ಸಾಮಾನ್ಯ ದೂರವಾಣಿಗಳ ಸ್ಥಾನದಲ್ಲಿ ಬೇಸಿಕ್ ಫೋನ್, ಫೀಚರ್ ಫೋನ್ ಬಳಿಕ ಸ್ಮಾರ್ಟ್ ಫೋನ್‌ಗಳು ಬಂದು ಕಾಲವೆಷ್ಟೋ ಆಯಿತು. ಆದರೆ, ಈ ಫೋನ್‌ಗಳಲ್ಲಿರುವ ಸ್ಮಾರ್ಟ್ ವೈಶಿಷ್ಟ್ಯಗಳ ಬಗ್ಗೆ ಬಹುತೇಕರಿಗೆ ಇನ್ನೂ ಅರಿವಿಲ್ಲ. ಈಗಿನ ಆಂಡ್ರಾಯ್ಡ್ 11 ಕಾರ್ಯಾಚರಣಾ ವ್ಯವಸ್ಥೆಯಿರುವ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಕೆಲವೊಂದು ಉಪಯುಕ್ತ ‘ಸ್ಮಾರ್ಟ್’ ವೈಶಿಷ್ಟ್ಯಗಳನ್ನು ತಿಳಿಯೋಣ.
ಸದ್ಯಕ್ಕೆ ಹೊಸ ಫೋನ್‌ಗಳಲ್ಲಿ ಅಗತ್ಯ ಎಂದು ಪರಿಗಣಿಸಬಹುದಾದ ಅಂಶಗಳೆಂದರೆ ಕನಿಷ್ಠ 4 ಜಿಬಿ RAM, ಕನಿಷ್ಠ 64 GB ಸ್ಟೋರೇಜ್ ಸಾಮರ್ಥ್ಯ, ಒಳ್ಳೆಯ ಕ್ಯಾಮೆರಾ, ಉತ್ತಮ ಪ್ರೊಸೆಸರ್ ಮತ್ತು ಸ್ಕ್ರೀನ್ ಅನ್‌ಲಾಕ್ ಮಾಡಲು ಇರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಥವಾ ಮುಖ ಗುರುತಿಸುವ (ಫೇಸ್ ಅನ್‌ಲಾಕ್) ಸಾಮರ್ಥ್ಯ.
ಈ ಮೂಲಭೂತ ಆಧುನಿಕ ವೈಶಿಷ್ಟ್ಯಗಳೊಂದಿಗೆ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆಗಳು ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ (ಒಎಸ್)ಯನ್ನು ಒಂದಿಷ್ಟು ಬದಲಾಯಿಸಿ, ಕೆಲವೊಂದು ಉಪಯುಕ್ತ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಸೇರಿಸುತ್ತವೆ. ಇವುಗಳನ್ನು ನಾವು ಎನೇಬಲ್ ಮಾಡಿಕೊಳ್ಳಬೇಕಷ್ಟೆ. ಅವುಗಳನ್ನು ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಹುಡುಕಬೇಕಾಗುತ್ತದೆ.
ಸೆಟ್ಟಿಂಗ್ಸ್‌ನಲ್ಲಿ ಮೊಬೈಸ್ ತಯಾರಿಕ ಸಂಸ್ಥೆಗಳು ವಿಭಿನ್ನ ಹೆಸರುಗಳನ್ನು ನೀಡಿರುತ್ತವೆ. Gestures ಅಥವಾ Smart features ಇಲ್ಲವೇ Intelligent, Advanced features … ಹೀಗೆ ಬೇರೆ ಬೇರೆ ಮೊಬೈಲ್ ಫೋನ್‌ಗಳಲ್ಲಿ ಭಿನ್ನ ಭಿನ್ನ ಹೆಸರುಗಳಿರಬಹುದು. ಸಾಮಾನ್ಯವಾಗಿ ಇತ್ತೀಚಿನ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ Advanced Features ಹೆಸರಿನಲ್ಲಿ, ಒನ್‌ಪ್ಲಸ್ ಫೋನ್‌ಗಳಲ್ಲಿ Buttons & Gestures, ಮೇಡ್ ಇನ್ ಇಂಡಿಯಾದ ಮೈಕ್ರೋಮ್ಯಾಕ್ಸ್ ಫೋನ್‌ಗಳಲ್ಲಿ Intelligent Assistance ಅಂತ ಹೆಸರುಗಳಿತ್ತವೆ. ಅಲ್ಲಿ ನೋಡಿದಾಗ ನಮಗೆ ಈ ಅತ್ಯಾಧುನಿಕ ವೈಶಿಷ್ಟ್ಯಗಳು ಗೋಚರಿಸುತ್ತವೆ. ಅವುಗಳಲ್ಲಿ ಉಪಯುಕ್ತವಾದ ಕೆಲವು ಇಲ್ಲಿದ್ದು, ಅವುಗಳೆದುರು ಇರುವ ಬಟನ್ ಆನ್ ಮಾಡಿದರಾಯಿತು.
ಗೂಗಲ್ ಅಸಿಸ್ಟೆಂಟ್ ಎಂಬ ಧ್ವನಿ ಸಹಾಯಕ ವೈಶಿಷ್ಟ್ಯವು ಹೆಚ್ಚಿನ ಫೋನ್‌ಗಳ ಹೋಂ ಬಟನ್ ಒತ್ತಿ ಹಿಡಿದಾಗ ಸಕ್ರಿಯಗೊಳ್ಳುತ್ತದೆ. ಅದನ್ನು ಎನೇಬಲ್ ಮಾಡಿದರೆ, ನಾವು ಹೇಳಿದ್ದನ್ನು ಅದು ಹುಡುಕಿ ತೋರಿಸುತ್ತದೆ.
ಗಮನಿಸಬೇಕಾದ ವಿಚಾರವೆಂದರೆ, ಮೇಲಿನೆಲ್ಲ ವೈಶಿಷ್ಟ್ಯಗಳು ಎಲ್ಲ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರಲೇಬೇಕೆಂದಿಲ್ಲ. ಕೆಲವು ಬ್ರ್ಯಾಂಡ್‌ನ ಫೋನ್‌ಗಳಲ್ಲಿ ಇವುಗಳಲ್ಲಿ ಹೆಚ್ಚಿನ ವೈಶಿಷ್ಟ್ಯಗಳಿರುತ್ತವೆ, ಕೆಲವು ಇಲ್ಲದಿರಲೂಬಹುದು.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…