Categories: myworldTechnology

ರ್ಯಾಂಕ್ ಅನ್ನು ರ‌್ಯಾಂಕ್ ಆಗಿ ಟೈಪಿಸಿ!

ಆನ್‌ಲೈನ್ ಜಗತ್ತಿಗೆ ಬಂದಾರಭ್ಯ, ಯುನಿಕೋಡನ್ನು ಆತುಕೊಂಡವರಿಗೆಲ್ಲಾ ಕಾಡುತ್ತಿದ್ದ ಒಂದು ಪ್ರಶ್ನೆ ಎಂದರೆ ‘ರ‌್ಯಾಂಕ್’ ಬರೆಯುವುದು ಹೇಗೆ, ಸೂರ್ಯ ಎಂಬುದನ್ನು ಸೂ”ರ‌್ಯ” ಅಂತ ಕುಟ್ಟುವುದು ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.

ಸಂಶೋಧನೆಗಳಿಗೆಲ್ಲಾ ಅಪಘಾತಗಳೇ ಕಾರಣ ಅಂತ ಬಲವಾಗಿ ನಂಬಿದವನು ನಾನು. ಇದೂ ಆದದ್ದು ಹಾಗೆಯೇ. ಮೊನ್ನೆ ಕಚೇರಿಯಲ್ಲಿ ಚುನಾವಣಾ ಸುದ್ದಿಗಳಲ್ಲೇ ಮುಳುಗಿದ್ದ ಸಂದರ್ಭದಲ್ಲಿ ಅನತಿ ದೂರದಲ್ಲಿ ಸುದ್ದಿ ಕುಟ್ಟುತ್ತಿದ್ದ ಗುಣವರ್ಧನ ಶೆಟ್ಟರು, ರ‌್ಯಾಂಕ್ ಅಂತ ಘೋಷಿಸಿದ್ದೇ ತಡ, ಮಂಡೆಯಲ್ಲಿ ಅದೇನಿತ್ತೋ… ಅಲ್ಲಿಗೆ ಧಾವಿಸಿದೆ. ‘ಯ’ ಒತ್ತಕ್ಷರವನ್ನು ‘ರಾ’ ಅಕ್ಷರಕ್ಕೆ ಸೇರಿಸುವುದು ಸಾಧ್ಯ ಎಂದು ಬಹುಶಃ ಅವರು ಹೇಳಿರಬೇಕೋ… ಇಲ್ಲವೋ… ಅಂತೂ ಪೂರ್ತಿ ಕೇಳಿಸಿಕೊಳ್ಳುವ ಮೊದಲೇ ಅತ್ತ ಓಡಿದ್ದೆನಲ್ಲ.

ಆದ್ರೆ, ಅಷ್ಟರಲ್ಲಾಗಲೇ ‘ರ’ ಗೆ ‘ಯ’ ಅಡಿ ಒತ್ತು ಹೇಗೆ ಕೊಟ್ಟದ್ದು ಎಂಬುದನ್ನವರು ಮರೆತಿದ್ದರು. ಅಂದ್ರೆ ಅದು ನಡೆದದ್ದು ಆಕಸ್ಮಿಕ. ಹೀಗಾಗಿ ಪಟ್ಟು ಬಿಡದಂತೆ ಪ್ರಯತ್ನಿಸಿ ಅಂತ ಸೂಚ್ಯವಾಗಿ ಹೇಳಿದೆ. ಮತ್ತೆ ಮತ್ತೆ ಹಲವಾರು ಕೀ ಕಾಂಬಿನೇಷನ್‌ಗಳನ್ನೆಲ್ಲಾ ಹಾಕಿ ನೋಡಿದರು… ಊಹುಂ… ಬರ್ತಾ ಇಲ್ಲ… ಛೆ… ಮಾಡಿದ್ನಲ್ಲಾ ಅಂದ್ರು… ಅಷ್ಟರಲ್ಲಾಗಲೇ ಸತೀಶ್ ಮತ್ತು ಚಂದ್ರಾವತಿ ಅವರ ಮೇಲೆ ಒತ್ತಡ ಹಾಕಲಾರಂಭಿಸಿದ್ದರು. ಹೇಗಾದ್ರೂ ಮಾಡಿ ಪತ್ತೆ ಹಚ್ಚಿ ಅನ್ನೋ ರೀತಿಯಲ್ಲಿ.

ಮತ್ತೆ ಮತ್ತೆ ಕುಟ್ಟಿ ನೋಡಿದಾಗ ಕೊನೆಗೆ ಸಿಕ್ಕಿಯೇ ಬಿಟ್ಟಿತು. ಆ ಮೇಲೆ ಮಾಮೂಲಿ ನಮ್ಮ ನಮ್ಮೊಳಗೆ ಯಾರು ಇದರ ಕ್ರೆಡಿಟ್ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವಾಗ್ವಾದ ನಡೆಯಿತಾದರೂ ಹೊಡದಾಟದ ಮಟ್ಟಕ್ಕೆ ಹೋಗದೆ, ನಮ್ಮ ನಮ್ಮೊಳಗೆ ಸಂತೋಷ ಪಡುವಂತಾಯಿತು. 🙂

ಇದುವರೆಗೆ ರ್ಯಾಂಕ್ ಅಂತ ಬರುತ್ತಿದ್ದದನ್ನು ‘ರ‌್ಯಾಂಕ್’ ಆಗಿಸಲು ಅಥವಾ ಸೂರ್ಯ ಅಂತ ಬರುತ್ತಿರುವುದನ್ನು ಬೇಕಿದ್ದರೆ ಸೂರ‌್ಯ ಅಂತ ಆಗಿಸಲು ನೀವು ಮಾಡಬೇಕಾದುದಿಷ್ಟೇ.

1. ರ ಟೈಪ್ ಮಾಡಿ
2. ತಕ್ಷಣವೇ Zero Width Non-joiner (ZWNJ) ಸೇರಿಸಿ ಬಿಡಿ
3. ನಂತರ ಲಿಂಕಿಂಗ್ ಕ್ಯಾರಕ್ಟರ್ (Inscript Keyboard ಶೈಲಿಯವರಿಗಾದರೆ ‘d’ ಕೀಲಿ) ಒತ್ತಿರಿ.
4. ಅನಂತರ ಬೇಕಾದ ಸ್ವರಾಕ್ಷರವನ್ನು ಜೋಡಿಸಿದರೆ ಆಯಿತು.

ರ‌್ಯಾಂಕ್ ಅನ್ನು Inscript ನಲ್ಲಿ ಈ ಕೆಳಗಿನಂತೆ ಬರೆಯಬಹುದು:
j Shift+Ctrl 2 d / e x k d

ನುಡಿ ೪.೦ ಇನ್‌ಸ್ಟಾಲ್ ಮಾಡಿಕೊಂಡವರು ಕೂಡ, ಅದರಲ್ಲಿನ ಯುನಿಕೋಡ್ Option ಬಳಸಿ ರ‌್ಯಾಂಕ್ ಟೈಪಿಸಬಹುದು. ‘ರ’ ಬರೆದ ತಕ್ಷಣ Zero Width Non-joiner (ZWNJ) ಸೇರಿಸಿ. ನಂತರ ಲಿಂಕ್ ಕೀಲಿ ‘f’ ಒತ್ತಿ ಮುಂದುವರಿಯಿರಿ.
ಅಂದರೆ: r + ZWNJ + f + y + A + M + k

ಇನ್ನು ಬರಹ ಬಳಸುವವರಿಗೆ ಮಾತ್ರ ಈ ಬಗ್ಗೆ ಒಂದಷ್ಟು ನಿರಾಶೆ ಅಂತ ನನ್ನ ಅನಿಸಿಕೆ. ಯಾಕೆಂದರೆ ನಾನು ಬರಹ (ನುಡಿಯನ್ನೂ) ಬಳಸುವುದು ಕಡಿಮೆ. ಇಲ್ಲಿ ವ್ಯಂಜನಕ್ಕೆ ಸ್ವರಾ‍ಕ್ಷರ ಸೇರಿಸಿದರೆ ಮಾತ್ರ ಒಂದು ಪೂರ್ಣ ಅಕ್ಷರ ಮೂಡುತ್ತದೆ. ಯಾರಾದರೂ ಬರಹ ಬಳಸುತ್ತಿರುವವರಿಗೆ ಇದೇ ರೀತಿಯ Accident ಆಗುವ ಮೂಲಕ ಏನಾದರೂ ಸಂಶೋಧನೆಯೂ ಆಗಬಹುದು. ಪ್ರಯತ್ನಿಸಿ. ಯಶಸ್ವಿಯಾದರೆ ನನಗೂ ತಿಳಿಸಿಬಿಡಿ!

ಇನ್ನು, ಕನ್ನಡ ಯುನಿಕೋಡ್‌ನಲ್ಲಿ mU ಬರೆದರೆ ಮಾ ಬರೆದಂತೆಯೇ ತೋರುತ್ತದೆ, yo, yO ಗಳಿಗೆ ಒಂದು ಕೊಂಬು ಹೆಚ್ಚು ಬರುತ್ತದೆ ಎಂದೆಲ್ಲಾ ತೊಂದರೆ ಅನುಭವಿಸುತ್ತಿರುವವರಿಗೆ ಹೊಸ ತುಂಗಾ ಫಾಂಟ್‌ನಲ್ಲಿ ಪರಿಹಾರ ಲಭ್ಯವಿದೆ ಎಂಬುದು ಬಹುತೇಕರಿಗೆ ಗೊತ್ತಿದೆ ಅಂತ ನನ್ನ ಅಭಿಪ್ರಾಯ. ಹಳೆಯ ತುಂಗಾ ಫಾಂಟ್ ತೆಗೆದು, ಹೊಸದನ್ನು ಅಳವಡಿಸಿಕೊಂಡರೆ, ಸಮಸ್ಯೆ ಪರಿಹಾರ.

ಆದರೆ ಗಮನದಲ್ಲಿರಲಿ: ನಾನು ಸರಿ ಮಾಡಿದ್ದೇನೆ ಅಂತ ನಾನು ಕೂಡ ಬೀಗುವಂತಿಲ್ಲ. ಯಾಕೆಂದರೆ ಇದನ್ನು ಓದುತ್ತಿರುವವರ ಕಂಪ್ಯೂಟರಿನಲ್ಲಿ ಹೊಸ ತುಂಗಾ ಫಾಂಟ್ ಇದ್ದರಷ್ಟೇ mU, yo, yO, mo, mO ಸರಿಯಾಗಿ ಕಾಣಿಸಬಲ್ಲವು. ಇಲ್ಲವಾದಲ್ಲಿ ಎಲ್ಲರೂ ಮಾಕ ವಿಸ್ಮಿತರೇ ಆಗಬೇಕು!:)

ZWNJ ಬಳಕೆಯ ಬಗ್ಗೆ : ನೇರವಾಗಿ ನೋಟ್ ಪ್ಯಾಡ್‌ನಲ್ಲಿ ಮಾಡುವವರಿಗೆ ಇದು ಅತ್ಯಂತ ಸುಲಭ. MS Word ನಲ್ಲಿ ರೈಟ್ ಕ್ಲಿಕ್ ಮಾಡಿದರೆ ಇದರ option ಬರುವುದಿಲ್ಲ. ಶಿಫ್ಟ್ ಕಂಟ್ರೋಲ್ 2 ಒತ್ತಿದರೆ ಆಗುತ್ತದೆ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ನಾನು ಬರಹವನ್ನೇ ಬಳಸುವವಳು. ಅಲ್ಲಿ ryAMk ಟೈಪಿಸಿದರೆ ರ್ಯಾಂಕ್ ಕಂಡರೂ, RyAMk ಟೈಪಿಸಿದರೆ "ರ್‍ಯಾಂಕ್" ಸರಿಯಾಗಿಯೇ ಕಾಣುತ್ತದೆ. ಬರಹ ಯೂನಿಕೋಡಿನಲ್ಲಿ ಸರಿಯಾಗಿ ಕಾಣಿಸುವುದು ಹೇಗೋ ಗೊತ್ತಿಲ್ಲ!

  • Accident ಕನ್ನಡದಲ್ಲಿ ಬರಿಯೋದು ಹೇಗೆ ಹೇಳ್ಕೊಡಿ ಸಾರ್.. (ಆ ಕ್ಕೆ ಯ ಒತ್ತು ಕೊಡೋದು ಹೇಗೇಂತ)

  • ನಾನು ಪಕ್ಕಾ ಇನ್ಸಕ್ರಿಪ್ಟ ಅಭಿಮಾನಿಯಾದ್ದರಿಂದ ಇನ್ಸಕ್ರಿಪ್ಟ ಬಗ್ಗೆ ಮಾಹಿತಿಯಿರುವ ಈ ಬರಹ ಗಮನ ಸೆಳೆಯಿತು. ವಿಷಯ ಎಲ್ಲರಿಗೂ ತಿಳಿಸಿಕೊಟ್ಟಿದ್ದಕ್ಕೆ ನನ್ನಿ. ಈ ಬರಹದಲ್ಲಿ ಎರಡು ವಿಚಾರ ತಲೆದೋರಿದೆ.

    ೧. ಇನ್ಸಕ್ರಿಪ್ಟಿನಲ್ಲಿ ರ ಕ್ಕೆ ಯ ಒತ್ತು ಬರಿಸೋದು - ಒಂದು ವಿಚಾರ. ಇದಕ್ಕೆ ನೀವು ಹೇಳಿದ ವಿಧಾನ ೧೦೦% ಕರೆಕ್ಟು.
    ೨. ಇಂಗ್ಲೀಶಿನ Rank ಅನ್ನು ರ್‌ಯಾಂಕ್ ಅಂತ ಬರಯೋದು. ಸುಮ್ನೆ ಚಮಕ್ಕಿಗೆ, ಇಂಗ್ಲೀಶಿನ Rank ಅನ್ನು "ರಾಂಕ್" ಅಂತಲೇ ಬರೀಬಹುದು ಅಲ್ವಾ.

  • Registration- Seminar on the occasion of kannadasaahithya.com 8th year Celebration

    ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

    ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
    ವಿಷಯ:
    ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

    ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

    http://saadhaara.com/events/index/english

    http://saadhaara.com/events/index/kannada

    ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

    ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

    ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

    -ಕನ್ನಡಸಾಹಿತ್ಯ.ಕಾಂ ಬಳಗ

  • ಸುಪ್ತ ದೀಪ್ತಿ ಅವರೆ,
    ಬರಹದಲ್ಲಿ ರ‌್ಯಾಂಕ್ ಸರಿಯಾಗಿ ಟೈಪಿಸಬಹುದು ಅಂದಿರಲ್ಲ... ಅದು ಯುನಿಕೋಡಿನಲ್ಲಿಯೂ ಬರುತ್ತದೆಯೇ? ನಾನು ಕೂಡ ಅರೆಬರೆ ಬರಹ ಜ್ಞಾನದಿಂದ ಟೈಪಿಸಲು ಪ್ರಯತ್ನಿಸಿದೆ. ಊಹೂಂ... ಆಗಲಿಲ್ಲ... ನಿಮಗೆ (ಮತ್ತೊಂದು ಇಂಥದ್ದೇ Accident ಮೂಲಕ!)ಗೊತ್ತಾದರೆ ಹೇಳಿಬಿಡಿ. :)

    ಸುನಿಲ್ ಅವರೆ,

    ನಮ್ಮ ತಾಣಕ್ಕೆ ಸ್ವಾಗತ.

    ರಾಂಕ್ ಅಂತ ಬರೆದ್ರೆ, ಓದುಗರಿಗೂ, ಬರೆದವರಿಗೂ ಏನೋ ಒಂಥರಾ, ಭಾವಾಭಿವ್ಯಕ್ತಿಯೇ ಅಪೂರ್ಣ ಅಂತಾದ ಅನುಭವ. ಹೀಗಾಗಿ, ಹೇಗೂ ಅದು ಇಂಗ್ಲೀಷು... ಅದನ್ನು ಹೇಗೆ ಬರೆದರೂ ಸರಿ ಅಂತ ತಿಳಿದುಕೊಂಡೇ ಮುಂದುವರಿಯಬಹುದು. :)

  • ಅವಿ, ಯೂನಿಕೋಡ್ "ರ‌್ಯಾಂಕ್" ನನಗಿನ್ನೂ ಸರಿ ಬರ್ತಿಲ್ಲ.
    ಬರಹದಿಂದಲೇ ಯೂನಿಕೋಡಿಗೆ ವರ್ಗಾಯಿಸಿದಾಗಲೂ ಸರಿಯಾಗಿ ನಿಲ್ಲೋದಿಲ್ಲ!

  • ಸುಪ್ತದೀಪ್ತಿ ಅವರೆ,

    ರ‌್ಯಾಂಕ್ ನಮಗೆ ಮಾತ್ರ ಸಿಕ್ಕಿದೆ ಅಂದುಕೊಳ್ಳೋಣವೇ? :)

    ಅಂತರಂಗದ ಆಪ್ತಸ್ವರಕ್ಕೆ ಸ್ವಾಗತ.
    ಬರ್ತಾ ಇರಿ... ಧನ್ಯವಾದಗಳು.

  • ಸುಶ್ರುತ ಅವರೆ,

    ಸಾರಿ.... ನಿಮ್ಮ ಕಾಮೆಂಟನ್ನು ಯಾಕೋ ನಮ್ಮ ಆಕಿಸ್ಮೆಟ್ ಎಂಬ ಸ್ಪ್ಯಾಮ್ ನಿರೋಧಕವು ಆಕ್ಸಿಡೆಂಟಾಗಿ ಸ್ಪಾಮ್‌ಗೆ ಕಳುಹಿಸಿತ್ತು. ಇವತ್ತು ನೋಡಿದಾಗ ಗೊತ್ತಾಯಿತು.

    ಇರಲಿ... ಇದು ಕೂಡ ಒಂದು ಆಕ್ಸಿಡೆಂಟೇ. ಯಾಕೆಂದರೆ ಆ ಕ್ಕೆ ಯ ಅಡಿವತ್ತು ಕೊಡುವುದು ಯುನಿಕೋಡಿನಲ್ಲಿ ಸಾಧ್ಯವಾಗದ ಮಾತು. ಬಹುಶಃ ಕನ್ನಡಲ್ಲಿಯೂ ಅದು ಬಳಕೆಯಲ್ಲಿಲ್ಲ. ಇಂಗ್ಲಿಷಿನಲ್ಲಿರೋದು ಮಾತ್ರ. ನಾವೇನಿದ್ದರೂ ಆಂಟಿವೈರಸ್, ಆಕ್ಸಿಡೆಂಟ್, ಅಂತಲೇ ಹೇಳಬೇಕು. :)

    ಧನ್ಯವಾದಗಳು.

  • ನನ್ನ ಮನೆ ಹಾಗೂ ಕಾರ್ಯಸ್ಥಳದ ಪಿಸಿಗಳಲ್ಲಿ ಹೊಸ ತುಂಗ ಫಾಂಟ್‌ ಇದೆ, ಹಾಗೂ ಐಎಂಇ ಸಹ ಇದೆ. ವಿಂಡೋಸ್‌ ಎಕ್ಸ್‌ಪಿ ಕಾರ್ಯಾಚರಣಾ ವ್ಯವಸ್ಥೆ ಸಹ ಎಲ್ಲಾ ರೀತಿಯಲ್ಲೂ ಸರಿಯಿದೆ. ಆದರೆ ನೀವು ತಿಳಿಸಿದಂತೆ, ಎಂದಿನಂತೆ ಕಗಪ ಕೀಲಿಮಣೆ ಬಳಸುವ ನಾನು ಇಂಸ್ಕ್ರಿಪ್ಟ್‌ಗೆ ಬದಲಿಸಿ ರ ಗೆ ಒತ್ತು ನಮೂದಿಸಲು ಯತ್ನಿಸಿದೆ. ಜಪ್ಪೆಂದರೂ ಆಗಲಿಲ್ಲ.

    ಕಗಪ ಕೀಲಿಮಣೆಯಲ್ಲಿ ZWNJ ಸೇರಿಸುವುದು ಹೇಗೆ, ತಿಳಿಸುವಿರಾ?

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago