ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-45, ಜುಲೈ 29, 2013
ಇಂಟರ್ನೆಟ್ ಸೌಲಭ್ಯ ಇರುವ ಮೊಬೈಲ್ ಫೋನ್‌ಗಳು ಸ್ಮಾರ್ಟ್‌ಫೋನ್ ಎಂಬ ಕೆಟಗರಿಯಲ್ಲಿ ಬರುತ್ತವೆ. ಇವುಗಳಲ್ಲಿ ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‌ಬೆರಿ, ಆಪಲ್ ಐಒಎಸ್ ಮುಂತಾದ ಹೆಸರುಗಳನ್ನು ಕೇಳಿರಬಹುದು. ನಗರ ವಾಸಿಗಳಿಗೆ ಅದರಲ್ಲೂ ಟೆಕ್ನಾಲಜಿ ಬಗ್ಗೆ ಕುತೂಹಲ ಹೊಂದಿದ್ದವರಿಗೆ ಇವುಗಳ ಬಗ್ಗೆ ತಿಳಿದಿರಬಹುದು. ಆದರೆ ಸಾಮಾನ್ಯ ಜನರಿಗೆ ಈ ಹೆಸರುಗಳು ಗೊಂದಲ ಹುಟ್ಟಿಸಬಹುದು. ಆಂಡ್ರಾಯ್ಡ್ ಫೋನ್‌ಗಳು ಒಳ್ಳೆಯವೇ? ವಿಂಡೋಸ್ ಫೋನ್ ಉತ್ತಮವೇ, ಅಥವಾ ಐಫೋನ್ ಚೆನ್ನಾಗಿರುತ್ತದೆಯೇ, ಬ್ಲ್ಯಾಕ್‌ಬೆರಿ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಅವರನ್ನು ಕಾಡುವುದು ಸಹಜ. ಈ ಕುರಿತು ತಿಳಿಯದವರಿಗಾಗಿ ಒಂದಿಷ್ಟು ಸ್ಥೂಲ ಮಾಹಿತಿ.
ನೋಕಿಯಾ, ಸ್ಯಾಮ್ಸಂಗ್, ಮೈಕ್ರೋಮ್ಯಾಕ್ಸ್, ಕಾರ್ಬನ್, ಆಪಲ್, ಎಲ್ಜಿ, ವೀಡಿಯೋಕಾನ್ ಮುಂತಾಗಿ ಹೆಸರು ಕೇಳಿರುತ್ತೀರಿ. ಇವೆಲ್ಲವೂ ಮೊಬೈಲ್ ತಯಾರಿಯಾ ಕಂಪನಿಗಳಾದರೆ, ಸದ್ಯಕ್ಕೆ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ಐಒಎಸ್ ಹಾಗೂ ವಿಂಡೋಸ್ ಎಂಬವು ಮೊಬೈಲ್ ಫೋನುಗಳನ್ನು ಕಾರ್ಯಾಚರಿಸುವಂತೆ ಮಾಡಬಲ್ಲ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ)ಗಳು. ಇಲ್ಲಿ ಆಂಡ್ರಾಯ್ಡ್ ತಂತ್ರಾಂಶವನ್ನು ಸ್ಯಾಮ್ಸಂಗ್, ಗೂಗಲ್, ಎಲ್ಜಿ, ಎಚ್‌ಟಿಸಿ ಮುಂತಾದ ಮೊಬೈಲ್ ಫೋನ್ ಕಂಪನಿಗಳು ಬಳಸಿಕೊಳ್ಳುತ್ತವೆ. ಅದೇ ರೀತಿ ವಿಂಡೋಸ್ ಫೋನನ್ನೂ ಸ್ಯಾಮ್ಸಂಗ್, ಎಚ್‌ಟಿಸಿ ಜೊತೆಗೆ ನೋಕಿಯಾ ಕಂಪನಿಗಳೂ ಬಳಸಿಕೊಂಡು, ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತವೆ. (ಬೇಸಿಕ್ ಫೋನ್‌ಗಳಲ್ಲಿ ಜಾವಾ, ಸಿಂಬಿಯಾನ್ ಮುಂತಾದ ಕಾರ್ಯಾಚರಣಾ ವ್ಯವಸ್ಥೆಯಿರುತ್ತವೆ.)
