ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ -31
ಕಂಪ್ಯೂಟರ್ ಈಗ ಜೀವನದ ಅವಿಭಾಜ್ಯ ಅಂಗವಾಗತೊಡಗಿದೆ. ಬರವಣಿಗೆ, ಅಪ್‌ಲೋಡಿಂಗ್, ಬ್ಲಾಗಿಂಗ್, ಇಂಟರ್ನೆಟ್ ಹುಡುಕಾಟ, ಜಾಲ ತಾಣಗಳ ವೀಕ್ಷಣೆ, ಇಮೇಲ್, ಚಾಟಿಂಗ್ ಮುಂತಾದ ಅಗತ್ಯ ಕೆಲಸಗಳನ್ನಷ್ಟೇ ಮಾಡಲು ತಿಳಿದಿರುವವರೆಲ್ಲರೂ ಕಂಪ್ಯೂಟರ್ ತಜ್ಞರಾಗಿರಲೇಬೇಕೆಂದಿಲ್ಲ. ಹೀಗಾಗಿ ತಂತ್ರಾಂಶ-ಯಂತ್ರಾಂಶಗಳ ಬಗ್ಗೆ ಅಷ್ಟೇನೂ ಅರಿವಿಲ್ಲದ ಇಂಥವರಿಗೆ ಕೂಡ ತಮ್ಮ ಕಂಪ್ಯೂಟರನ್ನು ‘ಸ್ವಚ್ಛ’ವಾಗಿರಿಸಿಕೊಂಡು, ಅದರ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ನೆರವಾಗುವ ಒಂದು ಸರಳವಾದ ಟೂಲ್ ಇಲ್ಲಿದೆ.
ಕಣ್ಣಿಗೆ ಕಾಣುವ ಕಸ- ಧೂಳಿನ ಹೊರತಾಗಿ, ಕಣ್ಣಿಗೆ ಕಾಣಿಸದಿರುವ ‘ವರ್ಚುವಲ್ ಕಸ’ಗಳು ಕೂಡ ನಮ್ಮ ಪಿಸಿ (ಪರ್ಸನಲ್ ಕಂಪ್ಯೂಟರ್) ಒಳಗೆ ತುಂಬಿಕೊಂಡು ಅದನ್ನು ‘ಸ್ಲೋ’ ಆಗಿಸಬಹುದು. ಈ ‘ವರ್ಚುವಲ್ ಕಸ’ಗಳೆಂದರೆ ಕುಕೀಸ್, ಟೆಂಪರರಿ ಇಂಟರ್ನೆಟ್ ಫೈಲ್ಸ್ ಇತ್ಯಾದಿ. ವಿಶೇಷವಾಗಿ ಇಂಟರ್ನೆಟ್ ಬ್ರೌಸ್ ಮಾಡುವಾಗ, ಆಯಾ ವೆಬ್ ಪುಟಗಳಲ್ಲಿರುವ ಚಿತ್ರದ ತುಣುಕುಗಳು, ಪಠ್ಯಭಾಗ ಮುಂತಾದವುಗಳು ನಮ್ಮ ಕಂಪ್ಯೂಟರಿನ ಒಂದು ತಾತ್ಕಾಲಿಕ ಸಂಗ್ರಹಾಲಯಕ್ಕೆ (cache memory)ಗೆ ಡೌನ್‌ಲೋಡ್ ಆಗುತ್ತವೆ. ನಾವು ಆ ವೆಬ್ ತಾಣವನ್ನು ನೋಡಿದ ಬಳಿಕ, ಇವುಗಳ ಅಗತ್ಯ ನಮಗಿರುವುದಿಲ್ಲ. ಅದನ್ನು ನಮ್ಮ ಪಿಸಿಯಿಂದ ತೆಗೆದುಹಾಕದಿದ್ದರೆ ಕಸದ ರಾಶಿ ಹೆಚ್ಚುತ್ತಲೇ ಹೋಗುತ್ತದೆ. ಈ ಕಸ ನಿವಾರಿಸಿದರೆ, ಸ್ಲೋ ಆಗಿ ಕೆಲಸ ಮಾಡುತ್ತಿರುವ ನಿಮ್ಮ ಕಂಪ್ಯೂಟರ್ ವೇಗ ಹೆಚ್ಚಿಸಿಕೊಳ್ಳುತ್ತದೆ, ಪದೇ ಪದೇ ಹ್ಯಾಂಗ್ ಆಗುವುದೂ ತಪ್ಪುತ್ತದೆ.
ಇದಕ್ಕಾಗಿ ಅತ್ಯಂತ ಸರಳವಾದ, ಉಚಿತವಾದ ಮತ್ತು ಜನಪ್ರಿಯವಾದ ತಂತ್ರಾಂಶವೇ CCleaner (http://www.piriform.com/ccleaner//download). ಇಲ್ಲಿ ಹಣ ಕೊಟ್ಟು ಹೆಚ್ಚಿನ ಅನುಕೂಲಗಳನ್ನು ಒದಗಿಸಬಲ್ಲ ಪ್ರೀಮಿಯಂ ವರ್ಶನ್ ಕೂಡ ಇದೆ. ಆದರೆ ನಮ್ಮ ವೈಯಕ್ತಿಕ ಬಳಕೆಗೆ ಉಚಿತ ವರ್ಶನ್ ಸಾಕಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಂಡರೆ ಎಲ್ಲ ತಾತ್ಕಾಲಿಕ ಫೈಲುಗಳು, ಕುಕೀಗಳು, ಅನವಶ್ಯ ಫೈಲುಗಳನ್ನು ಡಿಲೀಟ್ ಮಾಡುವುದು ಸುಲಭ. ನೀವು ‘ಸಿಕ್ಲೀನರ್’ ಅಳವಡಿಸಿದಾಗ, ಡೆಸ್ಕ್‌ಟಾಪ್ (ಪರದೆ) ಯಲ್ಲಿರುವ Recycle Bin ಮೇಲೆ ರೈಟ್-ಕ್ಲಿಕ್ ಮಾಡಿದಾಗ ನೇರವಾಗಿ Run CCleaner ಕ್ಲಿಕ್ ಮಾಡಿದರೆ, ಏನೇನೆಲ್ಲಾ ಅಳಿಸಲ್ಪಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ. ಹೀಗಾಗಿ Open CCleaner ಎಂಬುದನ್ನು ಕ್ಲಿಕ್ ಮಾಡಿ.
CCleaner ಓಪನ್ ಮಾಡಿದಾಗ ನಿಮ್ಮ ಸಿಸ್ಟಂನ ಎಲ್ಲ ಜಾತಕವನ್ನೂ ಅದು ಹೇಳುತ್ತದೆ. ಅಂದರೆ ಯಾವ ಆಪರೇಟಿಂಗ್ ಸಿಸ್ಟಂ, ಪ್ರೊಸೆಸರ್ ಎಷ್ಟು ವೇಗವಾಗಿದೆ, RAM ಎಷ್ಟು ಮುಂತಾದವು. ಡೀಫಾಲ್ಟ್ ಆಗಿ ತೆರೆದುಕೊಳ್ಳುವ Cleaner ಎಂಬ ವಿಭಾಗದಲ್ಲಿ, Windows ಮತ್ತು Applications ಎಂಬ ಎರಡು ಟ್ಯಾಬ್‌ಗಳಿರುತ್ತವೆ. ಅವುಗಳಲ್ಲಿ, ಯಾವುದನ್ನೆಲ್ಲಾ ಕಿತ್ತು ಹಾಕಬೇಕು ಎಂಬ ಪಟ್ಟಿಯೇ ಇರುತ್ತದೆ. ಅದರ ಮುಂದಿರುವ ಚೆಕ್‌ಬಾಕ್ಸ್‌ಗಳನ್ನು ಟಿಕ್ ಗುರುತು ಮಾಡುತ್ತಾ ಹೋದ ಬಳಿಕ, ಕೆಳ-ಬಲಭಾಗದಲ್ಲಿರುವ Run Cleaner ಎಂಬ ಬಟನ್ ಒತ್ತಿದರೆ, ಎಲ್ಲ ಕಸವೂ ಅಳಿಸಲ್ಪಟ್ಟು ನಿಮ್ಮ ಕಂಪ್ಯೂಟರ್ ಸ್ವಚ್ಛವಾಗುತ್ತದೆ. ಎಷ್ಟು ಪ್ರಮಾಣದಲ್ಲಿ ಟೆಂಪರರಿ ಫೈಲುಗಳನ್ನು ತೆಗೆದುಹಾಕಲಾಗಿದೆ ಎಂದೂ ಕೊನೆಯಲ್ಲಿ ತೋರಿಸುತ್ತದೆ. ಇದನ್ನು ರನ್ ಮಾಡುವಾಗ ಯಾವುದೇ ಅಪ್ಲಿಕೇಶನ್ ಓಪನ್ ಆಗಿರಬಾರದು ಎಂಬುದು ನೆನಪಿನಲ್ಲಿರಲಿ.
ಇನ್ನು ಕಂಪ್ಯೂಟರ್ ಬಗ್ಗೆ ಕೊಂಚ ಹೆಚ್ಚು ತಿಳಿದವರು, ಉಳಿದ ಮೂರು ಆಯ್ಕೆಗಳಾದ Registry, Tools ಹಾಗೂ Options ಎಂಬವುಗಳನ್ನು ಬಳಸಿ, ಕಂಪ್ಯೂಟರನ್ನು ಮತ್ತಷ್ಟು ಸಕ್ಷಮಗೊಳಿಸಬಹುದು. Tools ಬಳಸಿ ನಮಗೆ ಬೇಡವಾದ ತಂತ್ರಾಂಶಗಳನ್ನು ತೆಗೆದುಹಾಕಬಹುದಾಗಿದ್ದರೆ (Uninstall), Registry ಉಪಯೋಗಿಸಿದರೆ ಕಂಪ್ಯೂಟರಿನಲ್ಲಿ ಯಾವುದೇ ತಂತ್ರಾಂಶಗಳಿಗೆ ಸಂಬಂಧಿಸಿ ಏನಾದರೂ ಸಮಸ್ಯೆಗಳಿವೆಯೇ ಎಂದು ತಿಳಿದುಕೊಂಡು, ಸಮಸ್ಯೆಯಿರುವವುಗಳನ್ನು ತೆಗೆದುಹಾಕುವ ಮತ್ತು ಸಮಸ್ಯೆಯನ್ನು ಸರಿಪಡಿಸುವ ಆಯ್ಕೆಯಿರುತ್ತದೆ. ಗೊತ್ತಿದ್ದವರಲ್ಲಿ ಕೇಳಿಯೇ ಇದನ್ನು ಬಳಸುವುದು ಉತ್ತಮ. Options ಎಂಬಲ್ಲಿ ಯಾವುದನ್ನು ಸ್ಕ್ಯಾನ್ ಮಾಡಬೇಕು, ಯಾವುದನ್ನು ಈ ತಂತ್ರಾಂಶವು ಮುಟ್ಟಬಾರದು ಎಂದು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ.
CCleaner ಅಂತೂ ಕಂಪ್ಯೂಟರಿನ ಆಪ್ತ ಸಂಗಾತಿ ಎಂದು ಹೇಳಲಡ್ಡಿಯಿಲ್ಲ. ಇದನ್ನು ಬಳಸಿ, ಕಂಪ್ಯೂಟರ್‌ನ ವೇಗ ಹೆಚ್ಚಿಸಿಕೊಳ್ಳಿ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
Good Information , Thanks
ಧನ್ಯವಾದ ಸೀತಾರಾಮಯ್ಯ ಅವರೇ..
Its really very needed information to all the users of gmail. Thanks a lot sir
ಧನ್ಯವಾದ ಲತಾ...