ಹೊಸದಿಲ್ಲಿ: ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿರುವ ಹಾನರ್ 10 ಲೈಟ್ ಎಂಬ ವಿನೂತನ, ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. 24 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಹಾಗೂ ಎಐ ಆಧಾರಿತ ಕ್ಯಾಮೆರಾ ಈ ಫೋನ್‌ನ ವಿಶೇಷತೆಗಳಲ್ಲೊಂದು.
ಫ್ಲಿಪ್‌ಕಾರ್ಟ್ ಹಾಗೂ ಹ್ಯುವೈ ಹಾನರ್ ಕಂಪನಿಯ ವೆಬ್ ತಾಣಗಳಲ್ಲಿ ಇದು ಮುಂದಿನ ವಾರದಿಂದ ಲಭ್ಯವಾಗಲಿದ್ದು, ಮುಂಗಡ ಬುಕಿಂಗ್ ಆರಂಭವಾಗಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಆಧಾರದಲ್ಲಿ ದೃಶ್ಯಗಳನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಉತ್ತಮ ಫೋಟೋಗಳನ್ನು ಒದಗಿಸಬಲ್ಲ ಈ ಫೋನ್ ಆಂಡ್ರಾಯ್ಡ್ 9 (ಪೈ) ಆಧಾರಿತ ಹ್ಯುವೈ ಕಂಪನಿಯದ್ದೇ ಆದ EMUI 9.0 ಕಾರ್ಯಾಚರಣಾ ವ್ಯವಸ್ಥೆಯನ್ನು ಹೊಂದಿದೆ.
ಸ್ಪೆಸಿಫಿಕೇಶನ್‌ಗಳು ಮತ್ತು ಬೆಲೆ
ವೇಗದ ಕಾರ್ಯಾಚರಣೆಗಾಗಿ HiSilicon Kirin 710 SoC ಚಿಪ್‌ಸೆಟ್ ಜತೆ ಬರುತ್ತಿರುವ ಮೊದಲ ಹಾನರ್ ಸ್ಮಾರ್ಟ್‌ಫೋನ್ 10 ಲೈಟ್ ಆಗಿದೆ. ಸ್ಕ್ರೀನ್‌ನಲ್ಲಿ ಸೆಲ್ಫೀ ಕ್ಯಾಮೆರಾವು ಡ್ಯೂ ಡ್ರಾಪ್ (ಮಂಜಿನ ಹನಿ) ಆಕಾರದಲ್ಲಿ ಪುಟ್ಟ ಜಾಗದಲ್ಲಿ ಕುಳಿತಿದ್ದು, ಕಳೆದ ವರ್ಷ (2018) ಬಿಡುಗಡೆಯಾದ ಹಾನರ್ 9 ಲೈಟ್‌ನ ಉತ್ತರಾಧಿಕಾರಿ ಈ ಫೋನ್.
4 ಜಿಬಿ ಹಾಗೂ 6 ಜಿಬಿ – ಹೀಗೆ ಎರಡು ಮಾದರಿಯ RAM ಆವೃತ್ತಿಗಳಲ್ಲಿ ಲಭ್ಯವಿರುವ ಈ ಫೋನ್, ಮಿಡ್‌ನೈಟ್ ಬ್ಲ್ಯಾಕ್, ಸಫೈರ್ ಬ್ಲೂ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಸಿಗಲಿದೆ.
ಬೆಲೆ
4 ಜಿಬಿ RAM ಹಾಗೂ 64 ಜಿಬಿ ಆಂತರಿಕ ಸ್ಟೋರೇಜ್ ಇರುವ ಆವೃತ್ತಿಯ ಬೆಲೆ 13,999 ರೂ. ಹಾಗೂ 6 ಜಿಬಿ RAM ಮತ್ತು 64 ಜಿಬಿ ಆಂತರಿಕ ಮೆಮೊರಿ ಇರುವ ಆವೃತ್ತಿಯ ಬೆಲೆ 17,999 ರೂ. ಜನವರಿ 20ರಿಂದ ಇದು ಫ್ಲಿಪ್‌ಕಾರ್ಟ್ ಹಾಗೂ ಹಾನರ್ ವೆಬ್ ತಾಣಗಳ ಮೂಲಕ ಲಭ್ಯವಾಗಲಿದೆ.
ಕೊಡುಗೆ
ಹಾನರ್ 10 ಲೈಟ್ ಖರೀದಿ ಜತೆಗೆ 2,200 ರೂ. ಮೊಲ್ಯದ ಜಿಯೋ ಕ್ಯಾಶ್‌ಬ್ಯಾಕ್ ಹಾಗೂ 2,800 ರೂ. ಮೌಲ್ಯದ ಕ್ಲಿಯರ್‌ಟ್ರಿಪ್ ವೋಚರ್‌ಗಳು ದೊರೆಯಲಿದೆ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…