Categories: myworld

ದೇಶದ ಮೊದಲ ವಿಂಡೋಸ್ 10 ಟು-ಇನ್-ಒನ್, ನೋಷನ್ ಇಂಕ್ ಕೇಯ್ನ್ ಸಿಗ್ನೇಚರ್ ಬ್ಲ್ಯಾಕ್ ಎಡಿಶನ್

ವಿಂಡೋಸ್ 10 ಹೊಸ ಕಾರ್ಯಾಚರಣಾ ವ್ಯವಸ್ಥೆಯ ಜತೆಗೆ ಮೊದಲ ಬಾರಿಗೆ ಭಾರತದಲ್ಲಿ 2 ಇನ್ 1 (ಲ್ಯಾಪ್‌ಟಾಪ್ ಕಮ್ ಟ್ಯಾಬ್ಲೆಟ್) ಈಗ ಸ್ಲ್ಯಾಪ್‌ಡೀಲ್ ತಾಣದ ಮೂಲಕ ಬಿಡುಗಡೆಯಾಗಿದೆ. ಇದು ನೋಷನ್ ಇಂಕ್ ಕಂಪನಿಯು ಮೈಕ್ರೋಸಾಫ್ಟ್ ಹಾಗೂ ಇಂಟೆಲ್ ಜತೆಗೂಡಿ ಮಾಡಿರುವ ನೋಷನ್ ಇಂಕ್ ಸಿಗ್ನೇಚರ್ ಬ್ಲ್ಯಾಕ್ ಎಡಿಶನ್.

2-in-1 ಟ್ಯಾಬ್ಲೆಟ್ ಕಮ್ ಲ್ಯಾಪ್‌ಟಾಪ್

ವಿಶೇಷವೆಂದರೆ, ಭಾರತೀಯರ ಮನಸ್ಥಿತಿಗೆ ತಕ್ಕಂತೆ ಇದನ್ನು ರೂಪುಗೊಳಿಸಲಾಗಿದೆ ಎಂಬುದು ವಿಶೇಷ. ಹೇಗೆಂದರೆ, ಹಿಂದೆಯೂ ನೋಷನ್ ಇಂಕ್ ಕೇಯ್ನ್ ಎಂಬ 2 ಇನ್ 1 ಮಾರುಕಟ್ಟೆಗೆ ಬಂದಿತ್ತು. ಬಳಕೆದಾರರು ನೀಡಿದ ಸಲಹೆಗಳು, ಆಕ್ಷೇಪಗಳು, ದೂರುಗಳನ್ನೆಲ್ಲಾ ಪರಿಗಣಿಸಿಯೇ ಈ ಸಾಧನದ ವೈಶಿಷ್ಟ್ಯಗಳನ್ನು ರೂಪಿಸಲಾಗಿದೆ.

ಇದರ ಪರಿಣಾಮವಾಗಿಯೇ ಮಾರುಕಟ್ಟೆಗೆ ಬಂದಿದೆ ಸಿಗ್ನೇಚರ್ ಸೀರೀಸ್ ಕೇಯ್ನ್. ಬಿಸಿಯಾಗುವ ಸಮಸ್ಯೆಯನ್ನು ಪರಿಗಣಿಸಿ, ಸಮಸ್ಯೆಯ ಸುಧಾರಣೆಗೆ ಪ್ರಯತ್ನಿಸಲಾಗಿದೆ. ಕೀಬೋರ್ಡ್ ತೀರಾ ಮೃದುವಾಗಿದೆ ಎಂಬ ದೂರನ್ನು ಪರಿಗಣಿಸಿ, ಅದನ್ನು ಗಟ್ಟಿ ಮಾಡಲಾಗಿದೆ. ಸ್ಟೋರೇಜ್ ಹಾಗೂ ಬ್ಯಾಟರಿ ಕಡಿಮೆ ಎಂಬ ದೂರನ್ನು ಪರಿಗಣಿಸಿ, ಇದೀಗ 64 ಜಿಬಿ ಇಂಟರ್ನಲ್ ಸ್ಟೋರೇಜ್ ಹಾಗೂ 128 ಜಿಬಿಯಷ್ಟು ವಿಸ್ತರಿಸಬಹುದಾದ ಅವಕಾಶ ನೀಡಲಾಗಿದೆ. ಬ್ಯಾಟರಿಯ ಬಾಳಿಕೆಯೂ ಸುಮಾರು 2 ಗಂಟೆಗಳಷ್ಟು ಹೆಚ್ಚಿಸಲಾಗಿದೆ. ಅಂದರೆ 7900 ಲೀಥಿಯಂ ಪಾಲಿಮರ್ ಬ್ಯಾಟರಿ ಇದೆ.

ಇನ್ನು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಈ ಸಾಧನದ ಜತೆಗೆ ಪ್ರೋಪೆನ್ ಎಂಬ ಸ್ಟೈಲಸ್ ಉಚಿತವಾಗಿ ಲಭ್ಯ. ಈ ಸ್ಟೈಲಸ್ ಬಳಸಿ, ಸ್ಕ್ರೀನ್ ಮೇಲೆಯೇ ಅತ್ಯುತ್ತಮ ಚಿತ್ರವನ್ನು ರಚಿಸಬಹುದು. ಚಿತ್ರ ಕಲಾವಿದರಿಗೆ ಸೂಕ್ತ.

3ಜಿ ಸಿಮ್ ಹಾಕಲು ಅಂತರ್‍‌ನಿರ್ಮಿತ ಅಲ್ಟ್ರಾಸ್ಟಿಕ್ ವ್ಯವಸ್ಥೆ ಇದರಲ್ಲಿರುವುದು ಮತ್ತೊಂದು ವಿಶೇಷ.

ಜತೆಗೆ ಹೊಸದೊಂದು ಡಾಕ್ ರೂಪಿಸಲಾಗಿದ್ದು, ಇದಕ್ಕೆ ಪ್ರತ್ಯೇಕ ಹಣ ನೀಡಬೇಕಾಗುತ್ತದೆ. ಆದರೆ, ಇದರಲ್ಲಿ ಅಂತರ್‌ನಿರ್ಮಿತ ಸ್ಪೀಕರ್, ಯುಎಸ್‌ಬಿ ಪೋರ್ಟ್‌ಗಳು, ಬಾಹ್ಯ ಹಾರ್ಡ್ ಡ್ರೈವ್ ಅಳವಡಿಸಲು ಜಾಗ ಕೂಡ ಇದೆ.

ಇದು ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ತೀರಾ ಹತ್ತಿರವಾದದ್ದು ಎಂದು ಹೇಳಲಡ್ಡಿಯಿಲ್ಲ. ಯಾಕೆಂದರೆ, ಪ್ರೊಸೆಸರ್, ಚಿಪ್ ಮುಂತಾದವುಗಳೆಲ್ಲವೂ ಸದ್ಯಕ್ಕೆ ಭಾರತದಲ್ಲಿ ತಯಾರಾಗುತ್ತಿಲ್ಲ. ಅದನ್ನು ಹೊರಗಿನಿಂದ ತರಿಸಿಕೊಂಡು, ಇಲ್ಲೇ ಅಸೆಂಬಲ್ ಮಾಡಲಾಗುತ್ತಿದೆ. ಭಾರತೀಯರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ, ಅದಕ್ಕೆ ತಕ್ಕಂತೆ ಕೇಯ್ನ್ ಅಭಿವೃದ್ಧಿಪಡಿಸಲಾಗಿದೆ.

Notion Ink Cain Signature Black Edition Tablet ಜತೆಗೆ ಕೀಬೋರ್ಡ್, ಮಲ್ಟಿಟಚ್ ಟ್ರ್ಯಾಕ್ ಪ್ಯಾಡ್ ಇರುವ ಮ್ಯಾಗ್ನೆಟಿಕ್ ಕವರ್, ಸ್ಟೈಲಸ್, ಡಿಸಿ ಚಾರ್ಜರ್, ಒಟಿಜಿ ಕೇಬಲ್ ಮತ್ತು ಗೈಡ್ ಇರುತ್ತದೆ.

ಸ್ಪೆಸಿಫಿಕೇಶನ್ ಹೀಗಿದೆ:

Intel Atom Z3735F 1.83 GHz 2M cache Processor
2GB DDR3L RAM, Storage Capacity 64 GB eMMC
Screen Size- 25.4 cm (10)
Resolution- 1280 x 800 Pixels
Screen Type- IPS 180 degree viewing angle
Integrated Camera Front and Rear, both 2 MP, OmniVision OV2680
Pointer Device – Multi-Touch Touchpad
Keyboard – Magnetic Keyboard
Wireless, Bluetooth v4.0, 3G
Standard Battery Li-Polymer Ion
USB Ports – 1xUSB 3.0 | 1xMicro USB
HDMI Port – Mini HDMI Slot
Weight- 630 gm
Dimension(W*D*H) 258 x 172 x 9.7 mm
Warranty Period- 1 Year Notion Ink Onsite Warranty

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ:

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Share
Published by
Avinash B

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago