ಇದುವರೆಗೆ 280 ಪದಮಿತಿಯ ಪಠ್ಯ ಹಾಗೂ ವಿಡಿಯೊ, ಜಿಫ್ ಹಾಗೂ ಫೋಟೋ ಫೈಲ್‌ಗಳನ್ನು ಹಂಚಿಕೊಳ್ಳಲು ಅನುವು ಮಾಡುತ್ತಿದ್ದ ಕಿರು ಸಾಮಾಜಿಕ ಜಾಲತಾಣ ಟ್ವಿಟರ್, ಹೊಸ ಸೌಲಭ್ಯವನ್ನು ಪರಿಚಯಿಸುತ್ತಿದೆ.
ನಮ್ಮದೇ ಧ್ವನಿಯನ್ನು ಆಡಿಯೋ ಮೂಲಕ ಹಂಚಿಕೊಳ್ಳಲು ಅನುಕೂಲ ಮಾಡುವ ಈ ವೈಶಿಷ್ಟ್ಯವನ್ನು ಬುಧವಾರದಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ಟ್ವಿಟರ್ ತಿಳಿಸಿದೆ. ಇದು ಬಹುತೇಕರಿಗೆ ಪರಿಚಯವಿರುವ ವಿಧಾನವೇ ಆಗಿದ್ದು, ಹೊಸದಾಗಿ ಏನೂ ಕಲಿಯಬೇಕಿಲ್ಲ. ವಾಟ್ಸ್ಆ್ಯಪ್ ಸಂದೇಶಗಳಲ್ಲಿ ಧ್ವನಿ ರೆಕಾರ್ಡ್ ಮಾಡಿ ಕಳುಹಿಸುವ ಆಯ್ಕೆಯ ಮಾದರಿಯ ವ್ಯವಸ್ಥೆಯೇ ಟ್ವಿಟರ್‌ಗೂ ಬಂದಿದೆಯಷ್ಟೇ.
ಇದಕ್ಕೆ ನಾವು ಮಾಡಬೇಕಾದುದಿಷ್ಟೇ. ಟ್ವಿಟರ್ ಕಂಪೋಸರ್ ತೆರೆದು, ತರಂಗಾಂತರಗಳನ್ನು ಹೋಲುವ ಐಕಾನ್ ಕ್ಲಿಕ್ ಮಾಡಿದಾಗ, ಕೆಳಗೆ ರೆಕಾರ್ಡ್ ಬಟನ್ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿ, ನಾವು ಹಂಚಿಕೊಳ್ಳಬೇಕಾದ ವಿಷಯವನ್ನು ಮಾತಿನ ಮೂಲಕ ಹೇಳಬಹುದು.
ಆರಂಭದಲ್ಲಿ ಟ್ವಿಟರ್ ಪಠ್ಯಕ್ಕೆ 140 ಪದ ಮಿತಿ ಇದ್ದಂತೆ, ಇಲ್ಲೂ ಕೂಡ 140 ಸೆಕೆಂಡು ಮಿತಿ ಇದೆ. ಆದರೂ, ಹೆಚ್ಚು ಮಾತುಗಳಿದ್ದರೆ, ಅದು ತಾನಾಗಿಯೇ ಥ್ರೆಡ್ ರೂಪದಲ್ಲಿ ಸೇರಿಕೊಳ್ಳುತ್ತದೆ. ರೆಕಾರ್ಡಿಂಗ್ ಮುಗಿಸಿದ ಬಳಿಕ ‘Done’ ಬಟನ್ ಒತ್ತಿದರಾಯಿತು.
ಸದ್ಯಕ್ಕೆ ಐಒಎಸ್ ಕಾರ್ಯಾಚರಣಾ ವ್ಯವಸ್ಥೆಯಿರುವ ಸಾಧನ ಹೊಂದಿರುವ ಸೀಮಿತ ಬಳಕೆದಾರರಿಗೆ ಈ ಸೌಲಭ್ಯವು ಪರೀಕ್ಷಾರ್ಥವಾಗಿ ಲಭ್ಯವಾಗಿದ್ದು, ದೋಷಗಳಿದ್ದರೆ ಸರಿಪಡಿಸಿದ ನಂತರ ಉಳಿದ ಬಳಕೆದಾರರಿಗೂ ದೊರೆಯಲಿದೆ. ಐಒಎಸ್ (ಆ್ಯಪಲ್) ಸಾಧನಗಳಲ್ಲಿ ಹೊಸ ವಿಂಡೋದಲ್ಲಿ ಇದು ಪ್ಲೇ ಆಗುತ್ತದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು