ಪ್ರತ್ಯೇಕತೆಯ ಪರಮಾವಧಿ: ಕಂಪ್ಯೂಟರ್ ಎದುರು ಅಕ್ಕಪಕ್ಕದಲ್ಲೇ ಕೂತಿದ್ದರೂ ಪರಸ್ಪರ ಸಂಪರ್ಕಕ್ಕೆ ಇ-ಮೇಲ್ ಬಳಸುವುದು.
ಅಸಹಾಯಕತೆಯ ಪರಮಾವಧಿ: ಒಂದು ವಾರವಾದರೂ ಒಂದೇ ಒಂದು ಇ-ಮೇಲ್ ಬಾರದಿರುವುದು.
ಹತಾಶೆಯ ಪರಮಾವಧಿ: ಇ-ಮೇಲ್ ಸರ್ವರ್ ಡೌನ್ (ಸ್ಲೋ) ಆದಾಗ.
ನಿರ್ಲಕ್ಷ್ಯದ ಪರಮಾವಧಿ: ಪ್ರೇಮ ಸಂದೇಶದ ಇ-ಮೇಲ್ ಬರೆದು ‘ಸೆಂಡ್ ಆಲ್’ ಕ್ಲಿಕ್ ಮಾಡುವುದು.
ಸಾಧನೆಯ ಪರಮಾವಧಿ: ಫ್ರೆಂಡ್‌ಶಿಪ್‌ಗಾಗಿ ಹುಡುಗಿಯೊಬ್ಬಳಿಗೆ ಕಳುಹಿಸಿದ ಇ-ಮೇಲ್‌ಗೆ ರಿಪ್ಲೈ ಬರುವುದು.
ಟೈಂ ಪಾಸ್‌ನ ಪರಮಾವಧಿ: ತನ್ನದೇ ಅಡ್ರಸ್‌ಗೆ ಇ-ಮೇಲ್ ಕಳುಹಿಸುವುದು.
ನಿರೀಕ್ಷೆಯ ಪರಮಾವಧಿ: ಬಡವರಿಗೆ ಒಳಿತಾಗುವಂತಹ ಯೋಜನೆಗಳನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಇ-ಮೇಲ್ ಮಾಡುವುದು.
ಪುನರಾವರ್ತನೆಯ ಪರಮಾವಧಿ: ನೀವು ಫಾರ್ವರ್ಡ್ ಮಾಡಿದ ಇ-ಮೇಲ್ ಮತ್ತೊಬ್ಬರ ಮೂಲಕ ನಿಮ್ಮದೇ ಇನ್‌ಬಾಕ್ಸಿಗೆ ಬಂದು ಬೀಳುವುದು.
ಇಂಟರ್ನೆಟ್ ಗೀಳಿನ ಪರಮಾವಧಿ: ನೀವು ಈಜುಕೊಳದಲ್ಲಿ ಈಜುತ್ತಿರುವಾಗ ನೀರಿನಲ್ಲಿ ಮುಳುಗುತ್ತೀರಿ. ಆಗ “HELP” ಎಂದು ಕೂಗುವ ಬದಲು “F1 F1 F1” ಎಂದು ಬೊಬ್ಬಿಡುವುದು.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
View Comments
ಬಹಳ ಚೆನ್ನಾಗಿದೆ. ಆದರೆ ಅಲ-ಮೇಲು ಎಲ್ಲಿ?
ಶ್ರೀನಿವಾಸ್, ನನ್ನದೊಂದು ಪುಟ್ಟ ಜಾಲಕ್ಕೆ ನಿಮಗೆ ಸ್ವಾಗತ. ಭೇಟಿ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್.
ಅಂದಹಾಗೆ, ಅಲ-ಮೇಲು ಅಂತ ಬೊಬ್ಬಿಡುತ್ತಾರೆ. ತಕ್ಷಣ ಅವರೆಲ್ಲಿದ್ದಾರಂತ ಗೊತ್ತಾಗುತ್ತದೆ.
ಈ ಬ್ಲಾಗ್ ಮಾಡಿರುವುದು ಯಾವ ಪರಮಾವಧಿ?!
ಇದು ಜನಾ ಬದಲಾವಣೆ ಬಯಸ್ತಾರಲ್ಲಾ... ಅದರ ಪರಮಾವಧಿ ವಿಶ್ವನಾಥರೆ.
he he. too good :)
ಬ್ಲಾಗಿಗೆ ಭೇಟಿ ಇತ್ತು ಕಾಮೆಂಟ್ ಉಳಿಸಿದ್ದಕ್ಕೆ ಧನ್ಯವಾದ ಎಚ್.ಪಿ. ಅವರೆ.
ಆಗಾಗ ಬರುತ್ತಾ ಇರಿ.