ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -90 ಆಗಸ್ಟ್ 25, 2014
ಈ ಅಂಕಣದಲ್ಲಿ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯ ಫೋನ್‌ಗಳು ಹಾಗೂ ಜಿಮೇಲ್ ಐಡಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಲಾಗಿದೆ. ಐಫೋನ್, ವಿಂಡೋಸ್ ಫೋನ್, ಬ್ಲ್ಯಾಕ್‌ಬೆರಿ ಫೋನ್‌ಗಳಿಗೂ ಇದು ಒಂದಿಷ್ಟು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಅನ್ವಯವಾಗಬಹುದು.
ಗೂಗಲ್ ಸರ್ವರ್‌ನಲ್ಲಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಅದರಲ್ಲಿ ಗೂಗಲ್ ಐಡಿ (ಜಿಮೇಲ್) ಮೂಲಕ ಹೇಗೂ ಲಾಗಿನ್ ಆಗಬೇಕಾಗುತ್ತದೆ ಮತ್ತು ಎಲ್ಲ ಸಂಪರ್ಕಗಳೂ ಆನ್‌ಲೈನ್‌ನಲ್ಲಿ ಅಂದರೆ ಗೂಗಲ್ ಸರ್ವರ್‌ನಲ್ಲಿ ಬ್ಯಾಕಪ್ (ನಕಲು ಪ್ರತಿಗಳು) ಇರಿಸುವ ವ್ಯವಸ್ಥೆ ಇದೆ. ಈ ರೀತಿ ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಕಾಯ್ದಿಡಲು, ಸೆಟ್ಟಿಂಗ್ಸ್ ಮೆನುವಿಗೆ ಹೋಗಿ, Backup & Restore ಎಂಬಲ್ಲಿ Back up My data ಕ್ಲಿಕ್ ಮಾಡಿ. ನಿಮ್ಮ ಸಂಪರ್ಕ ಸಂಖ್ಯೆಗಳಷ್ಟೇ ಅಲ್ಲದೆ, ಎಲ್ಲ ಆ್ಯಪ್‌ಗಳ ಬ್ಯಾಕಪ್ ಕೂಡ ಗೂಗಲ್ ಸರ್ವರ್‌ನಲ್ಲಿ ಉಳಿಯುತ್ತದೆ.
ಮೆಮೊರಿ ಕಾರ್ಡ್‌ನಲ್ಲಿ: ಸಂಪರ್ಕ ಸಂಖ್ಯೆಗಳನ್ನು ಸೇವ್ ಮಾಡಿಡುವ ಮತ್ತೊಂದು ವಿಧಾನವೆಂದರೆ, ಕಾಂಟ್ಯಾಕ್ಟ್ಸ್ ಆಯ್ಕೆ ಮಾಡಿಕೊಂಡು, ಅದರಲ್ಲಿನ Option ಮೆನು (ಹೊಸ ಫೋನ್‌ಗಳಲ್ಲಿ ಚುಕ್ಕಿಗಳನ್ನು [….] ತೋರಿಸಲಾಗುತ್ತದೆ) ಕ್ಲಿಕ್ ಮಾಡಿದ ಬಳಿಕ, Export/Import ಆಯ್ಕೆ ಇರುತ್ತದೆ. SD ಕಾರ್ಡ್‌ಗೆ Export ಮಾಡುವುದನ್ನು ಕ್ಲಿಕ್ ಮಾಡಿದಲ್ಲಿ, ನಿಮ್ಮ ಮೆಮೊರಿ ಕಾರ್ಡ್‌ನಲ್ಲಿ ಎಲ್ಲ ಸಂಪರ್ಕಗಳೂ ಉಳಿಕೆಯಾಗುತ್ತವೆ. ಹೊಸ ಫೋನ್ ಬಂದಾಗ, ಅದಕ್ಕೆ ಈ ಮೆಮೊರಿ ಕಾರ್ಡ್ ಸೇರಿಸಿ, ಕಾಂಟ್ಯಾಕ್ಟ್ಸ್‌ನ Option ಮೆನುವಿಗೆ ಹೋಗಿ, Import from SD Card ಅಂತ ಮಾಡಿದರೆ, ಎಲ್ಲ ಸಂಪರ್ಕ ಸಂಖ್ಯೆಗಳೂ ಹೊಸ ಫೋನ್‌ನಲ್ಲಿ ಸೇವ್ ಆಗುತ್ತವೆ.
ಕಂಪ್ಯೂಟರ್ ಮೂಲಕ: ಆಂಡ್ರಾಯ್ಡ್ ಅಲ್ಲದೆ ಬೇರೆ ಫೋನ್ ಅಂದರೆ ನೋಕಿಯಾ, ವಿಂಡೋಸ್ ಫೋನ್, ಆ್ಯಪಲ್ ಫೋನ್ ಬಳಸುತ್ತಿರುವರು ಕೂಡ ತಮ್ಮ ಸಂಪರ್ಕ ಸಂಖ್ಯೆಗಳನ್ನು ಆಂಡ್ರಾಯ್ಡ್‌ಗೆ ವರ್ಗಾಯಿಸಬಹುದು. ಆಯಾ ಫೋನ್‌ಗಳಲ್ಲಿ ಜಿಮೇಲ್ ಬಳಸುತ್ತಿದ್ದರೆ ಸಂಪರ್ಕ ಸಂಖ್ಯೆಗಳನ್ನು ಅದಕ್ಕೆ ಸಿಂಕ್ (ಸಿಂಕ್ರನೈಜ್) ಮಾಡಿಕೊಳ್ಳುವ ಅವಕಾಶ ಇದೆ.
ಸಿಂಕ್ರನೈಜ್ ಆದಮೇಲೆ, ಕಂಪ್ಯೂಟರಿನಲ್ಲಿ ಜಿಮೇಲ್‌ಗೆ ಲಾಗಿನ್ ಆಗಿ. ಚಿತ್ರದಲ್ಲಿರುವಂತೆ, ಎಡ ಮೇಲ್ಭಾಗದಲ್ಲಿ Google ಲೋಗೋದ ಕೆಳಗೆ Gmail ಎಂಬುದನ್ನು ಕ್ಲಿಕ್ ಮಾಡಿದಾಗ, Contacts ಮತ್ತು Task ಎಂಬ ಆಯ್ಕೆಗಳು ಕಾಣಿಸುತ್ತವೆ. Contacts ಕ್ಲಿಕ್ ಮಾಡಿ. ಸ್ವಲ್ಪ ಬಲಭಾಗದಲ್ಲಿ ನೋಡಿದರೆ More ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ, import ಮಾಡುವ, export ಮಾಡುವ, ಒಂದೇ ರೀತಿಯ ಸಂಪರ್ಕಗಳನ್ನು ವಿಲೀನ ಮಾಡುವ ಆಯ್ಕೆಗಳಿರುತ್ತವೆ. ಇಲ್ಲಿಂದಲೇ ಎಲ್ಲ ಸಂಪರ್ಕಗಳನ್ನೂ ಎಡಿಟ್ ಕೂಡ ಮಾಡಬಹುದು.
ಎಕ್ಸೆಲ್ ರೂಪದಲ್ಲಿ ಅಂದರೆ .csv ಫಾರ್ಮ್ಯಾಟ್‌ನಲ್ಲಿ ನಿಮ್ಮ ಕಂಪ್ಯೂಟರಿಗೆ ಸಂಪರ್ಕಗಳನ್ನು Export ಮಾಡಿಕೊಳ್ಳಿ. ಸಂಪರ್ಕ ಸಂಖ್ಯೆಗಳನ್ನು google csv ಅಥವಾ outlook CSV ಇಲ್ಲವೇ vCard ರೂಪಗಳಿಗೆ (ಆಯಾ ಫೋನ್‌ಗಳು ಯಾವುವನ್ನು ಬೆಂಬಲಿಸುತ್ತವೆ ಎಂಬುದನ್ನು ನೋಡಿಕೊಂಡು) export ಮಾಡುವ ಆಯ್ಕೆ ಲಭ್ಯವಿರುತ್ತದೆ. ಯುಎಸ್‌ಬಿ ಕೇಬಲ್ ಮೂಲಕ ಕಂಪ್ಯೂಟರಿಗೆ ಮೊಬೈಲನ್ನು ಸಂಪರ್ಕಿಸಿ, ಅದರ ಮೆಮೊರಿ ಕಾರ್ಡ್‌ಗೆ ಈ ಫೈಲನ್ನು ವರ್ಗಾಯಿಸಿ. ನಂತರ ನಿಮ್ಮ ಮೊಬೈಲ್‌ನ ಕಾಂಟ್ಯಾಕ್ಟ್ಸ್ ವಿಭಾಗಕ್ಕೆ ಹೋಗಿ, options ನೋಡಿದರೆ, Import/Export ಎಂದಿರುವಲ್ಲಿ, Import from SD Card ಎಂದು ಸೆಲೆಕ್ಟ್ ಮಾಡಿದರೆ ಎಲ್ಲ ಸಂಪರ್ಕಗಳು ಈ ಫೋನ್‌ಗೆ ಕಾಪಿ ಆಗುತ್ತವೆ.
ಏನೋ ಸಮಸ್ಯೆ ಬಂದು ನಿಮ್ಮ ಫೋನನ್ನು ಪೂರ್ತಿಯಾಗಿ ರೀಸೆಟ್ (ಫ್ಯಾಕ್ಟರಿ ಡೇಟಾ ರೀಸೆಟ್) ಮಾಡಬೇಕಾಗಿ ಬರಬಹುದು. ಹಾಗಾದಾಗ, ಎಲ್ಲ ಮಾಹಿತಿಗಳೂ ಡಿಲೀಟ್ ಆಗಿಬಿಡುತ್ತವೆ. ರೀಸೆಟ್ ಮಾಡಿದ ಮೇಲೆ ಇಲ್ಲವೇ ಫೋನ್ ಕಳೆದು ಹೋದರೆ ಅಥವಾ ಹೊಸ ಫೋನ್ ಕೊಳ್ಳಬೇಕೆಂದಿದ್ದರೆ, ಪುನಃ ಅದೇ ಗೂಗಲ್ ಖಾತೆಗೆ ಲಾಗಿನ್ ಆದಾಗ, ಇಲ್ಲಿ ಎಲ್ಲ ಮಾಹಿತಿಯನ್ನು ಪುನಃ ಪಡೆಯುವ (ರೀಸ್ಟೋರ್ ಮಾಡುವ) ಆಯ್ಕೆ ಇರುತ್ತದೆ. ಹೊಸ ಫೋನ್‌ನಲ್ಲಿ ಲಾಗಿನ್ ಆದ ಮೇಲೆ, ಸೆಟ್ಟಿಂಗ್ಸ್‌ನಲ್ಲಿರುವ ಬ್ಯಾಕಪ್ ಮತ್ತು ರೀಸೆಟ್ ಎಂಬಲ್ಲಿಗೆ ಹೋಗಿ, “ರೀಸ್ಟೋರ್” ಬಟನ್ ಕ್ಲಿಕ್ ಮಾಡಿದರಾಯಿತು. ಎಲ್ಲ ಸಂಪರ್ಕಗಳೂ ಬಂದುಬಿಡುತ್ತವೆ.
ಟೆಕ್ ಟಾನಿಕ್
ಯೂಟ್ಯೂಬ್‌ನಿಂದ ಜಿಫ್ ಪರಿವರ್ತಿಸಿ
ಯೂಟ್ಯೂಬ್ ವೀಡಿಯೋಗಳನ್ನು ಹೆಚ್ಚಿನವರು ನೋಡುತ್ತೀರಿ. ಈ ವೀಡಿಯೋಗಳ ಕೆಲವು ತುಣುಕುಗಳನ್ನು ನಮ್ಮ ವೆಬ್‌ಸೈಟ್‌ಗಳಲ್ಲಿ ಅಥವಾ ಬ್ಲಾಗ್‌ಗಳಲ್ಲಿ ಅಳವಡಿಸಲು, ಕಡಿಮೆ ತೂಕವಿರುವ ಚಲಿಸುವ ಚಿತ್ರಗಳ ರೂಪಕ್ಕೆ ಅಂದರೆ .GIF (ಜಿಫ್) ಫಾರ್ಮ್ಯಾಟ್‌ಗೆ ಪರಿವರ್ತಿಸುವಂತಾದರೆ? ಇದನ್ನು ಮಾಡುವುದು ತೀರಾ ಸುಲಭ. ಯಾವುದೇ ಯೂಟ್ಯೂಬ್ ವೀಡಿಯೋ ಆಯ್ಕೆ ಮಾಡಿ. ಅದರ ಯುಆರ್‌ಎಲ್ (ವಿಳಾಸ)ದಲ್ಲಿ www. ನಂತರ ಹಾಗೂ youtube ಎಂದು ಆರಂಭವಾಗುವ ಮುನ್ನ gif ಅಂತ ಸೇರಿಸಿ, ಎಂಟರ್ ಕೊಡಿ. ಅಷ್ಟೆ. ವೀಡಿಯೋದ ಯಾವುದೇ ಭಾಗದಿಂದ ಆರಂಭವಾಗಿ ಗರಿಷ್ಠ 10 ಸೆಕೆಂಡುಗಳ ಜಿಫ್ ಚಿತ್ರವನ್ನು ಪಡೆಯಬಹುದು. ಇದಲ್ಲವಾದರೆ, https://gifyoutube.com/ ಎಂಬಲ್ಲಿ ಯೂಟ್ಯೂಬ್ ಯುಆರ್‌ಎಲ್ ಕಾಪಿ ಪೇಸ್ಟ್ ಮಾಡಿದರೆ ಜಿಫ್ ರೂಪದ ಚಿತ್ರ ದೊರೆಯುತ್ತದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
Sir i am planning to start a news portal can you please help me how to go about it step by step if possible.Thanq.
ಸುಬ್ರಹ್ಮಣ್ಯರೇ,
ಖಂಡಿತಾ. ಶೀಘ್ರವೇ ಈ ಕುರಿತು ಬರೆಯುತ್ತೇನೆ.
ಧನ್ಯವಾದಗಳು.