ವಿಜಯ ಕರ್ನಾಟಕ ಅಂಕಣ, ಮಾಹಿತಿ ತಂತ್ರಜ್ಞಾನ: ನವೆಂಬರ್ 4, 2013
ಮನೆಗೆ ಕಂಪ್ಯೂಟರ್ ಈಗ ಅನಿವಾರ್ಯ ಎಂಬಂತಾಗಿಬಿಟ್ಟಿರುವುದರೊಂದಿಗೆ, ನಮ್ಮದೇ ಆದ ಸಣ್ಣ ಪುಟ್ಟ ಕೆಲಸಗಳಾದ, ಫೋಟೋ/ಡಾಕ್ಯುಮೆಂಟ್ ಸ್ಕ್ಯಾನಿಂಗ್ ಹಾಗೂ ಫೋಟೋ ಕಾಪಿ (ಜೆರಾಕ್ಸೃ್ ಎಂದೇ ಜನಜನಿತವಾಗಿರುವ ನಕಲು ಪ್ರತಿ) ತೆಗೆಯಲು ಮತ್ತು ಮನೆಯಲ್ಲೇ ಕೆಲವೊಂದು ವಿಷಯಗಳ ಪ್ರಿಂಟ್ ತೆಗೆಯಲು ‘ಆಲ್-ಇನ್-ಒನ್’ (ಅಂದರೆ, ಪ್ರಿಂಟ್, ಸ್ಕ್ಯಾನ್, ಕಾಪಿ) ಪ್ರಿಂಟರ್ ಕೂಡ ಅನಿವಾರ್ಯ ಮತ್ತು ಅನುಕೂಲಕರವೂ ಹೌದು.
ಯಾವುದೇ ಬ್ಯಾಂಕಿಂಗ್, ಸರಕಾರಿ ಕೆಲಸಗಳಿಗೆ ಬೇಕಾಗಬಹುದಾದ ವಿಳಾಸದ ಪ್ರೂಫ್, ಐಡೆಂಟಿಟಿ ಪ್ರೂಫ್ (ಗುರುತಿನ ಚೀಟಿ) ಇವುಗಳಿಗಾಗಿ ಪದೇ ಪದೇ ಪಕ್ಕದ ಜೆರಾಕ್ಸೃ್ ಅಂಗಡಿಗೆ ಅಲೆದಾಡುವುದು ಇದರಿಂದ ತಪ್ಪುತ್ತದೆ. ಈಗ ಸ್ಕ್ಯಾನ್/ಕಾಪಿ ಮಾಡಬಲ್ಲ ಪ್ರಿಂಟರ್‌ಗಳು ಕೈಗೆಟುಕಬಹುದಾದ ಬೆಲೆಯಲ್ಲೇ (3500 ರೂ. ಆಸುಪಾಸು ಆರಂಭವಾಗುತ್ತದೆ) ಲಭ್ಯ ಇವೆ.
ನಿಮ್ಮ ಆವಶ್ಯಕತೆಗಳಿಗನುಗುಣವಾಗಿ ಪ್ರಿಂಟರ್ ಆಯ್ಕೆ ಮಾಡಿಕೊಳ್ಳಲು ಎರಡು ನಮೂನೆಗಳಿರುತ್ತವೆ – ಇಂಕ್ ಜೆಟ್ ಪ್ರಿಂಟರ್‌ಗಳು ಮತ್ತು ಲೇಸರ್ ಜೆಟ್ ಪ್ರಿಂಟರುಗಳು. ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲ ನಿವಾರಣೆಗೆ ಕೆಳಗಿನ ಅಂಶಗಳನ್ನು ಗಮನಿಸಿ:
* ಹೆಚ್ಚು ಗುಣಮಟ್ಟದ, ಕಪ್ಪು ಬಿಳುಪಿನ ಪ್ರಿಂಟೌಟ್‌ಗಳು ಸಾಕು ಮತ್ತು ತೀರಾ ಕಡಿಮೆ ಸಂಖ್ಯೆಯಲ್ಲಿ (ಅಂದರೆ ತಿಂಗಳಿಗೆ ನಾಲ್ಕೈದು ಪುಟ) ಪ್ರಿಂಟ್ ಮಾಡಬೇಕಾಗುತ್ತದೆ ಎಂದಾದರೆ, ಲೇಸರ್ ಪ್ರಿಂಟರ್ ಒಳ್ಳೆಯದು. ಐದಾರು ತಿಂಗಳು ಪ್ರಿಂಟ್ ತೆಗೆಯದೇ ಇದ್ದರೂ, ಅದರ ಇಂಕ್ ಟೋನರ್ ಗಟ್ಟಿಯಾಗುವುದಿಲ್ಲ. ಆದರೆ ಬೆಲೆ ಕೊಂಚ ಜಾಸ್ತಿ.
* ಲೇಸರ್ ಜೆಟ್‌ಗೂ ಕಡಿಮೆ ಬೆಲೆಯಲ್ಲಿ, ಕಪ್ಪು-ಬಿಳುಪು ಮತ್ತು ಬಣ್ಣದ ಪ್ರಿಂಟಿಂಗ್ ಬೇಕೆಂದಾದರೆ, ಇಂಕ್ ಜೆಟ್ ಪ್ರಿಂಟರ್ ತೆಗೆದುಕೊಳ್ಳಿ. ಆದರೆ, ಗಮನಿಸಿ, ಹಲವು ದಿನಗಳ ಕಾಲ ಪ್ರಿಂಟ್ ಬಳಸದೇ ಇದ್ದರೆ, ಕಾರ್ಟ್ರಿಡ್ಜ್‌ನಲ್ಲಿರುವ ಕಪ್ಪು ಮತ್ತು ಬಣ್ಣದ ಇಂಕ್ ಗಟ್ಟಿಯಾಗಿಬಿಡಬಹುದು. ಕಾರ್ಟ್ರಿಡ್ಜ್ ಬೆಲೆಯೇ ಸುಮಾರು 400-500 ರೂ. ಇರುತ್ತದೆ. ನಿರಂತರವಾಗಿ (ತಿಂಗಳಿಗೆ 30-40 ಪುಟ ಪ್ರಿಂಟ್) ಬಳಸುತ್ತಿದ್ದರೆ ಮತ್ತು ಲೇಸರ್‌ಜೆಟ್‌ಗೆ ಹೋಲಿಸಿದರೆ ಖರ್ಚು ಕಡಿಮೆ.
* ಲೇಸರ್ ಜೆಟ್ ಪ್ರಿಂಟರ್‌ನಲ್ಲಾದರೆ, ಒಂದು ಟೋನರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಗಳನ್ನು ಮುದ್ರಿಸಬಹುದು, ಹೀಗಾಗಿ ಹೆಚ್ಚು ಪ್ರಿಂಟಿಂಗ್ ಇದ್ದರೆ ನಿರ್ವಹಣಾ ವೆಚ್ಚ ಕಡಿಮೆ. ಇದರ ಗುಣಮಟ್ಟವೂ ಚೆನ್ನಾಗಿರುತ್ತದೆ ಮತ್ತು ವೇಗವಾಗಿ ಪ್ರಿಂಟ್ ಆಗುತ್ತದೆ. ಟೋನರ್ ಒಂದು ಸಲ ಹಾಕಿದರೆ, ಸಾವಿರಾರು ಸಂಖ್ಯೆಯಲ್ಲಿ ಪುಟಗಳನ್ನು (ಎ4 ಗಾತ್ರ) ಮುದ್ರಿಸಬಹುದು.
* ಇಂಕ್ ಜೆಟ್‌ನಲ್ಲಾದರೆ, ಪ್ರಿಂಟಿಂಗ್ ನಿಧಾನ (ಲೇಸರ್‌ಜೆಟ್‌ಗೆ ಹೋಲಿಸಿದರೆ) ಮತ್ತು ಒಂದು ಕಾರ್ಟ್ರಿಡ್ಜ್‌ನಲ್ಲಿ ಮುದ್ರಿಸಬಹುದಾದ ಪ್ರತಿಗಳ ಸಂಖ್ಯೆಯೂ ಕಡಿಮೆ. ಹೀಗಾಗಿ ಹೆಚ್ಚು ಪ್ರಿಂಟಿಂಗ್ ಬೇಕಿದ್ದರೆ ಇಲ್ಲಿ ನಿರ್ವಹಣಾ ವೆಚ್ಚ ಜಾಸ್ತಿ ಅಂದುಕೊಳ್ಳಬಹುದು.
* ಮನೆಯಲ್ಲಿ ಬ್ಯಾನರ್, ಪ್ಯಾಂಪ್ಲೆಟ್ ಮುಂತಾಗಿ ಕಲರ್ ಪ್ರಿಂಟ್‌ಗಳನ್ನು ಮಾಡುತ್ತೀರೆಂದಾದರೆ, ಇಂಕ್ ಜೆಟ್ ಪ್ರಿಂಟರ್ ಅನುಕೂಲ.
ಒಟ್ಟಿನಲ್ಲಿ, ಕಡಿಮೆಯಿಂದ ಮಧ್ಯಮ ಪ್ರಮಾಣದ ಪ್ರಿಂಟಿಂಗ್‌ಗಾದರೆ ಇಂಕ್ ಜೆಟ್ ಪ್ರಿಂಟರ್ ಸೂಕ್ತವಾದರೆ, ಒಂದೋ ತೀರಾ ಕಡಿಮೆ ಬಳಕೆ (ಟೋನರ್ ಬಾಳಿಕೆಯ ನಿಟ್ಟಿನಲ್ಲಿ), ಇಲ್ಲವೇ ತೀರಾ ಹೆಚ್ಚು ಪ್ರಮಾಣದ ಪ್ರಿಂಟಿಂಗ್‌ಗೆ (ಪ್ರತೀ ಪ್ರಿಂಟ್‌ಗೆ ತಗುಲುವ ವೆಚ್ಚ ನೋಡಿದರೆ) ಲೇಸರ್ ಜೆಟ್ ಪ್ರಿಂಟರ್ ಸೂಕ್ತ ಎಂಬುದು ನೆನಪಿನಲ್ಲಿರಲಿ. ಗುಣಮಟ್ಟದಲ್ಲಿ ಲೇಸರ್ ಜೆಟ್ ಮುಂದು, ಬೆಲೆಯೂ ಹೆಚ್ಚು. ಬಣ್ಣದ ಪುಟಗಳು ಸಾಂದರ್ಭಿಕವಾಗಿ ಬೇಕೆಂದಾದರೆ, ಸೈಬರ್ ಕೆಫೆಗೆ ಹೋಗಿ ಮುದ್ರಿಸಿಕೊಳ್ಳಬಹುದು. ಯಾಕೆಂದರೆ ಕಲರ್ ಲೇಸರ್ ಜೆಟ್ ಪ್ರಿಂಟರ್‌ಗಳ ಬೆಲೆ ತುಂಬಾ ಹೆಚ್ಚು.
* ಇಂಕ್ ಜೆಟ್: ಇಲ್ಲಿ ಇಂಕ್ ಸ್ಪ್ರೇ ಮಾಡಲಾಗುತ್ತಿದೆ. ಸಮಯ ಕಳೆದಂತೆ, ಪ್ರಿಂಟ್ ತೆಗೆಯುವಾಗ ಸಣ್ಣ ಪುಟ್ಟ ಡಾಟ್‌ಗಳು ಕಾಗದದಲ್ಲಿ ಗೋಚರಿಸಬಹುದು.
* ಲೇಸರ್ ಜೆಟ್: ಪೌಡರನ್ನು ಲೇಸರ್ ಮೂಲಕ ಸ್ಪ್ರೇ ಮಾಡುವ ತಂತ್ರಜ್ಞಾನ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು