ಆಧಾರ್ ಇದೆಯೇ? ಹತ್ತೇ ನಿಮಿಷದಲ್ಲಿ ಉಚಿತವಾಗಿ PAN ಕಾರ್ಡ್ ಪಡೆಯಿರಿ

ಆಧಾರ್ ಕಾರ್ಡ್ ಹಾಗೂ PAN (ವೈಯಕ್ತಿಕ ಗುರುತು ಸಂಖ್ಯೆ) ಕಾರ್ಡ್‌ಗಳನ್ನು ಲಿಂಕ್ ಮಾಡಲು ಮಾ.31ರ ಗಡುವು ಇದೆ ಮತ್ತು ಈಗಿನ ಕೊರೊನಾ ವೈರಸ್ ಗದ್ದಲದಲ್ಲಿ ಅದರ ದಿನಾಂಕ ವಿಸ್ತರಣೆಯಾಗಲೂಬಹುದು. ಇದುವರೆಗೆ ಪ್ಯಾನ್ ಕಾರ್ಡ್ ಮಾಡಿಸದೇ ಇದ್ದವರಿಗೆ, ಮನೆಯಲ್ಲಿರುವ ಪ್ರಾಪ್ತ ವಯಸ್ಕ (18 ವರ್ಷ ಮೇಲ್ಪಟ್ಟ) ಮಕ್ಕಳಿಗೂ, ಯಾವುದೇ ಖರ್ಚಿಲ್ಲದೆ ಪ್ಯಾನ್ ಕಾರ್ಡ್ ಮಾಡಿಸುವ ವಿಧಾನವೊಂದನ್ನು ಭಾರತ ಸರ್ಕಾರ ಒದಗಿಸಿದೆ. ಇದಕ್ಕೆ ಬೇಕಾಗಿರುವುದು ಪ್ಯಾನ್ ಕಾರ್ಡ್ ಬೇಕಾಗಿರುವವರ ಹೆಸರಿನ ಆಧಾರ್ ಕಾರ್ಡ್, ಇಂಟರ್ನೆಟ್ ಸಂಪರ್ಕ ಹಾಗೂ ಆಧಾರ್ ಕಾರ್ಡ್ ಜತೆ ಲಿಂಕ್ ಆಗಿರುವ ಮೊಬೈಲ್ ಫೋನ್ ಮಾತ್ರ.

ಇದುವರೆಗೆ ಪ್ಯಾನ್ ಕಾರ್ಡ್ ಮಾಡಿಸಬೇಕೆಂದಿದ್ದರೆ ಆದಾಯ ತೆರಿಗೆ ಇಲಾಖೆಯ ಜಾಲತಾಣಕ್ಕೆ ಹೋಗಿ, ಸುದೀರ್ಘವಾದ ಮತ್ತು ಒಂದಿಷ್ಟು ತ್ರಾಸದಾಯಕವಾದ ಫಾರ್ಮ್‌ಗಳನ್ನು ತುಂಬುವ ಮತ್ತು ವಾರಗಟ್ಟಲೆ ಕಾಯಬೇಕಾಗಿತ್ತು. ಈಗ ಕೇವಲ ಹತ್ತು ನಿಮಿಷಗಳೊಳಗೆ, ಆಧಾರ್ ಆಧಾರಿತವಾದ ಇ-ಕೆವೈಸಿ ವ್ಯವಸ್ಥೆಯ ಮೂಲಕ ಕ್ಷಿಪ್ರವಾಗಿ ಪ್ಯಾನ್ ಕಾರ್ಡ್ ಲಭ್ಯವಾಗುತ್ತದೆ. ಇದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಸರಳವಾದ ಪ್ರಕ್ರಿಯೆಯ ಮಾಹಿತಿ.

ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ತಾಣವಾಗಿರುವ incometaxindiaefiling.gov.in ಗೆ ಹೋಗಿ. ಎಡಭಾಗದಲ್ಲಿ ‘ಇನ್‌ಸ್ಟೆಂಟ್ PAN ಥ್ರೂ ಆಧಾರ್’ ಎಂಬ ಲಿಂಕ್ ಗೋಚರಿಸುತ್ತದೆ. ಅಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಲು ಇರುವ ಲಿಂಕ್ ಕ್ಲಿಕ್ ಮಾಡಿ. ಮುಂದೆ ತೆರೆದುಕೊಳ್ಳುವ ಫಾರ್ಮ್‌ನಲ್ಲಿ ಯಾರ ಹೆಸರಿಗೆ ಪ್ಯಾನ್ ಕಾರ್ಡ್ ಬೇಕೋ, ಅವರ ಆಧಾರ್ ಸಂಖ್ಯೆ ನಮೂದಿಸಿ; ಕ್ಯಾಪ್ಚಾ ಎಂಬ, ಅಕ್ಷರಗಳ ಗುಚ್ಛವನ್ನು ಸಂಬಂಧಿಸಿದ ಬಾಕ್ಸ್‌ನಲ್ಲಿ ಭರ್ತಿ ಮಾಡಿ. ನಂತರ ಅಲ್ಲಿನ ಮಾಹಿತಿಯನ್ನು ಓದಿಕೊಂಡು, ‘ಜನರೇಟ್ ಆಧಾರ್ ಒಟಿಪಿ’ ಎಂಬುದನ್ನು ಕ್ಲಿಕ್ ಮಾಡಿ. ಸಂಪರ್ಕಗೊಂಡಿರುವ ಮೊಬೈಲ್ ಫೋನ್‌ಗೆ ಬಂದಿರುವ ಒಟಿಪಿ ನಮೂದಿಸಿ. ಆಧಾರ್ ವಿವರಗಳನ್ನು ದೃಢೀಕರಿಸಿ.

ಆಧಾರ್ ಕಾರ್ಡ್‌ನ ಇ-ಕೆವೈಸಿ ವಿವರಗಳನ್ನು ಈ ಸಿಸ್ಟಂ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಜತೆ ವಿನಿಮಯ ಮಾಡಿಕೊಂಡು, ದೃಢೀಕರಿಸಿಕೊಳ್ಳುತ್ತದೆ. ನಂತರ ಹತ್ತು ನಿಮಿಷದೊಳಗೆ ನಿಮ್ಮ ಇ-ಪ್ಯಾನ್ ಸಿದ್ಧವಾಗಿರುತ್ತದೆ. ಸ್ವಲ್ಪ ಹೊತ್ತಿನ ಬಳಿಕ ‘ಚೆಕ್ ಸ್ಟೇಟಸ್/ಡೌನ್‌ಲೋಡ್ ಪ್ಯಾನ್’ ಎಂಬ ಬಟನ್ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ದಾಖಲಿಸಿದರೆ, ಇ-ಪ್ಯಾನ್ ಕಾರ್ಡ್ ದೊರೆಯುತ್ತದೆ. ಇದು ಪಿಡಿಎಫ್ ರೂಪದಲ್ಲಿರುತ್ತದೆ. ಅದನ್ನು ಡೌನ್‌ಲೋಡ್ ಮಾಡಿಟ್ಟುಕೊಂಡು, ಡಿಜಿಲಾಕರ್ ಖಾತೆಗೆ (ಆ್ಯಪ್ ಮೂಲಕ) ಉಳಿಸಿಕೊಳ್ಳಿ. ಇಮೇಲ್ ಐಡಿ ನಮೂದಿಸಿದ್ದರೆ, ಇಮೇಲ್ ಮೂಲಕವೂ ಪ್ಯಾನ್ ಕಾರ್ಡ್‌ನ ಪಿಡಿಎಫ್ ಪ್ರತಿಯನ್ನು ಪಡೆಯಬಹುದಾಗಿದೆ.

ನೆನಪಿಡಬೇಕಾದ ವಿಚಾರವೆಂದರೆ, ಮೊದಲೇ ಪ್ಯಾನ್ ಕಾರ್ಡ್ ಇದ್ದವರಿಗೆ, ಅಪ್ರಾಪ್ತ ವಯಸ್ಕರಿಗೆ ಈ ಅವಕಾಶ ಇಲ್ಲ. ಇದು ಪ್ಯಾನ್ ಕಾರ್ಡ್‌ನ ಎಲೆಕ್ಟ್ರಾನಿಕ್ (ಪಿಡಿಎಫ್) ರೂಪ. ಯಾವುದೇ ವ್ಯವಹಾರಕ್ಕೆ ಇದು ಸಾಕಾಗುತ್ತದೆ. ಅದನ್ನೇ ಪ್ರಿಂಟ್ ತೆಗೆಸಿ, ಲ್ಯಾಮಿನೇಟ್ ಮಾಡಿಟ್ಟುಕೊಳ್ಳಬಹುದು. ಇದಕ್ಕೆ 50 ರೂಪಾಯಿಗೂ ಕಡಿಮೆ ಹಣ ಸಾಕಾಗುತ್ತದೆ.

ಒಟ್ಟಾರೆಯಾಗಿ ಪ್ಯಾನ್ ಕಾರ್ಡ್ ಪಡೆಯುವುದೀಗ ಕ್ಷಿಪ್ರ, ಉಚಿತ, ಸರಳ, ಕಾಗದರಹಿತ ಪ್ರಕ್ರಿಯೆ.

ಅವಿನಾಶ್ ಬಿ. | ಪ್ರಜಾವಾಣಿಯಲ್ಲಿ ಪ್ರಕಟ on 27 ಮಾರ್ಚ್ 2020

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

7 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

7 months ago

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು…

7 months ago

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ…

8 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

8 months ago

iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವ. ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ…

9 months ago