ಮೊಬೈಲ್ ಕಂಪನಿ ಯಾವುದು ಒಳ್ಳೆಯದು ಎಂಬುದರ ಆಯ್ಕೆ ಅವರವರಿಗೆ ಬಿಟ್ಟದ್ದು. ಆದರೆ, ಯಾವ ಕಾರ್ಯಾಚರಣಾ ವ್ಯವಸ್ಥೆ ಇರಬೇಕು ಅಂತ ನಿಮ್ಮ ಆಯ್ಕೆಗೆ ಅನುಕೂಲವಾಗಲು ಇಲ್ಲಿ ಕೊಂಚ ಮಾಹಿತಿ ಇದೆ.
1. ಆಂಡ್ರಾಯ್ಡ್: ಇದು ಈಗ ಗೂಗಲ್ ಒಡೆತನದಲ್ಲಿರುವ, ಲಿನಕ್ಸ್ ಮುಕ್ತ ತಂತ್ರಾಂಶದ ಆಧಾರದಲ್ಲಿ ರೂಪಿತವಾದ ಕಾರ್ಯಾಚರಣಾ ವ್ಯವಸ್ಥೆಯಾಗಿದ್ದು, ಉಚಿತವಾಗಿ ದೊರೆಯುವುದರಿಂದ ಹೆಚ್ಚಿನ ಮೊಬೈಲ್ ಕಂಪನಿಗಳು ಇದನ್ನು ಬಳಸಿಕೊಂಡು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಮೊಬೈಲ್‌ನಲ್ಲಿ ವೈವಿಧ್ಯಮಯ ಕಾರ್ಯಗಳನ್ನು ಕೈಗೊಳ್ಳಲು (ಚಾಟಿಂಗ್, ಫೇಸ್‌ಬುಕ್, ಸಂಗೀತ, ಟಿಪ್ಪಣಿ ಇತ್ಯಾದಿ) 8.5 ಲಕ್ಷಕ್ಕೂ ಹೆಚ್ಚು ಕಿರು ತಂತ್ರಾಂಶಗಳು (ಅಪ್ಲಿಕೇಶನ್ಸ್ ಅಥವಾ ಆಪ್ಸ್ ಅಂತಲೂ ಕರೀತಾರೆ) ಗೂಗಲ್ ಪ್ಲೇ ಎಂಬ ಆಪ್ ಸಂಗ್ರಹಾಗಾರದಲ್ಲಿ ದೊರೆಯುವುದರಿಂದ ಹೆಚ್ಚು ಜನಪ್ರಿಯವಾಗಿದೆ. ಓಎಸ್ ಉಚಿತವಾಗಿರುವುದರಿಂದ ನಾಲ್ಕೈದು ಸಾವಿರ ರೂ.ನಿಂದ ನಲುವತ್ತೈದು ಸಾವಿರ ರೂ.ವರೆಗೂ ಫೋನುಗಳಿವೆ. ಭಾರತದಲ್ಲಿ ಹೆಚ್ಚು ಜನಪ್ರಿಯ.
2. ವಿಂಡೋಸ್ ಫೋನ್: ಇದು ಕಂಪ್ಯೂಟರ್ ದಿಗ್ಗಜ ಮೈಕ್ರೋಸಾಫ್ಟ್ ಕಂಪನಿಯ ಮೊಬೈಲ್ ಕಾರ್ಯಾಚರಣಾ ವ್ಯವಸ್ಥೆ. ವಿಂಡೋಸ್ 8 ಹೊಚ್ಚ ಹೊಸ ಆವೃತ್ತಿ. ವಿಂಡೋಸ್ ಫೋನ್ ಸ್ಟೋರ್‌ನಲ್ಲಿ ಸುಮಾರು ಒಂದೂ ಕಾಲು ಲಕ್ಷ ಆಪ್‌ಗಳಿವೆ. ವಿಂಡೋಸ್ 8 ಕಂಪ್ಯೂಟರ್ ಬಳಸಿದವರಿಗೆ ಇದರ ಬಳಕೆ ತುಂಬಾ ಸುಲಭ. 10 ಸಾವಿರ ರೂ.ನಿಂದ ವಿಂಡೋಸ್ 8 ಸ್ಮಾರ್ಟ್‌ಫೋನ್‌ಗಳು ಆರಂಭವಾಗುತ್ತವೆ.
3. ಆಪಲ್‌ನ ಐಒಎಸ್: ಆಪಲ್ ಕಂಪನಿಯ ಫೋನುಗಳಿಗೆ ಮಾತ್ರ ಲಭ್ಯವಿರುವ ಐಒಎಸ್ ಇರುವ ಐಫೋನ್/ಐಪ್ಯಾಡ್‌ಗಳ ಬೆಲೆ ಉಳಿದವಕ್ಕೆ ಹೋಲಿಸಿದರೆ ಹೆಚ್ಚು. ಆಪ್ ಸ್ಟೋರ್‌ನಲ್ಲಿ ಸುಮಾರು 6.5 ಲಕ್ಷ ಅಪ್ಲಿಕೇಶನ್‌ಗಳಿವೆ. ಸ್ಮಾರ್ಟ್ ಫೋನ್ ಬೆಲೆ ಇಪ್ಪತ್ತೈದು ಸಾವಿರ ರೂ.ಗಿಂತ ಹೆಚ್ಚು.
4. ಬ್ಲ್ಯಾಕ್‌ಬೆರಿ ಒಎಸ್: ಇದು ಬ್ಲ್ಯಾಕ್‌ಬೆರಿ ಫೋನುಗಳಲ್ಲಿ ಮಾತ್ರ ಲಭ್ಯ. ಇದರ ತಯಾರಿಕಾ ಸಂಸ್ಥೆ ರಿಸರ್ಚ್ ಇನ್ ಮೋಷನ್ (ರಿಮ್). ಆಫೀಸ್ ಕೆಲಸಕ್ಕಾಗಿ ಹೆಚ್ಚು ಜನಪ್ರಿಯವಾಗಿದ್ದು, ಬೆಲೆ 9 ಸಾವಿರಕ್ಕಿಂತ ಹೆಚ್ಚು. ಇದರ ಸ್ಟೋರ್‌ನಲ್ಲಿ ಒಂದೂ ಕಾಲು ಲಕ್ಷದಷ್ಟು ಆಪ್‌ಗಳಿವೆ.
ಇವುಗಳಲ್ಲಿ ಶ್ರೀಸಾಮಾನ್ಯರ ಮೆಚ್ಚುಗೆ ಗಳಿಸಿದ್ದು ಆಂಡ್ರಾಯ್ಡ್ ಫೋನ್‌ಗಳು. ಆಪಲ್ ಮತ್ತು ಬ್ಲ್ಯಾಕ್‌ಬೆರಿಗಳು ಪ್ರತಿಷ್ಠೆಯ ಸಂಕೇತವಾಗಿ ಬೆಳೆದಿವೆ. ವಿಂಡೋಸ್ 8 ಇತ್ತೀಚೆಗಷ್ಟೇ ಜನಸಾಮಾನ್ಯರ ಕೈಗೆಟುಕುವ ದರದಲ್ಲಿಯೂ ದೊರೆಯತೊಡಗಿದೆ. ಆಯ್ಕೆ ನಿಮ್ಮದು.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು