Categories: myworld

ವೆಬ್‌ದುನಿಯಾದಲ್ಲಿ ಪ್ರೇಮಿಗಳ ದಿನಕ್ಕೆ ಲೇಖನ ಬರೆಯಿರಿ!

[ಇದು ಬ್ಲಾಗ್ ಗೆಳೆಯರಿಗೆ ಆಹ್ವಾನ]

ಪ್ರೀತಿ ಇಲ್ಲದೆ ಜಗತ್ತೇ ಇಲ್ಲ. ನಿಸ್ವಾರ್ಥ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ಕವಿಗಳನ್ನು, ಸಾಹಿತಿಗಳನ್ನು ಪದೇ ಪದೇ ಕಾಡುತ್ತಿರುವ ವಿಷಯ ಈ ಪ್ರೀತಿ-ಪ್ರೇಮ. ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂದು ಹೇಳಲಾಗುತ್ತದೆಯಾದರೂ, ಅಂಥಾ ಕವಿಗೂ ಈ ಪ್ರೇಮವನ್ನು ಪರಿಪೂರ್ಣವಾಗಿ ವರ್ಣಿಸುವುದು ಸಾಧ್ಯವಾಗಿಲ್ಲ. ಅದೆಷ್ಟೋ ಕವಿಗಳು ತಮ್ಮ ಸಾಮರ್ಥ್ಯವನ್ನೆಲ್ಲಾ ಒಗ್ಗೂಡಿಸಿ, ಕವನಗಳಲ್ಲಿ ಹಿಡಿ ಪ್ರೀತಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಆದರೂ ಏನೋ ಒಂದು ಕೊರತೆ ಕಾಡಿದ್ದಿದೆ, ಅಥವಾ ಅದು ಅಪರಿಪೂರ್ಣ ಎಂದೇ ಭಾಸವಾಗುತ್ತದೆ. ಪ್ರೀತಿಯ ಸಾಮರ್ಥ್ಯ ಅಂಥದ್ದು.

ಫಾದರ‌್ಸ್ ಡೇ, ಮದರ‌್ಸ್ ಡೇ, ಫ್ರೆಂಡ್‌ಶಿಪ್ ಡೇ ಎಂಬಿತ್ಯಾದಿಯಾಗಿ ಪ್ರತಿಯೊಬ್ಬರಿಗೂ ಒಂದೊಂದು ದಿನವನ್ನು ಮೀಸಲಿಡುವ ಪಾಶ್ಚಾತ್ಯ ಸಂಸ್ಕೃತಿಯನ್ನು ಭಾರತೀಯ ಯುವಜನಾಂಗ ಒಪ್ಪಿಕೊಂಡಿದೆ – ಅಪ್ಪಿಕೊಂಡಿದೆ. ಅದರಲ್ಲಿಯೂ ಲವರ‌್ಸ್ ಡೇ ಎಂದೇ ಕರೆಯಲಾಗುವ ಮತ್ತು ‘ಪ್ರೇಮಿಗಳ ದಿನ’ವೆಂದು ಕನ್ನಡೀಕರಣಗೊಳಿಸಬಹುದಾದ ‘ಸೈಂಟ್ ವ್ಯಾಲೆಂಟೈನ್ಸ್ ಡೇ’ ಬಗೆಗಂತೂ ಒಂದು ಸೇರು ಜಾಸ್ತಿಯೇ ಧಾವಂತ, ಉತ್ಸಾಹ.

ಪ್ರೀತಿಸಲು ಪ್ರೇಮಿಗಳ ದಿನವೇ ಆಗಬೇಕಿಲ್ಲ ಮತ್ತು ಪ್ರೇಮಿಗಳಿಗೆ ಪ್ರತಿದಿನವೂ ಪ್ರೇಮಿಗಳ ದಿನವೇ ಎಂಬುದಾಗಿ ಯುವಜಗತ್ತು ಒಪ್ಪಿಕೊಂಡಿರುವ ಬದ್ಧಸೂತ್ರಕ್ಕೆ ಪೂರಕವಾಗಿ ನಿಮ್ಮ ಪ್ರೀತಿಯ ಕನ್ನಡ ವೆಬ್‌ದುನಿಯಾ ಕೂಡ ತನ್ನ ಓದುಗರ ಪ್ರೇಮದ ಪರಿಯನ್ನು ಬಿಚ್ಚಿಡಲು ವೇದಿಕೆ ಒದಗಿಸುತ್ತಿದೆ. ನಮ್ಮಲ್ಲಿ ಕಾಮೆಂಟ್ ಮಾಡುವ ಹಲವರನ್ನು ಗಮನಿಸಿದ್ದೇವೆ. ಒಳ್ಳೊಳ್ಳೆಯ ಪ್ರತಿಭಾವಂತರಿದ್ದಾರೆ ಎಂಬುದೂ ನಮ್ಮ ಗಮನಕ್ಕೆ ಬಂದಿದೆ. ತಮ್ಮ ಬರವಣಿಗೆಯ ಉತ್ಸಾಹವನ್ನು ವರ್ಧಿಸುವಂತೆ ಮಾಡಲು ಅಂಥವರಿಗೂ ಇದೊಂದು ಅವಕಾಶ.

ಓದುಗರೆ, ನೀವು ಪ್ರೀತಿಸಿದ್ದು ಹೇಗೆ, ನೀವು ಪ್ರೀತಿಸ್ತಾ ಇರೋದು ಹೇಗೆ, ಪ್ರೀತಿಗೆ ಜಾತಿ ಅಡ್ಡ ಬಂದರೇನು ಮಾಡುವಿರಿ, ಪ್ರೇಮ ಕುರುಡು, ನಿಮ್ಮ ಪ್ರೇಮಿಯಿಂದ ನೀವು ಪಡೆದ ಮೊದಲ ಉಡುಗೊರೆ ಎಂಬಿತ್ಯಾದಿಯಾಗಿ ವಿಷಯಗಳ ಬಗ್ಗೆ ನಿಮ್ಮ ಅನುಭವಕ್ಕೆ ಮತ್ತು ಕಲ್ಪನಾ ಶಕ್ತಿಗೆ ನಿಲುಕುವ ಅಕ್ಷರಗಳನ್ನು ಜೋಡಿಸಿ, ಲೇಖನವೊಂದನ್ನು ನಮಗೆ ಕಳುಹಿಸಿ.

ಲೇಖನ ಹೇಗಿರಬೇಕು?:1. ಪರಿಶುದ್ಧ, ನಿಸ್ವಾರ್ಥ ಪ್ರೀತಿ-ಪ್ರೇಮದ ಪರಿಧಿಯೊಳಗೆಯೇ ಸುತ್ತುತ್ತಿರಲಿ ನಿಮ್ಮ ಲೇಖನ. ಅಶ್ಲೀಲ, ಅಸಭ್ಯ ಪದಗಳು, ಲೇಖನಗಳಿಗೆ ಅವಕಾಶವಿಲ್ಲ.
2. ಗಮನಿಸಿ: ನೀವು ಕಳುಹಿಸುವ ಲೇಖನ ಬೇರೆಲ್ಲೂ ಪ್ರಕಟವಾಗಿರಬಾರದು.
3. ಪ್ರೀತಿಗೂ ಒಂದು ಇತಿ-ಮಿತಿ ಇರಬೇಡವೇ? ಹೀಗಾಗಿ ನಿಮ್ಮ ಪ್ರೀತಿ-ಪ್ರೇಮದ ಲೇಖನವನ್ನು 300-400 ಪದಗಳಿಗೆ ಸೀಮಿತಗೊಳಿಸಿ. ಅಂದರೆ ಸುಮಾರು ಏಳೆಂಟು ಪ್ಯಾರಾಗ್ರಾಫ್. ನಿಮ್ಮ ಮನದೊಳಗೆ ಚಿಗಿತುಕೊಳ್ಳುವ, ಕಾಡುವ, ಸದಾ ಕಾರಂಜಿಯಂತೆ ಚಿಮ್ಮುತ್ತಿರುವ ಪ್ರೇಮ ಭಾವನೆಯನ್ನು ಕೆಲವೇ ವಾಕ್ಯಗಳಲ್ಲಿ ಹಿಡಿದಿಡುವುದು ಖಂಡಿತಾ ಅಸಾಧ್ಯ ಎಂಬುದು ನಮಗೂ ಗೊತ್ತಿದೆ. ಆದರೆ ಸ್ಥಳಾವಕಾಶದ ಸಮಸ್ಯೆ ಸರಿದೂಗಿಸಲು ಇದೊಂದು ತಡೆಗೋಡೆಯಷ್ಟೆ. ಬರಹದ ಮೇಲೆ ಆದಷ್ಟು ನಿಯಂತ್ರಣ ಸಾಧಿಸಿಕೊಳ್ಳಿ. ಚಿಕ್ಕ-ಚೊಕ್ಕ ಲೇಖನಗಳಿಗೆ ಆದ್ಯತೆ ಎಂಬುದು ನೆನಪಿರಲಿ.
4. ಲೇಖನಗಳನ್ನು ಅಕ್ಷರ ತಪ್ಪಿಲ್ಲದೆ, ಯುನಿಕೋಡ್/ನುಡಿ/ಬರಹ ಮುಂತಾದ ತಂತ್ರಾಂಶಗಳನ್ನು ಬಳಸಿ ಬರೆದು ನಮಗೆ ಇ-ಮೇಲ್ ಮೂಲಕ ಕಳುಹಿಸಬಹುದು.
5. ಲೇಖನದ ಜೊತೆಗೆ ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್ ನೀಡುವುದು ಕಡ್ಡಾಯ. ಹಾಗೂ ಲೇಖನದ ಜೊತೆಗೆ ಪ್ರಕಟಿಸಲು ಒಂದು ಭಾವಚಿತ್ರವನ್ನೂ ಲಗತ್ತಿಸಿ.
6. ಆಯ್ದ ಲೇಖನಗಳನ್ನು ವೆಬ್‌ದುನಿಯಾ ವಿಶೇಷ ಪುಟದಲ್ಲಿ ಪ್ರಕಟಿಸುತ್ತದೆ. ಆಯ್ಕೆಯಾದ ಲೇಖನಗಳನ್ನು ಪರಿಷ್ಕರಿಸಿ ಪ್ರಕಟಿಸುವ ಹಕ್ಕುಗಳು ಸಂಪಾದಕರದು.
7. ಬ್ಲಾಗ್ ಸಮುದಾಯದಲ್ಲಿಯೂ ಕೂಡ ಒಳ್ಳೊಳ್ಳೆ ಪ್ರತಿಭಾನ್ವಿತರ ದೊಡ್ಡ ಸಮೂಹವೇ ಇದೆ. ಇಂತಹ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ.
8. ಕಾಲ ಬದಲಾಗಿದೆ. ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ ಎಂದು ಕೇಳೋ ಕಾಲ ಹೋಗಿದೆ. ಇ-ಮೇಲು, ಚಾಟಿಂಗ್, ಓರ್ಕುಟ್ ಇತ್ಯಾದಿಗಳಲ್ಲೇ ಈಗ ಪ್ರೇಮ ಮೊಳಕೆಯೊಡೆಯುತ್ತದೆ. ಹೀಗಾಗಿ, ಲೇಖನದಲ್ಲಿ ಈ ಆಧುನಿಕ ಲವ್ ಬಗ್ಗೆಯೂ ಗಮನ ಹರಿಸಬಹುದು ಎಂಬುದು ನಮ್ಮ ಸಲಹೆ.
9. ನಿಮ್ಮ ಲೇಖನಗಳು ಇ-ಮೇಲ್ ಮೂಲಕ ನಮ್ಮ ಕೈಸೇರಬೇಕಾದ ಅಂತಿಮ ದಿನಾಂಕ: ಫೆಬ್ರವರಿ 8, ಸೋಮವಾರ, 2010.
10. ನಿಮ್ಮ ಲೇಖನಗಳನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ: avinash.b at webdunia.net

ಕ್ಷಣ ಕ್ಷಣದ ಕುತೂಹಲಕರ ಸುದ್ದಿಗಳನ್ನು, ತಾಜಾ ಸುದ್ದಿಗಳನ್ನು ನಿಮ್ಮ ಕೈಗಿಡುತ್ತಿರುವ ಮತ್ತು ಓದುಗರ ಸಲಹೆಗಳಿಗೆ ಸದಾ ಸ್ಪಂದಿಸುತ್ತಿರುವ ಕನ್ನಡ ವೆಬ್‌ದುನಿಯಾ ಬಳಗವು ಓದುಗರೊಂದಿಗೆ ಇಂಥದ್ದೊಂದು ಬಾಂಧವ್ಯ ವೃದ್ಧಿ ಕ್ರಮಕ್ಕೆ ಮುಂದಾಗಿರುವುದು ನಿಮ್ಮ ಸಲಹೆಯ ಮೇರೆಗೇ ಎಂಬುದು ಸಲಹೆ ನೀಡಿದ ಆತ್ಮೀಯ ಓದುಗರಿಗೆ ಈಗಾಗಲೇ ಅರಿವಿಗೆ ಬಂದಿರಬಹುದು.

ಹಾಗಿದ್ರೆ ತಡವೇಕೆ? ಕೀಬೋರ್ಡ್ ಕುಟ್ಟಲು ಆರಂಭಿಸಿ. ಶುಭವಾಗಲಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Share
Published by
Avinash B

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago