ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ-93, ಸೆಪ್ಟೆಂಬರ್ 15, 2014
ಆದರೆ, ಕಂಪ್ಯೂಟರ್ ಸರ್ವಿಸ್ ಸೆಂಟರಿಗೆ ಹೋಗದೆ ಕೆಲವೊಂದನ್ನು ನಾವೇ ಹೆಚ್ಚು ಶ್ರಮವಿಲ್ಲದೆ ಪ್ರಯತ್ನಿಸಬಹುದು ಎಂಬುದು ಗೊತ್ತೇ? ಈ ಸರಳ, ಉಪಯುಕ್ತ ಸಲಹೆಗಳು ನಿಮಗೂ ಇಷ್ಟವಾಗಬಹುದು. ಮಾಡಿ ನೋಡಿ.
ಹಾರ್ಡ್ ಡಿಸ್ಕ್ ಡೀಫ್ರ್ಯಾಗ್ಮೆಂಟ್: ನಿಮ್ಮ ಕಂಪ್ಯೂಟರ್‌ನಲ್ಲಿ ವಿಂಡೋಸ್ (ಸ್ಟಾರ್ಟ್) ಬಟನ್ ಒತ್ತಿದ ಬಳಿಕ ಪ್ರೋಗ್ರಾಮ್ಸ್‌ನಲ್ಲಿ, ಆ್ಯಕ್ಸಸರೀಸ್ ಎಂಬಲ್ಲಿ, ಸಿಸ್ಟಂ ಟೂಲ್ಸ್ ಎಂಬ ಫೋಲ್ಡರ್ ಇರುತ್ತದೆ. ಅದರಲ್ಲಿರುವ ಡಿಸ್ಕ್ ಡೀಫ್ರ್ಯಾಗ್ಮೆಂಟರ್ ಎಂಬುದನ್ನು ಆಯ್ಕೆ ಮಾಡಿದರೆ, ಯಾವ ಡ್ರೈವ್ (ಸಿ, ಡಿ, ಇ, ಎಫ್ ಇತ್ಯಾದಿ) ಅನ್ನು ಆಯ್ಕೆ ಮಾಡಿಕೊಂಡು, ಚದುರಿಹೋದ ಸಿಸ್ಟಂ ಫೈಲ್‌ಗಳನ್ನು ವ್ಯವಸ್ಥಿತವಾಗಿರಿಸಿದರೆ, ವೇಗ ವರ್ಧಿಸುತ್ತದೆ.
ಸ್ಟಾರ್ಟ್-ಅಪ್‌ನಲ್ಲಿ ಕಡಿಮೆ ಪ್ರೋಗ್ರಾಂ ಇರಲಿ: ಕಂಪ್ಯೂಟರ್ ಪ್ರಾರಂಭಗೊಳ್ಳುವಾಗ ಆರಂಭವಾಗುವ ಪ್ರೋಗ್ರಾಂಗಳು ನಿಮ್ಮ ಕಂಪ್ಯೂಟರ್ ನಿಧಾನ ಬೂಟ್ ಆಗಲು ಕಾರಣವಾಗಬಹುದು. Start > Start Up ಫೋಲ್ಡರ್‌ನಲ್ಲಿರಬಹುದಾದ ಈ ಪ್ರೋಗ್ರಾಂಗಳನ್ನು ಕನಿಷ್ಠ ಸಂಖ್ಯೆಯಲ್ಲಿಟ್ಟುಕೊಳ್ಳಿ. ಅಗತ್ಯವಿಲ್ಲದಿರುವುದನ್ನು ಡಿಸೇಬಲ್ ಮಾಡಿಬಿಡಿ. ಬೇಕಾಗಿರುವುದನ್ನು ಬೇಕಾದಾಗ ಮಾತ್ರ ತೆರೆಯಬಹುದು,
ತಂತ್ರಾಂಶ ಅಪ್‌ಡೇಟ್ ಮಾಡಿ: ಕಂಪನಿಯೇ ಆಗಾಗ್ಗೆ ರಿಲೀಸ್ ಮಾಡುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳುತ್ತಾ ಇರುವುದರಿಂದ ಪಿಸಿಯನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು ಮತ್ತು ವೇಗವಾಗಿಯೂ ಕಾರ್ಯನಿರ್ವಹಿಸುವಂತೆ ಮಾಡಬಹುದು. ಇದರಿಂದ ಪಿಸಿಯ ಕಾರ್ಯಕ್ಷಮತೆಯೂ ಹೆಚ್ಚುತ್ತದೆ.
ಅನಗತ್ಯ ಟೂಲ್‌ಬಾರ್‌ಗಳು ಬೇಡ: ಯಾವುದೇ ಹೊಸ ತಂತ್ರಾಂಶ ಅಳವಡಿಸಿಕೊಳ್ಳುವಾಗ ವಿಭಿನ್ನ ಟೂಲ್‌ಬಾರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಪಾಪ್-ಅಪ್ ಸೂಚನೆಗಳು ಬರುತ್ತವೆ. ಏನೆಂದು ನೋಡದೆ ಎಲ್ಲದಕ್ಕೂ ‘ಓಕೆ’ ಎಂದು ಕ್ಲಿಕ್ ಮಾಡುತ್ತಾ ಹೋದರೆ, ಅನಗತ್ಯ ತಂತ್ರಾಂಶಗಳು ನಿಮಗೆ ತಿಳಿಯದೆಯೇ ಇನ್‌ಸ್ಟಾಲ್ ಆಗಿ, ಕಂಪ್ಯೂಟರನ್ನು ಸ್ಲೋ ಮಾಡಬಹುದು. ಹಾಗಾಗಿ ಅವನ್ನು ಗಮನವಿಟ್ಟು ಓದಿಕೊಳ್ಳಬೇಕು.
ಡೆಸ್ಕ್‌ಟಾಪ್ ಕ್ಲೀನ್ ಆಗಿರಲಿ: ಹೆಚ್ಚಿನವರು ಎಲ್ಲವನ್ನೂ ಡೆಸ್ಕ್‌ಟಾಪ್‌ನಲ್ಲೇ ಇರಿಸಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಇದನ್ನು ತಪ್ಪಿಸಬೇಕು ಹಾಗೂ ಸಿ ಡ್ರೈವ್‌ನಲ್ಲಿರುವ “ಮೈ ಡಾಕ್ಯುಮೆಂಟ್ಸ್” ವಿಭಾಗದಲ್ಲಿರುವ ಎಲ್ಲ ಐಟಂಗಳನ್ನೂ (ಉದಾ: ಚಿತ್ರಗಳು, ಆಡಿಯೋ, ವೀಡಿಯೋ ಫೈಲ್‌ಗಳು ಇತ್ಯಾಗಿ) ಬೇರೆ ಡ್ರೈವ್‌ಗೆ ವರ್ಗಾಯಿಸಬೇಕು. ಸಿ ಡ್ರೈವ್ ಸಾಧ್ಯಲಿದ್ದಷ್ಟೂ ಖಾಲಿ ಇರಿಸಿಕೊಂಡರೆ ಸಿಸ್ಟಂ ಸ್ಲೋ ಆಗುವುದನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.
ಕುಕೀಗಳು ಮತ್ತು ಟೆಂಪರರಿ ಫೈಲ್‌ಗಳನ್ನು ನಿವಾರಿಸಿ: ಬ್ರೌಸರ್‌ನಲ್ಲಿ ನಿಯಮಿತವಾಗಿ ಕುಕೀಗಳು ಹಾಗೂ ಟೆಂಪರರಿ ಫೈಲ್‌ಗಳನ್ನು (cache) ಡಿಲೀಟ್ ಮಾಡುತ್ತಿರಬೇಕು. (ಕ್ರೋಮ್ ಮತ್ತು ಫೈರ್‌ಫಾಕ್ಸ್‌ನಲ್ಲಿ ಶಿಫ್ಟ್+ಕಂಟ್ರೋಲ್+ಡಿಲೀಟ್ ಬಟನ್ ಒತ್ತಿ). ಇಲ್ಲವಾದಲ್ಲಿ, ಈ ಕೆಲಸ ಸುಲಭವಾಗಿಸುವ CCleaner ಎಂಬ ಉಚಿತ ತಂತ್ರಾಂಶ ಬಳಸಿ.
ಹಾರ್ಡ್ ಡಿಸ್ಕ್ ಕ್ಲೀನ್ ಮಾಡಿ: ಹಾರ್ಡ್ ಡಿಸ್ಕ್‌ನಲ್ಲಿ ಎಲ್ಲ ರೀತಿಯ ಜಂಕ್ ಫೈಲ್‌ಗಳೂ ಇರುತ್ತವೆ. ಕಣ್ಣಿಗೆ ಕಾಣಿಸುವ ಅನಗತ್ಯ ಫೈಲ್‌ಗಳನ್ನು ನೀವೇ ಡಿಲೀಟ್ ಮಾಡಿ. ಇಲ್ಲಿ ಸ್ಥಳಾವಕಾಶ ಹೆಚ್ಚು ಮಾಡಿಸುವ ನಿಟ್ಟಿನಲ್ಲಿ, ಪ್ರೋಗ್ರಾಮ್ಸ್ > ಆ್ಯಕ್ಸಸರೀಸ್ > ಸಿಸ್ಟಂ ಟೂಲ್ಸ್‌ನಲ್ಲಿರುವ ಡಿಸ್ಕ್ ಕ್ಲೀನಪ್ ಎಂಬ ತಂತ್ರಾಂಶವನ್ನು ತಿಂಗಳು-ಎರಡು ತಿಂಗಳಿಗೊಮ್ಮೆ ರನ್ ಮಾಡುತ್ತಾ ಇರಿ. ನಿಮಗೆ ತಿಳಿಯದ ಫೈಲುಗಳನ್ನು ಅದು ವ್ಯವಸ್ಥಿತವಾಗಿರಿಸುತ್ತದೆ.
ಅನಗತ್ಯ ಪ್ರೋಗ್ರಾಂಗಳನ್ನು ತೆಗೆದುಬಿಡಿ: ನಿಮ್ಮ ಪಿಸಿಯಲ್ಲಿರುವ ಎಲ್ಲ ಪ್ರೋಗ್ರಾಂಗಳೂ ಉಪಯೋಗಕ್ಕೆ ಬರಲಾರವು. ಬೇಡದೇ ಇರುವುದನ್ನು ನಿರ್ದಾಕ್ಷಿಣ್ಯವಾಗಿ ಅನ್‌ಇನ್‌ಸ್ಟಾಲ್ ಮಾಡಿಬಿಡಿ. ಇನ್‌ಸ್ಟಾಲ್ ಮಾಡಿಕೊಳ್ಳುವಾಗಲೇ, ಅದರ ಅಗತ್ಯ ಇದೆಯೇ ಎಂದು ಎರಡೆರಡು ಬಾರಿ ಯೋಚಿಸಿ. ವಿಶ್ವಾಸಾರ್ಹವಲ್ಲದ ಕಡೆಯಿಂದ ತಂತ್ರಾಂಶ ಸ್ಥಾಪಿಸಿಕೊಂಡರೆ, ಅದರಲ್ಲಿ ವೈರಸ್/ಮಾಲ್‌ವೇರ್ ಇರುವ ಸಾಧ್ಯತೆಗಳಿರುವುದರಿಂದ, ಎಚ್ಚರ ವಹಿಸಿ.
ಶಂಕಾಸ್ಪದ ಲಿಂಕ್/ವೆಬ್ ತಾಣಗಳ ಬಗ್ಗೆ ಎಚ್ಚರ: ವೈರಸ್ ಸಹಿತ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರನ್ನು ನಿಧಾನವಾಗಿಸುತ್ತವಷ್ಟೇ ಅಲ್ಲದೆ, ಹಾನಿಯನ್ನೂ ಉಂಟು ಮಾಡುತ್ತವೆ. ಹೀಗಾಗಿ ಶಂಕಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಅಂತಹ ವೆಬ್ ತಾಣಗಳಿಗೆ ಹೋದರೆ ಯಾವುದೇ ಲಿಂಕ್‌ಗಳನ್ನೂ ಕ್ಲಿಕ್ ಮಾಡಬಾರದು. ವಾರಕ್ಕೊಮ್ಮೆ ಕಂಪ್ಯೂಟರನ್ನು ಒಳ್ಳೆಯ ಆ್ಯಂಟಿವೈರಸ್ ಮೂಲಕ ಸ್ಕ್ಯಾನ್ ಮಾಡಿಸಿಕೊಳ್ಳಬೇಕು. ಇದರಿಂದಲೂ ಕಂಪ್ಯೂಟರ್ ನಿಧಾನವಾಗುವುದನ್ನು ತಡೆಯಬಹುದು.
ಆಪರೇಟಿಂಗ್ ಸಿಸ್ಟಂ ಪುನಃಸ್ಥಾಪನೆ: ಏನೇ ಮಾಡಿದರೂ ಕಂಪ್ಯೂಟರ್ ವೇಗವಾಗಿ ಕೆಲಸ ಮಾಡುತ್ತಿಲ್ಲ ಎಂದಾದಲ್ಲಿ, ಒಳ್ಳೆಯ ನುರಿತವರ ಸಲಹೆ ಪಡೆದು ಆಪರೇಟಿಂಗ್ ಸಿಸ್ಟಂ ಅನ್ನು ರಿಇನ್‌ಸ್ಟಾಲ್ ಮಾಡಿಕೊಳ್ಳಬೇಕು (ಫಾರ್ಮ್ಯಾಟ್ ಮಾಡುವುದು). ಇದು ಸಂಕೀರ್ಣವಾಗಿದ್ದು, ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ. ಕಂಪ್ಯೂಟರ್‌ನ ತಂತ್ರಾಂಶವು ಹೊಚ್ಚ ಹೊಸದರಂತೆ ಆಗುತ್ತದೆ. ಪರಿಣಿತರ ಸಲಹೆ ಪಡೆಯುವುದು ಕಡ್ಡಾಯ.
ಟೆಕ್ ಟಾನಿಕ್
ನಿಮ್ಮ ಪಾಸ್‌ವರ್ಡ್ ಕದ್ದಿದ್ದಾರೆಯೇ?
ಕಳೆದ ವಾರ ಸುದ್ದಿ ಮಾಡಿದ್ದು, ವಿಶ್ವಾದ್ಯಂತ 50 ಲಕ್ಷದಷ್ಟು ಜಿಮೇಲ್ ಬಳಕೆದಾರರ ಪಾಸ್‌ವರ್ಡ್ ಮಾಹಿತಿಯು ಸೋರಿ ಹೋಗಿದೆ ಅಂತ. ಜನರೆಲ್ಲಾ ಬೆಚ್ಚಿ ಬಿದ್ದರು. ಕೆಲವರೆಲ್ಲ ಸುದ್ದಿ ತಿಳಿದಾಕ್ಷಣ ತಮ್ಮ ಇಮೇಲ್ ಪಾಸ್‌ವರ್ಡ್ ಬದಲಾಯಿಸಿಕೊಂಡರು. ಭದ್ರತೆಗಾಗಿ ನಮ್ಮ ಪಾಸ್‌ವರ್ಡ್ ಆಗಾಗ್ಗೆ ಬದಲಾಯಿಸಿಕೊಳ್ಳುತ್ತಿರುವುದು ಸೂಕ್ತವೇ ಆಗಿದ್ದರೂ, ಇಲ್ಲೊಂದು ವೆಬ್ ತಾಣವಿದೆ. https://isleaked.com/en ಎಂಬಲ್ಲಿ ನಿಮ್ಮ ಇಮೇಲ್ ಐಡಿ ದಾಖಲಿಸಿ, ಪಾಸ್‌ವರ್ಡ್ ಸೋರಿ ಹೋಗಿದೆಯೇ ಎಂದು ತಿಳಿದುಕೊಳ್ಳಬಹುದು. ಇದು ಉಚಿತ ಸೇವೆ. ಸ್ಪ್ಯಾಮ್ ಮೇಲ್ ಕಳುಹಿಸುತ್ತಾರೆ ಎಂಬ ಆತಂಕವಿದ್ದರೆ, ನಿಮ್ಮ ಇಮೇಲ್ ಐಡಿಯಲ್ಲಿರುವ 2-3 ಅಕ್ಷರಗಳ ಬದಲು ಅಷ್ಟೇ ಸಂಖ್ಯೆಯ * ಚಿಹ್ನೆ ಹಾಕಿಯೂ ನೋಡಬಹುದು. ಉದಾಹರಣೆಗೆ, abcdefg@gmail.com ಇದ್ದರೆ, ab***fg@gmail.com ಅಂತ.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…