Categories: myworldOpinion

ಓ ನನ್ನ ಚೇತನ….!

ಇಂದು ನಾನೇನಾಗಿದ್ದೇನೆಯೋ… ಅದಕ್ಕೆ ಕಾರಣವಾದ, ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ನೊಂದಿಗಿನ ಒಡನಾಟವನ್ನು ನೆನಪಿಸುತ್ತಿರುವ O my dear dear….!

ಅಂದು ಒಂಟಿತನ ಕಾಡುತ್ತಿದ್ದಾಗ, ಚಿಂತೆಯಲ್ಲಿ ಸಿಲುಕಿದಾಗ, ಬೇಸರ ಕಾಡಿದಾಗ, ಮನ ಮುದುಡಿದಾಗ ಉರಿಯುತ್ತಿರುವ ಬೆಂಕಿಗೆ ನೀರೆರೆದು ಶಮನಗೊಳಿಸುವಂತೆ ನೀನು ನನ್ನನ್ನು ಸಂತೈಸುತ್ತಿದ್ದೆ. ಅದು ಯಾವ ಜನುಮದ ಋಣಾನುಬಂಧವೋ, ಈ ಜನ್ಮದಲ್ಲಿ ನೀನು ಸಿಕ್ಕಿಬಿಟ್ಟೆ, ಅತ್ಯಂತ ಆತ್ಮೀಯಳಾದೆ.

ಏನೂ ಅರಿಯದೆ ಹುಡುಗಾಟಿಕೆಯಿಂದ ನನಗೆ ನಾನೇ ನೋವು ತಂದುಕೊಂಡು ಪರಿತಪಿಸುತ್ತಿದ್ದಾಗ ಕಣ್ಣೀರೊರೆಸಿದೆ. ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ ಆ ವಿಷಯದಲ್ಲಿ ನಿನಗೆ ತಿಳಿವಳಿಕೆ ಇಲ್ಲದಿದ್ದರೂ, ಒಂದೆರಡು ಮಾತುಗಳಿಂದ ನನ್ನನ್ನು ಸಂತೈಸಿ, ಬೆನ್ನು ತಟ್ಟಿ ಮುನ್ನುಗ್ಗಲು ಪ್ರೇರೇಪಿಸುತ್ತಿದ್ದೆ.

ನೀನೆದುರಿದ್ದಾಗ ನನಗೆ ಅದೇನೋ ಒಂದು ಆತ್ಮವಿಶ್ವಾಸ. ಅದೇ ನೀನು ಒಂದೆರಡು ದಿನಕ್ಕೆಂದು ನಿನ್ನೂರಿಗೆ ಮರಳಿದಾಗ ಗಾಳಿಯಿಲ್ಲದ ಬಲೂನಿನಂತೆ ಕುಗ್ಗಿ ಹೋಗುತ್ತಿದ್ದೆ. ಆ ದಿನಗಳಲ್ಲಿ ನನ್ನ ಮನಸ್ಸಿನಲ್ಲಾದ ಹಪಹಪಿಕೆ, ತಳಮಳ, ಗೊಂದಲಗಳನ್ನೆಲ್ಲಾ ಯಾರಲ್ಲಿ ಹೇಳಿಕೊಳ್ಳಲಿ? ನೀನು ಮರಳಿದಾಗ ಸಣ್ಣ ಮಗುವಿನಂತೆ ಎಷ್ಟೊಂದು ಕೇಕೆ ಹಾಕಿರಲಿಲ್ಲ ನಾನು!

ನೀನಿಲ್ಲದ ದಿನಗಳಲ್ಲಿ ನನ್ನನ್ನು ನಾನೇ ಕಳೆದುಕೊಂಡಂತಿದ್ದೆ… ಆದರೆ ನನ್ನೊಳಗಿನ ತಳಮಳವನ್ನು ನಿನ್ನೆದುರು ನಾನು ಯಾವತ್ತೂ ಬಿಚ್ಚಿಟ್ಟಿರಲಿಲ್ಲ… ಯಾಕೆ ಗೊತ್ತೇ…? ನಿನ್ನ ಮುಖ ಕಂಡ ಕೂಡಲೇ ನಾನು ಎಲ್ಲವನ್ನೂ ಮರೆತುಬಿಡುತ್ತಿದ್ದೆ. ಒಟ್ಟಿನಲ್ಲಿ ಮಂತ್ರಮುಗ್ಧನಾಗುತ್ತಿದ್ದೆ.

ನಿನಗದೆಷ್ಟು ಅನ್ಯಾಯ ಮಾಡಿದೆ ನಾನು! ಬುದ್ಧಿ ಇರಲಿಲ್ಲ ನನಗೆ, ತಿಳಿವಳಿಕೆಯಿಲ್ಲದೆ ಬೈದುಬಿಟ್ಟೆ, ನಿನ್ನ ಮೇಲೆ ಕೂಗಾಡಿದೆ, ನೋವು ಕೊಟ್ಟೆ… ಆದರೆ ಅದನ್ನೆಲ್ಲವನ್ನೂ ಸಹಿಸಿಕೊಂಡು ಪ್ರೀತಿ, ವಾತ್ಸಲ್ಯ, ಮಮತೆಯ ಧಾರೆಯನ್ನೆರೆದೆ.  ಎಷ್ಟೊಂದು ಕರುಣಾಮಯಿ ನೀನು! ಆದರೆ ನೀನೆದುರಿದ್ದಾಗ I LOVE YOU ಅಂತ ಹೇಳಲಾಗದ ಮತ್ತು ಹೇಳುವ ಪರಿಸ್ಥಿತಿಯಲ್ಲಿಲ್ಲದ ನಾನು ಈಗ ಹೇಳಿದರೂ ನೀನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ.

ನಿನ್ನ ತೋಳಲ್ಲಿ ತಲೆಯಿಟ್ಟಾಗ ವಾತ್ಸಲ್ಯಭರಿತ ಆ ಸ್ಪರ್ಶ, ಆ ನಿನ್ನ ನಿಷ್ಕಲ್ಮಶ ಪ್ರೀತಿಯ ಸಿಂಚನ… ಛೆ… ನಾನೆಷ್ಟು ಅಧಮ… ನೀನಿದ್ದಾಗ ಅರ್ಥ ಮಾಡಿಕೊಳ್ಳಲೇ ಇಲ್ಲವಲ್ಲ…

ಜಗತ್ತು ಏನೆಂಬುದು ತಿಳಿದಾಗ ಈಗ ನೀನಿಲ್ಲವಲ್ಲ… ಎಷ್ಟು ಬೇಗನೆ ನಮ್ಮನ್ನೆಲ್ಲಾ ಬಿಟ್ಟು ಹೋದೆ ನೀನು…!

ಓ ನನ್ನ Lovely lovely ಅಜ್ಜೀ…. ಅಂದು ನೀನು ಕಣ್ಣೆದುರಿದ್ದಾಗ I Love You ಹೇಳುವಷ್ಟು ಬುದ್ಧಿ ಬೆಳೆದಿರಲಿಲ್ಲ ನನಗೆ. ಹೇಳಿದ್ದರೂ ವಿದ್ಯೆ ತಿಳಿಯದ ನೀನು ಕಣ್ಣು ಪಿಳಿ ಪಿಳಿ ಬಿಡುತ್ತಿದ್ದಿಯೋ ಏನೋ… ಈಗ ನೀನಿದ್ದಿದ್ದರೆ ನನ್ನನ್ನು ನೋಡಿ ಎಷ್ಟು ಖುಷಿ ಪಡುತ್ತಿದ್ದೆಯೋ ಏನೋ….

ಆತ್ಮೀಯ ಗೆಳತಿಯಾಗಿ, ಮಮತಾಮಯಿ ತಾಯಿಯಾಗಿ, ವಾತ್ಸಲ್ಯಮಯಿ ದೊಡ್ಡಮ್ಮನಾಗಿ ಜೀವನದ ಅನುಭವಾಮೃತವನ್ನು ನನಗೆ ಧಾರೆಯೆರೆದು ಪರಲೋಕ ಸೇರಿಕೊಂಡ ಓ ಮಹಾನ್ ಚೇತನವೇ… ನಿನ್ನ ನೆನಪು ಇಂದಿಗೂ ಶಾಶ್ವತ…. ನಿನಗಿದೋ ಶರಣು.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಚೈತನ್ಯ ಉಡುಗಿ ಹೋಯಿತೇ! ಅಥವಾ ಕಳೆದ ಆ ಚೈತನ್ಯದ ಕುಡಿಯಾಗಿ ಅದರಿಂದ ಜಗದಲಿ ಬೆಳಕನು ಉಂಡು, ಸ್ವತಂತ್ರವಾಗಿ ಜಗತ್ತಿಗೆ ಬೆಳಕು ನೀಡುತ್ತಿರುವ ಈ ಪುಟ್ಟ ಚೈತನ್ಯ ಅಗಲಿದ ಹಿರಿಯ ಚೈತನ್ಯಕೆ ಅಂಜಲಿ ಸಲ್ಲಿಸುತ್ತಿರುವುದೇ?

    ಮನ ಮುಟ್ಟಿ, ಕಲಕಿ, ನನ್ನ ಹಳೆಯ ನೆನಪುಗಳನ್ನೆಲ್ಲಾ ಮರುಕಳಿಸುವಂತೆ ಮಾಡಿದ ಉತ್ತಮ ಲೇಖನ.

    ಮೊದ ಮೊದಲಿಗೆ ಅಗಲಿದ ಪ್ರೇಯಸಿ ಎಂದು ತಿಳಿದೆ, ಕಡೆಗೆ ನೋಡಿದರೆ ದೊಡ್ಡಮ್ಮ ಅಂತ ಆಯಿತು, ಯಾವುದು ಸರಿ. ಅದೇನೇ ಆಗಲಿ ಉತ್ತಮ ಲೇಖನ. ಓದಿ ಮರೆಯುವಂತಹದ್ದಲ್ಲ.

  • ಶ್ರೀನಿವಾಸರೆ,

    ಇದು ಚೈತನ್ಯ ನೀಡಿದ ಹಿರಿಯ ಚೇತನಕ್ಕೆ ಸಲ್ಲಿಸಿದ ಶ್ರದ್ಧಾಂಜಲಿಯಷ್ಟೆ.

  • ಹಾರೈಕೆಗೆ ಧನ್ಯವಾದ ಸೋನಿ.

    ಆತ್ಮೀಯ ಕ್ಷಣಗಳನ್ನು ಮರೆಯುವುದು ಸಾಧ್ಯವಿಲ್ಲ. 

  • ಹೌದು ಸೋನಿ,
    ನೀವು ಹೇಳಿದ್ದು ಸತ್ಯ.
    ಆದ್ರೆ heal ಮಾಡೋ time ಬರುವವವರೆಗೂ ಕಾಯಬೇಕಲ್ಲ... :)

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

5 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

6 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago