ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿದಂತೆ ನಮ್ಮಲ್ಲಿ ಎರಡು ಮಾದರಿಯ ಇಸ್ಲಾಂ ಇದೆ. ಒಂದು ಅಲ್ಲಾ ಇಸ್ಲಾಂ ಮತ್ತು ಇನ್ನೊಂದು ಮುಲ್ಲಾ ಇಸ್ಲಾಂ. ಭಾರತದಲ್ಲಿರುವ ಅಲ್ಪಸಂಖ್ಯಾತ ಸಾಮಾನ್ಯ ಪ್ರಜೆಗಳು ಮತ್ತು ಪಾಕಿಸ್ತಾನದಲ್ಲಿ ಇರುವ ಬಹುಸಂಖ್ಯಾತ ಪ್ರಜೆಗಳು ಅಲ್ಲಾ ಇಸ್ಲಾಂ ಪಾಲನೆ ಮಾಡುತ್ತಿದ್ದಾರೆ. ಆದರೆ ಇನ್ನೊಂದು ಸಮುದಾಯವು ಶಾಂತಿ-ಸಹಬಾಳ್ವೆ-ತ್ಯಾಗ ಸಂದೇಶ ಸಾರುವ ಖುರಾನ್ ಅನ್ನು ತಪ್ಪಾಗಿ ಅರ್ಥೈಸಿಕೊಂಡೋ ಅಥವಾ ತಪ್ಪು ಬೋಧನೆಗೊಳಗಾಗಿಯೋ ಹಾದಿ ತಪ್ಪಿ ಹಿಂಸಾ ಮಾರ್ಗ ತುಳಿಯುತ್ತಿದೆ.
ಹೀಗೇ ಅಂತರ್ಜಾಲದಲ್ಲಿ ಜಾಲಾಡುತ್ತಿದ್ದಾಗ ಈ ಒಂದು ಕೊಂಡಿ ಸಿಕ್ಕಿಬಿಟ್ಟಿತು. ಇದರ ಬಲ ಭಾಗದಲ್ಲಿ, ಕೆಳಗೆ ಜಾಹೀರಾತಿನ ಮೇಲೆ ಇರುವ ಭಾಗ ನೋಡಿ. ನನಗೆ ಉರ್ದು ಓದಲು ಬರುವುದಿಲ್ಲ. ಆದರೆ ಅಲ್ಲಿರುವ ಇಂಗ್ಲಿಷ್ ಅಕ್ಷರಗಳನ್ನು ಜೋಡಿಸುತ್ತಾ ಹೋದರೆ ಒಂದು ಅಂಶ ಅರಿವಾಗುತ್ತದೆ. ಭಾರತದ ಇಸ್ಲಾಮೀಕರಣಕ್ಕೆ ಈ ಉಗ್ರ ಹಾದಿ ತುಳಿದಿರುವ ಸಮುದಾಯವು ಷಡ್ಯಂತ್ರ ರೂಪಿಸಿದೆ. ಎಂಬುದು ದಿಟ.
ಎಕ್ಸ್‌ಪ್ರೆಸ್ ನ್ಯೂಸ್ ಎಂಬ ಉರ್ದು ಪತ್ರಿಕೆಯಲ್ಲಿ ಪ್ರಕಟವಾಗಿರುವ ನಕಾಶೆಯನ್ನು ನೋಡಿದರೆ, 2012ಕ್ಕೆ ಭಾರತದ ಬಹುಭಾಗ ಮತ್ತು 2010ಕ್ಕೆ ಮತ್ತಷ್ಟು ಭಾಗ ಪಾಕಿಸ್ತಾನದ ಇಸ್ಲಾಮಿಕ್ ಗಣರಾಜ್ಯದ ವ್ಯಾಪ್ತಿಗೆ ಬರುವಂತೆ ಮಾಡುವುದು ಈ ಉಗ್ರಗಾಮಿಗಳ ಗುರಿಯಾಗಿರಬಹುದು. ದಯವಿಟ್ಟು ಯಾರಾದರೂ ಉರ್ದು ಬಲ್ಲವರಿದ್ದರೆ ಇದರ ಮಾಹಿತಿಯನ್ನು ಅಂತರ್ಜಾಲಿಗರಿಗೆ ನೀಡಿದರೆ ಒಳಿತು.
ಈ ನಕಾಶೆಗಳನ್ನೇ ನೋಡಿ, ಕರ್ನಾಟಕದ ಒಂದಂಶ, ತಮಿಳುನಾಡು, ಆಂಧ್ರಗಳ ಭಾಗವು ಇಸ್ಲಾಮೀಕರಣದ ವ್ಯಾಪ್ತಿಗೆ ಬರಲಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಬಹುಭಾಗವು “ವಿವಾದಿತ ಪ್ರದೇಶ” ಎಂದು ಗುರುತಿಸಲಾಗಿದೆ. ಬಾಂಗ್ಲಾ ದೇಶಕ್ಕೆ, ನೇಪಾಳಕ್ಕೆ ಅದರದ್ದೇ ಆದ ಭೂಭಾಗ ಬಿಟ್ಟು ಕೊಡಲಾಗಿದೆ. ಬಹುಶಃ ಮುಂಬಯಿಯಲ್ಲಿ ಮುಸ್ಲಿಮಾಬಾದ್ ಎಂದು ನಾಮಕರಣ ಮಾಡಿದ್ದಾರೆ.
2012ರಲ್ಲಿ ಭಾರತವನ್ನು ಇಷ್ಟು ನುಂಗುತ್ತಾರಂತೆ!
2020ರಲ್ಲಿ ಭಾರತವು ಇಸ್ಲಾಮಿಕ್ ಗಣರಾಜ್ಯವಾಗಿ ಹೀಗಿರಬೇಕಂತೆ!
ಇದಕ್ಕಿಂತ ದೊಡ್ಡ ತಮಾಷೆಯ ಸಂಗತಿ ಅವರಿಗೆ ಬೇರೆ ಯಾವುದು ಕೂಡ ಸಿಗಲಿಲ್ವಾ…? :))
ಆದ್ರೆ ನಮ್ಮ ರಾಜಕಾರಣಿಗಳು ಮತ ಬ್ಯಾಂಕ್‌ಗಾಗಿ ಹೋರಾಟ ಮಾಡುತ್ತಲೇ ಇದ್ದರೆ, ಹೀಗಾಗುವುದನ್ನು ತಡೆಯುವುದಾದರೂ ಯಾರು?
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಈಗಿರುವ ಆಗುಹೋಗುಗಳನ್ನು ನೋಡಿದರೆ ಅದು ಆಗುವುದು ಆಶ್ಚರ್ಯವೇನಲ್ಲ.
ಈ ವೀಡಿಯೊ ನೋಡಿ, ಬಹಳ ಚೆನ್ನಾಗಿದೆ :-)
http://in.youtube.com/watch?v=BE-OAFZ84q8&feature=related
-ವೈಶಾಲಿ
ನಮ್ಮ ವ್ಯವಸ್ಥೆ ಮುಂದುವರಿಯುವ ರೀತಿ ನೋಡಿದರೆ..ಮತ್ತೇನಾಗುತ್ತೆ...
-ಚಿತ್ರಾ
ಸತ್ಯಾನಾರಾಯಣ ರಾವ್ ಅವರೆ,
ಬ್ಲಾಗಿಗೆ ಸ್ವಾಗತ. ನಿಮ್ಮಲ್ಲಿರುವ ಆತಂಕವೇ ನಮಗೂ ಕಾಡುತ್ತದೆ.
ಧನ್ಯವಾದಗಳು
ವೈಶಾಲಿ ಅವರೆ,
ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಸ್ವಾಗತ.
ನೀವು ನೀಡಿದ ಲಿಂಕ್ ಯಾಕೋ ವರ್ಕ್ ಆಗುತ್ತಿಲ್ಲ
ಧನ್ಯವಾದಗಳು.
ಚಿತ್ರಾ,
ರಾಜಕಾರಣಿಗಳು ಬಾಯಿಗೆ ಬಂದಂತೆ ಏನು ಬೇಕಾದ್ರೂ ಹೇಳಬಹುದು ಇಲ್ಲಿ ಅನ್ನುವ ಪರಿಸ್ಥಿತಿ ಇದೆ. ಹೀಗಾಗಿ ಅವರಿಂದ ಬದಲಾವಣೆ ನಿರೀಕ್ಷಿಸುವುದು ಅಷ್ಟಕ್ಕಷ್ಟೆ. ಅಲ್ವಾ...?