ್ ಮಾಡುವ ಆಯ್ಕೆಯೂ ಇರುತ್ತದೆ. ಮೊಬೈಲ್ ಸಂಖ್ಯೆ, ಪರ್ಯಾಯ ಇಮೇಲ್ ಹಾಗೂ ಒಂದು ಸೆಕ್ಯುರಿಟಿ ಪ್ರಶ್ನೆ (ಪಾಸ್‌ವರ್ಡ್ ಮರೆತುಹೋದರೆ ರಿಕವರ್‌ಗಾಗಿ ಇವನ್ನು ಬಳಸಲಾಗುತ್ತದೆ) ಬದಲಾಯಿಸಿಕೊಳ್ಳುವ ಆಯ್ಕೆಯೂ ಸಿಗುತ್ತದೆ.

ನಮಗೆ ಬೇಕಾದ ಜಾಹೀರಾತುಗಳ ಆಯ್ಕೆ, ಯಾವೆಲ್ಲ ಸೈಟುಗಳು, ಆ್ಯಪ್‌ಗಳಲ್ಲಿ ನಿಮ್ಮ ಜಿಮೇಲ್ ಲಾಗಿನ್‌ಗೆ ಅವಕಾಶ ಕೊಟ್ಟಿದ್ದೀರಿ, ಅದನ್ನು ಡಿಸೇಬಲ್ ಮಾಡಬೇಕೇ, ನೀವು ನೋಡುವ ವೀಡಿಯೋ, ಫೋಟೋ, ಸೈಟುಗಳ ಮಾಹಿತಿಯನ್ನು ಅಳಿಸಬೇಕೇ ಎಂಬಿತ್ಯಾದಿ ಎಲ್ಲ ಸೆಟ್ಟಿಂಗ್‌ಗಳೂ ನಿಮಗೆ ಸುಲಭವಾಗಿ (ಎಡಭಾಗದ ಫಲಕದಲ್ಲಿ) ಗೋಚರಿಸುತ್ತದೆ. ಒಂದೊಂದಾಗಿ ಓದಿ, ನಮಗೆ ಬೇಕಾದಂತೆ ಸೆಟ್ ಮಾಡಿಕೊಂಡರೆ ಎಲ್ಲವೂ ಸುರಕ್ಷಿತ. ಇದರಲ್ಲಿ ಔದಾಸೀನ್ಯ ತರವಲ್ಲ.

15 ಜೂನ್ 2015 ಮಾಹಿತಿ@ತಂತ್ರಜ್ಞಾನ-130: ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

2 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago