Categories: myworldOpinion

ಮುಂಬಯಿಯ ಲೋಹಹಕ್ಕಿ ನಿಲ್ದಾಣ

 

ಇದು ಮುಂಬಯಿಯಲ್ಲಿ ವಿಮಾನ ಮೇಲೇರುತ್ತಿದ್ದಾಗ ತೆಗೆದ ವಿಮಾನ ನಿಲ್ದಾಣದ ದೃಶ್ಯ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಅವಿ, ನಿಮ್ಮ "ಲೋಹ ಹಕ್ಕಿ" ಪದ ನನ್ನ ಒಂದು ಕವನದಲ್ಲಿನ "ಹಾರಿ ಬಂದ ಯಂತ್ರ ಹಕ್ಕಿ" ಪ್ರಯೋಗವನ್ನು ನೆನಪಿಸಿತು. ಆ ಕವನ ಇಲ್ಲಿ ಈಗ ಅಪ್ರಸ್ತುತ, ಇನ್ನೊಮ್ಮೆ ಸಂದರ್ಭಾನುಸಾರ ನನ್ನ ಬ್ಲಾಗಲ್ಲಿ ಪೋಣಿಸುತ್ತೇನೆ.

  • ಅವೀ,

    ಲೋಹಹಕ್ಕಿ ನಿಲ್ದಾಣವೆಂದ ಕೂಡಲೇ ಅಸುಪಾಸಿನ ಜೋಪಡಿಗಳು ಯಾಕೇ ನೆನಪಾಗುತ್ತೆ?

    ಮುಂಬೈಯಲ್ಲಿ ವಿಮಾನ ಇಳಿಯುವಾಗ-ಎರುವಾಗ ಮೊದಲು ಕಣ್ಣಿಗೆ ಬೀಳುವುದು ಇವು..

  • ನಿಮ್ಮ ಕ್ಯಾಮೆರಾದಿಂದ ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ.
    ಜೋಪಡಿಗಳ ಪಕ್ಕದಲ್ಲೇ ಮಹಲುಗಳು - ಜೀವನದ ವೈಚಿತ್ರ್ಯವನ್ನು ಚೆನ್ನಾಗಿ ತೋರಿಸುತ್ತಿದೆ. ಒಂದೆಡೆ ಹಸಿವು, ಇನ್ನೊಂದೆಡೆ ಅಜೀರ್ಣದ ತೇಗು.

    ಇದುವೇ ಜೀವ ಇದು ಜೀವನ

    ಆದರೆ ಶೇಕಡಾ ಹತ್ತರಷ್ಟೂ ಜೋಪಡಿಗಳು ಕಾಣಿಸ್ತಿಲ್ಲ :D

  • ಜ್ಯೋತಿ ಅವರೆ,

    ನಿಮ್ಮ ಹಾರಿ ಬಂದ ಯಂತ್ರ ಹಕ್ಕಿಯನ್ನು ಆದಷ್ಟು ಬೇಗ ಬ್ಲಾಗಲ್ಲಿ ಹಾಕಿದರೆ ಅದನ್ನು ಹೊಡೆದುರುಳಿಸಲು ಯೋಜನೆ ರೂಪಿಸ್ತೀನಿ. :)

  • ಶಿವ್ ಅವರೆ,
    ಜೋಪಡಿಗಳ ನಡುವೆಯೂ ಮುಂಬಯಿ ತನ್ನ ಮಹಾನಗರ status ಅನ್ನು ಎಷ್ಟು ಜತನವಾಗಿ ಕಾಯ್ದುಕೊಂಡಿದೆ. ಬಹುಶಃ ಇದು ಹೊರ ಜಗತ್ತಿಗೆ ಕಾಣಿಸುವ ಮುಂಬಯಿ. ಒಳಗಿನ ಮುಂಬಯಿಯ ಸ್ಥಿತಿ ಒಳ ಹೊಕ್ಕವರಿಗೇ ಗೊತ್ತಾಗುತ್ತದೆ.

  • ಶ್ರೀನಿವಾಸರೆ,
    ಒಂದು ರೀತಿಯಲ್ಲಿ ಎಲ್ಲರಿಗೂ ಹಸಿವೇ. ಕೆಲವರಿಗೆ ದುಡ್ಡಿನ ಹಸಿವು, ಕೆಲವರಿಗೆ ರಕ್ತ ಹೀರುವ ಹಸಿವು, ಕೆಲವರಿಗೆ ಮಾನವೀಯತೆಯ ಹಸಿವು, ಮತ್ತು ಕೆಲವರಿಗೆ ಹೇಳಲಾಗದ ಹಸಿವು.
    ಇದುವೇ ಜೀವ, ಇದು ಜೀವನ.... ಹೌದು.

  • "ನಿಮ್ಮ ಹಾರಿ ಬಂದ ಯಂತ್ರ ಹಕ್ಕಿಯನ್ನು ಆದಷ್ಟು ಬೇಗ ಬ್ಲಾಗಲ್ಲಿ ಹಾಕಿದರೆ ಅದನ್ನು ಹೊಡೆದುರುಳಿಸಲು ಯೋಜನೆ ರೂಪಿಸ್ತೀನಿ.":- ಹಾಗಾ!! ಸರಿ, ಯಾವಾಗ ಹಾರಿಬಿಡಲಾಗುತ್ತೆ ಅನ್ನುವುದನ್ನು ಬಹಿರಂಗಪಡಿಸಲಾಗುವುದಿಲ್ಲ. ಗುಟ್ಟು ರಟ್ಟು ಮಾಡಲು ಯಾವುದೇ ಸಿಬ್ಬಂದಿ ಇಲ್ಲದ ಕಾರಣ ಆ ಭಯವಿಲ್ಲ. ಹವಾಮಾನ ಅನುಕೂಲ ನೋಡಿಕೊಂಡು "ಯಂತ್ರ ಹಕ್ಕಿ"ಯನ್ನು ಹಾರಿಬಿಡಲಾಗುವುದು.... ನಿರೀಕ್ಷಿಸಿ.

  • ಎಲ್ಲ ಮಹಾನಗರಗಳ ಕಥೆಯೂ ಅದೇ ತಾನೇ? "ಮಹಾ ನಗರ" ಅನ್ನಿಸಿಕೊಳ್ಳಬೇಕಾದರೆ ಎಲ್ಲವನ್ನೂ ಅದು ತನ್ನೊಳಗಿರಿಸಿಕೊಂಡು, ಅರಗಿಸಿಕೊಂಡು, ಬೆಳೆಸಿಕೊಳ್ಳುತ್ತಿರಬೇಕು; ಆಮೂಲಕ ತಾನೂ ಬೆಳೆಯುತ್ತಿರಬೇಕು. ವಿವಿಧ ಹಸಿವೆಗಳೇ ಅದರ ಇಂಧನ, ಶಕ್ತಿ. ಮುಂಬಯಿ, ದೆಹಲಿ, ಕೋಲ್ಕತಾ, ಚೆನ್ನೈಗಳಾಗಲೀ ಈಗ ಬೆಳೆಯುತ್ತಿರುವ ಬೆಂಗಳೂರಾಗಲೀ ಇದಕ್ಕೆ ಹೊರತಲ್ಲ.

  • ಸುಪ್ತ ದೀಪ್ತಿ / ಜ್ಯೋತಿ ಅವರೆ,
    ನಾನಿಲ್ಲದಿದ್ದಾಗ ನಿಮ್ಮ ಹಕ್ಕಿ ಹಾರಿ ಬಿಟ್ರಾ...? ನೋಡ್ತೀನಿ...

    ಮಹಾ ನಗರವೂ ಮಹಾ ನರಕವೂ ಬಹುಶಃ ಒಂದೇ ಆಗುತ್ತಿದೆ ಈ ದಿನಗಳಲ್ಲಿ. ಅಲ್ಲವೇ?

  • ಸರಿಯೆ ; ನಿಮ್ಮ ಲೋಹದ ಹಕ್ಕಿ ಹಾರಿಕೆಳಗೆ ಕಂಡ ನೋಟ ನಿಜಕ್ಕೂ ಚೆನ್ನಾಗಿಯೆ ಇದೆ.
    ಏನೋ ನಮ್ಮ ಕಣ್ಣುಗಳಿಗೆ ಕಾಣುವ ದ್ರುಷ್ಯಗಳೇ ಸ್ವಲ್ಪ ಗೊಂದಲತರುವಂತಹದು.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago