ಒಂದೊಂದು ಸಲ ಈ ಬಿರುಬಿಸಿಲಿನ ನಡುವೆ ಚೆನ್ನೈನ ಟ್ರಾಫಿಕ್ ಮಧ್ಯೆ 10 ನಿಮಿಷದ ಹಾದಿಯನ್ನು 50 ನಿಮಿಷಗಳ ಕಾಲ ಸವೆಸಬೇಕಾದ ಅನಿವಾರ್ಯತೆಗೆ ಸಿಲುಕುವಾಗ ಇದ್ಯಾವ ಜೀವನ ಎಂದು ಆಗಾಗ್ಗೆ ಅನಿಸುತ್ತದೆ.
ಅಷ್ಟೊಂದು ಜನ, ಅಷ್ಟೊಂದು ವಾಹನಗಳು…. ಇರುವೆಗಳ ಥರಾ ಹೋಗ್ಬೇಕು… ಸ್ಲೋ ಸೈಕಲ್ ರೇಸ್ ಇರುತ್ತಲ್ಲಾ…. ಇಲ್ಲಿ ವಾಹನ ಓಡಿಸಿದವರಿಗೆ ಸ್ಲೋ ವಾಹನ ರೇಸ್‌ನಲ್ಲಿ ಬಹುಮಾನ ಸಿಗೋದು ಗ್ಯಾರಂಟಿ.
ಆದ್ರೆ ಇದು ಒಂದು ಕ್ಷಣ ಮಾತ್ರ. ಮತ್ತು ಆ ದಿನ ಏನಾದರೂ ತಡವಾಗಿದೆ ಅಂತ ಅನ್ನಿಸಿದರೆ ಮಾತ್ರ. ಬೇಗನೇ ಹೊರಟರೆ ಅಥವಾ ಮನಸ್ಸಿನಲ್ಲಿ ಯಾವುದೇ ಉದ್ವೇಗ, ಆತಂಕಗಳಿಲ್ಲದೇ ಹೋದರೆ ಟ್ರಾಫಿಕ್ ಇಷ್ಟು ಬೇಗ ಸುಗಮವಾಗುತ್ತದಲ್ಲಾ ಅನ್ನೋ ಚಿಂತೆಯ ರೇಖೆಯೂ ಮನದಲ್ಲಿ ಮೂಡುತ್ತದೆ. ಇದಕ್ಕೆ ಕಾರಣವಿಲ್ಲದಿಲ್ಲ.
ಈ ಟ್ರಾಫಿಕ್‌ನಲ್ಲಿ ದೊಡ್ಡ, ಸಣ್ಣ ವಾಹನಗಳ ನಡುವೆ ಬೈಕನ್ನು ತೂರಿಸಿಕೊಂಡು ಎಲ್ಲರಿಗಿಂತ ಮುಂದೆ ಹೋಗುವುದೇ ಒಂದು ಮಜಾ. ಎರಡು ವಾಹನಗಳ ಮಧ್ಯೆ ನನ್ನ ಬೈಕ್‌ನ ಅಗಲದ ಅರ್ಧ/ಮುಕ್ಕಾಲು ಭಾಗದಷ್ಟು ಕಿರು ಜಾಗ ಸಿಕ್ಕರೆ ಸಾಕು, ಅದರ ಮೂಲಕವೇ ನುಸುಳಿ ಮುಂದುವರಿದಾಗ ದೊರೆಯುವ ತೃಪ್ತಿಯೇ ಬೇರೆ.
ಹಿಂಬದಿಯಿಂದ, ಮುಂದಿನಿಂದ, ಎಡ-ಬಲಗಳಿಂದ ನಮ್ಮ ಬೈಕಿಗೆ ಕಿಸ್ ಕೊಡುತ್ತಾ “Dont Kiss Me” ಎಂಬ ಸ್ಟಿಕರ್ ಅಂಟಿಸಿಕೊಂಡ ವಾಹನಗಳು…! ಯಾವುದೇ ಹೊಸ ವಾಹನ ಇರಲಿ, ಅದರ ಸೈಡ್ ಇಂಡಿಕೇಟರ್ ದೀಪಗಳು ಪುಡಿಯಾಗದೆ ಇರುವಂಥವುಗಳನ್ನು ಕಾಣುವುದೇ ಅಪರೂಪ ಎಂಬಷ್ಟರ ಮಟ್ಟಿಗೆ ಇಲ್ಲಿನ ವಾಹನ ಸವಾರರು ಸವಾರಿ ಪರಿಣತರಾಗಿಬಿಟ್ಟಿದ್ದಾರೆ!
ಆದರೆ ಕಚೇರಿಯಲ್ಲಿ ಡೆಡ್‌ಲೈನ್ ಇದ್ದಾಗ, ಅವಸರದಲ್ಲಿದ್ದಾಗ ಇಂಥಹುದೇ ಸಂದರ್ಭವು ಮನಸ್ಸಿನ ಸ್ಥಿಮಿತ ಕಳೆದುಕೊಳ್ಳಲೂ ಕಾರಣವಾಗುತ್ತದೆ ಎಂಬುದು ಕೂಡ ಅಷ್ಟೇ ಸತ್ಯ. ಥತ್… ಯಾಕಾದರೂ ಈ ಜನ ಇಷ್ಟು ನಿಧಾನವಾಗಿ ಹೋಗ್ತಾರಲ್ಲಾ… ಮೊಬೈಕಿಗೆ ಅಡ್ಡ ಬರುತ್ತಾರಲ್ಲಾ… ಅಂತ ಅನ್ನಿಸುತ್ತದೆ.
ಇದು ಒಂದೇ ವ್ಯಕ್ತಿತ್ವದ ಎರಡು ಮುಖ. ನೀನಾರಿಗಾದೆಯೋ ಎಲೆ ಮಾನವ!
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
View Comments
ನೀವು ಬರೀ ಡೆಸ್ಟಿನೇಷನ್ ಬಗ್ಗೆ ಯೋಚ್ನೆ ಮಾಡ್ಕೊಂಡು ಮಧ್ಯದ ದಾರಿಯನ್ನು ಕಡೆಗಣಿಸದಿರಲಿ ಅಂತ ನಿಧಾನವಾಗಿ ಚಲಿಸೋ ಟ್ರಾಫಿಕ್ ವ್ಯವಸ್ಥೆಯನ್ನು ಯಾವುದೋ ಫಿಲಾಸಫರ್ ಕಂಡುಕೊಂಡ ಹಾಗಿದೆ...ನೆಕ್ಸ್ಟ್‌ಟೈಮ್ ಅರ್ಧ ಘಂಟೆ ಮುಂಚೆ ಹೊರಟರೆ ಹೇಗೆ? :-)
ಕಾಳಣ್ಣಾ...
ನಮ್ಮ ಆಫೀಸು ಈಗಷ್ಟೇ ಸ್ಥಳಾಂತರವಾಗಿದೆ. ಹಾಗಾಗಿ ಟ್ರಾಫಿಕ್‌ನಲ್ಲಿ ಸಾಗ್ತಾ ಫಿಲಾಸಫಿ ಬಗ್ಗೆ ತಲೆಕೆಡಿಸಿಕೊಳ್ಳೋ ಅವಧಿ ತಪ್ಪಿ ಹೋಗಿದೆ.
ಇನ್ನೊಂದು ವಿಷಯ. ಅರ್ಧಗಂಟೆ ಮುಂಚೆ ಹೋದ್ರೆ... ನಾವೇ ಕಚೇರಿ ಬಾಗಿಲು ತೆಗೀಬೇಕಾದ ಪರಿಸ್ಥಿತಿ. ಅಂದ್ರೆ ಯಾರು ಕೂಡ ಇನ್-ಟೈಮ್ ಬರೋದಿಲ್ಲ, ಆನ್ ಟೈಮಿಗೇ ಬರ್ತಾರೆ. :)