DiGi Kannada | ಡಿಜಿ ಕನ್ನಡ https://digikannada.com Kannada News | ಕನ್ನಡದಲ್ಲಿ ತಂತ್ರಜ್ಞಾನ ಸುದ್ದಿ | Tech News In Kannada Wed, 05 Mar 2025 06:03:55 +0000 en-US hourly 1 https://wordpress.org/?v=6.7.2 https://i0.wp.com/digikannada.com/wp-content/uploads/2020/06/DK-Favicon.png?fit=16%2C16&ssl=1 DiGi Kannada | ಡಿಜಿ ಕನ್ನಡ https://digikannada.com 32 32 180678926 iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ https://digikannada.com/iphone-16e-launched-know-price-top-specs-key-features-and-everything/?utm_source=rss&utm_medium=rss&utm_campaign=iphone-16e-launched-know-price-top-specs-key-features-and-everything https://digikannada.com/iphone-16e-launched-know-price-top-specs-key-features-and-everything/#respond Tue, 18 Feb 2025 19:22:00 +0000 https://digikannada.com/?p=3488 iPhone 16e joins the iPhone 16 lineup, featuring the fast performance of the A18 chip, Apple Intelligence, extraordinary battery life, and a 48MP 2-in-1 camera system — all at an incredible value

The post iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ first appeared on DiGi Kannada | ಡಿಜಿ ಕನ್ನಡ.

]]>

Apple debuts iPhone 16e: A powerful new member of the iPhone 16 family
iPhone 16e joins the iPhone 16 lineup, featuring the fast performance of the A18 chip, Apple Intelligence, extraordinary battery life, and a 48MP 2-in-1 camera system — all at an incredible value

ಮುಂಬಯಿ: ಐಫೋನ್ ಎಸ್ಇ 4 ಬಿಡುಗಡೆ ಬಗ್ಗೆ ಹಲವಾರು ತಿಂಗಳುಗಳಿಂದ ಸಾಕಷ್ಟು ಕುತೂಹಲಗಳಿದ್ದವು. ಆದರೆ, ಆ್ಯಪಲ್ ಕಂಪನಿಯು ಐಫೋನ್ 16ಇ (iPhone 16e) ಎಂಬ ವಿನೂತನ ಮಾದರಿಯನ್ನು ಗುರುವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಮೂಲಕ ಕುತೂಹಲಗಳಿಗೆ ತೆರೆ ಬಿದ್ದಿದೆ. ಐಫೋನ್ 16ಇ ಎಂಬುದು ಆ್ಯಪಲ್ 16 ಸರಣಿಗೆ ಸೇರ್ಪಡೆಯಾಗಿರುವ ಹೊಸ ಮಾದರಿಯ ಅಗ್ಗದ ಫೋನ್.

ಅತ್ಯಾಧುನಿಕ ಎ18 ಚಿಪ್, 6.1 ಇಂಚಿನ OLED ಡಿಸ್‌ಪ್ಲೇ, 48 ಮೆಗಾಪಿಕ್ಸೆಲ್ ಫ್ಯೂಶನ್ ಕ್ಯಾಮೆರಾ ಮುಂತಾದ ಫ್ಲ್ಯಾಗ್‌ಶಿಪ್-ಹಂತದ ವೈಶಿಷ್ಟ್ಯಗಳು ಇದರಲ್ಲಿದ್ದು, ಆ್ಯಪಲ್ ಕಂಪನಿಯೇ ಮೊದಲ ಬಾರಿ ರೂಪಿಸಿದ ಸಿ1 ಎಂಬ ಸೆಲ್ಯುಲಾಲ್ ಮೋಡೆಮ್ ಅನ್ನು ಹೊಂದಿದೆ.

ಐಫೋನ್ 16ಇ: ಭಾರತದಲ್ಲಿ ಬೆಲೆ ಮತ್ತು ಮಾರಾಟದ ಕೊಡುಗೆಗಳು
ಹೊಸ ಐಫೋನ್ 16ಇ ಬೆಲೆಯು 128 ಜಿಬಿ ಆವೃತ್ತಿಗೆ ₹59,990 ಹಾಗೂ 256ಜಿಬಿ ಆವೃತ್ತಿಗೆ ₹64,999 ಇದ್ದು, ನಾಳೆಯಿಂದ (ಫೆ.21) ಪ್ರಿ-ಆರ್ಡರ್ ಆರಂಭವಾಗಲಿದೆ ಮತ್ತು ಫೆ.28ರಿಂದ ಭಾರತದಲ್ಲಿ ಲಭ್ಯವಾಗಲಿದೆ.

ಆ್ಯಪಲ್ ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ಆ್ಯಪಲ್ ಮಾರಾಟಗಾರರಲ್ಲಿ ಸಾಧನವು ಲಭ್ಯವಿದ್ದು, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ 12 ತಿಂಗಳ ವೆಚ್ಚ-ರಹಿತ ಇಎಂಐ ಆರಂಭಿಕ ಕೊಡುಗೆಯಾಗಿ ₹5000 ತಕ್ಷಣದ ರಿಯಾಯಿತಿ ದೊರೆಯಲಿದೆ.

ಐಫೋನ್ 16ಇ ಪ್ರಮುಖ ವೈಶಿಷ್ಟ್ಯಗಳು
6.1 ಇಂಚು ಸೂಪರ್ ರೆಟಿನಾ XDR OLED ಡಿಸ್‌ಪ್ಲೇ
A18 ಚಿಪ್, 6-ಕೋರ್ ಸಿಪಿಯು ಮತ್ತು 4-ಕೋರ್ ಜಿಪಿಯು
ಅತ್ಯಾಧುನಿಕ ಆ್ಯಪಲ್ ಇಂಟೆಲಿಜೆನ್ಸ್ ಒಳಗೊಂಡ ಐಒಎಸ್ 18 ಕಾರ್ಯಾಚರಣಾ ವ್ಯವಸ್ಥೆ
48 ಮೆಗಾಪಿಕ್ಸೆಲ್ ಸಾಮರ್ಥ್ಯದ ಫ್ಯೂಶನ್ ಕ್ಯಾಮೆರಾ (ಸಿಂಗಲ್ ಲೆನ್ಸ್)
12 ಮೆಗಾಪಿಕ್ಸೆಲ್ ಸಾಮರ್ಥ್ಯದ ಟ್ರೂ-ಡೆಪ್ತ್ ಆಟೋಫೋಕಸ್ ಸೆಲ್ಫೀ ಕ್ಯಾಮೆರಾ
ಇದರ ಬ್ಯಾಟರಿಯು ಐಫೋನ್ 11ಕ್ಕಿಂತ ಆರು ಗಂಟೆ ಹೆಚ್ಚು ಕಾಲ ಬರಲಿದೆ ಎಂದು ಆ್ಯಪಲ್ ಹೇಳಿದೆ.
ಯುಎಸ್‌ಬಿ – ಸಿ ಚಾರ್ಜಿಂಗ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಬೆಂಬಲ
ಐಪಿ-68 ರೇಟಿಂಗ್ ಇದ್ದು, ದೂಳು ಮತ್ತು ಜಲ ನಿರೋಧಕತೆ ಇದೆ.

ಐಫೋನ್ 16ಇ ಫೋನ್, ಆ್ಯಪಲ್ ಕಂಪನಿಯ ಅತ್ಯಂತ ಅಗ್ಗದ ಆ್ಯಪಲ್ 16 ಸರಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಅದೀಗ ಆ್ಯಪಲ್ ಎಸ್ಇ ಸರಣಿಯ ಬದಲಿಗೆ ಮುಂದುವರಿಯಲಿದೆ. ಹಿಂದಿನ ಐಫೋನ್ ಎಸ್ಇ3 ಫೋನ್‌ಗೆ ಹೋಲಿಸಿದರೆ, ಆ್ಯಪಲ್ 16ಇ ಫೋನ್‌ನಲ್ಲಿ ಒಲೆಡ್ (OLED) ಡಿಸ್‌ಪ್ಲೇ, ಫೇಸ್ ಐಡಿ, ಎ18 ಚಿಪ್, ಆ್ಯಕ್ಷನ್ ಬಟನ್ ಮತ್ತಿತರ ಪ್ರಮುಖ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಹಿಂದಿನ ಎಸ್ಇ ಫೋನ್‌ಗಳಿಗೆ ಹೋಲಿಸಿದರೆ, 12 ಗಂಟೆ ಹೆಚ್ಚು ಕಾಲ ಬ್ಯಾಟರಿ ಬಾಳಿಕೆ ಇರುತ್ತದೆ ಮತ್ತು ಡಿಸ್‌ಪ್ಲೇ (ಸ್ಕ್ರೀನ್) ಗಾತ್ರವೂ ಹಿಂದಿನ ಎಸ್ಇ ಸರಣಿಯ ಫೋನ್‌ಗೆ ಹೋಲಿಸಿದರೆ ದೊಡ್ಡದಾಗಿದೆ.

ಎಐ ಸಾಮರ್ಥ್ಯ
ಎ18 ಚಿಪ್ ಇದ್ದು, ಐಫೋನ್ 16ಇಯಲ್ಲಿ ಸುಲಲಿತವಾದ ಮಲ್ಟಿಟಾಸ್ಕಿಂಗ್, ಗೇಮಿಂಗ್ ಸಾಧ್ಯ. ಇದರಲ್ಲಿ ಅತ್ಯಾಧುನಿಕ ಆ್ಯಪಲ್ ಇಂಟೆಲಿಜೆನ್ಸ್ ಬೆಂಬಲವಿದೆ. ಸಿರಿ ಜೊತೆಗೆ ಸಂವಾದ, ಜೆನ್‌ಮೋಜಿ, ಸ್ಮಾರ್ಟ್ ಫೋಟೊ ಎಡಿಟಿಂಗ್ ಮತ್ತು ಪಠ್ಯ ಹುಡುಕಾಟದ ಸ್ಮಾರ್ಟ್ ವೈಶಿಷ್ಟ್ಯಗಳಿವೆ.

48 ಮೆಗಾಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಇದ್ದು, ಹೈ-ರೆಸೊಲ್ಯುಶನ್ ಚಿತ್ರಗಳು ಸೆರೆಯಾಗುತ್ತವೆ. ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಹಾಗೂ ಡಾಲ್ಬಿ ವಿಶನ್ ಸಹಿತ 4ಕೆ ವಿಡಿಯೊ ದಾಖಲೀಕರಣ ಸಾಧ್ಯ.

ಆ್ಯಪಲ್ ಐಫೋನ್ 16ಇಯಲ್ಲಿ ಎಮರ್ಜೆನ್ಸಿ ಎಸ್ಒಎಸ್, ರಸ್ತೆಬದಿ ಸಹಾಯ ಮತ್ತು ಉಪಗ್ರಹದ ಮೂಲಕ ಸಂದೇಶಗಳನ್ನು ಕಳುಹಿಸುವ ವ್ಯವಸ್ಥೆ ಅಳವಡಿಸಲಾಗಿದ್ದು, ಸೆಲ್ಯುಲಾರ್ ಅಥವಾ ವೈ-ಫೈ ಸಿಗ್ನಲ್‌ಗಳು ಇಲ್ಲದಿರುವೆಡೆಯಲ್ಲೂ ಉಪಗ್ರಹ ಸಂಪರ್ಕದ ಮೂಲಕ ಇವುಗಳು ಕೆಲಸ ಮಾಡುತ್ತವೆ.

The post iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ first appeared on DiGi Kannada | ಡಿಜಿ ಕನ್ನಡ.

]]>
https://digikannada.com/iphone-16e-launched-know-price-top-specs-key-features-and-everything/feed/ 0 3488
ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ https://digikannada.com/realme-14-pro-series-check-price-and-availability-new-phone/?utm_source=rss&utm_medium=rss&utm_campaign=realme-14-pro-series-check-price-and-availability-new-phone https://digikannada.com/realme-14-pro-series-check-price-and-availability-new-phone/#respond Fri, 17 Jan 2025 13:57:06 +0000 https://digikannada.com/?p=3482 ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ ಕೋಲ್ಡ್-ಸೆನ್ಸಿಟಿವ್ ಬಣ್ಣ ಬದಲಾಯಿಸುವ ಫೋನ್

The post ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ first appeared on DiGi Kannada | ಡಿಜಿ ಕನ್ನಡ.

]]>
  • ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ ಕೋಲ್ಡ್-ಸೆನ್ಸಿಟಿವ್ ಬಣ್ಣ ಬದಲಾಯಿಸುವ ಫೋನ್
  • ರಿಯಲ್‌ಮಿ 14 ಪ್ರೊ + 5 ಜಿ 3 ಸೊಗಸಾದ ಬಣ್ಣಗಳಲ್ಲಿ ಲಭ್ಯ: ಪರ್ಲ್ ವೈಟ್, ಸ್ಯೂಡ್ ಗ್ರೇ, ಮತ್ತು ಭಾರತಕ್ಕೆ ವಿಶೇಷವಾಗಿರುವ ಬಿಕಾನೇರ್ ಪರ್ಪಲ್.
  • ರಿಯಲ್‌ಮಿ 14 ಪ್ರೊ + 5 ಜಿ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯ. 8 GB + 128 GB ಬೆಲೆ ₹27,999, 8 GB + 256 GB ಬೆಲೆ ₹29,999 ಮತ್ತು 12 GB + 256 GB ಬೆಲೆ ₹30,999.
  • ರಿಯಲ್‌ಮಿ 14 ಪ್ರೊ 5 ಜಿ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ: ಪರ್ಲ್ ವೈಟ್, ಸ್ಯೂಡ್ ಗ್ರೇ, ಮತ್ತು ಭಾರತದ ವಿಶೇಷ ಜೈಪುರ್ ಪಿಂಕ್ ಬಣ್ಣ. ಇದರ ಬೆಲೆ 8GB+128GB ₹22,999 ಮತ್ತು 8GB+256GB ₹24,999.
  • ರಿಯಲ್‌ಮಿ ಬಡ್ಸ್ ವೈರ್‌ಲೆಸ್ 5 ANC ಮೂರು ಸ್ಟೈಲಿಶ್ ಬಣ್ಣಗಳಲ್ಲಿ ಲಭ್ಯ: ಮಿಡ್ ನೈಟ್ ಬ್ಲ್ಯಾಕ್, ಟ್ವಿಲೈಟ್ ಪರ್ಪಲ್ ಮತ್ತು ಡಾನ್ ಸಿಲ್ವರ್; ಬೆಲೆ ₹1,799 ಮತ್ತು ಈಗಿನ ರಿಯಾಯಿತಿಯಲ್ಲಿ ₹1,599ಗೆ ಲಭ್ಯ.
  • ಲಭ್ಯತೆ: ಜನವರಿ 23 ರಂದು ಮಧ್ಯಾಹ್ನ 12 ಗಂಟೆಯಿಂದ realme.com, ಫ್ಲಿಪ್‌ಕಾರ್ಟ್‌, Amazon.in ಮತ್ತು ಇತರ ಕಡೆಗಳಲ್ಲಿ ಮಾರಾಟ ಆರಂಭ.
  • ರಿಯಲ್‌ಮಿ 14 ಪ್ರೊ ಸರಣಿ 5 ಜಿ ಫೋನ್‌ಗೆ ಆರಂಭಿಕ ರಿಯಾಯಿತಿ ₹4000 ವರೆಗೆ.

ಬೆಂಗಳೂರು: ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್‌ ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ರಿಯಲ್‌ಮಿ 14 ಪ್ರೊ, ಸೀರಿಸ್ 5 ಜಿ ಮತ್ತು ರಿಯಲ್‌ಮಿ ಬಡ್ಸ್ ವೈರ್ ಲೆಸ್ 5 ಬಿಡುಗಡೆಗೊಳಿಸಿದೆ. ರಿಯಲ್‌ಮಿ 14 ಪ್ರೊ ಸರಣಿಯ ರಿಯಲ್‌ಮಿ 14 ಪ್ರೊ 5 ಜಿ ಮತ್ತು ರಿಯಲ್‌ಮಿ 14 ಪ್ರೊ + 5 ಜಿ ಫೋನ್‌ಗಳು ಬಿಡುಡೆಯಾಗಿದ್ದು, ಎರಡೂ ಫೋನ್‌ಗಳನ್ನು ಪ್ರಸಿದ್ಧ ಡ್ಯಾನಿಶ್ ಡಿಸೈನ್ ಸ್ಟುಡಿಯೋ, ವ್ಯಾಲರ್ ಡಿಸೈನರ್ಸ್ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು, ತಂಪಾದಾಗ (ಕೋಲ್ಡ್-ಸೆನ್ಸಿಟಿವ್) ಬಣ್ಣ ಬದಲಾಯಿಸುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎಂದು ಗುರುತಿಸಲ್ಪಟ್ಟಿದೆ.

ರಿಯಲ್‌ಮಿ 14 ಪ್ರೊ 5ಜಿ ಸರಣಿಯ ಫೋನ್‌ಗಳು 16°C ಗಿಂತ ಕಡಿಮೆ ತಾಪಮಾನಕ್ಕೆ ಒಡ್ಡಿಕೊಂಡಾಗ ಬಣ್ಣವನ್ನು (ಬಿಳಿಯ ಕವಚವು ನೀಲಿ ಬಣ್ಣಕ್ಕೆ) ಬದಲಾಯಿಸುತ್ತವೆ. ಪರಿಸರದ ತಾಪಮಾನವು ಮತ್ತೆ ಹೆಚ್ಚಾದಂತೆ ಬಣ್ಣವು ಮರಳುತ್ತದೆ. ಸ್ಮಾರ್ಟ್‌ ಫೋನ್‌ಗಳ ಜೊತೆಗೆ, ರಿಯಲ್‌ಮಿ ಬಡ್ಸ್ ವೈರ್‌ಲೆಸ್ 5 ಕೂಡ ಬಿಡುಗಡೆಯಾಗಿದೆ.

ಬಿಡುಗಡೆಯ ಬಗ್ಗೆ ಮಾತನಾಡಿದ ರಿಯಲ್‌ಮಿ ವಕ್ತಾರರು, “3ನೇ ಪೀಳಿಗೆಯ ಸ್ನ್ಯಾಪ್‌ಡ್ರ್ಯಾಗನ್ 7Sನಿಂದ ಚಾಲಿತವಾದ ಮತ್ತು ಕೋಲ್ಡ್-ಸೆನ್ಸಿಟಿವ್ ತಂತ್ರಜ್ಞಾನವನ್ನು ಹೊಂದಿರುವ ಮೊದಲ ಸ್ಮಾರ್ಟ್ ಫೋನ್‌ಗಳಿವು” ಎಂದಿದ್ದಾರೆ.

ರಿಯಲ್‌ಮಿ 14 ಪ್ರೊ ಪ್ಲಸ್ ಫೋನ್‌ಗಳು ಸೋನಿ IMX 882 ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್, DSLR ಮಟ್ಟದ ಸೋನಿ IMX 896 OIS ಕ್ಯಾಮೆರಾ ಮತ್ತು ಸುಧಾರಿತ ಎಐ ಅಲ್ಟ್ರಾ ಕ್ಲಾರಿಟಿ 2.0 ತಂತ್ರಜ್ಞಾನ ಇದರಲ್ಲಿದ್ದು, ಸ್ಪಷ್ಟ ಫೋಟೊಗಳಿಗೆ ಮತ್ತು ರಾತ್ರಿ ಛಾಯಾಗ್ರಹಣಕ್ಕೂ ಅನುಕೂಲವಾಗಿದೆ. ಮ್ಯಾಜಿಕ್ ಗ್ಲೋ ಟ್ರಿಪಲ್ ಫ್ಲ್ಯಾಶ್ ಇದರಲ್ಲಿದೆ. ಬೆಜೆಲ್-ರಹಿತ ಮತ್ತು ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಇದರಲ್ಲಿದ್ದು, ಹೆಚ್ಚುಕಾಲ ಬಾಳಿಕೆ ಬರುವ 6000 mAh ಟೈಟಾನ್ ಬ್ಯಾಟರಿ ಇದೆ. ರಿಯಲ್‌ಮಿ 14 ಪ್ರೊ + 5 ಜಿ ಮೂರು ವಿಶಿಷ್ಟ ಬಣ್ಣಗಳಲ್ಲಿ ಬರುತ್ತದೆ – ಪರ್ಲ್ ವೈಟ್ ಮತ್ತು ಸ್ಯೂಡ್ ಗ್ರೇ, ಮತ್ತು ಬಿಕಾನೇರ್ ಪರ್ಪಲ್ ಎಂಬ ಭಾರತದ ವಿಶೇಷ ಬಣ್ಣ ರೂಪಾಂತರವನ್ನು ಸಹ ಪರಿಚಯಿಸುತ್ತದೆ ಮತ್ತು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ: 8GB+128GB ಬೆಲೆ ರೂ.27,999. 8GB+256GB ಬೆಲೆ ರೂ. 29,999, ಮತ್ತು 12GB+256GB ಬೆಲೆ 30,999 ರೂ., ಇದು ವ್ಯಾಪಕ ಶ್ರೇಣಿಯ ಬಳಕೆದಾರರ ಆದ್ಯತೆಗಳು ಮತ್ತು ಅಗತ್ಯಗಳನ್ನು ಪೂರೈಸುತ್ತದೆ.

ರಿಯಲ್‌ಮಿ 14 ಪ್ರೊ + 5 ಜಿ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯ. 8 GB + 128 GB ಬೆಲೆ ₹27,999, 8 GB + 256 GB ಬೆಲೆ ₹29,999 ಮತ್ತು 12 GB + 256 GB ಬೆಲೆ ₹30,999.

ರಿಯಲ್‌ಮಿ 14 ಪ್ರೊ 5 ಜಿ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯ. ಪರ್ಲ್ ವೈಟ್, ಸ್ಯೂಡ್ ಗ್ರೇ, ಮತ್ತು ಭಾರತದ ವಿಶೇಷ ಜೈಪುರ್ ಪಿಂಕ್ ಬಣ್ಣ. ಇದರ ಬೆಲೆ 8GB+128GB ₹22,999 ಮತ್ತು 8GB+256GB ₹24,999.

ರಿಯಲ್‌ಮಿ ಬಡ್ಸ್ ವೈರ್‌ಲೆಸ್ 5 ANC ಮೂರು ಸ್ಟೈಲಿಶ್ ಬಣ್ಣಗಳಲ್ಲಿ ಲಭ್ಯ: ಮಿಡ್ ನೈಟ್ ಬ್ಲ್ಯಾಕ್, ಟ್ವಿಲೈಟ್ ಪರ್ಪಲ್ ಮತ್ತು ಡಾನ್ ಸಿಲ್ವರ್; ಬೆಲೆ ₹1,799 ಮತ್ತು ಈಗಿನ ರಿಯಾಯಿತಿಯಲ್ಲಿ ₹1,599ಗೆ ಲಭ್ಯ.

The post ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ first appeared on DiGi Kannada | ಡಿಜಿ ಕನ್ನಡ.

]]>
https://digikannada.com/realme-14-pro-series-check-price-and-availability-new-phone/feed/ 0 3482
ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ https://digikannada.com/realme-gt-7-pro-launch-what-is-the-price-specification/?utm_source=rss&utm_medium=rss&utm_campaign=realme-gt-7-pro-launch-what-is-the-price-specification https://digikannada.com/realme-gt-7-pro-launch-what-is-the-price-specification/#respond Fri, 29 Nov 2024 10:08:00 +0000 https://digikannada.com/?p=3477 ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ ರಿಯಲ್‌ಮಿ ಜಿಟಿ 7 ಪ್ರೊ ಸ್ಮಾರ್ಟ್ ಫೋನನ್ನು ಅನಾವರಣಗೊಳಿಸಿದೆ.

The post ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ first appeared on DiGi Kannada | ಡಿಜಿ ಕನ್ನಡ.

]]>
  • ರಿಯಲ್‌ಮಿ ಜಿಟಿ 7 ಪ್ರೊ ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಮೊಬೈಲ್ ಪ್ಲಾಟ್‌ಫಾರ್ಮ್
  • Next AI ಸುಧಾರಿತ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ವ್ಯವಸ್ಥೆ. ಎಐ ಸ್ಕೆಚ್ ಟು ಇಮೇಜ್, ಫ್ಲ್ಯಾಶ್ ಸ್ನ್ಯಾಪ್ ಮೋಡ್, ಎಐ ಅಲ್ಟ್ರಾ-ಕ್ಲಿಯರ್ ಸ್ನ್ಯಾಪ್ ಕ್ಯಾಮೆರಾ ಮತ್ತು ಎಐ ಜೂಮ್ ಅಲ್ಟ್ರಾ ಕ್ಲಾರಿಟಿ, ಅಂಡರ್ ವಾಟರ್ ಫೋಟೋಗ್ರಫಿ ಮೋಡ್.
  • ಸ್ಯಾಮ್ಸಂಗ್ ಡಿಸ್‌ಪ್ಲೇ, 5800mAh ಬ್ಯಾಟರಿ ಮತ್ತು 120W ಸೂಪರ್ ವೂಕ್‌ ವೇಗದ ಚಾರ್ಜಿಂಗ್, ಡಾಲ್ಬಿ ವಿಷನ್®.
  • ಮಾರ್ಸ್ ಆರೆಂಜ್ ಮತ್ತು ಗ್ಯಾಲಕ್ಸಿ ಗ್ರೇ ಬಣ್ಣಗಳಲ್ಲಿ ಲಭ್ಯ, 12GB+256GB ಬೆಲೆ ₹56,999 ಮತ್ತು 16GB+512GB ಬೆಲೆ ₹62,999.

ಬೆಂಗಳೂರು: ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ ರಿಯಲ್‌ಮಿ ಜಿಟಿ 7 ಪ್ರೊ ಸ್ಮಾರ್ಟ್ ಫೋನನ್ನು ಅನಾವರಣಗೊಳಿಸಿದೆ.

ರಿಯಲ್‌ಮಿ ಜಿಟಿ 7 ಪ್ರೊ ಅದ್ಭುತ ಸಾಧನವಾಗಿದ್ದು, ಭಾರತದಲ್ಲಿ ಸ್ನ್ಯಾಪ್ ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಮೊದಲ ಫೋನ್ ಇದಾಗಿದೆ. ಛಾಯಾಗ್ರಹಣ ಉತ್ಸಾಹಿಗಳಿಗಾಗಿ, ರಿಯಲ್‌ಮಿ ಜಿಟಿ 7 ಪ್ರೊ ಸೋನಿ IMX882 ಪೆರಿಸ್ಕೋಪ್ ಕ್ಯಾಮೆರಾ ಹೊಂದಿದ್ದು, ಇದೇ ಮೊದಲ ಬಾರಿಗೆ ಎಐ ಅಂಡರ್ ವಾಟರ್ ಫೋಟೋಗ್ರಫಿ ಮೋಡ್ ಅಳವಡಿಸಲಾಗಿದೆ.

ಇದೇ ಮೊದಲ ಬಾರಿಗೆ ರಿಯಲ್ ವರ್ಲ್ಡ್ ಇಕೋ ಡಿಸ್‌ಪ್ಲೇಯನ್ನು ಸ್ಯಾಮ್ಸಂಗ್ ನೆರವಿನಿಂದ ಅಭಿವೃದ್ಧಿಪಡಿಸಲಾಗಿದೆ.

ಕ್ವಾಲ್ಕಾಮ್ ಇಂಡಿಯಾದ ಮೊಬೈಲ್, ಕಂಪ್ಯೂಟ್ ಮತ್ತು ಎಕ್ಸ್ಆರ್ ಬಿಸಿನೆಸ್ ಹೆಡ್ ಸೌರಭ್ ಅರೋರಾ ಮಾತನಾಡಿ, ಸ್ನ್ಯಾಪ್‌ ಡ್ರ್ಯಾಗನ್ 8 ಎಲೈಟ್ ಮೊಬೈಲ್ ಪ್ಲಾಟ್‌ಫಾರ್ಮ್ ಚಾಲಿತ ಸ್ಮಾರ್ಟ್‌ಫೋನ್ ಬಿಡುಗಡೆಯಲ್ಲಿ ರಿಯಲ್‌ಮಿ ಜೊತೆ ಸಹಯೋಗ ನೀಡಲು ಖುಷಿಯಾಗುತ್ತಿದೆ. ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಮೊಬೈಲ್ ಪ್ಲಾಟ್‌ಫಾರ್ಮ್ ಅನ್ನು ವೇಗ, ದಕ್ಷತೆ ಮತ್ತು ಸಂಪರ್ಕದಲ್ಲಿ ಹೊಸ ಮಾನದಂಡಗಳಿಗಾಗಿ ರೂಪಿಸಲಾಗಿದೆ ಎಂದಿದ್ದಾರೆ.

ಜಿಟಿ 7 ಪ್ರೊ ನೆಕ್ಸ್ಟ್ ಎಐ ಎಂಬ ಸುಧಾರಿತ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ವ್ಯವಸ್ಥೆ ಇದರಲ್ಲಿದೆ. ಹೊಸದಾದ “ಎಐ ಸ್ಕೆಚ್ ಟು ಇಮೇಜ್” ವೈಶಿಷ್ಟ್ಯವನ್ನು ಬಳಸಿಕೊಂಡು ಸರಳ ರೇಖಾಚಿತ್ರಗಳನ್ನು ಚಿತ್ರ ರೂಪಕ್ಕೆ ಪರಿವರ್ತಿಸಬಹುದು. ಇದಲ್ಲದೆ, ರಿಯಲ್‌ಮಿ ಜಿಟಿ 7 ಪ್ರೊ ತನ್ನ ಎಐ ಮೋಷನ್ ಡಿ-ಬ್ಲರ್ ತಂತ್ರಜ್ಞಾನದೊಂದಿಗೆ, ಚಿತ್ರದಲ್ಲಿರುವ ಮಸುಕಾದ ಭಾಗವನ್ನು ಎಐ ಮೂಲಕ ಸರಿಪಡಿಸಬಲ್ಲದು. ಫ್ಲ್ಯಾಶ್ ಸ್ನ್ಯಾಪ್ ಮೋಡ್ ಮತ್ತು ಎಐ ಜೂಮ್ ಅಲ್ಟ್ರಾ ಮೋಡ್ ಇದ್ದು, ಎಐ ಅಲ್ಟ್ರಾ-ಕ್ಲಿಯರ್ ಸ್ನ್ಯಾಪ್ ಕ್ಯಾಮೆರಾ ಹೊಂದಿದೆ. ನೀರಿನೊಳಗೆ ಕೂಡ ಚಿತ್ರ, ವಿಡಿಯೊ ಸೆರೆಹಿಡಿಯಬಲ್ಲ ವ್ಯವಸ್ಥೆ ಇದರಲ್ಲಿದೆ. ಅತ್ಯುತ್ತಮ 5800mAh ಬ್ಯಾಟರಿ ಮತ್ತು 120W ಸೂಪರ್ ವೂಕ್ ಚಾರ್ಜರ್ ನೀಡಲಾಗುತ್ತದೆ. ರಿಯಲ್‌ಮಿ ಯುಐ 6.0 ಫ್ಲೂಯಿಡ್ ಡಿಸೈನ್ ಇದ್ದು, ಆಂಡ್ರಾಯ್ಡ್ 15ರ ಆಧಾರದಲ್ಲಿದೆ.

ರಿಯಲ್‌ಮಿ ಜಿಟಿ 7 ಪ್ರೊ ಎರಡು ಅದ್ಭುತ ಬಣ್ಣಗಳಲ್ಲಿ ಲಭ್ಯವಿದೆ: ಮಾರ್ಸ್ ಆರೆಂಜ್ ಮತ್ತು ಗ್ಯಾಲಕ್ಸಿ ಗ್ರೇ. ಎರಡು ಸ್ಟೋರೇಜ್ ರೂಪಾಂತರಗಳು: 12GB+256GB ಬೆಲೆ 56,999 ರೂ ಮತ್ತು 16GB+512GB ಬೆಲೆ 62,999 ರೂ.

realme.com ಮತ್ತು Amazon.in ತಾಣಗಳಲ್ಲಿ, ವಿವಿಧ ಕೊಡುಗೆಗಳೊಂದಿಗೆ ಲಭ್ಯ ಇದೆ.

The post ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ first appeared on DiGi Kannada | ಡಿಜಿ ಕನ್ನಡ.

]]>
https://digikannada.com/realme-gt-7-pro-launch-what-is-the-price-specification/feed/ 0 3477
ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ https://digikannada.com/realme-narzo-70-turbo-5g-and-realme-buds-n1-price-and-specifications/?utm_source=rss&utm_medium=rss&utm_campaign=realme-narzo-70-turbo-5g-and-realme-buds-n1-price-and-specifications https://digikannada.com/realme-narzo-70-turbo-5g-and-realme-buds-n1-price-and-specifications/#respond Mon, 16 Sep 2024 20:26:00 +0000 https://digikannada.com/?p=3472 ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1 ಅನ್ನು ಸೆ.9ರಂದು ಬಿಡುಗಡೆ ಮಾಡಿದೆ.

The post ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ first appeared on DiGi Kannada | ಡಿಜಿ ಕನ್ನಡ.

]]>

ಬೆಂಗಳೂರು: ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1 ಅನ್ನು ಸೆ.9ರಂದು ಬಿಡುಗಡೆ ಮಾಡಿದೆ. ರಿಯಲ್‌ಮಿ ನಾರ್ಜೋ ಸರಣಿ ಮತ್ತು AIoT ಸಾಧನಗಳಿಗೆ ಇತ್ತೀಚಿನ ಸೇರ್ಪಡೆಗಳಿವು.

ಹೊಸ ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ ಕಾರ್ಯಕ್ಷಮತೆಯ ಸಾಧನಗಳನ್ನು ಬಯಸುವ ಯುವ, ತಂತ್ರಜ್ಞಾನ-ಪ್ರೇಮಿ ಗ್ರಾಹಕರಿಗೆ ಉಪಯುಕ್ತ. ನವೀನ ಟರ್ಬೊ ತಂತ್ರಜ್ಞಾನದಿಂದ ಚಾಲಿತವಾಗಿರುವ ಈ ಸಾಧನವು, ಸಂವರ್ಧಿತ ಸಂಸ್ಕರಣಾ ವೇಗ ಮತ್ತು ಸುಗಮ ಬಳಕೆದಾರ-ಅನುಭವವನ್ನು ಖಚಿತಪಡಿಸುತ್ತದೆ. ವಿಶೇಷವಾಗಿ ಮೊಬೈಲ್ ಗೇಮಿಂಗ್ ಉತ್ಸಾಹಿಗಳಿಗೆ ಆಕರ್ಷಕವಾಗಿದೆ.

ಬಿಡುಗಡೆಯ ಬಗ್ಗೆ ಮಾತನಾಡಿದ ರಿಯಲ್‌ಮಿ ವಕ್ತಾರರು, “ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1 ಸಾಧನಗಳು ನಮ್ಮ ಜೆನ್-ಝಡ್ ಬಳಕೆದಾರರಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ತಲುಪಿಸುವ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತವೆ. ನಾವು ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುತ್ತಲೇ ಇರುವುದರಿಂದ, ಭಾರತದಲ್ಲಿ 70 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ತಲುಪುತ್ತಿದ್ದೇವೆ” ಎಂದಿದ್ದಾರೆ.

ಮೀಡಿಯಾಟೆಕ್ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ನಿರ್ದೇಶಕ ಅನುಜ್ ಸಿದ್ಧಾರ್ಥ್ ಮಾತನಾಡಿ, ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಸುಧಾರಿತ 4nm ಪ್ರೊಸೆಸಿಂಗ್ ಪ್ರಕ್ರಿಯೆ ತಂತ್ರಜ್ಞಾನವಿರುವ ಫ್ಲ್ಯಾಗ್‌ಶಿಪ್ ದರ್ಜೆಯ ಚಿಪ್‌ಸೆಟ್ ಆಗಿದೆ. SoC ಇಂಧನ ದಕ್ಷತೆಯೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ತಡೆರಹಿತವಾಗಿ ಸಂಯೋಜಿಸುತ್ತದೆ, ಆ ಮೂಲಕ ವಿಸ್ತೃತ ಅವಧಿಗೆ ಸ್ಥಿರ ಮತ್ತು ಸುಗಮ ಹೈ-ಫ್ರೇಮ್-ರೇಟ್ ಗೇಮಿಂಗ್‌ಗೆ ಪೂರಕವಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಚಿಪ್‌ಸೆಟ್ ಹೊಂದಿರುವ ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ತ್ವರಿತ ಮಲ್ಟಿಟಾಸ್ಕಿಂಗ್ ಮತ್ತು ಅಸಾಧಾರಣ ಛಾಯಾಗ್ರಹಣ ಸಾಮರ್ಥ್ಯಗಳನ್ನು ಒದಗಿಸುತ್ತದೆ. SoC ಹೈಪರ್ ಎಂಜಿನ್ ಆಪ್ಟಿಮೈಸೇಶನ್ ಸೂಟ್ ಅನ್ನು ಸಹ ಒಳಗೊಂಡಿದ್ದು, ಗೇಮಿಂಗ್ ಸಮಯದಲ್ಲಿ ನೆಟ್ವರ್ಕ್ ಸಂಪರ್ಕಕ್ಕೆ ಆದ್ಯತೆ ನೀಡಲು ಪ್ರೊಸೆಸರ್‌ಗೆ ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ ಫೋನ್‌ನಲ್ಲಿ ಟರ್ಬೊ ಕಾರ್ಯಕ್ಷಮತೆಯಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಚಿಪ್‌ಸೆಟ್ ಮತ್ತು ವಿಭಾಗದ ಅತಿದೊಡ್ಡ ಸ್ಟೇನ್‌ಲೆಸ್ ಸ್ಟೀಲ್ ವಿಸಿ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದು 90fps ಮತ್ತು GT ಮೋಡ್ + GT ಗೇಮಿಂಗ್ ವೈಶಿಷ್ಟ್ಯಗಳೊಂದಿಗೆ ವೇಗದ ಗೇಮಿಂಗ್ ಅನುಭವವನ್ನು ನೀಡುತ್ತದೆ. ಈ ಸಾಧನವು 12GB ಮತ್ತು 14GB RAM ಮತ್ತು 256GB ROM ಹೊಂದಿರುತ್ತದೆ. ಇದು 120Hz ರಿಫ್ರೆಶ್ ರೇಟಿಂಗ್ ಇರುವ OLED ಎಸ್ಪೋರ್ಟ್ಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಅತಿದೊಡ್ಡ 92.65% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಕೇವಲ 185 ಗ್ರಾಂ ತೂಕದ 7.6 mm ಅಲ್ಟ್ರಾ-ಸ್ಲಿಮ್, ಮೋಟಾರ್‌ಸ್ಪೋರ್ಟ್-ಪ್ರೇರಿತ ವಿನ್ಯಾಸವನ್ನು ಹೊಂದಿದೆ . ಫೋನ್ 50 MP ಎಐ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಮತ್ತು 5000mAh ಬೃಹತ್ ಬ್ಯಾಟರಿಯೊಂದಿಗೆ 45W ಅಲ್ಟ್ರಾ ಫಾಸ್ಟ್ ಚಾರ್ಜ್ ಅನ್ನು ಬೆಂಬಲಿಸುತ್ತದೆ. ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ IP65 ಡಸ್ಟ್ & ವಾಟರ್ ರೆಸಿಸ್ಟೆನ್ಸ್, ರೈನ್ ವಾಟರ್ ಸ್ಮಾರ್ಟ್ ಟಚ್, ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, ಏರ್ ಗೆಸ್ಚರ್ ಮತ್ತು ವಿವಿಧ ಎಐ ವೈಶಿಷ್ಟ್ಯಗಳು ಸೇರಿವೆ. ರಿಯಲ್‌ಮಿ ನಾರ್ಜೋ 70 ಟರ್ಬೊ 5ಜಿ ಮೂರು ಅದ್ಭುತ ಬಣ್ಣಗಳಲ್ಲಿ ಲಭ್ಯವಿದೆ: ಟರ್ಬೊ ಯೆಲ್ಲೋ, ಟರ್ಬೊ ಗ್ರೀನ್, ಟರ್ಬೊ ಪರ್ಪಲ್ ಮತ್ತು ಮೂರು ಸ್ಟೋರೇಜ್ ರೂಪಾಂತರಗಳು: 6GB + 128GB, ಬೆಲೆ 14,999 ರೂ.; 8 GB + 128GB, ಬೆಲೆ 15,999 ರೂ. ಮತ್ತು 12GB + 256GB, ಬೆಲೆ 18,999 ರೂ. ಇವುಗಳು realme.com ಮತ್ತು Amazon.in ನಲ್ಲಿ ಲಭ್ಯ ಇವೆ.

ರಿಯಲ್‌ಮಿ ನಾರ್ಜೋ 70 ಟರ್ಬೊ 5ಜಿ ಬೆಲೆ
ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ (6GB + 128GB) ₹16,999 +₹2000 ಕೂಪನ್. ಒಟ್ಟಾರೆ ಬೆಲೆ ₹14,999
ರಿಯಲ್‌ಮಿ ನಾರ್ಜೋ 70 ಟರ್ಬೊ 5ಜಿ (8GB +128GB) ₹17,999 +₹2000 ಕೂಪನ್, ಒಟ್ಟಾರೆ ಬೆಲೆ ₹15,999
ರಿಯಲ್‌ಮಿ ನಾರ್ಜೋ 70 ಟರ್ಬೊ 5ಜಿ (12GB+256GB) ₹20,999+₹2000 ಕೂಪನ್ ಒಟ್ಟಾರೆ ಬೆಲೆ ₹18,999

ಇದರ ಜೊತೆಗೆ, ರಿಯಲ್‌ಮಿ ಬಡ್ಸ್ ಎನ್ 1 ಅನ್ನು ಬಿಡುಗಡೆಗೊಳಿಸಲಾಗಿದೆ. ಇದು 46dB ಹೈಬ್ರಿಡ್ ನಾಯ್ಸ್ ಕ್ಯಾನ್ಸಲೇಶನ್, 12.4mm ಡೈನಾಮಿಕ್ BASS ಡ್ರೈವರ್ ಮತ್ತು 40 ಗಂಟೆಗಳ ಟೋಟಲ್ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಹೊಂದಿದೆ. 360° ಆಡಿಯೊ ಪರಿಣಾಮ ಹೊಂದಿದ್ದು, ಎರಡು ಸಾಧನಗಳನ್ನು ಸಂಪರ್ಕಿಸಬಹುದು.

ರಿಯಲ್‌ಮಿ ಬಡ್ಸ್ ಎನ್ 1 ಬೆಲೆ (ಎನರ್ಜೈಸಿಂಗ್‌ ಗ್ರೀನ್) ₹2,499 ಆಗಿದ್ದು, ₹300 ಕಡಿತ+ ₹200 ಕೂಪನ್ ಸೇರಿದರೆ, ಒಟ್ಟಾರೆ ಬೆಲೆ ₹1,999. realme.com ಮತ್ತು Amazon.in ನಲ್ಲಿ ಲಭ್ಯವಿದೆ.

The post ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ first appeared on DiGi Kannada | ಡಿಜಿ ಕನ್ನಡ.

]]>
https://digikannada.com/realme-narzo-70-turbo-5g-and-realme-buds-n1-price-and-specifications/feed/ 0 3472
ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ https://digikannada.com/read-a-thon-for-childrens-reading-habit/?utm_source=rss&utm_medium=rss&utm_campaign=read-a-thon-for-childrens-reading-habit https://digikannada.com/read-a-thon-for-childrens-reading-habit/#respond Wed, 11 Sep 2024 10:40:33 +0000 https://digikannada.com/?p=3468 ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

The post ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ first appeared on DiGi Kannada | ಡಿಜಿ ಕನ್ನಡ.

]]>

ಬೆಂಗಳೂರು, ಸೆ.11: ಜೆ.ಎಸ್.ಡಬ್ಲ್ಯೂ ಫೌಂಡೇಷನ್ ಮತ್ತು ಕರ್ನಾಟಕ ಸರ್ಕಾರದ ಬೆಂಬಲ ಪಡೆದ ‘ರೂಮ್ ಟು ರೀಡ್ ಇಂಡಿಯಾ’ ಕರ್ನಾಟಕದಲ್ಲಿ ರಾಜ್ಯವ್ಯಾಪಿ `ರೀಡ್-ಅ-ಥಾನ್’ ಆಯೋಜಿಸಿದೆ. ಈ ಕಾರ್ಯಕ್ರಮವು ಮಕ್ಕಳು, ಪೋಷಕರು, ಸಮುದಾಯಗಳು, ಸರ್ಕಾರಿ ಸಂಸ್ಥೆಗಳು ಮತ್ತು ಕಾರ್ಪೊರೇಟ್‌ಗಳನ್ನು ಕರ್ನಾಟಕ ರಾಜ್ಯದಾದ್ಯಂತ ಒಗ್ಗೂಡಿಸುತ್ತಿದ್ದು ರಾಜ್ಯದಲ್ಲಿ ಪ್ರಾರಂಭಿಕ ಕಲಿಕೆ ಮತ್ತು ಸಾಕ್ಷರತೆಯ ಫಲಿತಾಂಶಗಳನ್ನು ಮುಂದುವರಿಸಲು ಏಕೀಕೃತ ಪ್ರಯತ್ನ ನಡೆಸಲಿದೆ.

ಈ ಸಹಯೋಗವು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಭವಿಷ್ಯಕ್ಕೆ ತಳಹದಿಯ ಕೌಶಲ್ಯಗಳೊಂದಿಗೆ ಸನ್ನದ್ಧವಾಗಿಸುವ ಗುರಿ ಹೊಂದಿದೆ. ಶಾಲೆಗಳು, ಸಮುದಾಯಗಳು ಮತ್ತು ಸರ್ಕಾರಿ ಕಛೇರಿಗಳಲ್ಲಿ ವಿವಿಧ ಕ್ಷೇತ್ರದ ಪಾಲುದಾರರನ್ನು ಒಗ್ಗೂಡಲು ವಿಶಿಷ್ಟ ವೇದಿಕೆಯನ್ನು ಈ ರೀಡ್-ಅ-ಥಾನ್ ಒದಗಿಸುತ್ತದೆ. ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಅವರ ಬೆಂಬಲವನ್ನು ಪಡೆಯುವ ಗುರಿ ಹೊಂದಿದೆ. ಈ ವರ್ಷದ ರೀಡ್-ಅ-ಥಾನ್ ಏಕಕಾಲಕ್ಕೆ ಓದುವುದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗಳಲ್ಲಿ ಹೊಸ ದಾಖಲೆ ನಿರ್ಮಿಸುವ ಗುರಿ ಹೊಂದಿದೆ.

ರೂಮ್ ಟು ರೀಡ್ ಇಂಡಿಯಾದ ಕಂಟ್ರಿ ಡೈರೆಕ್ಟರ್ ಪೂರ್ಣಿಮಾ ಗಾರ್ಗ್ ಈ ಕಾರ್ಯಕ್ರಮದ ಪರಿಣಾಮದ ಕುರಿತು ಒತ್ತಿ ಹೇಳಿದ್ದು, “ಈ ವರ್ಷದ ಅಭಿಯಾನವು `ಮೇಕ್ ರೂಮ್ ಫಾರ್ ಅರ್ಲಿ ಲರ್ನಿಂಗ್’ ಎಂಬ ವಿಷಯ ಹೊಂದಿದ್ದು ಪ್ರತಿಯೊಂದು ಕಡೆಯೂ ಪ್ರಾರಂಭಿಕ ಕಲಿಕಾರ್ಥಿಗಳಿಗೆ ಕಲಿಯುವ ಮತ್ತು ಬೆಳೆಯುವ ಅವಕಾಶ ನೀಡುವಲ್ಲಿ ನಮ್ಮ ಬದ್ಧತೆಯನ್ನು ಮರು ದೃಢೀಕರಿಸುವ ಶಕ್ತಿಯುತ ಅವಕಾಶ ಪ್ರಸ್ತುತಪಡಿಸುತ್ತದೆ. ದೇಶಾದ್ಯಂತ ಪ್ರಾರಂಭಿಕ ಕಲಿಕಾರ್ಥಿಗಳು ಮತ್ತಿತರೆ ಭಾಗೀದಾರರು ಬೇರೆ ಎಲ್ಲವನ್ನೂ ಬದಿಗಿಟ್ಟು ರೀಡ್-ಅ-ಥಾನ್ ಅವಧಿಯ 3೦ ನಿಮಿಷ ಒಟ್ಟಿಗೇ ಓದುತ್ತಾರೆ. ಇದು ಮಕ್ಕಳಲ್ಲಿ ಓದುವುದು ಮತ್ತು ಕಲಿಯುವುದರ ಪ್ರಾಮುಖ್ಯತೆ ಕುರಿತು ಬಲವಾದ ಸಂದೇಶ ನೀಡುತ್ತದೆ” ಎಂದರು.

ಭಾರತವು ಆವಿಷ್ಕಾರ ಮತ್ತು ಅಭಿವೃದ್ಧಿಯಲ್ಲಿ ನಾಯಕತ್ವ ಸ್ಥಾನಕ್ಕೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಪಾಲುದಾರರ ಈ ಸಹಯೋಗವು ಭವಿಷ್ಯದ ತಲೆಮಾರುಗಳನ್ನು ಸಬಲೀಕರಿಸುವ ಗುರಿಯನ್ನು ಹೊಂದಿದೆ.

The post ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ first appeared on DiGi Kannada | ಡಿಜಿ ಕನ್ನಡ.

]]>
https://digikannada.com/read-a-thon-for-childrens-reading-habit/feed/ 0 3468
Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ https://digikannada.com/realme-13-series-5g-launched-know-price-and-specifications-2024-budget-phone/?utm_source=rss&utm_medium=rss&utm_campaign=realme-13-series-5g-launched-know-price-and-specifications-2024-budget-phone https://digikannada.com/realme-13-series-5g-launched-know-price-and-specifications-2024-budget-phone/#respond Sat, 31 Aug 2024 08:26:19 +0000 https://digikannada.com/?p=3459 ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್ 5 ಜಿ ಫೋನನ್ನು ಬಿಡುಗಡೆ ಮಾಡಿದೆ

The post Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ first appeared on DiGi Kannada | ಡಿಜಿ ಕನ್ನಡ.

]]>
  • • ರಿಯಲ್ ಮಿ 13+ 5ಜಿ ಹೆಚ್ಚಿನ ಕಾರ್ಯಕ್ಷಮತೆಯ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5 ಜಿ ಚಿಪ್ ಸೆಟ್ ನಿಂದ ನಿಯಂತ್ರಿಸಲ್ಪಡುತ್ತದೆ, ಜೊತೆಗೆ 26GB ಡೈನಾಮಿಕ್ ರಾಮ್ ವರೆಗೆ ಇರುತ್ತದೆ. ಸ್ಮಾರ್ಟ್ ಫೋನ್ ಜಿಟಿ ಮೋಡ್ ನೊಂದಿಗೆ ಬರುತ್ತದೆ, 90 fps ನಲ್ಲಿ ತಡೆರಹಿತ ಗೇಮಿಂಗ್ ಅನುಭವವನ್ನು ಖಚಿತಪಡಿಸುತ್ತದೆ.
    • ಇದು 80W ಅಲ್ಟ್ರಾ ಚಾರ್ಜ್ ಮತ್ತು ಸ್ಟೇನ್ಲೆಸ್ ಸ್ಟೀಲ್ ವೇಪರ್ ಕೂಲಿಂಗ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಇದು 50MP ಸೋನಿ LYT -600 ಕ್ಯಾಮೆರಾವನ್ನು ಹೊಂದಿದೆ, ಇದನ್ನು ಹಲವಾರು ಎಐ ವೈಶಿಷ್ಟ್ಯಗಳಿಂದ ಹೆಚ್ಚಿಸಲಾಗಿದೆ. ರಿಯಲ್ ಮಿ 13+ 5ಜಿ ಅಲ್ಟ್ರಾ-ಸ್ಲಿಮ್ 7.6mm ಬಾಡಿ ಹೊಂದಿದ್ದು, ಬೆರಗುಗೊಳಿಸುವ ವಿಕ್ಟರಿ ಸ್ಪೀಡ್ ವಿನ್ಯಾಸವನ್ನು ಹೊಂದಿದೆ.
    • ರಿಯಲ್ ಮಿ 13+ 5ಜಿ ಮೂರು ಅದ್ಭುತ ಬಣ್ಣಗಳಲ್ಲಿ ಬರುತ್ತದೆ: ವಿಕ್ಟರಿ ಗೋಲ್ಡ್, ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಮತ್ತು ಮೂರು ಸ್ಟೋರೇಜ್ ರೂಪಾಂತರಗಳು: 8GB+128GB ಬೆಲೆ 22,999 ರೂ., 8GB+256GB ಬೆಲೆ ರೂ 24,999 ಮತ್ತು 12GB+256GB ಬೆಲೆ 26,999 ರೂ. ಕ್ರಮವಾಗಿ.
    • ಸ್ಥಿರವಾದ 60fps ಅನ್ನು ತಲುಪಿಸಲು ರಿಯಲ್‌ ಮಿ 13 5ಜಿ ಮೀಡಿಯಾಟೆಕ್‌ ಡೈಮೆನ್ಸಿಟಿ 6300 5 ಜಿ ಚಿಪ್‌ ಸೆಟ್‌ ಮತ್ತು ಜಿಟಿ ಮೋಡ್‌ ನಿಂದ ಚಾಲಿತವಾಗಿದೆ. ಸ್ಮಾರ್ಟ್‌ ಫೋನ್‌ ಸ್ಟೇನ್‌ಲೆಸ್‌ ಸ್ಟೀಲ್‌ ವೇಪರ್‌ ಕೂಲಿಂಗ್‌ ಸಿಸ್ಟಮ್‌ ಮತ್ತು 5000mAh ಬ್ಯಾಟರಿಯೊಂದಿಗೆ 45W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.
    • ಇದು 120Hz ಐ ಕಂಫರ್ಟ್ ಡಿಸ್‌ ಪ್ಲೇಯನ್ನು ಹೊಂದಿದೆ ಮತ್ತು ಶಕ್ತಿಯುತ ಇಮೇಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ, ಸ್ಪಷ್ಟ ಮತ್ತು ಉತ್ತಮ-ಗುಣಮಟ್ಟದ ಫೋಟೋಗಳನ್ನು ಖಚಿತಪಡಿಸುತ್ತದೆ.
    • ರಿಯಲ್ ಮಿ 13 5ಜಿ ಎರಡು ಅದ್ಭುತ ಬಣ್ಣಗಳಲ್ಲಿ ಬರುತ್ತದೆ: ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಮತ್ತು ಎರಡು ಸ್ಟೋರೇಜ್ ರೂಪಾಂತರಗಳು: 8GB+128GB ಬೆಲೆ 17,999 ರೂ ಮತ್ತು 8GB+256GB ಬೆಲೆ 19,999 ರೂ.
    • ಖರೀದಿದಾರರು ಆಗಸ್ಟ್ 29 ರಿಂದ ಸೆಪ್ಟೆಂಬರ್ 5 ರವರೆಗೆ realme.com, ಫ್ಲಿಪ್ ಕಾರ್ಟ್ ಮತ್ತು ಮೈನ್ ಲೈನ್ ಚಾನೆಲ್ ಗಳಲ್ಲಿ ರಿಯಲ್ ಮಿ 13 ಸೀರಿಸ್ 5 ಜಿ ಅನ್ನು ಮುಂಚಿತವಾಗಿ ಕಾಯ್ದಿರಿಸಬಹುದು ಮತ್ತು 3000 ರೂ.ಗಳವರೆಗೆ ಕೊಡುಗೆಗಳನ್ನು ಪಡೆಯಬಹುದು.
    • ರಿಯಲ್ ಮಿ ಬಡ್ಸ್ ಟಿ 01 13 ಎಂಎಂ ಡೈನಾಮಿಕ್ ಬಾಸ್ ಡ್ರೈವ್ ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಒಟ್ಟು 28 ಗಂಟೆಗಳ ಪ್ಲೇಬ್ಯಾಕ್ ಸಮಯದೊಂದಿಗೆ ಬರುತ್ತದೆ. ಕಪ್ಪು ಮತ್ತು ಬಿಳಿ ಎಂಬ ಎರಡು ಸ್ಟೈಲಿಶ್ ಬಣ್ಣಗಳಲ್ಲಿ ಲಭ್ಯವಿರುವ ರಿಯಲ್ ಮಿ ಬಡ್ಸ್ ಟಿ 01 1299 ರೂ.ಗಳಿಗೆ ಗಮನಾರ್ಹ ವೈಶಿಷ್ಟ್ಯಗಳ ಸಂಯೋಜನೆಯನ್ನು ನೀಡುತ್ತದೆ.

ನವದೆಹಲಿ, ಆಗಸ್ಟ್ 29, 2024: ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಇಂದು ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್ 5 ಜಿ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಸಾಟಿಯಿಲ್ಲದ ವೇಗದೊಂದಿಗೆ ರಿಯಲ್ ಮಿ 13 ಸೀರಿಸ್ 5 ಜಿ ಉದ್ಯಮದಲ್ಲಿ ಕಾರ್ಯಕ್ಷಮತೆಯ ಮಾನದಂಡಗಳನ್ನು ಮರುವ್ಯಾಖ್ಯಾನಿಸಲು ಸಜ್ಜಾಗಿದೆ.

ರಿಯಲ್ ಮಿ ನಂಬರ್ ಸೀರಿಸ್ ಅನ್ನು ಹೊಸ ಟ್ಯಾಗ್ ಲೈನ್ ಅಡಿಯಲ್ಲಿ ಮರುವ್ಯಾಖ್ಯಾನಿಸುತ್ತಿದೆ: “ನೆಕ್ಸ್ಟ್‌ ಜೆನ್‌ ಪವರ್”. ಈ ಉತ್ಪನ್ನವು ಮಧ್ಯಮ ಶ್ರೇಣಿಯ ಬೆಲೆ ವಿಭಾಗದಲ್ಲಿ ಶಕ್ತಿಯನ್ನು ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ, ಕಾರ್ಯಕ್ಷಮತೆಗೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತದೆ. ರಿಯಲ್ ಮಿ 13 ಸೀರಿಸ್ 5ಜಿ ಹೊಸ ಮೈಲಿಗಲ್ಲನ್ನು ಗುರುತಿಸಲಿದ್ದು, ನಂಬರ್ ಸರಣಿಯ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಶಕ್ತಿಶಾಲಿ ಕೊಡುಗೆಯಾಗಿದೆ.

ಬಿಡುಗಡೆಯ ಬಗ್ಗೆ ಪ್ರತಿಕ್ರಿಯಿಸಿದ ರಿಯಲ್ ಮಿ ವಕ್ತಾರರು, “ರಿಯಲ್ ಮಿ 13 ಸೀರಿಸ್ 5 ಜಿ ಅನ್ನು ಅನಾವರಣಗೊಳಿಸಲು ನಾವು ನಂಬಲಾಗದಷ್ಟು ಉತ್ಸುಕರಾಗಿದ್ದೇವೆ, ಇದು ನಮ್ಮ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಈ ಬಿಡುಗಡೆಯೊಂದಿಗೆ, ನಾವು ರಿಯಲ್ ಮಿ ನಂಬರ್ ಸೀರಿಸ್ ಅನ್ನು ಹೊಸ ಟ್ಯಾಗ್ ಲೈನ್ ಅಡಿಯಲ್ಲಿ ಮರುವ್ಯಾಖ್ಯಾನಿಸುತ್ತಿದ್ದೇವೆ: ʼನೆಕ್ಸ್ಟ್‌ ಜೆನ್‌ ಪವರ್ʼ. ಈ ಉತ್ಪನ್ನವು ನಮ್ಮ ಪೋರ್ಟ್‌ ಫೋಲಿಯೊಗೆ ಮತ್ತೊಂದು ಸೇರ್ಪಡೆಯಲ್ಲ; ಇದು ಗೇಮ್ ಚೇಂಜರ್ ಆಗಿದ್ದು, ಮಧ್ಯಮ ಶ್ರೇಣಿಯ ಬೆಲೆ ವಿಭಾಗದಲ್ಲಿ ಶಕ್ತಿಯನ್ನು ಮರುವ್ಯಾಖ್ಯಾನಿಸುವ ಮತ್ತು ಕಾರ್ಯಕ್ಷಮತೆಗೆ ಹೊಸ ಮಾನದಂಡವನ್ನು ನಿಗದಿಪಡಿಸುವ ಗುರಿಯನ್ನು ಹೊಂದಿದೆ. ರಿಯಲ್ ಮಿ 13 ಸೀರಿಸ್ 5ಜಿ ನಂಬರ್ ಸರಣಿಯ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಕೊಡುಗೆಯಾಗಲಿದೆ. ಅದರ ಸುಧಾರಿತ ವೈಶಿಷ್ಟ್ಯಗಳು ಮತ್ತು ಉತ್ತಮ ಕಾರ್ಯಕ್ಷಮತೆಯೊಂದಿಗೆ, ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ಗಳನ್ನು ಬಳಕೆದಾರರು ಗ್ರಹಿಸುವ ವಿಧಾನದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ನಾವು ನಂಬುತ್ತೇವೆ. ದೈನಂದಿನ ಜೀವನದಲ್ಲಿ ಪ್ರಮುಖ ಅನುಭವಗಳನ್ನು ತರಲು ನಾವು ಹೆಮ್ಮೆಪಡುತ್ತೇವೆ, ಅಸಾಧಾರಣ ಮೌಲ್ಯವನ್ನು ತಲುಪಿಸುವ ಮತ್ತು ಬಳಕೆದಾರರ ನಿರೀಕ್ಷೆಗಳನ್ನು ಮೀರುವ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತೇವೆ.

ಬಿಡುಗಡೆಯ ಬಗ್ಗೆ ಮಾತನಾಡಿದ ಮೀಡಿಯಾಟೆಕ್ ನ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ನಿರ್ದೇಶಕ ಅನುಜ್ ಸಿದ್ಧಾರ್ಥ್, “ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಫ್ಲ್ಯಾಗ್ಶಿಪ್-ಗ್ರೇಡ್ ಚಿಪ್ ಸೆಟ್ ಆಗಿದ್ದು, ಇದು ಅತ್ಯುತ್ತಮ ದರ್ಜೆಯ 4 ಎನ್ಎಂ ಪ್ರಕ್ರಿಯೆ ನೋಡ್ ಅನ್ನು ಬಳಸುತ್ತದೆ, ಮುಂದಿನ ಪೀಳಿಗೆಯ ಸಾಮರ್ಥ್ಯಗಳನ್ನು ಸೇರಿಸುವಾಗ ಶಕ್ತಿ ಮತ್ತು ದಕ್ಷತೆಯ ನಡುವೆ ಸಮತೋಲನವನ್ನು ಸಾಧಿಸುತ್ತದೆ” ಎಂದು ಹೇಳಿದರು. “ಚಿಪ್ ಸೆಟ್ ಬೆಂಬಲದ ಅದ್ಭುತ 10-ಬಿಟ್ ಡಿಸ್ಪ್ಲೇಗಳು, ಎಐ ಕೆಲಸದ ಹೊರೆಗಾಗಿ ಶಕ್ತಿಯುತ ಎನ್ ಪಿಯು, ಮೀಡಿಯಾಟೆಕ್ ಹೈಪರ್‌ ಇಂಜಿನ್ ಆಪ್ಟಿಮೈಸೇಶನ್ ಗಳ ಮೂಲಕ ಅನುಕೂಲಕರವಾದ ಉನ್ನತ ಗೇಮಿಂಗ್ ವೈಶಿಷ್ಟ್ಯಗಳು ಮತ್ತು ಅಸಾಧಾರಣ ಛಾಯಾಗ್ರಹಣ ಅನುಭವ. ರಿಯಲ್ ಮಿ 13+ 5 ಜಿಗೆ ಶಕ್ತಿ ನೀಡುವ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಮೀಡಿಯಾಟೆಕ್ 5 ಜಿ ಅಲ್ಟ್ರಾಸೇವ್ 3.0+ ಮತ್ತು ಡ್ಯುಯಲ್ 5 ಜಿ ಸಿಮ್ ಬೆಂಬಲದಂತಹ ಪ್ರಭಾವಶಾಲಿ ತಂತ್ರಜ್ಞಾನಗಳನ್ನು ಸಂಯೋಜಿಸುತ್ತದೆ. ಶಕ್ತಿಯುತ ದೊಡ್ಡ ಕೋರ್ ಗಳು, ಸ್ಟೇನ್ ಲೆಸ್ ಸ್ಟೀಲ್ ಆವಿ ಕೂಲಿಂಗ್ ಸಿಸ್ಟಮ್ ಮತ್ತು 120Hz OLED ಇ-ಸ್ಪೋರ್ಟ್ ಡಿಸ್ಪ್ಲೇಯೊಂದಿಗೆ, ರಿಯಲ್ ಮಿ 13 + 5 ಜಿ ಬಳಕೆದಾರರಿಗೆ ತಮ್ಮ ನೆಚ್ಚಿನ ಆಟಗಳನ್ನು ಪೂರ್ಣವಾಗಿ ಆನಂದಿಸಲು ಆಪ್ಟಿಮೈಸ್ಡ್ ಗೇಮಿಂಗ್ ಅನುಭವವನ್ನು ನೀಡುತ್ತದೆ ಎಂದು ಅವರು ಮತ್ತಷ್ಟು ಹೈಲೈಟ್‌ ಮಾಡಿ ಹೇಳಿದರು.

ರಿಯಲ್ ಮಿ 13+ 5ಜಿ ಹೆಚ್ಚಿನ ಕಾರ್ಯಕ್ಷಮತೆಯ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5 ಜಿ ಚಿಪ್ ಸೆಟ್ ನಿಂದ ನಿಯಂತ್ರಿಸಲ್ಪಡುತ್ತದೆ, ಜೊತೆಗೆ ಸುಗಮ ಮಲ್ಟಿಟಾಸ್ಕಿಂಗ್ ಗಾಗಿ 26GB ಡೈನಾಮಿಕ್ ರಾಮ್ ವರೆಗೆ ಇರುತ್ತದೆ . ಈ ಸ್ಮಾರ್ಟ್ ಫೋನ್ ಗರಿಷ್ಠ ಕಾರ್ಯಕ್ಷಮತೆಯ ಬಿಡುಗಡೆಗಾಗಿ ಜಿಟಿ ಮೋಡ್ ನೊಂದಿಗೆ ಬರುತ್ತದೆ, ಇದು 90 FPS ನಲ್ಲಿ ತಡೆರಹಿತ ಗೇಮಿಂಗ್ ಅನುಭವವನ್ನು ಖಚಿತಪಡಿಸುತ್ತದೆ. 80W ಅಲ್ಟ್ರಾ ಚಾರ್ಜ್ ವೈಶಿಷ್ಟ್ಯದೊಂದಿಗೆ, ಇದು ಕೇವಲ ಐದು ನಿಮಿಷಗಳ ಚಾರ್ಜಿಂಗ್ ನೊಂದಿಗೆ ಒಂದು ಗಂಟೆ ಗೇಮಿಂಗ್ ಅನ್ನು ಒದಗಿಸುತ್ತದೆ. ತೀವ್ರ ಬಳಕೆಯ ಸಮಯದಲ್ಲಿ ಸ್ಮಾರ್ಟ್ ಫೋನ್ ತಂಪಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಇದು ಸ್ಟೇನ್ಲೆಸ್ ಸ್ಟೀಲ್ ವೇಪರ್ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ. ರಿಯಲ್ ಮಿ 13+ 5 ಜಿ LYT -600 ಕ್ಯಾಮೆರಾವನ್ನು ಹೊಂದಿದ್ದು, 12 ಪ್ರೊನಂತೆಯೇ ಲೈಟ್ ಫ್ಯೂಷನ್ ಎಂಜಿನ್ ಹೊಂದಿದೆ, ಸ್ಪಷ್ಟ, ಉತ್ತಮ-ಗುಣಮಟ್ಟದ ಫೋಟೋಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ವಿನ್ಯಾಸದ ವಿಷಯದಲ್ಲಿ, ರಿಯಲ್ ಮಿ 13 + 5 ಜಿ ಸಂಖ್ಯೆ ಸರಣಿಯ ಸೌಂದರ್ಯ ಮತ್ತು ಭಾವಚಿತ್ರ ಡಿಎನ್ ಎಯನ್ನು ಮುಂದುವರಿಸುತ್ತದೆ. ಇದು ಅಲ್ಟ್ರಾ-ಸ್ಲಿಮ್ 7.6mm ದೇಹವನ್ನು ಹೊಂದಿದ್ದು, ಬೆರಗುಗೊಳಿಸುವ ವಿಕ್ಟರಿ ಸ್ಪೀಡ್ ವಿನ್ಯಾಸದೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ಆರಾಮದಾಯಕ ಹಿಡಿತವನ್ನು ಒದಗಿಸುತ್ತದೆ. ಇದಲ್ಲದೆ, ರಿಯಲ್ ಮಿ 13 + 5 ಜಿ ಉದ್ಯಮದ ಮೊದಲ TÜV SÜD ಲ್ಯಾಗ್-ಫ್ರೀ ಮೊಬೈಲ್ ಗೇಮಿಂಗ್ ಪ್ರಮಾಣಪತ್ರವನ್ನು ಗಳಿಸಿದೆ, ಇದು ಅದರ ಶಕ್ತಿಯುತ ಕಾರ್ಯಕ್ಷಮತೆ ಮತ್ತು ಅಸಾಧಾರಣ ಗೇಮಿಂಗ್ ಅನುಭವಕ್ಕೆ ಸಾಕ್ಷಿಯಾಗಿದೆ. ರಿಯಲ್ ಮಿ 13+ 5ಜಿ ಮೂರು ಅದ್ಭುತ ಬಣ್ಣಗಳಲ್ಲಿ ಬರುತ್ತದೆ: ವಿಕ್ಟರಿ ಗೋಲ್ಡ್, ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಮತ್ತು ಮೂರು ಸ್ಟೋರೇಜ್ ರೂಪಾಂತರಗಳು: 8GB+128GB ಬೆಲೆ 22,999 ರೂ., 8GB+256GB ಬೆಲೆ 24,999 ರೂ ಮತ್ತು 12GB+256GB ಬೆಲೆ ರೂ 26,999 ಕ್ರಮವಾಗಿ.

ರಿಯಲ್ ಮಿ 13 5ಜಿ ಹೈ ಪರ್ಫಾಮೆನ್ಸ್ ಮೀಡಿಯಾಟೆಕ್ ಡೈಮೆನ್ಸಿಟಿ 6300 5ಜಿ ಚಿಪ್ ಸೆಟ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಸುಗಮ ಮಲ್ಟಿಟಾಸ್ಕಿಂಗ್ ಮತ್ತು ತಡೆರಹಿತ ಗೇಮಿಂಗ್ ಅನುಭವವನ್ನು ಖಾತ್ರಿಪಡಿಸುತ್ತದೆ. ಜಿಟಿ ಮೋಡ್ ಚಿಪ್ ಸೆಟ್ ನ ಸಂಪೂರ್ಣ ಸಾಮರ್ಥ್ಯವನ್ನು ಅನ್ ಲಾಕ್ ಮಾಡುತ್ತದೆ, ಬೇಡಿಕೆಯ ಶೀರ್ಷಿಕೆಗಳಲ್ಲಿ ಸ್ಥಿರವಾದ 60fps ಅನ್ನು ನೀಡುತ್ತದೆ. ತೀವ್ರ ಬಳಕೆಯ ಸಮಯದಲ್ಲಿ ಸೂಕ್ತ ತಾಪಮಾನವನ್ನು ಕಾಪಾಡಿಕೊಳ್ಳಲು ಸಾಧನವು ಸ್ಟೇನ್ಲೆಸ್ ಸ್ಟೀಲ್ ವೇಪರ್ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ. 45W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವು ಕೆಲಸವಿಲ್ಲದ ಸಮಯವನ್ನು ಕಡಿಮೆ ಮಾಡುತ್ತದೆ, ವಿಸ್ತೃತ ಗೇಮಿಂಗ್ ಅವಧಿಗಳಿಗೆ ಅನುವು ಮಾಡಿಕೊಡುತ್ತದೆ. ಇದರ 120Hz ಐ ಕಂಫರ್ಟ್ ಡಿಸ್ಪ್ಲೇ ಅದ್ಭುತ ದೃಶ್ಯ ಅನುಭವವನ್ನು ನೀಡುತ್ತದೆ, ನಿಮ್ಮ ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಯನ್ನು ಹೆಚ್ಚಿಸುತ್ತದೆ. ರಿಯಲ್ ಮಿ 13 5 ಜಿ 50MP OIS ಕ್ಯಾಮೆರಾವನ್ನು ಹೊಂದಿದೆ, ಇದು ಸ್ಪಷ್ಟ ಮತ್ತು ಉತ್ತಮ ಗುಣಮಟ್ಟದ ಫೋಟೋಗಳನ್ನು ಖಚಿತಪಡಿಸುತ್ತದೆ. ರಿಯಲ್ ಮಿ 13 5ಜಿ ಎರಡು ಆಕರ್ಷಕ ಬಣ್ಣಗಳಲ್ಲಿ ಬರುತ್ತದೆ: ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಮತ್ತು ಎರಡು ಸ್ಟೋರೇಜ್ ರೂಪಾಂತರಗಳು: 8GB+128GB ಬೆಲೆ ಕ್ರಮವಾಗಿ 17,999 ರೂ ಮತ್ತು 8GB+256GB ಬೆಲೆ ಕ್ರಮವಾಗಿ 19,999 ರೂ.

The post Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ first appeared on DiGi Kannada | ಡಿಜಿ ಕನ್ನಡ.

]]>
https://digikannada.com/realme-13-series-5g-launched-know-price-and-specifications-2024-budget-phone/feed/ 0 3459
e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್ https://digikannada.com/how-to-do-fact-check-to-verify-fake-news-in-india/?utm_source=rss&utm_medium=rss&utm_campaign=how-to-do-fact-check-to-verify-fake-news-in-india https://digikannada.com/how-to-do-fact-check-to-verify-fake-news-in-india/#respond Fri, 26 Jul 2024 13:24:46 +0000 https://digikannada.com/?p=3442 Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

The post e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್ first appeared on DiGi Kannada | ಡಿಜಿ ಕನ್ನಡ.

]]>

(ಕನ್ನಡ ಪತ್ರಕರ್ತರ ಸಂಘದ ವಿಶೇಷ ಸಂಚಿಕೆಗಾಗಿ ಸಿದ್ಧಪಡಿಸಿದ ವಿಶೇಷ ಲೇಖನ)

-ಅವಿನಾಶ್ ಬೈಪಾಡಿತ್ತಾಯ

2012ರಲ್ಲಿ ಈಶಾನ್ಯ ರಾಜ್ಯಗಳ, ವಿಶೇಷವಾಗಿ ಅಸ್ಸಾಂ ಪ್ರಜೆಗಳು ಭಯಭೀತರಾಗಿ, ಜೀವ ಉಳಿಸಿಕೊಳ್ಳುವುದಕ್ಕಾಗಿ ಹಿಂಡುಹಿಂಡಾಗಿ ತಮ್ಮೂರಿಗೆ ಓಡಿಹೋದ ಪ್ರಸಂಗ ಇನ್ನೂ ನೆನಪಿನಂಗಳದಲ್ಲಿದೆ. ಅಸ್ಸಾಂನ ನಿರ್ದಿಷ್ಟ ಸಮುದಾಯದ ಮಂದಿಗೆ ಬೆಂಗಳೂರಿನಲ್ಲಿ ಹಲ್ಲೆ ಮಾಡಲಾಗುತ್ತಿದೆ, ಥಳಿಸಲಾಗುತ್ತಿದೆ ಎಂಬೆಲ್ಲ ವದಂತಿ ಹರಡಿದ್ದೇ ಇದಕ್ಕೆ ಕಾರಣ. ತಿರುಚಿದ ಸುದ್ದಿ, ಚಿತ್ರಗಳೆಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದೇ ಇದರ ಹಿಂದಿನ ತಥ್ಯ.

ತಂತ್ರಜ್ಞಾನ ಬೆಳೆದು ಆಧುನಿಕವಾದಂತೆಲ್ಲಾ ಅದರಿಂದ ಪ್ರಯೋಜನ ಎಷ್ಟೋ, ಅದರ ದುಷ್ಪರಿಣಾಮ ಮತ್ತು ಅದರ ದುರುಪಯೋಗಗಳಾಗುವುದೇ ಹೆಚ್ಚು. ಈ ಸಾಲಿನಲ್ಲಿ ಸುದ್ದಿಮನೆಗಳಿಗೂ ತಂತ್ರಜ್ಞಾನ ಸಾಕಷ್ಟು ಅನುಕೂಲ ಕಲ್ಪಿಸಿದ್ದು ಸುಳ್ಳಲ್ಲ. ಆದರೆ, ಎಲ್ಲ ರೀತಿಯ ಮಾಧ್ಯಮಗಳಿಗೆ ಅತಿದೊಡ್ಡ ಪಿಡುಗು ಆಗಿ ಪರಿಣಮಿಸಿರುವುದು ಸುಳ್ಳು ಸುದ್ದಿಗಳು, ವದಂತಿಗಳು ಮತ್ತು ಅವುಗಳನ್ನು ಬೇಕಾಬಿಟ್ಟಿಯಾಗಿ ಪ್ರಸಾರ ಮಾಡಬಲ್ಲ ಸಾಮಾಜಿಕ ಜಾಲತಾಣಗಳು.

ಸತ್ಯವು ಒಂದು ಹೆಜ್ಜೆ ಮುಂದಿಟ್ಟಾಗ, ಸುಳ್ಳು ಇಡೀ ಜಗತ್ತನ್ನೊಮ್ಮೆ ಸುತ್ತಿ ಬಂದಿರುತ್ತದೆ ಎಂಬ ಮಾತಿದೆ. ತಂತ್ರಜ್ಞಾನದ ಬೆಳವಣಿಗೆಯ ವೇಗವೇ ಇದಕ್ಕೆ ಕಾರಣ. ವಾಟ್ಸ್ಆ್ಯಪ್, ಟೆಲಿಗ್ರಾಂ, ಫೇಸ್‌ಬುಕ್, ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚಾಟ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಆಗಿ ಬರುವ ಸಂದೇಶಗಳಲ್ಲಿ ಎಲ್ಲವನ್ನೂ ನಂಬುವಂತಿಲ್ಲ. ಇಷ್ಟೇ ಏಕೆ, ಕೆಲವೊಂದು ಜಾಲತಾಣಗಳ (ವೆಬ್‌ಸೈಟ್) ವರದಿಗಳನ್ನೂ ನಂಬುವಂತಿಲ್ಲ. ಹಾಗಾದರೆ ಈ ಮಾಹಿತಿಯ ಮಹಾಪೂರದಲ್ಲಿ ಏನನ್ನು ನಂಬುವುದು? ಇಂಥ ಸಂದಿಗ್ಧ ಸ್ಥಿತಿಗೆ ಮಾಧ್ಯಮಗಳು ಬಂದು ನಿಂತಿವೆ. ವದಂತಿಗಳು ಮಾಡುವ ಅನಾಹುತಗಳು ಅಷ್ಟಿಷ್ಟಲ್ಲ. ನಮ್ಮ ನಡುವೆ ಅಷ್ಟೇ ಅಲ್ಲ, ರಾಜ್ಯಗಳ ನಡುವೆ, ದೇಶಗಳ ನಡುವೆ ವೈಮನಸ್ಸನ್ನೂ ಅವು ಸೃಷ್ಟಿಸಬಲ್ಲವು!

Fact Check!
ಈ ಪರಿ ಆತಂಕ ಹುಟ್ಟಿಸಿರುವ ಸುಳ್ಳು ಅಥವಾ ನಕಲಿ ಸುದ್ದಿಗಳಿಂದ ಸತ್ಯಾಂಶ ಬಗೆದು, ಸತ್ಯವನ್ನು ಜನರಿಗೆ ತಲುಪಿಸಲೆಂದೇ ತೀರಾ ಇತ್ತೀಚಿನ ದಿನಗಳಲ್ಲಿ ಸುದ್ದಿ ಮನೆಗಳಲ್ಲಿಯೂ ಫ್ಯಾಕ್ಟ್ ಚೆಕ್ ತಂಡಗಳನ್ನೂ ರಚಿಸಲಾಗುತ್ತಿದೆ. ಫ್ಯಾಕ್ಟ್ ಚೆಕ್ ಅಂದರೆ ಸತ್ಯಾಂಶ ಪರಿಶೀಲನೆ – ಇದು ಎಷ್ಟು ತ್ರಾಸದಾಯಕ ವಿಚಾರವೆಂದರೆ, ಒಂದು ಸುದ್ದಿಯ ಸುಳ್ಳನ್ನು ಭೇದಿಸುವಷ್ಟರಲ್ಲಿ, ಹತ್ತಾರು ನಕಲಿ ಸುದ್ದಿಗಳು ಪರಿಶೀಲನೆಗೆ ಕಾದಿರುತ್ತವೆ. ಅಂದರೆ, ಇದಕ್ಕೆ ಮಾನವನ ಕೆಲಸದ ವೇಗ ಸಾಕಾಗುವುದಿಲ್ಲ ಎಂಬುದು ದಿಟ. ತಂತ್ರಜ್ಞಾನದ ಎಡವಟ್ಟುಗಳಿಗೆ ತಂತ್ರಜ್ಞಾನದಿಂದಲೇ ಮದ್ದರೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇದೀಗ ಹೊಸದಾಗಿ ಚಾಲ್ತಿಗೆ ಬಂದಿದೆ ಕೃತಕ ಬುದ್ಧಿಮತ್ತೆ ಅಥವಾ ಆರ್ಜಿತ ಬುದ್ಧಿಮತ್ತೆ ಎಂದು ಕರೆಯಲಾಗುವ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಫ್ಯಾಕ್ಟ್ ಚೆಕಿಂಗ್ ವ್ಯವಸ್ಥೆ ಹೊಸ ಸಾಧ್ಯತೆಯತ್ತ ಬೆಳಕು ಚೆಲ್ಲಿದೆ.

ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ
ಬಹುತೇಕರ ಕೈಗೆ ಸ್ಮಾರ್ಟ್ ಫೋನ್‌ಗಳು ಬಂದಿವೆ, ಇಂಟರ್ನೆಟ್ ಕೈಗೆಟುಕುತ್ತಿದೆ. ಇದು ಆಧುನಿಕ ತಂತ್ರಜ್ಞಾನದ ಸುಧಾರಣೆಯ ಫಲ. ಭಾರತದಲ್ಲಿ ಸುಮಾರು 60 ಕೋಟಿ ಮಂದಿ ಇಂಟರ್ನೆಟ್ ಬಳಸುತ್ತಿದ್ದಾರೆ. ಚೀನಾ ನಂತರ ಭಾರತವೇ ಇಂಟರ್ನೆಟ್‌ನ ಅತಿದೊಡ್ಡ ಮಾರುಕಟ್ಟೆ. ಭಾರತ ಸರಕಾರ ಡಿಜಿಟಲ್ ಇಂಡಿಯಾ ಮಂತ್ರ ಪಠಿಸುತ್ತಾ, ಜನ ಸಾಮಾನ್ಯರನ್ನೂ ಡಿಜಿಟಲ್ ಜಗತ್ತಿನತ್ತ ಸೆಳೆಯುತ್ತಿದೆ. ಜೊತೆಗೆ, ಡೇಟಾ ಅಥವಾ ಇಂಟರ್ನೆಟ್ ಸಂಪರ್ಕ ಅಗ್ಗವಾಗಿಬಿಟ್ಟಿದೆ, ಸ್ಮಾರ್ಟ್‌ಫೋನ್‌ಗಳೂ ಅಗ್ಗವಾಗಿವೆ. ಹೆಚ್ಚು ಜನರು ಮೊಬೈಲ್ ಫೋನ್‌ನಲ್ಲೇ ಇಂಟರ್ನೆಟ್ ಬಳಸುತ್ತಿರುವಂತೆ, ಹೆಚ್ಚು ಹೆಚ್ಚು ಆನ್‌ಲೈನ್ ಕಂಟೆಂಟ್ (ಪಠ್ಯ, ಚಿತ್ರ, ವಿಡಿಯೊ ಇತ್ಯಾದಿ) ರಚನೆಯಾಗುತ್ತಿದೆ.

ಈ ಮಾಹಿತಿ ಪ್ರವಾಹದಲ್ಲಿ ಅಸಲಿ ಸುದ್ದಿ ಅಥವಾ ಮಾಹಿತಿಗಳು ತೂರಿಕೊಂಡಿದ್ದಕ್ಕಿಂತ ಹೆಚ್ಚಾಗಿ ನಕಲಿ ಸುದ್ದಿ ಅಥವಾ ತಪ್ಪು, ದಾರಿತಪ್ಪಿಸುವ ಸುಳ್ಳು ಮಾಹಿತಿಗಳೇ ತುಂಬಿಕೊಂಡಿವೆ. ಇದಕ್ಕಾಗಿಯೇ ಹುಟ್ಟಿಕೊಂಡ ಜಾಲತಾಣಗಳು, ಆನ್‌ಲೈನ್ ಜಗತ್ತಿಗೆ ಬರುತ್ತಿರುವ ಹಿರಿಯರನ್ನು ಮತ್ತು ಕಿರಿಯರನ್ನು ಕಂಗೆಡಿಸಿಬಿಟ್ಟಿದೆ. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬುದರ ಕುರಿತು ಅವರಲ್ಲಿ ಅರಿವು ಮೂಡಿಸುವ ಕಾರ್ಯವಾಗಿಲ್ಲ. ಹೀಗಾಗಿ, ಸುಮ್ಮನಿರದ ಕೈಗಳು ಎಲ್ಲ ವಿಷಯವನ್ನೂ ನೋಡಿ, ಖುಷಿಪಟ್ಟು, ಓಹ್, ಇದೂ ಇರಬಹುದು ಅಂತಂದುಕೊಂಡು, ಫಾರ್ವರ್ಡ್ ಮಾಡಲು ಕಲಿತಿವೆ. ಪೂರ್ಣ ಓದಲು ಪುರುಸೊತ್ತಾಗುವುದಿಲ್ಲ. ಮುಖ್ಯಾಂಶವನ್ನೋ, ಒಂದೆರಡು ವಾಕ್ಯವನ್ನೋ ಓದಿ, ಆಸಕ್ತಿದಾಯಕ ಅನಿಸಿದಾಕ್ಷಣ, ಸತ್ಯವೇನು- ಮಿಥ್ಯೆಯೇನು ಎಂದೆಲ್ಲ ಯೋಚಿಸದೆ, ಈ ಸಂದೇಶವನ್ನು ಮತ್ತೊಬ್ಬರಿಗೋ, ಬೇರೆ ಗ್ರೂಪಿಗೋ ಫಾರ್ವರ್ಡ್ ಮಾಡಿ ಆಗಿರುತ್ತವೆ. ಇದು ಅಸಲಿ ಸುದ್ದಿ ಮಾಹಿತಿಯ ಜೊತೆಗೆ ಫೇಕ್ ಮಾಹಿತಿ ಕ್ಷಿಪ್ರವಾಗಿ ಪ್ರಸಾರವಾಗುವ ಬಗೆ.

ಈ ಫೇಕ್ ಮಾಹಿತಿ ಪ್ರವಾಹವು ಚುನಾವಣಾ ವರ್ಷಗಳಲ್ಲಂತೂ, ರಾಜಕೀಯಕ್ಕಾಗಿ ಬಳಕೆಯಾಗುವುದು ಹೆಚ್ಚು. ಈ ನಿಟ್ಟಿನಲ್ಲಿ ಆನ್‌ಲೈನ್ ದಿಗ್ಗಜ ಕಂಪನಿಗಳಾದ ಗೂಗಲ್, ಫೇಸ್‌ಬುಕ್ (ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ) ಹಾಗೂ ಟ್ವಿಟರ್ (ಈಗ ಎಕ್ಸ್), ನಕಲಿ ಸುದ್ದಿ ಹರಿದಾಡುವುದನ್ನು ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಂಡು, ಹೈರಾಣಾಗಿವೆ. ಎಲ್ಲರ ಕೈಯಲ್ಲಿಯೂ ಮೊಬೈಲ್ ಫೋನ್ ಇರುವುದರಿಂದ ಎಲ್ಲರೂ ಈಗ ಸುದ್ದಿಗಾರರೇ ಆಗಿಬಿಟ್ಟಿದ್ದಾರೆ.

ಏನಿದು ಫ್ಯಾಕ್ಟ್ ಚೆಕ್?
ಹಿಂದೆಲ್ಲ ಹಗರಣಗಳು, ಭ್ರಷ್ಟಾಚಾರ ಅಥವಾ ಯಾವುದೋ ಕುಕೃತ್ಯಗಳನ್ನು ಬಯಲಿಗೆಳೆಯಲು, ತನಿಖಾ ಪತ್ರಿಕೋದ್ಯಮವೆಂಬುದು ಹೆಸರು ಪಡೆದಿತ್ತು. ಫ್ಯಾಕ್ಟ್ ಚೆಕ್ ಎಂಬುದು ಅದರ ಸುಧಾರಿತ, ಆಧುನೀಕೃತ ರೂಪ. ಇಲ್ಲಿ ವ್ಯತ್ಯಾಸವೆಂದರೆ, ಈಗಾಗಲೇ ಆಗಿರುವ ಸುದ್ದಿಯನ್ನು, ಅದು ನಿಜವೇ, ಸುಳ್ಳೇ? ಅಥವಾ ಅದರಲ್ಲಿರುವ ಮಾಹಿತಿಯ ಸತ್ಯಾಂಶವೆಷ್ಟು ಎಂದು ದೃಢೀಕರಿಸುವ ಕೆಲಸ. ಇದಕ್ಕಾಗಿ, ಲಭ್ಯವಿರುವ ತಂತ್ರಜ್ಞಾನವನ್ನು ಬಳಸುವುದು ಅತ್ಯಗತ್ಯ.

ಫ್ಯಾಕ್ಟ್ ಚೆಕ್ ಎಂಬುದು ಕೇವಲ ಸತ್ಯ ಸುದ್ದಿ ಮತ್ತು ಫೇಕ್ ನ್ಯೂಸ್ – ಇದಕ್ಕೆ ಮಾತ್ರವೇ ಸೀಮಿತವಾಗುಳಿದಿಲ್ಲ. ಸುಳ್ಳು ಸುದ್ದಿಯಲ್ಲದೆ, ಪೂರ್ತಿಯಾಗಿ ತಪ್ಪು ಮಾಹಿತಿ, ದಾರಿ ತಪ್ಪಿಸುವ ಮಾಹಿತಿ, ತಿರುಚಿದ ಮಾಹಿತಿ, ತಿರುಚಿದ ಚಿತ್ರ, ತಿರುಚಲಾದ ವಿಡಿಯೊ, ಯಾವ್ಯಾವುದೋ ಸಂದರ್ಭದ ಕಂಟೆಂಟ್ (ಚಿತ್ರ, ಪಠ್ಯ, ಧ್ವನಿ, ವಿಡಿಯೊ) ಮತ್ಯಾವುದೋ ಸಂದರ್ಭಕ್ಕೆ ಬಳಸುವುದು, ಹಳೆಯ ಕಂಟೆಂಟ್ ಅನ್ನು ತಿರುಚುವುದು – ಇವೆಲ್ಲವೂ ಸೇರಿಕೊಂಡಿದೆ. ಇವುಗಳ ನಡುವೆ ಸತ್ಯಾಂಶವನ್ನು ಕಂಡುಹುಡುಕುವುದು ಎಂದರೆ ಬಲುದೊಡ್ಡ ಸಾಧನೆಯೇ ಸರಿ. ಒಂದು ಸುಳ್ಳು ಅಥವಾ ಫೇಕ್ (ನಕಲಿ) ಸುದ್ದಿ ಮಾಡುವುದಕ್ಕೆ ಕೆಲವೇ ಕ್ಷಣಗಳು ಸಾಕು, ಆದರೆ ಅದರ ಹಿಂದಿನ ಸತ್ಯಾಂಶ ಬಯಲಿಗೆಳೆಯಬೇಕಿದ್ದರೆ, ಗಂಟೆ, ದಿನ, ವಾರವೂ ಬೇಕಾಗಬಹುದು. ಅಷ್ಟು ಸಂಕೀರ್ಣವಾಗಿದೆ ಈ ಫ್ಯಾಕ್ಟ್ ಚೆಕ್ ಕೆಲಸ. ಇದೊಂಥರಾ ಸಿಕ್ಕುಗಳನ್ನು ಬಿಡಿಸುತ್ತಾ ಹೋಗುವ ಕೆಲಸವೇ ಸರಿ.

ಫ್ಯಾಕ್ಟ್ ಚೆಕ್ ಮಾಡುವುದು ಹೇಗೆ?
ವಿಡಿಯೊ ಅಥವಾ ಧ್ವನಿಗೆ ಹೋಲಿಸಿದರೆ, ಪಠ್ಯ (ಸುದ್ದಿ) ಅಥವಾ ಚಿತ್ರದ ಸತ್ಯಾಸತ್ಯ ಪರಿಶೀಲನೆಯು ಕೊಂಚ ಸುಲಭವಾದರೂ, ಅಸಲಿ-ನಕಲಿ ಮಾಹಿತಿಯ ಪ್ರವಾಹದ ನಡುವೆ ವಿಶ್ವಾಸಾರ್ಹ ಮತ್ತು ಸರಿಯಾದ ಮಾಹಿತಿಯನ್ನು ಹೆಕ್ಕಿ ತೆಗೆಯುವುದು ಸಂಕೀರ್ಣ ಕೆಲಸವೂ ಹೌದು. ಇದಕ್ಕಾಗಿಯೇ ಇರುವುದು ಫ್ಯಾಕ್ಟ್ ಚೆಕ್ ಎಂಬ, ನವಮಾಧ್ಯಮದ ಹೊಸ ತನಿಖಾ ವಿಧಾನ.

ಸಾಮಾನ್ಯವಾಗಿ ಈಗಾಗಲೇ ದಶಕಗಳಿಂದ ಚಾಲ್ತಿಯಲ್ಲಿರುವ ಸುದ್ದಿ ಸಂಸ್ಥೆಗಳನ್ನು ಜನರು ನಂಬುತ್ತಾರೆ. ಆದರೆ, ಸುದ್ದಿಗಾರರೇ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾಹಿತಿಯನ್ನೇ ಸರಿ ಎಂದುಕೊಂಡು ಫಾರ್ವರ್ಡ್ ಮಾಡುತ್ತಾರೆ, ಅದರಿಂದಲೇ ಹೆಕ್ಕಿ ಸುದ್ದಿ ಮಾಡುತ್ತಾರೆ. ಹೀಗಾದಾಗ, ಮಾಧ್ಯಮ ಸಂಸ್ಥೆಗಳ ವಿಶ್ವಾಸಾರ್ಹತೆಗೂ ಧಕ್ಕೆಯಾಗುತ್ತದೆ. ಇದಕ್ಕಾಗಿಯೇ ಹಿರಿಯರು ಆ ಕಾಲದಲ್ಲೇ ಹೇಳಿದ್ದು – ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು. ಆನ್‌ಲೈನ್ ಕಂಟೆಂಟ್ ಅಥವಾ ವಿಷಯಕ್ಕಂತೂ ಇದು ಅತ್ಯಂತ ಖಚಿತವಾಗಿ ಒಗ್ಗುವ ಮಾತು.

ಈಗಿನ ಹೊಸ ಸವಾಲು ಡೀಪ್ ಫೇಕ್ ಎಂಬ, ಚಿತ್ರ ಅಥವಾ ವಿಡಿಯೊವನ್ನು ಅಸಲಿಯಂತೆಯೇ ಕಾಣಿಸಬಲ್ಲ ಹೊಸ ತಂತ್ರಜ್ಞಾನ. ಯಾರದ್ದೋ ದೇಹಕ್ಕೆ ಇನ್ಯಾರದ್ದೋ ಮುಖ ಅಳವಡಿಸುವುದು, ಯಾರದ್ದೋ ವಿಡಿಯೊಗೆ ಮತ್ಯಾರದ್ದೋ ಧ್ವನಿ ಅಳವಡಿಸುವುದು, ಅಥವಾ ರೆಕಾರ್ಡ್ ಮಾಡಿ, ಅವರದ್ದೇ ಅಸಲಿ ಧ್ವನಿಯಂತೆಯೇ ತಿದ್ದುಪಡಿ ಮಾಡಿ, ವಿಡಿಯೊಗೆ ಜೋಡಿಸುವುದು – ಇವೆಲ್ಲವೂ ನಡೆಯುತ್ತಿರುವುದು ನಮ್ಮ-ನಿಮ್ಮೆಲ್ಲರ ಗಮನಕ್ಕೆ ಬಂದ ವಿಚಾರವೇ ಹೌದು.

ಹೀಗಾಗಿ ಪತ್ರಕರ್ತರಿಗೆ ಇದೊಂದು ಹೊಸ ಹೊಣೆಯೂ ಹೌದು, ಸವಾಲು ಕೂಡ ಹೌದು. ಕಂಡಿದ್ದೆಲ್ಲವೂ ಸುದ್ದಿಯಾಗಲಾರದು. ಹಿಂದೆಲ್ಲ ಯಾವುದು ಸುದ್ದಿ ಎಂದು ಹುಡುಕಬೇಕಿತ್ತು, ಆದರೆ ಈಗ ಹಾಗಿಲ್ಲ. ಈ ಸುದ್ದಿಯಲ್ಲಿ ಯಾವುದು ಸುದ್ದಿಯಲ್ಲ ಎಂದು ಬೇರ್ಪಡಿಸುವ ಹೊಸ ಚಾಕಚಕ್ಯತೆ ಅಗತ್ಯ.

ಫ್ಯಾಕ್ಟ್ ಚೆಕ್ ಅಥವಾ ಸತ್ಯಾಂಶ ಪರಿಶೀಲನೆ ಹೇಗೆ ಮಾಡಬಹುದು ಎಂಬುದಕ್ಕೆ ಒಂದು ಕ್ವಿಕ್ ಗೈಡ್ ಇಲ್ಲಿದೆ. ಇದಕ್ಕೆ ಎಲ್ಲರೂ ಇಂಟರ್ನೆಟ್ ಅಥವಾ ತಂತ್ರಜ್ಞಾನ ತಜ್ಞರಾಗಬೇಕಿಲ್ಲ. ನಮ್ಮ ಕೈಗೆ ಸಿಗುವ ಉಚಿತ ಟೂಲ್‌ಗಳನ್ನೇ ಬಳಸಿ, ನಾವು ಎಫ್ಐಆರ್ ಅಥವಾ ಪ್ರಥಮ ಮಾಹಿತಿ ವರದಿ ಇಲ್ಲವೇ ಪ್ರಥಮ ಚಿಕಿತ್ಸೆಯ ಮಾದರಿಯಲ್ಲಿ ಸುದ್ದಿಯನ್ನು ಫಿಲ್ಟರ್ ಮಾಡಬಹುದು.

ಸಂದೇಹಿಸುವ ಬುದ್ಧಿ
ನಮಗೆ ಮೊದಲು ಸಂಶಯ ಮೂಡುವುದು ಅತ್ಯಂತ ಅಗತ್ಯ. ಯಾವುದೇ ಸುದ್ದಿ ತಿಳಿದಾಕ್ಷಣ ಇದರ ಇನ್ನೊಂದು ಮಗ್ಗುಲಿನ ಬಗ್ಗೆ ಯೋಚಿಸಲೇಬೇಕು. ಉದಾಹರಣೆಗೆ, ಈ ಸುದ್ದಿಯನ್ನು ಯಾರು ಹಂಚಿಕೊಂಡಿದ್ದು, ಅವರ ಹಿನ್ನೆಲೆಯೇನು, ಅವರು ವಿಶ್ವಾಸಾರ್ಹರೇ? ಬೇರೆ ಮೂಲಗಳು ಇದೇ ಸುದ್ದಿಯ ಅಥವಾ ಮಾಹಿತಿಯ ಬಗ್ಗೆ ಏನು ವರದಿ ಮಾಡಿವೆ? ಅದಕ್ಕೆ ಪೂರಕ ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ಒದಗಿಸಲಾಗಿದೆಯೇ? ಒದಗಿಸಿದ್ದರೆ, ಅದರ ಸಾಚಾತನ ಏನು? ಯಾವ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಇದೆ? ಆ ಜಾಲತಾಣವು ವಿಶ್ವಾಸಾರ್ಹವೇ? ಪ್ರಕಟವಾದ ದಿನಾಂಕ ಯಾವುದು? ಇವೆಲ್ಲ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಅತ್ಯಗತ್ಯ. ಮತ್ತು, ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಅಂಥದ್ದೊಂದು ಮಾಹಿತಿಯಿದ್ದರೆ, ಅದರಲ್ಲಿರುವ ಕಾಮೆಂಟ್‌ಗಳನ್ನು ಕೂಡ ಪರಿಶೀಲಿಸಿದರೆ, ಕೆಲವೊಮ್ಮೆ ಆ ಸುದ್ದಿಯ ಜಾಡು ಹಿಡಿದುಕೊಂಡು ಹೋಗುವುದು ಸುಲಭವಾದೀತು.

ಈ ಮೇಲಿನ ಅಂಶಗಳ ಮೂಲಕವಾಗಿ, ಗೂಗಲ್, ಟ್ವಿಟರ್, ಫೇಸ್‌ಬುಕ್ ಮುಂತಾದ ತಾಣಗಳ ಸರ್ಚ್ ಬಾಕ್ಸ್ ಬಳಸಿ ನಾವು ಪಠ್ಯ ಸಂಬಂಧಿತವಾದ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸಬಹುದು.

ಸರ್ಚ್ ಎಂಜಿನ್ ಬಳಕೆ
ಯಾವುದೇ ಚಿತ್ರ, ವಿಡಿಯೊ, ಪಠ್ಯ ಹುಡುಕಾಡುವುದಕ್ಕೆ ಸರ್ಚ್ ಎಂಜಿನ್‌ಗಳು ನಮಗೆಲ್ಲ ಗೊತ್ತಿವೆ. ಗೂಗಲ್ ಮಾತ್ರವಲ್ಲದೆ, ಬಿಂಗ್, ಡಕ್ ಡಕ್ ಗೋ ಎಂಬ ಸರ್ಚ್ ಎಂಜಿನ್‌ಗಳು ಕೂಡ ಇವೆ. ಇದರೊಂದಿಗೆ, ಯೂರೋಪ್-ರಷ್ಯಾದ ಸಂಗತಿಗಳು ಹೆಚ್ಚು ನಿಖರವಾಗಿ ದೊರೆಯುವುದು ಯಾಂಡೆಕ್ಸ್ ಎಂಬ ಸರ್ಚ್ ತಾಣದಲ್ಲಿ. ಅದೇ ರೀತಿ, ಚೀನಾಕ್ಕೆ ಸಂಬಂಧಿಸಿದ ಮಾಹಿತಿಯ ಹುಡುಕಾಟಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವುದು ಬೈಡು ಎಂಬ ಸರ್ಚ್ ಎಂಜಿನ್.

ಯಾವುದೇ ಪಠ್ಯವನ್ನು ಅಥವಾ ಅದಕ್ಕೆ ಸಂಬಂಧಿಸಿದ ಕೀವರ್ಡ್‌ಗಳುಳ್ಳ ಪಠ್ಯವನ್ನು ಸರ್ಚ್ ಎಂಜಿನ್‌ನ ಪುಟದ ಬಾಕ್ಸ್‌ನಲ್ಲಿ ಹಾಕಿ, ಅದಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಜಾಲತಾಣಗಳಲ್ಲಿ ವರದಿಯಾಗಿದೆ ಎಂದು ಹುಡುಕುತ್ತಾ ಹೋಗಬೇಕು. ಗೂಗಲ್ ಸರ್ಚ್ ಎಂಜಿನ್‌ನಲ್ಲಿರುವ ಟೈಮ್ ಫಿಲ್ಟರ್ ಇಲ್ಲಿ ಉಪಯೋಗಕ್ಕೆ ಬರುತ್ತದೆ. ನಿರ್ದಿಷ್ಟ ದಿನಾಂಕದಲ್ಲಿ ಅಂಥದ್ದೊಂದು ಘಟನೆ ನಡೆದಿದೆಯೇ ಅಥವಾ ಆ ರೀತಿ ಯಾರಾದರೂ ಹೇಳಿದ್ದಾರೆಯೇ ಎಂಬುದನ್ನು ಸುದ್ದಿ ತಾಣಗಳು ವರದಿ ಮಾಡಿದ್ದರೆ, ಸರ್ಚ್ ಮಾಡುವುದರ ಮೂಲಕ ಖಚಿತಪಡಿಸಿಕೊಳ್ಳಬಹುದು. ಅದೇ ರೀತಿ, ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ತಾಣಗಳಲ್ಲಿರುವ ಸರ್ಚ್ ಬಾಕ್ಸ್‌ನಲ್ಲಿಯೂ ಇದೇ ಮಾದರಿ ಹುಡುಕಾಟ ನಡೆಸಿದರೆ ಹೆಚ್ಚು ನಿಖರ ಮಾಹಿತಿ ಸಿಗಬಹುದು. ಇದಲ್ಲದೆ, ಟೈಮ್ ಮೆಷಿನ್ ಎಂದು ಹೇಳಲಾಗುವ ವೆಬ್ ಆರ್ಕೈವ್ಸ್ (archive.org/web) ಜಾಲತಾಣದಲ್ಲಿ, ಹಳೆಯ ಅಥವಾ ಡಿಲೀಟ್ ಆಗಿರಬಹುದಾದ ಮಾಹಿತಿಗಳು ಕೂಡ ಲಭ್ಯವಾಗುವ ಸಾಧ್ಯತೆಗಳಿವೆ. ಅಲ್ಲಿಯೂ ಹುಡುಕಿ ಖಚಿತಪಡಿಸಿಕೊಳ್ಳಬಹುದು. ಬೇರೆ ಭಾಷೆಯ ಪಠ್ಯವಿದ್ದರೆ, ಗೂಗಲ್ ಟ್ರಾನ್ಸ್‌ಲೇಟ್ (translate.google.com) ಬಳಸಿ, ನಮಗೆ ತಿಳಿಯುವ ಭಾಷೆಗೆ ಅನುವಾದಿಸಿಕೊಂಡರೆ ಪರಿಶೀಲನೆಗೆ ಮತ್ತಷ್ಟು ಬಲ ಬರುತ್ತದೆ.

ಚಿತ್ರದ ಸತ್ಯಾಂಶ ಪರಿಶೀಲನೆ
ನಮಗೆ ಯಾವುದೇ ಚಿತ್ರವು ಮಾರ್ಫ್ ಆಗಿದೆ ಅಥವಾ ಮಾರ್ಪಾಟಾಗಿದೆ ಎಂಬ ಸಂಶಯ ಬಂದರೆ (ಬರಬೇಕು), ಆ ಕುರಿತಾಗಿ ಗೂಗಲ್‌ನ ಇಮೇಜ್ ಸರ್ಚ್ ವಿಭಾಗದಲ್ಲಿ (google.com/imghp ಅಥವಾ ಗೂಗಲ್ ಸರ್ಚ್ ಬಾರ್‌ನ ಬಲ ಮೇಲ್ಭಾಗದಲ್ಲಿರುವ Images ಎಂಬ ಬಟನ್ ಒತ್ತಿ) ಹುಡುಕಿ, ಅತ್ಯಂತ ಹಳೆಯ ಚಿತ್ರ ಯಾವುದು ಎಂದು ತಿಳಿದುಕೊಂಡರೆ, ನಿಜ ಯಾವುದು, ಫೇಕ್ ಯಾವುದು ಎಂದು ಪತ್ತೆ ಹಚ್ಚುವುದು ಸುಲಭ. ಇದರ ಜೊತೆಗೆ, ನಮ್ಮಲ್ಲಿರುವ ಫೋಟೊವನ್ನೇ ಗೂಗಲ್‌ಗೆ ಹಾಕಿ, ಆ ಚಿತ್ರ ಅಥವಾ ಅದನ್ನು ಹೋಲುವ ಚಿತ್ರ ಎಲ್ಲಿ, ಯಾವಾಗ ಬಳಕೆಯಾಗಿದೆ ಎಂದು ತಿಳಿದುಕೊಳ್ಳಬಹುದು. ಇಮೇಜ್ ಸರ್ಚ್ ಬಾಕ್ಸ್‌ನಲ್ಲೇ ನಮಗೆ ಕ್ಯಾಮೆರಾ ಬಟನ್ ಒಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಚಿತ್ರವನ್ನು ಅಪ್‌ಲೋಡ್ ಮಾಡುವ ಆಯ್ಕೆ ಕಾಣಿಸುತ್ತದೆ. ಅಪ್‌ಲೋಡ್ ಮಾಡಿದ ತಕ್ಷಣವೇ, ಜಗತ್ತಿನಾದ್ಯಂತದ ಜಾಲತಾಣಗಳಲ್ಲಿ ಎಲ್ಲಿ ಇದೇ ಚಿತ್ರ ಅಥವಾ ಇದೇ ಮಾದರಿಯ ಚಿತ್ರ ಬಳಕೆಯಾಗಿದೆ ಎಂಬುದು ಕಾಣಿಸುತ್ತದೆ. ಇದರಲ್ಲಿ ಕೂಡ ಅತ್ಯಂತ ಹಳೆಯ ಚಿತ್ರವನ್ನು ನಾವು ನಂಬಬಹುದಾಗಿದೆ ಎಂದುಕೊಳ್ಳಬಹುದು.

ಗೂಗಲ್ ಲೆನ್ಸ್
ಇನ್ನು, ಚಿತ್ರದಲ್ಲಿರುವ ಪಠ್ಯವನ್ನು ಬಳಸಿಯೂ ಸಂಬಂಧಿತ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕಾಡಬಹುದು. ಚಿತ್ರದಿಂದ ಪಠ್ಯವನ್ನು ಬೇರ್ಪಡಿಸಲು ನಮಗೆ ಅನುಕೂಲ ಮಾಡಿಕೊಡುವುದು ಗೂಗಲ್ ಲೆನ್ಸ್ ಎಂಬ ಸಾಧನ. ಗೂಗಲ್ ಲೆನ್ಸ್ ಮೊಬೈಲ್ ಫೋನ್‌ಗಳಲ್ಲಂತೂ ಸುಲಭವಾಗಿ ಆ್ಯಪ್ ರೂಪದಲ್ಲಿ ಲಭ್ಯವಿದ್ದರೆ, ಕಂಪ್ಯೂಟರಿನಲ್ಲಿ ಕೂಡ ಬ್ರೌಸರ್ ಪ್ಲಗ್-ಇನ್ ಮಾದರಿಯಲ್ಲಿ ನಮಗೆ ಸಿಗುತ್ತದೆ. ಇದರ ಅನುಕೂಲ ಎಂದರೆ, ಇದರಿಂದ ಪಠ್ಯವನ್ನು ನಕಲಿಸಬಹುದಲ್ಲದೆ, ಚಿತ್ರದ ನಿರ್ದಿಷ್ಟ ಭಾಗವನ್ನು ಫೋಕಸ್ ಮಾಡಿಯೂ ಸರ್ಚ್ ಎಂಜಿನ್‌ನಲ್ಲಿ ಹುಡುಕಾಡಬಹುದು. ಚಿತ್ರದ ನಿರ್ದಿಷ್ಟ ಭಾಗವನ್ನಷ್ಟೇ ಹುಡುಕಾಡಲು, ನಮ್ಮದೇ ಕಂಪ್ಯೂಟರಲ್ಲಿ ಲಭ್ಯವಿರುವ ‘ಸ್ನಿಪ್ಪಿಂಗ್ ಟೂಲ್’ ಬಳಸಿ ಕ್ರಾಪ್ ಮಾಡಿ, ಹುಡುಕಾಟಕ್ಕೆ ಬಳಸಬಹುದು.

ಚಿತ್ರದಲ್ಲಿ ವಿಳಾಸವೇನಾದರೂ (ನೇಮ್ ಬೋರ್ಡ್, ಅಂಗಡಿಯ ಬೋರ್ಡ್ ಇತ್ಯಾದಿ) ಕಂಡುಬಂದರೆ, ಅಂಥದ್ದೊಂದು ಮಳಿಗೆ ಇದೆಯೇ ಎಂದು ತಿಳಿದುಕೊಳ್ಳುವುದಕ್ಕೆ ನಮಗೆ ನೆರವಾಗುವುದು ಗೂಗಲ್ ಮ್ಯಾಪ್‌ನಲ್ಲಿ ಲಭ್ಯವಾಗುವ ಸ್ಟ್ರೀಟ್ ವ್ಯೂ ಎಂಬ ವೈಶಿಷ್ಟ್ಯ. ಇದು ನಕಲಿ ಬೋರ್ಡ್ ಆಗಿದ್ದರೆ, ಅದರಲ್ಲಿರುವ ವಿಳಾಸ ಅಥವಾ ಹೆಗ್ಗುರುತುಗಳ ಆಧಾರದಲ್ಲಿ ಪತ್ತೆ ಹಚ್ಚುವುದಕ್ಕೆ ಉಪಯುಕ್ತ. ಸ್ಟ್ರೀಟ್-ವ್ಯೂ ಎಂಬುದು ಬೀದಿ ಬೀದಿಗಳನ್ನು ತೋರಿಸಿ, ಅಲ್ಲಿರುವ ಮಾಹಿತಿಯನ್ನೂ ತೋರಿಸುವ ವಿಶಿಷ್ಟ ಕೊಡುಗೆ. ಆದರೆ, ಎಲ್ಲ ಊರುಗಳ ಸ್ಟ್ರೀಟ್-ವ್ಯೂ ಲಭ್ಯ ಎಂದು ಹೇಳಲಾಗದು. ಪ್ರಮುಖ ಪಟ್ಟಣಗಳಲ್ಲಂತೂ ಇದು ಇದೆ ಮತ್ತು ಗೂಗಲ್ ಅದನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುತ್ತಿರುತ್ತದೆ.

ವಿಡಿಯೊ ಪರಿಶೀಲನೆ
ವಿಡಿಯೊದ ಬಗ್ಗೆ ಏನಾದರೂ ಸಂದೇಹ ಬಂದಲ್ಲಿ, ಅದರಲ್ಲಿರುವ ಫ್ರೇಮ್‌ಗಳನ್ನು ಚಿತ್ರ ರೂಪದಲ್ಲಿ ತೆಗೆದು, ನಿರ್ದಿಷ್ಟ ಭಾಗದ ಚಿತ್ರವನ್ನು ಪರಿಶೀಲನೆ ಮಾಡಿ, ಸತ್ಯಾಂಶವನ್ನು ಪತ್ತೆ ಮಾಡಲಾಗುತ್ತದೆ. ಇದಕ್ಕೆ ಅನುಕೂಲ ಮಾಡಿಕೊಡುವ ಪ್ರಮುಖ ಟೂಲ್ ಇನ್‌ವಿಡ್ (InVid). ಇದು ಬ್ರೌಸರ್ ಪ್ಲಗ್-ಇನ್ ರೂಪದಲ್ಲಿ ದೊರೆಯುತ್ತದೆ. ಇದನ್ನು ಬಳಸಿ ವಿಡಿಯೊದಿಂದ ಚಿತ್ರಗಳನ್ನು ಬೇರ್ಪಡಿಸಿ, ಅಲ್ಲಿಂದಲೇ ಗೂಗಲ್ ಅಥವಾ ಬೇರಾವುದೇ ಸರ್ಚ್ ಎಂಜಿನ್ ಮೂಲಕ ಹುಡುಕಾಟ ನಡೆಸಿ, ಮೂಲ ಪತ್ತೆ ಮಾಡುವುದು ಸಾಧ್ಯವಾಗುತ್ತದೆ.

ಇಷ್ಟೆಲ್ಲ ಆದಮೇಲೂ, ಮರೆಯಬಾರದ ವಿಚಾರವೆಂದರೆ, ಫಿಸಿಕಲ್ ವೆರಿಫಿಕೇಶನ್. ಎಂದರೆ, ನೇರವಾಗಿ ಸಂಬಂಧಪಟ್ಟವರನ್ನು, ಅಧಿಕಾರಿಗಳನ್ನು ಮಾತನಾಡಿಸಿ, ಅವರಿಂದಲೇ ವಿಷಯ ಖಚಿತಪಡಿಸಿಕೊಳ್ಳುವುದು ಅಥವಾ ಸಂಬಂಧಪಟ್ಟ ಊರಿಗೆ ತೆರಳಿ ಅಲ್ಲಿನ ಸ್ಥಳ, ಘಟನೆ ಪರಿಶೀಲಿಸಿಕೊಳ್ಳುವುದು. ಇದು ಅತ್ಯಂತ ಪ್ರಮುಖ ಘಟ್ಟ.

ಇಷ್ಟೊಂದು ತಪ್ಪು ಮಾಹಿತಿ, ದಾರಿತಪ್ಪಿಸುವ ಮಾಹಿತಿ, ನಕಲಿ ಚಿತ್ರ-ವಿಡಿಯೊಗಳುಳ್ಳ ಮಾಹಿತಿ-ತಂತ್ರಜ್ಞಾನ ಯುಗದ ಪ್ರವಾಹದ ನಡುವಿನಲ್ಲಿ ಈಗಿನ ಪತ್ರಕರ್ತರು ಈಗ ಕೇವಲ ಸುದ್ದಿ ಬರೆಯುವವರಾಗಿ ಉಳಿದಿಲ್ಲ. ಸರ್ಚ್ ತಜ್ಞರಾಗಿರಬೇಕಾಗುತ್ತದೆ, ಅದಕ್ಕೂ ಹೆಚ್ಚಿನದಾಗಿ ಸತ್ಯಾಂಶದ ಸರ್ಚ್ ತಜ್ಞರಾಗಿರಬೇಕಾಗುತ್ತದೆ. Nose for News ಮಾತ್ರವಲ್ಲ, Nose for Fact News ಎಂಬುದು ಈಗಿನ ಪತ್ರಕರ್ತರ ಧ್ಯೇಯ. ತಪ್ಪು ಮಾಹಿತಿಯನ್ನು ಹರಡುವುದು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಆಗುತ್ತದೆ ಎಂಬುದನ್ನು ಓದುಗರಿಗೆ ತಿಳಿಹೇಳಬೇಕಾದುದು ಈಗಿನ ಅನಿವಾರ್ಯತೆ ಮತ್ತು ಹೆಚ್ಚುವರಿ ಜವಾಬ್ದಾರಿ. ಇದರ ಜೊತೆಗೆ, ಈಗಿನ ಹೊಸ ವಿದ್ಯಮಾನವೆಂದರೆ ಸಚಿನ್ ತೆಂಡೂಲ್ಕರ್ ಅಥವಾ ರಶ್ಮಿಕಾ ಮಂದಣ್ಣ ಮುಂತಾದ ಸೆಲೆಬ್ರಿಟಿಗಳು ಎದುರಿಸಿದ ಡೀಪ್ ಫೇಕ್ ಎಂಬ ಜನರೇಟಿವ್ ಕೃತಕ ಬುದ್ಧಿಮತ್ತೆ (ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ದುರ್ಬಳಕೆಯನ್ನೂ ಪತ್ತೆ ಹಚ್ಚುವ ಮತ್ತು ತಡೆಯುವ ಹೊಣೆಗಾರಿಕೆ.

ಕಾನೂನಿನ 505ನೇ ವಿಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವ, ವದಂತಿ ಹರಡುವುದು, ತಪ್ಪು ಸುದ್ದಿ ಹರಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಲಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ, ಈ ಕಾನೂನಿನ ವ್ಯಾಖ್ಯಾನ ಹೀಗಿದೆ – “ಧರ್ಮ, ಪಂಗಡ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಜಾತಿ ಅಥವಾ ಸಮುದಾಯ ಅಥವಾ ಬೇರಾವುದೇ ಆಧಾರದಲ್ಲಿ, ದ್ವೇಷದ ಭಾವನೆ, ದ್ವೇಷ ಅಥವಾ ದುರುದ್ದೇಶದ ಮಾಹಿತಿ, ವಿಭಿನ್ನ ಧರ್ಮ, ಜನಾಂಗ, ಭಾಷೆ ಮತ್ತು ಪ್ರಾದೇಶಿಕ ಗುಂಪುಗಳು, ಜಾತಿ ಅಥವಾ ಸಮುದಾಯಗಳ ನಡುವೆ ಸಂಘರ್ಷ ಹುಟ್ಟಿಸಬಹುದಾದ ಮತ್ತು ಸಂಘರ್ಷ, ದ್ವೇಷ ಹುಟ್ಟಿಸುವ ಉದ್ದೇಶದ ವದಂತಿ ಅಥವಾ ಎಚ್ಚರಿಕೆಯ ಸಂದೇಶವನ್ನು ಅಥವಾ ವರದಿಯನ್ನು, ಹೇಳಿಕೆಯನ್ನು ಪ್ರಕಟಿಸಿದರೆ ಅಥವಾ ಹರಡಿದರೆ, ಅವರಿಗೆ ಮೂರು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಮತ್ತು/ಅಥವಾ ದಂಡ ವಿಧಿಸಬಹುದಾಗಿದೆ.”

The post e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್ first appeared on DiGi Kannada | ಡಿಜಿ ಕನ್ನಡ.

]]>
https://digikannada.com/how-to-do-fact-check-to-verify-fake-news-in-india/feed/ 0 3442
ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು https://digikannada.com/yaksha-mantra-mangalya-prasad-cherkady-keerthana-udyavara/?utm_source=rss&utm_medium=rss&utm_campaign=yaksha-mantra-mangalya-prasad-cherkady-keerthana-udyavara https://digikannada.com/yaksha-mantra-mangalya-prasad-cherkady-keerthana-udyavara/#respond Mon, 12 Feb 2024 12:56:00 +0000 https://digikannada.com/?p=3434 ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

The post ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು first appeared on DiGi Kannada | ಡಿಜಿ ಕನ್ನಡ.

]]>

ಇದೆ ಮಂತ್ರ ಮಾಂಗಲ್ಯವಿದೆ ಮಂತ್ರ ಮಾಂಗಲ್ಯ| ಇದೆ ಪ್ರತಿಜ್ಞೆಯು ನಿಮಗೆ ಕೇಳಿ ವಧುವರರೇ|
ಮುದದೊಳು ಕುವೆಂಪು ರಚಿಸಿದ ಮಂತ್ರ ಮಾಂಗಲ್ಯ| ವಿಧಿಯಂತೆ ಮದುವೆಯಾಗುವಿರಿ ನೀವಿಂದು||
ಸದೆದೆಲ್ಲ ಮನಸಿನಾಧ್ಯಾತ್ಮದಾ ಸಂಕೋಲೆ| ಯದ ಕಳೆದು ಮುಕ್ತರಾದಿರಿ ತಿಳಿಯಿರಿಂದು

ಕೆಂಪಾದ ಸೂರ್ಯನು ಪಡುಗಡಲಲ್ಲಿ ಇಳಿಯುವ ಹೊತ್ತು. ಕರಾವಳಿಯಲ್ಲಂತೂ ಚೆಂಡೆ ಮದ್ದಳೆಯ ಸದ್ದು ಕೇಳುವ ಋತುವಿದು. ಉಡುಪಿ ಜಿಲ್ಲೆಯ ಚೇರ್ಕಾಡಿ ಗ್ರಾಮದ ನೂಜಿನಬೈಲು ಎಂಬ ಹಳ್ಳಿ. ಭಾಗವತರು ಮೇಲಿನ ಈ ಹಾಡನ್ನು ಚೆಂಡೆ ಮದ್ದಳೆಯ ನಿನಾದದೊಂದಿಗೆ ತುಜಾವಂತು ಝಂಪೆ ಮಟ್ಟಿನಲ್ಲಿ ಹಾಡುತ್ತಿದ್ದರೆ, ಇದನ್ನು ಕೇಳಿ ಸುತ್ತಮುತ್ತಲಿನ ಜನ ಓಡೋಡಿ ಬಂದು, ರಂಗಸ್ಥಳದೆದುರು ಮುಂದಿನ ಸೀಟಿನಲ್ಲೇ ಕೂತು ಕಾಯುತ್ತಾರೆ. ಇಲ್ಲಿ ಇವತ್ತೊಂದು ‘ಆಟ’ವಿದೆ ಎಂಬ ಕಾತರ ಅವರದು. ಗದ್ದೆ, ಅದರ ಮಧ್ಯೆ ಯಕ್ಷಗಾನ ಬಯಲಾಟಕ್ಕೆ ಎಂದಿನಂತೆ ಹಾಕುವ ನಾಲ್ಕು ಕಂಬಗಳ ರಂಗಸ್ಥಳವೂ ಇತ್ತು. ಆದರೆ, ಆ ದಿನ ಅವರು ಕಾದದ್ದೇ ಬಂತು. ರಂಗಸ್ಥಳದಲ್ಲಿ ವೇಷಗಳೇನೂ ಕಾಣಿಸುತ್ತಿಲ್ಲ. ಸಿಂಗಾರಗೊಂಡಿರುವ ಗಂಡು-ಹೆಣ್ಣು ಮಧ್ಯೆ ಕೂತಿದ್ದಾರೆ, ಅಕ್ಕ ಪಕ್ಕದಲ್ಲಿ ಹಿರಿಯರಿಬ್ಬರು ಕೂತಿದ್ದಾರೆ. ಹಿಂಭಾಗದಲ್ಲಿ ಯಕ್ಷಗಾನದ ಹಿಮ್ಮೇಳದವರು. ಅರೆ, ‘ಇದು ಯಕ್ಷಗಾನ ಅಲ್ಲ ಮಾರ‍್ರೇ’ ಎಂಬ ಉದ್ಗಾರ ಯಕ್ಷಗಾನ ನೋಡಲೆಂದು ಬಂದವರ ಬಾಯಿಂದ.

ಜನವರಿ 26ರ ಗಣರಾಜ್ಯೋತ್ಸವ ದಿನದಂದು ನಿರ್ಮಾಣಗೊಂಡಿದ್ದ ಈ ರಂಗಸ್ಥಳದ ವಿಶೇಷತೆ ಎಂದರೆ ಅದು ಯಕ್ಷಗಾನ ಅಲ್ಲ; ಅಲ್ಲಿ ನಡೆದದ್ದು ಯಕ್ಷ ಮಂತ್ರ ಮಾಂಗಲ್ಯ. ಮೂಲತಃ ಕರಾವಳಿಯವರೇ ಆಗಿದ್ದುಕೊಂಡು ಬೆಂಗಳೂರಿನಲ್ಲಿ ನೆಲಸಿರುವ ಪ್ರಸಾದ್ ಚೇರ್ಕಾಡಿ ಮತ್ತು ಕೀರ್ತನಾ ಉದ್ಯಾವರ ಈಗ ಜನುಮದ ಅನುಬಂಧವನ್ನು ಬೆಸೆಯಲು ಆಯ್ಕೆ ಮಾಡಿಕೊಂಡಿದ್ದು ಈ ಯಕ್ಷ ಮಂತ್ರ ಮಾಂಗಲ್ಯ ವಿಧಾನವನ್ನು. ಪ್ರಸಾದ್ ಚೇರ್ಕಾಡಿ ಅವರು ಸ್ಕ್ರಿಪ್ಟ್ ರೈಟರ್ ಆಗಿ, ಚಲನಚಿತ್ರ, ಕಿರುತೆರೆ ನಟನಾಗಿ, ಯಕ್ಷಗಾನ ಕಲಾವಿದನಾಗಿ ಮತ್ತು ಗುರುವಾಗಿ ಹೆಸರು ಮಾಡುತ್ತಿದ್ದರೆ, ಕೀರ್ತನಾ ಅವರು ಯಕ್ಷಗಾನ, ಭರತನಾಟ್ಯ, ಯೋಗ ಗುರುವಾಗಿ ತೊಡಗಿಸಿಕೊಂಡಿರುವ ಬಹುಮುಖೀ ಪ್ರತಿಭೆ. ಇಬ್ಬರೂ ಬಾಲ್ಯದಿಂದಲೇ ಕುವೆಂಪು ಸಾಹಿತ್ಯದಿಂದ ಪ್ರಭಾವಿತರಾದವರು ಮತ್ತು ಅವರಿಬ್ಬರನ್ನೂ ಬೆಸೆದದ್ದು ಯಕ್ಷಗಾನವೇ.

ಮಂತ್ರ ಮಾಂಗಲ್ಯ
ಪುರುಷ ಮೇಲಲ್ಲ, ಮಹಿಳೆ ಕೀಳಲ್ಲ. ಇಬ್ಬರೂ ಸಮಾನರು. ಜೊತೆಗೆ, ಜಾತಿ ಪದ್ಧತಿ, ಮೇಲು-ಕೀಳು, ಸಂಪ್ರದಾಯ, ದುಂದು ವೆಚ್ಚ, ಶ್ರೀಮಂತಿಕೆಯ ಪ್ರದರ್ಶನ, ಪೌರೋಹಿತ್ಯ – ಇವೆಲ್ಲವುಗಳಿಗೆ ಕಡಿವಾಣ ಹಾಕಿ, ಜೀವನದ ಅತ್ಯಂತ ಪವಿತ್ರ ಬಂಧಕ್ಕೆ ಸಾಕ್ಷಿಯಾಗುವ ಕಾರ್ಯವೊಂದನ್ನು ದುಂದು ವೆಚ್ಚ ಮಾಡದೆ, ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ಆಚರಿಸುವುದಕ್ಕಾಗಿ ರಾಷ್ಟ್ರಕವಿ ಕುವೆಂಪು ರೂಪಿಸಿದ ಸೂತ್ರವೇ ಮಂತ್ರ ಮಾಂಗಲ್ಯ ಎಂಬ ವಿವಾಹ ವ್ಯವಸ್ಥೆ. ಈ ಮಾದರಿಯ ವಿವಾಹದಲ್ಲಿ, ಸಾಂಪ್ರದಾಯಿಕ ವಿವಾಹ ವಿಧಿಗಳಿರುವುದಿಲ್ಲ. ಹೆಚ್ಚೆಂದರೆ ಒಂದು ತಾಳಿ ಕಟ್ಟಿಸಿಕೊಳ್ಳುವ ಪ್ರಕ್ರಿಯೆ, ಇದರ ಹೊರತಾಗಿ, ಗಂಡು-ಹೆಣ್ಣು ತಮ್ಮ ನಡುವೆ ಯಾವುದೇ ಭೇದವಿಲ್ಲ ಎನ್ನುತ್ತಾ, ಗರಿಷ್ಠ 200ಕ್ಕಿಂತ ಕಡಿಮೆ ಸಂಖ್ಯೆಯ ಬಂಧು-ಬಾಂಧವರ ನಡುವೆ ಮನೆಯಲ್ಲೇ ಸರಳವಾಗಿ ವಿವಾಹವಾಗುವುದು. ಇದಕ್ಕೆ 21 ಪ್ರತಿಜ್ಞಾ ವಿಧಿಗಳಿರುತ್ತವೆ, ಅವುಗಳನ್ನು ಸ್ವೀಕರಿಸಿ, ಬಳಿಕ ವಿವಾಹ ರಿಜಿಸ್ಟರ್ ಮಾಡಿಸಿಕೊಳ್ಳುವುದು.

ಕಾಲಕ್ಕೆ ತಕ್ಕಂತೆ ಒಂದಿಷ್ಟು ಮಾರ್ಪಾಟುಗಳನ್ನು ಕೂಡ ಮಾಡಿಕೊಳ್ಳಬಹುದೆಂಬ ಸೂಚನೆಯೂ ಇದ್ದುದರಿಂದಾಗಿ, ಅದರ ಮಾರ್ಪಡಿತ ರೂಪವು ಯಕ್ಷ ಮಂತ್ರ ಮಾಂಗಲ್ಯ ಹೆಸರಿನಲ್ಲೀಗ ನಡೆದಿದೆ. ಈ ಮೂಲಕ 1966ರಲ್ಲಿ ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿ ಅವರ ವಿವಾಹದಿಂದಾರಂಭಿಸಿ, ತೀರಾ ಇತ್ತೀಚೆಗೆ ನಟಿ ಪೂಜಾ ಗಾಂಧಿ, ಚಾಮರಾಜ ನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮುಂತಾದವರ ಸಾಲಿನಲ್ಲಿ ಈ ನೂತನ ವಧು ವರರೂ ತಮ್ಮ ವೈವಾಹಿಕ ಬದುಕಿಗೆ ಕಾಲಿಟ್ಟರು.

ಯಕ್ಷ ಮಂತ್ರ ಮಾಂಗಲ್ಯ ಹೇಗೆ
ಶತಮಾನಗಳ ಇತಿಹಾಸವಿರುವ ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ ಅಪಾರವಾದ ಸಮೃದ್ಧ ಕನ್ನಡ ಸಾಹಿತ್ಯ ಲೋಕವೊಂದು ಸೃಷ್ಟಿಯಾಗಿದೆ. ಇದಕ್ಕೆ ಹೊಸ ಸೇರ್ಪಡೆ ಎಂದರೆ ಮಂತ್ರಮಾಂಗಲ್ಯ ವಿವಾಹಕ್ಕೆ ನಿಗದಿಪಡಿಸಿರುವ 21 ಪ್ರತಿಜ್ಞಾ ವಿಧಿಗಳು 9 ರೀತಿಯಲ್ಲಿ ರಾಗ, ತಾಳ, ಛಂದಸ್ಸುಗಳ ಸಹಿತವಾಗಿ ಯಕ್ಷಗಾನ ಹಾಡುಗಳ ರೂಪ ತಳೆದಿವೆ. ಈ ಮಂತ್ರಮಾಂಗಲ್ಯದ ಪ್ರತಿಜ್ಞೆಗಳನ್ನೇ ಪದ್ಯರೂಪಕ್ಕೆ ಪರಿವರ್ತಿಸಿ, ಮಟ್ಟು ನಿರ್ಣಯಿಸಿ ಸಾಹಿತ್ಯ ಬರೆದವರು ಛಾಂದಸ ಕವಿ ಗಣೇಶ್ ಕೊಲೆಕಾಡಿ. ತೀರಾ ಅನಾರೋಗ್ಯದಲ್ಲಿದ್ದರೂ ತಮ್ಮ ಶಿಷ್ಯರಿಬ್ಬರ ಮೇಲಿನ ಪ್ರೀತಿಯಿಂದ ಈ ಮಂತ್ರ ಮಾಂಗಲ್ಯದ ಹಾಡುಗಳನ್ನು ರಚಿಸಿ ಕೊಟ್ಟಿದ್ದಾರೆ. ಇದನ್ನು ಮದುವೆಯ ರಂಗಸ್ಥಳದಲ್ಲಿ ಹಾಡಿ ತೋರಿಸಿದವರು ಪ್ರಸಾದ್ ಚೇರ್ಕಾಡಿ ಅವರ ಯಕ್ಷಗಾನ – ರಂಗ ತರಬೇತಿ ಶಾಲೆಯಾದ ‘ಕಥೆಗಾರರು’ ಸಮೂಹದ ವಿದ್ಯಾರ್ಥಿಗಳು.

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು. ಒಂದು ರೀತಿಯಲ್ಲಿ ಯಕ್ಷಗಾನದ ಮತ್ತೊಂದು ರೂಪವಾಗಿರುವ ತಾಳಮದ್ದಳೆಯಂತೆಯೇ ಇದು ಭಾಸವಾಯಿತು. ಯಕ್ಷ ಮಂತ್ರ ಮಾಂಗಲ್ಯ ಆರಂಭಕ್ಕೆ ಮುನ್ನ, ಯಕ್ಷಗಾನದ ಚೌಕಿಯಲ್ಲಿ ಸಾಂಪ್ರದಾಯಿಕವಾಗಿ ‘ಗಜಮುಖದವಗೆ ಗಣಪಗೆ’ ಎಂಬ ಯಕ್ಷಗಾನದ ಸ್ತುತಿ ಪದ್ಯದ ಬಳಿಕ, ಯಕ್ಷಗಾನದ ವಿದ್ಯಾರ್ಥಿಗಳೆಲ್ಲರೂ ಮದುಮಕ್ಕಳನ್ನು ‘ಧಿಮಿತಕಿಟ ತದ್ದಿಮಿತ ದಿಂಧತ್ತೈ’ ಪರಂಪರೆಯ ನಡೆಯ ‘ದಿಬ್ಬಣದ’ ಮೂಲಕ ಚೆಂಡೆ-ಮದ್ದಳೆ ನುಡಿತದೊಂದಿಗೆ ವಿವಾಹ ನಡೆಯುವ ರಂಗಸ್ಥಳಕ್ಕೆ ಕರೆತಂದರು. ಬಾಲಗೋಪಾಲ ಹಾಗೂ ಡೌರು ವೇಷಧಾರಿಗಳು ಜೊತೆಯಾಗಿದ್ದರು. ಇದಕ್ಕೆ ‘ಮುಕ್ತಾಯ’ ನುಡಿಸಿದ ಬಳಿಕ, ಪ್ರಸಾದ್-ಕೀರ್ತನಾ ಕಲ್ಯಾಣ!

ಇಡೀ ಕಾರ್ಯಕ್ರಮವನ್ನು ರಂಗಕರ್ಮಿ ನಾಗೇಶ್ ಉದ್ಯಾವರ ನಿರ್ವಹಿಸಿದರೆ, ಅವರೊಂದಿಗೆ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಆಳ್ವಾಸ್ ಪ್ರತಿಷ್ಠಾನದ ಎಂ. ಮೋಹನ್ ಆಳ್ವ, ಕಲಾವಿದ ಪೇತ್ರಿ ಮಾಧವ ನಾಯ್ಕ್, ರಂಗ ಕಲಾವಿದೆ ಶರಣ್ಯಾ ರಾಂಪ್ರಕಾಶ್, ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ರಿಕ್ಷಾ ಚಾಲಕಿ ಕಾವೇರಿ ಮೇರಿ ಡಿಸೋಜ, ಸ್ಥಳೀಯ ಹಿರಿಯಜ್ಜಿ ವಿಮಲಾ ದೊಡ್ಡಯ್ಯ, ಕೀರ್ತನಾರ ಹೆತ್ತವರಾದ ಸುನಂದಾ ಮತ್ತು ಕುಶಲ, ಪ್ರಸಾದರ ತಾಯಿ ಸುಶೀಲಾ – ಇವರೆಲ್ಲರೂ ಹಾಡುಗಳಿಗೆ ಅರ್ಥ ಹೇಳುವ ರೀತಿಯಲ್ಲಿ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿದರು.

ಮದುವೆ ಎಂದರೆ ಬಜೆಟ್ ಎಷ್ಟು ಎಂಬಲ್ಲಿಂದ, ಪ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್, ಪ್ರೀ ವೆಡ್ಡಿಂಗ್ ಪ್ರವಾಸ, ಹನಿಮೂನ್‌ಗೆ ವಿದೇಶ ಪ್ರವಾಸ – ಇವೆಲ್ಲ ಅನಿವಾರ್ಯ ಎಂಬಷ್ಟರ ಮಟ್ಟಿಗೆ ಸಾಮಾಜಿಕ ಬದಲಾವಣೆ ಆಗಿಬಿಟ್ಟಿದೆ. ಉಳ್ಳವರಿಗಿದು ಅಂತಸ್ತು ತೋರಿಸುವ ಹಂಬಲ. ಇಂಥ ಸಂದರ್ಭದಲ್ಲಿ ಸ್ವತಃ ಪ್ರಧಾನಿಯವರೇ ಈ ದೇಶದಲ್ಲೇ ಮದುವೆಯಾಗಿ ಅಂತ ಕರೆ ನೀಡುವವರೆಗೂ ವೈವಾಹಿಕ ಉದ್ಯಮವು ಬೃಹತ್ತಾಗಿ ಬೆಳೆದುಬಿಟ್ಟಿದೆ. ಮನೆಯಲ್ಲೇ ಮದುವೆಯಾಗುವುದೇ? ಎಂಬ ಪ್ರಶ್ನೆ ಕೇಳುವವರೇ ಇರುವವರ ನಡುವೆ ಯುವ ಜನಾಂಗವು ಅದ್ದೂರಿತನ ಪ್ರದರ್ಶಿಸದಿರುವ ಮತ್ತು ಬದುಕಿಗೆ ಅನಿವಾರ್ಯವಾಗಿರುವ ನೀತಿ ಸೂತ್ರಗಳೊಂದಿಗೆ ಸರಳ ವಿವಾಹದತ್ತ ಆಕರ್ಷಿತರಾಗುತ್ತಿರುವುದು ಈ ಕಾಲದ ಬದಲಾವಣೆ.

ಮದುವೆ ಮಾಡುವುದೆಂದರೆ, ಬಜೆಟ್, ಹಾಲ್ ಬಾಡಿಗೆ, ಚಿನ್ನ… ಬಂಧುಮಿತ್ರರಿಗೆ ಭರ್ಜರಿ ಭೋಜನ – ಇಷ್ಟೆಲ್ಲ ಮಾಡುವಾಗ ಸಾಲ ಮಾಡಿ ಹೈರಾಣಾದ, ಸಾಲ ತೀರಿಸುವುದಕ್ಕಾಗಿ ಜೀವನಪೂರ್ತಿ ದುಡಿಯಬೇಕಾದ ಹಲವು ಕುಟುಂಬಗಳನ್ನು ನೋಡುತ್ತಲೇ ಬೆಳೆದ ನನಗೆ, ಕುವೆಂಪು ಸಾಹಿತ್ಯದ ಓದಿನ ವೇಳೆ ಈ ಸರಳ ಮದುವೆಯು ವಿಶೇಷ ಗಮನ ಸೆಳೆದಿತ್ತು. ನಮ್ಮಿಬ್ಬರ ಮನಸ್ಸುಗಳೂ ಒಂದೇ ರೀತಿ ಯೋಚಿಸಿದವು. ಆರಂಭದಲ್ಲಿ ಬಂಧುಗಳಿಂದ ಅಪಸ್ವರ ಬಂದಿದ್ದರೂ, ಮದುವೆಯ ವೇಳೆಗೆ ಅವೆಲ್ಲವೂ ಪರಿಹಾರ ಕಂಡಿದ್ದವು.
-ಪ್ರಸಾದ್ ಚೇರ್ಕಾಡಿ

ಸಂಪ್ರದಾಯ, ಆಚರಣೆ ಮುಂತಾದವುಗಳ ಬಗೆಗೆ ನನಗೆ ನನ್ನದೇ ಆದ ನಿಲುವುಗಳಿವೆ. ಆಡಂಬರಕ್ಕೆ ವಿರೋಧ ಇದ್ದೇ ಇದೆ. ಇಬ್ಬರೂ ಯಕ್ಷಗಾನ ಹಾಗೂ ಇತರ ಕಲೆಗಳ ಆರಾಧಕರು. ಹೀಗಾಗಿ ಇಬ್ಬರ ಮನಸ್ಸುಗಳೂ ಒಂದೇ ರೀತಿಯಲ್ಲಿ ಸಾಗಿದವು. ಹೆತ್ತವರಿಗೆ ಭಾರವಾಗದೆ, ಸ್ವಂತ ದುಡಿಮೆಯಿಂದಲೇ ಮದುವೆಯಾಗಬೇಕೆಂಬುದು ನನ್ನ ಆಸೆ ಈಡೇರಿದೆ.
-ಕೀರ್ತನಾ ಉದ್ಯಾವರ

Article by Avinash B published in Prajavani on 11 Feb 2024

The post ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು first appeared on DiGi Kannada | ಡಿಜಿ ಕನ್ನಡ.

]]>
https://digikannada.com/yaksha-mantra-mangalya-prasad-cherkady-keerthana-udyavara/feed/ 0 3434
ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ https://digikannada.com/muddana-kumara-vijaya-ratnavathi-kalyana-yakshagana-prasanga/?utm_source=rss&utm_medium=rss&utm_campaign=muddana-kumara-vijaya-ratnavathi-kalyana-yakshagana-prasanga https://digikannada.com/muddana-kumara-vijaya-ratnavathi-kalyana-yakshagana-prasanga/#respond Sun, 11 Feb 2024 12:20:00 +0000 https://digikannada.com/?p=3428 ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ ಪರಿಶ್ರಮವು ಇದೀಗ ಧ್ವನಿಮುದ್ರಿಕೆಯ ಮೂಲಕ ಲೋಕಮುಖಕ್ಕೆ ಪರಿಚಯವಾಗುತ್ತಿದೆ.

The post ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ first appeared on DiGi Kannada | ಡಿಜಿ ಕನ್ನಡ.

]]>

ರಂಗ ನಡೆಗಳ ಸಹಿತ ಎಲ್ಲ ಹಾಡುಗಳ ರಸಗವಳ

ಮುದ್ದಣ ಕವಿಯ ಶ್ರೇಷ್ಠ ಯಕ್ಷಗಾನ ಪ್ರಸಂಗ ಕೃತಿಗಳಾದ “ಕುಮಾರ ವಿಜಯ” ಹಾಗೂ “ರತ್ನಾವತಿ ಕಲ್ಯಾಣ”ದ ಎಲ್ಲ ಹಾಡುಗಳ ಧ್ವನಿಮುದ್ರಣವನ್ನು ಫೆ.17ರ ಅಪರಾಹ್ನ 3 ಗಂಟೆಗೆ ಮೂಡುಬಿದಿರೆಯ ಆಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಲೋಕಾರ್ಪಣೆ. ಕಾರ್ಯಕ್ರಮವನ್ನು ನಂದಳಿಕೆ ಬಾಲಚಂದ್ರ ಹೆಬ್ಬಾರ್ ಮತ್ತು ಚಂದ್ರಶೇಖರ ಕೊಂಕಣಾಜೆ ಸಂಯೋಜಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಲಿಪ ಶಿವಶಂಕರ ಭಟ್ ಹಾಗೂ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಹಾಡುಗಾರಿಕೆಯಲ್ಲಿ ಕುಮಾರ ವಿಜಯ ಪ್ರಸಂಗದ ಆಯ್ದ ಪದಗಳ “ಬಲಿಪ ಗಾನ ಯಾನ” ಪ್ರಸ್ತುತಿಯಾಗಲಿದೆ.

ಕನ್ನಡದ ಕಮನೀಯ ಕಲೆ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಪ್ರಸಂಗದ ನಡೆ, ಪದ್ಯಗಳ ಹಾಡುವಿಕೆ, ಮಟ್ಟುಗಳ ಪ್ರಸ್ತುತಿ, ರಂಗ ನಡೆಗಳು, ಧಿತ್ತ-ಧೀಂಗ್ಣ ಎಲ್ಲಿ ಯಾವಾಗ ಎಂಬೆಲ್ಲ ಮಾಹಿತಿ ಇದುವರೆಗೆ ದಾಖಲಾಗದೇ ಇರುವುದು ಯಕ್ಷಗಾನೀಯತೆಯ ಉಳಿವಿಗೆ ದೊಡ್ಡ ತೊಡಕಾಗಿದೆ. ಈ ಕಾರಣದಿಂದಾಗಿಯೇ ಈ ದಿನಗಳಲ್ಲಿ ಯಕ್ಷಗಾನದಲ್ಲಿ ಸಾಕಷ್ಟು ಅಪಸವ್ಯಗಳಾಗುತ್ತಿವೆ.

ಇವೆಲ್ಲ ದಾಖಲಿಸಿದರೆ ಮುಂದಿನ ಪೀಳಿಗೆಗೆ ನಿಜವಾದ ಯಕ್ಷಗಾನದ ಪರಂಪರೆಯನ್ನು ದಾಟಿಸುವ ಸಾರ್ಥಕ ಕೆಲಸವಾದೀತು. ಇಂಥದ್ದೊಂದು ಕಾರ್ಯಕ್ಕೆ ಕೈಜೋಡಿಸಿದ್ದಾರೆ ಮುದ್ದಣ ಪ್ರಕಾಶನದ ನಂದಳಿಕೆ ಬಾಲಚಂದ್ರ ರಾವ್ ಮತ್ತು ಬಲಿಪ ಗಾನ ಯಾನ ತಂಡ.

ಕನ್ನಡದ ಸಾರಸ್ವತ ಲೋಕಕ್ಕೆ ಯಕ್ಷಗಾನದ ಕೊಡುಗೆ ಅಪಾರವಾಗಿದ್ದರೂ ಸಾಹಿತ್ಯ ಲೋಕದ ಮುಖ್ಯವಾಹಿನಿಯಲ್ಲಿ ಅದಿನ್ನೂ ಬೆರೆಯಬೇಕಷ್ಟೆ. ನಂದಳಿಕೆಯ ಪ್ರಖ್ಯಾತ ಕವಿ, ಆಧುನಿಕ ಕನ್ನಡ ಸಾಹಿತ್ಯದ ಮುಂಗೋಳಿ ಎಂದೇ ಕರೆಯಲಾಗುವ, ನಂದಳಿಕೆ ಲಕ್ಷ್ಮೀನಾರಾಯಣಪ್ಪ ಅಥವಾ ಮುದ್ದಣ – ಈತನ ಸಾಹಿತ್ಯ ಕೃತಿಗಳು ಒಂದಕ್ಕಿಂತ ಒಂದು ಮಿಗಿಲು. ಮುದ್ದಣ ರಚಿಸಿದ ಯಕ್ಷಗಾನ ಕೃತಿಗಳಾದ ಕುಮಾರ ವಿಜಯ ಮತ್ತು ರತ್ನಾವತಿ ಕಲ್ಯಾಣ – ಇವೆರಡೂ ಕಾವ್ಯ ಸಾಹಿತ್ಯದ ವೈಭವವನ್ನು ವಿವರಿಸುವಂಥವು ಮತ್ತು ಯಕ್ಷಗಾನದ ಪ್ರಾತಿನಿಧಿಕ ಕೃತಿಗಳು ಎಂದರೂ ತಪ್ಪಲ್ಲ. ಈ ಹಾಡುಗಳನ್ನು ಯಕ್ಷಗಾನದ ರಾಗ-ಕ್ರಮಗಳಲ್ಲಿ ಆಲಿಸುವುದೇ ಚಂದ.

ಒಂದು ಯಕ್ಷಗಾನದ ಪ್ರಸಂಗವನ್ನು ಸುಮಾರು ಎಂಟು ಗಂಟೆಗಳ ಕಾಲ ಅಂದರೆ ಇಡೀ ರಾತ್ರಿಯ ಅವಧಿಗೆ ಪ್ರದರ್ಶಿಸುವುದಾದರೆ ಬೇಕಿರುವುದು ಸುಮಾರು 250ರಿಂದ 300ರಷ್ಟು ಪದ್ಯಗಳು. ರಾಗ, ತಾಳ, ಮಟ್ಟು, ಛಂದಸ್ಸು ಮೊದಲಾದವುಗಳಿಗೆ ಒಳಪಟ್ಟಿರುವ ಅದ್ಭುತ ಸಾಹಿತ್ಯವಿರುವ ಹಾಡುಗಳು ಪ್ರಸಂಗವೊಂದರ ಕಥೆಯ ನಡೆಯನ್ನು ಹೆಣೆದುಕೊಡುತ್ತವೆ. ಬಹುತೇಕ ಪ್ರಸಂಗಗಳಲ್ಲಿ ಕವಿಯು ಲೆಕ್ಕಕ್ಕಿಂತ ಹೆಚ್ಚು ಪದ್ಯಗಳನ್ನೇ ರಚಿಸಿರುತ್ತಾನೆ. ಉದಾಹರಣೆಗೆ, ಕುಮಾರ ವಿಜಯ ಪ್ರಸಂಗದಲ್ಲಿಯೇ 700ರಷ್ಟು ಪದ್ಯಗಳಿವೆ. ಇವೆಲ್ಲವೂ ಯಕ್ಷಗಾನ ಪ್ರದರ್ಶನ ಅಥವಾ ತಾಳಮದ್ದಳೆಯ ಪ್ರಸ್ತುತಿಗೆ ಬಳಕೆಯಾಗುವುದಿಲ್ಲ. ಶೇ.50ಕ್ಕಿಂತಲೂ ಹೆಚ್ಚಿನ ಪದ್ಯಗಳನ್ನು ಬಿಟ್ಟುಬಿಡಲಾಗುತ್ತದೆ. ರಂಗಸ್ಥಳದಲ್ಲಿ ಕಥಾ ನಿರೂಪಣೆಗೆ ಲೋಪವಾಗದಂತೆ, ಭಾಗವತರು ಅರ್ಥಾತ್ ಯಕ್ಷಗಾನದ ನಿರ್ದೇಶಕರು ನಿರ್ದಿಷ್ಟ ಪದಗಳನ್ನಷ್ಟೇ ಹಾಡುತ್ತಾರೆ. ಉಳಿದ ಪದ್ಯಗಳ ನಿರೂಪಣೆಯು ಅಥವಾ ಕಥೆಯು ಬೇರೆ ಪಾತ್ರಧಾರಿಗಳ ಮಾತಿನ ಮೂಲಕ ಪ್ರೇಕ್ಷಕರಿಗೆ ತಿಳಿಯುತ್ತದೆ. ಪಾತ್ರಧಾರಿಗಳ ಸಂಖ್ಯಾಮಿತಿಯೂ, ಕಾಲಮಿತಿಯೂ ಇದಕ್ಕೆ ಪ್ರಧಾನ ಕಾರಣ. ಹೀಗಿರುವಾಗ, ಪ್ರಸಂಗವೊಂದರಲ್ಲಿರುವ ಎಲ್ಲ ಪದ್ಯಗಳನ್ನು, ಅದರ ಸಾಹಿತ್ಯದ ಸವಿಯನ್ನು ಯಕ್ಷಗಾನದ ಅಭಿಮಾನಿಗಳು ಮತ್ತು ಅಭ್ಯಾಸಿಗಳು ಸವಿಯುವುದು ಹೇಗೆ?

ಈಗಾಗಲೇ ಬಲಿಪ ಭಾಗವತರ ಸಂಪ್ರದಾಯಬದ್ಧ ಯಕ್ಷಗಾನ ಹಾಡುಗಾರಿಕೆಯನ್ನು ‘ಬಲಿಪ ಗಾನ ಯಾನ’ ಎಂಬ ಮನೆ ಮನೆ ಅಭಿಯಾನದ ಮೂಲಕ ಪ್ರಚುರ ಪಡಿಸಿರುವ, ಸ್ವತಃ ಹಿಮ್ಮೇಳ ವಾದಕರೂ ಆಗಿರುವ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಬೆಂಬಲದೊಂದಿಗೆ, ಮುದ್ದಣನ ಪರಮ ಆರಾಧಕರಾಗಿರುವ ನಂದಳಿಕೆ ಬಾಲಚಂದ್ರ ರಾವ್ ಹಲವಾರು ವರ್ಷಗಳಿಂದ ಇಂಥದ್ದೊಂದು ದಾಖಲೀಕರಣ ಕೈಂಕರ್ಯಕ್ಕಿಳಿದವರು. ಪರಿಣಾಮವಾಗಿ, ಕುಮಾರ ವಿಜಯ ಹಾಗೂ ರತ್ನಾವತಿ ಕಲ್ಯಾಣ ಕೃತಿಗಳ ಅಷ್ಟೂ ಹಾಡುಗಳಲ್ಲಿ ಒಂದನ್ನೂ ಬಿಡದೆ, ಚೆಂಡೆ-ಮದ್ದಳೆ ಸಾಂಗತ್ಯದೊಂದಿಗೆ ದಾಖಲೀಕರಣಗೊಂಡಿವೆ. ವಿಶೇಷವೆಂದರೆ, ಪ್ರತಿಯೊಂದು ಪದ (ಹಾಡು) ಕೂಡ, ಯಕ್ಷಗಾನದ ಎಲ್ಲ ರಂಗನಡೆಗಳ ಸಮೇತವಾಗಿ, ಉದಾಹರಣೆಗೆ, ಧಿತ್ತ, ಧೀಂಗ್ಣ, ತೈತತಕತ, ಅಟ್ಟಹಾಸ, ಪ್ರವೇಶ, ಒಡ್ಡೋಲಗ ಇತ್ಯಾದಿ ಎಲ್ಲ ರೀತಿಯ ಯಕ್ಷಗಾನ ಕ್ರಮಗಳನ್ನು ಕೂಡ ಒಳಗೊಂಡಿವೆ. ಇದು ಯಕ್ಷಗಾನ ಲೋಕದಲ್ಲಿ ಹಿಂದೆಂದೂ ಆಗಿರದ ಪ್ರಯತ್ನ.

ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ ಪರಿಶ್ರಮವು ಇದೀಗ ಧ್ವನಿಮುದ್ರಿಕೆಯ ಮೂಲಕ ಲೋಕಮುಖಕ್ಕೆ ಪರಿಚಯವಾಗುತ್ತಿದೆ. ಧ್ವನಿ ನೀಡಿದ್ದ ಬಲಿಪ ನಾರಾಯಣ ಭಾಗವತರು ಮತ್ತು ಪುತ್ರ ಬಲಿಪ ಪ್ರಸಾದ ಭಾಗವತರು ಈಗ ನಮ್ಮೊಂದಿಗಿಲ್ಲ. ಬಲಿಪ ಪರಂಪರೆಯನ್ನು ಮುಂದುವರಿಸುತ್ತಿರುವ ಮತ್ತೊಬ್ಬ ಪುತ್ರ ಬಲಿಪ ಶಿವಶಂಕರ ಭಟ್ ಹಾಗೂ ಸೋದರಳಿಯ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರು ಕೂಡ ಪರಂಪರೆಯ, ಬಲಿಪ ಶೈಲಿಯ ಹಾಡುಗಳೊಂದಿಗೆ ಈ ಪ್ರಸಂಗಕ್ಕೆ ಮೆರುಗು ನೀಡಿದ್ದಾರೆ. ಚೆಂಡೆ-ಮದ್ದಳೆಯಲ್ಲಿ ನುರಿತ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯ ಹಾಗೂ ಕೊಂಕಣಾಜೆ ಚಂದ್ರಶೇಖರ ಭಟ್ ಜೊತೆಯಾಗಿದ್ದಾರೆ.

ಅದೇ ರೀತಿ, 400ಕ್ಕೂ ಹೆಚ್ಚು ಪದ್ಯ ಸಾಹಿತ್ಯವುಳ್ಳ ರತ್ನಾವತಿ ಕಲ್ಯಾಣ ಪ್ರಸಂಗವು ಸಂಪೂರ್ಣವಾಗಿ ಬಡಗು ತಿಟ್ಟಿನಲ್ಲಿ ಪ್ರಸ್ತುತಿಗೊಂಡಿದೆ. ಇದರಲ್ಲಿ ಹಾಡುಗಳನ್ನು ಭಾಗವತರಾದ ವಿದ್ವಾನ್ ಗಣಪತಿ ಭಟ್ ಮತ್ತು ಹೇರಂಜಾಲು ಗೋಪಾಲ ಗಾಣಿಗರು ಹಾಡಿದ್ದರೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ ಹಾಗೂ ಚೆಂಡೆಯಲ್ಲಿ ರವೀಂದ್ರ ಆಚಾರ್ಯ ಕಾಡೂರು ಪ್ರತಿಭೆ ಪ್ರದರ್ಶಿಸಿದ್ದಾರೆ.

ನಾಂದಿ ಪದ್ಯದಿಂದ ಹಿಡಿದು ಕೊನೆಯ ಮಂಗಳ ಪದ್ಯದವರೆಗೆ, ಯಕ್ಷಗಾನ ಪ್ರಸಂಗದ ಸಮಗ್ರ ಹಾಡುಗಳ ದಾಖಲೀಕರಣ ಇದಾಗಿದ್ದು, ಯಕ್ಷಗಾನದ ಅಭ್ಯಾಸಿಗಳಿಗಂತೂ ಎಲ್ಲ ರೀತಿಯ ಮಟ್ಟುಗಳು, ರಾಗ-ತಾಳ ಮತ್ತು ರಂಗ ಕ್ರಮಗಳ ಬಗೆಗೆ ಮಾಹಿತಿ ದೊರೆಯುವುದರಲ್ಲಿ ಸಂದೇಹವಿಲ್ಲ. ದೀರ್ಘ ಪಠ್ಯ, ಪಾಂಡಿತ್ಯಪೂರ್ಣವಾದ ಛಂದಸ್ಸು, ಪ್ರಾಸಗಳಿಂದ ಕೂಡಿದ ಸಾಹಿತ್ಯ, ಪ್ರೌಢ ಕಾವ್ಯಾಲಂಕಾರಗಳು ಮಿಳಿತವಾಗಿರುವ ಮುದ್ದಣನ ಕುಮಾರ ವಿಜಯ ಪ್ರಸಂಗವು, ಕಲಿಕಾಭ್ಯಾಸಿಗಳಿಗೂ ಅತ್ಯಂತ ಸೂಕ್ತವಾದ ಪ್ರಸಂಗ. ಕಾವ್ಯಾತ್ಮಕ ವೈಶಿಷ್ಟ್ಯಗಳನ್ನು, ಕನ್ನಡ ಛಂದಸ್ಸಿನ ಅನೇಕಾನೇಕ ಗುಣಲಕ್ಷಣಗಳನ್ನು ಈ ಎರಡೂ ಪ್ರಸಂಗಗಳ ಪದಗಳಲ್ಲಿ ಕಾಣಬಹುದಾಗಿದೆ.

ಪದ್ಯಗಳ ಭಾಗವತಿಕೆಗೆ ಮೊದಲು ಅದರ ಏನು-ಎತ್ತ ಕುರಿತಾಗಿರುವ ಬಲಿಪರ ರಂಗ ಟಿಪ್ಪಣಿ ಎಂಬ ಕೃತಿಯೂ ಈ ಧ್ವನಿಮುದ್ರಿಕೆಯ ಜೊತೆಗೆ ಹೊರಬರುತ್ತಿದೆ. ಪದ್ಯವನ್ನು ಯಾವ ಲಯದಲ್ಲಿ ಹಾಡಬೇಕು, ರಂಗಕ್ರಿಯೆ ಹೇಗಿರಬೇಕು, ಪಠ್ಯದಲ್ಲಿರುವ ರಾಗ-ತಾಳಕ್ಕಿಂತ ಭಿನ್ನವಾದ ಬೇರೆ ರಾಗ-ತಾಳಗಳನ್ನು ಹೇಗೆ ಬಳಸಬಹುದು – ಇತ್ಯಾದಿ ಮಾಹಿತಿಯೂ ಟಿಪ್ಪಣಿಯಲ್ಲಿದೆ. ಭಾಮಿನಿ, ವಾರ್ಧಕ, ಕಂದ ಪದ್ಯಗಳಿಗೆ ಮೂಲತಃ ನಿರ್ದಿಷ್ಟ ರಾಗವನ್ನು ಸೂಚಿಸಲಾಗಿರುವುದಿಲ್ಲ. ಆದರೆ ರಂಗಟಿಪ್ಪಣಿಯಲ್ಲಿ ಇದನ್ನೂ ಸೂಚಿಸಲಾಗಿದೆ. ಯಕ್ಷಗಾನ ಸಾಹಿತ್ಯ ಲೋಕದಲ್ಲಂತೂ ಇದೊಂದು ಅನುಪಮವಾದ ಅನನ್ಯ ಮಹತ್ಕಾರ್ಯವೇ ಹೌದು. ಅಜ್ಜನಿಗೆ (ಹಿರಿಯ ಬಲಿಪ ನಾರಾಯಣ ಭಾಗವತರಿಗೆ) ಈ ಏಳುನೂರರಷ್ಟು ಪದ್ಯಗಳು ಕೂಡ ಕಂಠಪಾಠವಾಗಿಬಿಟ್ಟಿದ್ದವು ಎಂಬುದನ್ನು ಅವರ ಮೊಮ್ಮಗ, ಕಿರಿಯ ಬಲಿಪ ನಾರಾಯಣ ಭಾಗವತರು ನೆನಪಿಸಿಕೊಳ್ಳುತ್ತಿದ್ದರು.

ತನ್ನೂರಿನ ಮಹಾಕವಿ ಮುದ್ದಣನ ಬಗೆಗೆ ಅಮೋಘ ಭಕ್ತಿ-ಶ್ರದ್ಧೆಯಿಟ್ಟುಕೊಂಡಿರುವ ನಂದಳಿಕೆ ಬಾಲಚಂದ್ರ ರಾವ್ ಅವರ ಇಚ್ಛಾಶಕ್ತಿಯ ಫಲವಾಗಿ ಇಂಥದ್ದೊಂದು ಅಮೂಲ್ಯವಾದ ಧ್ವನಿಮುದ್ರಿಕೆಯು ಯಕ್ಷಗಾನ ಲೋಕಕ್ಕೆ ದೊರೆಯುತ್ತಿರುವುದು ಯಕ್ಷಗಾನದ ಮಟ್ಟಿಗೆ ದೊಡ್ಡ ಕೊಡುಗೆ. ರಾಗ-ತಾಳ-ಮಟ್ಟುಗಳನ್ನೂ ಕಾಪಿಡುವ, ಯಕ್ಷಗಾನ ಅಭ್ಯಾಸಿಗಳಿಗೂ ಆಕರ ಕೃತಿಯಾಗುವ, ಮುಂದಿನ ಪೀಳಿಗೆಗೆ ಯಕ್ಷಗಾನವನ್ನು ದಾಟಿಸುವ ಈ ಕಾಯಕ, ರಂಗಕ್ಕೊಂದು ದೊಡ್ಡ ಆಸ್ತಿ ದೊರೆತಂತೆ.

Article by Avinash Baipadithaya in Prajavani on 10/11 Feb 2024

The post ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ first appeared on DiGi Kannada | ಡಿಜಿ ಕನ್ನಡ.

]]>
https://digikannada.com/muddana-kumara-vijaya-ratnavathi-kalyana-yakshagana-prasanga/feed/ 0 3428
Invest in MF, Shares: ಹೂಡಿಕೆ, ಷೇರು ಮಾರಾಟ – ಖರೀದಿಗೆ ಆ್ಯಪ್‌ಗಳು https://digikannada.com/know-the-best-trading-apps-for-investing-in-share-market/?utm_source=rss&utm_medium=rss&utm_campaign=know-the-best-trading-apps-for-investing-in-share-market https://digikannada.com/know-the-best-trading-apps-for-investing-in-share-market/#respond Thu, 08 Feb 2024 05:51:00 +0000 https://digikannada.com/?p=3494 ಪ್‌ಗಳು ಉಚಿತವಾಗಿ ಲಭ್ಯವಿದ್ದರೂ, ಅದರ ಬಳಕೆ ಸಂಪೂರ್ಣ ಉಚಿತವಾಗಿರಲಾರದು. ವಹಿವಾಟಿಗೆ ತಕ್ಕಂತೆ, ಕನಿಷ್ಠ ಬ್ರೋಕರೇಜ್ ಅಥವಾ ಕಮಿಷನ್ ಅನ್ನು ಈ ಆ್ಯಪ್‌ಗಳಿಗೂ ನೀಡಬೇಕಾಗುತ್ತದೆ. ಜೊತೆಗೆ, ಪ್ರತಿಯೊಂದು ಆ್ಯಪ್‌ಗೂ ತನ್ನದೇ ಆದ ವೈಶಿಷ್ಟ್ಯಗಳಿವೆ.

The post Invest in MF, Shares: ಹೂಡಿಕೆ, ಷೇರು ಮಾರಾಟ – ಖರೀದಿಗೆ ಆ್ಯಪ್‌ಗಳು first appeared on DiGi Kannada | ಡಿಜಿ ಕನ್ನಡ.

]]>

ಸ್ಟಾಕ್ ಮಾರುಕಟ್ಟೆ ಅಥವಾ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದೆಂದರೆ ಅತ್ಯಂತ ಅಪಾಯದ ಕೆಲಸ ಎಂಬ ಒಂದು ಕಾಲವಿತ್ತು. ಷೇರುಗಳ ಮೌಲ್ಯದ ಏರಿಳಿತವನ್ನೆಲ್ಲ ನೆನಪಿಟ್ಟುಕೊಂಡು, ಖರೀದಿ-ಮಾರಾಟದಲ್ಲಿ ತೊಡಗಿಸಿಕೊಳ್ಳುವ ಜಾಣ್ಮೆ ಇರುವವರಿಗೆ ಸಮಯ ಹೊಂದಿಸುವುದು ತ್ರಾಸದಾಯಕ. ಸ್ವಲ್ಪ ಎಚ್ಚರ ತಪ್ಪಿದ್ರೂ ನಷ್ಟವಾಗಬಹುದು. ಸಮಯವೆಲ್ಲವನ್ನೂ ಷೇರುಗಳ ಮೌಲ್ಯದ ಮೇಲೆಯೇ ಇರಿಸಬೇಕಾಗುತ್ತಿತ್ತು. ಆದರೀಗ, ಮೊಬೈಲ್ ಫೋನ್ – ಇಂಟರ್ನೆಟ್ ಸಂಪರ್ಕ ಬೆರಳತುದಿಯಲ್ಲೇ ಇರುವಾಗ, ಷೇರು ಮಾರುಕಟ್ಟೆ ವ್ಯವಹಾರ ತೀರಾ ಸರಳವಾಗಿಬಿಟ್ಟಿದೆ. ಷೇರುಗಳಲ್ಲಿ ಹಣ ತೊಡಗಿಸುವುದು, ಅದರ ಮೌಲ್ಯ ಹೆಚ್ಚಾದಾಗ ಮಾರುವುದು, ಕಡಿಮೆಯಾದಾಗ ಖರೀದಿಸುವುದನ್ನೆಲ್ಲ ಕ್ಷಣ ಮಾತ್ರದಲ್ಲಿ ನಿಭಾಯಿಸಿಬಿಡಬಹುದು. ನಮ್ಮ ಲಾಭ ಸಂಪಾದನೆಗೆ ತಂತ್ರಜ್ಞಾನವು ನೆರವಿಗೆ ಬಂದಿದ್ದು, ಮೊಬೈಲ್ ಫೋನ್ ಎಂಬ ಅಂಗೈಯ ಅರಮನೆಯಲ್ಲಿ ಇದಕ್ಕೆ ಪೂರಕವಾದ ಆ್ಯಪ್‌ಗಳು ನಮ್ಮ ಕೆಲಸವನ್ನು ಸುಲಭವಾಗಿಸಿವೆ.

ಹಣಕಾಸು ಕ್ಷೇತ್ರವು ಆಧುನಿಕ ತಂತ್ರಜ್ಞಾನವನ್ನು ಮಿಳಿತವಾಗಿಸಿಕೊಂಡು ಬೃಹತ್ತಾಗಿ ಬೆಳೆದಿದೆ. ಜನಸಾಮಾನ್ಯರಲ್ಲಿ ಕೂಡ ‘ಮಾರುಕಟ್ಟೆ ಬಿತ್ತು’ ಎಂಬ ಬೇಸರವೂ ‘ಮಾರ್ಕೆಟ್ ಮೇಲೇರಿತು’ ಎಂಬ ಖುಷಿಯ ಮಾತುಗಳೂ ಕೇಳಿಬರತೊಡಗಿವೆ. ಇದಕ್ಕೆ ಕಾರಣವಾಗಿದ್ದೇ ಮೊಬೈಲ್ ಫೋನ್‌ನಲ್ಲಿರುವ ಆ್ಯಪ್‌ಗಳು. ಜನ ಸಾಮಾನ್ಯರು ಕೂಡ ತಮ್ಮಲ್ಲಿ ಉಳಿತಾಯವಾಗಿರುವ ಹಣವನ್ನು ಬೆಳೆಸಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವತ್ತ ಮನ ಮಾಡಿದ್ದಾರೆ. ತಂತ್ರಜ್ಞಾನವನ್ನು ಬಳಸಿಯೇ ಮೋಸ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಇಲ್ಲಿ ಹಣ ತೊಡಗಿಸಿ, ಹಣವನ್ನು ಕೆಲವೇ ಕ್ಷಣಗಳಲ್ಲಿ ದುಪ್ಪಟ್ಟು ಮಾಡಿಕೊಳ್ಳಿ ಎಂಬಂಥಹಾ ಬಾಯಲ್ಲಿ ನೀರೂರಿಸುವ ಆಮಿಷಕ್ಕೆ ಮರುಳಾಗುವ ನಮ್ಮ ಖಾಸಗಿ ಮಾಹಿತಿಯನ್ನು, ಬ್ಯಾಂಕಿಂಗ್ ಪಾಸ್‌ವರ್ಡ್ ಮುಂತಾದ ಸೂಕ್ಷ್ಮ ವಿಷಯಗಳನ್ನು ಕದಿಯುವ ಆ್ಯಪ್‌ಗಳೇ ಜಾಸ್ತಿ ಇರುವ ಈ ಕಾಲದಲ್ಲಿ, ಯಾವ ಆ್ಯಪ್ ಅನ್ನು ನಂಬಬೇಕು ಎಂಬ ಕುರಿತು ಹಲವರಿಗೆ ಗೊಂದಲವಿದೆ.

ಮ್ಯೂಚುವಲ್ ಫಂಡ್‌ಗಳಲ್ಲಿ ಅಥವಾ ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್‌ನ ಆ್ಯಪ್ ಸ್ಟೋರ್‌ಗಳಲ್ಲಿ ಸಾಕಷ್ಟಿವೆ. ಅವುಗಳ ನಡುವೆ ನಕಲಿ ಅಥವಾ ಆ್ಯಪ್‌ಗಳೂ ಸೇರಿಕೊಂಡಿರಬಹುದು. ಈ ಕಾರಣಕ್ಕಾಗಿ ನಮ್ಮ ಪ್ರಜಾವಾಣಿ ಓದುಗರಿಗಾಗಿ, ಈಗಾಗಲೇ ಹಣಕಾಸು ಹೂಡಿಕೆಯಲ್ಲಿ ನಿರತರಾಗಿರುವವರೊಂದಿಗೆ ಸಮಾಲೋಚಿಸಿ, ಇಲ್ಲಿ ಕೆಲವು ಆ್ಯಪ್‌ಗಳನ್ನು ಪಟ್ಟಿ ಮಾಡಲಾಗಿದೆ.

ಪ್ರಮುಖವಾಗಿ ಕೇಳಿಬರುತ್ತಿರುವ ಆ್ಯಪ್ ಹೆಸರುಗಳೆಂದರೆ ಮೋತಿಲಾಲ್ ಓಸ್ವಾಲ್ (Motilal Oswal), ಜೆರೋಧಾ ಅವರ ಕೈಟ್ (Kite by Zerodha), ಅಪ್‌ಸ್ಟಾಕ್ಸ್ (Upstox), 5 ಪೈಸಾ (5paisa), ಏಂಜೆಲ್ ಒನ್ (Angel One), ಕೊಟಕ್ ಸೆಕ್ಯುರಿಟೀಸ್ (Kotak Securities), ಐಸಿಐಸಿಐ ಡೈರೆಕ್ಟ್ ಮಾರ್ಕೆಟ್ಸ್ ಆ್ಯಪ್ (ICICI Direct Markets App), ಟ್ರೇಡಿಂಗ್ ವ್ಯೂ (TradingView), ಐಐಎಫ್ಎಲ್ (IIFL), ಶೇರ್ ಖಾನ್ (ShareKhan), ಈಡೆಲ್ವೀಸ್ (Edelweiss), ಫೈಯರ್ಸ್ (FYERS), ಗ್ರೋ (Groww), ಅಲೀಸ್‌ಬ್ಲೂ (AliceBlue) ಮುಂತಾದವು. ಅಲ್ಲದೆ, ಬಹುತೇಕ ಎಲ್ಲ ಬ್ಯಾಂಕ್‌ಗಳು ಕೂಡ ತಮ್ಮದೇ ಆದ ಟ್ರೇಡಿಂಗ್ ಆ್ಯಪ್ ಹೊಂದಿರುತ್ತವೆ.

ಆದರೆ ನೆನಪಿಡಿ. ಆ್ಯಪ್‌ಗಳು ಉಚಿತವಾಗಿ ಲಭ್ಯವಿದ್ದರೂ, ಅದರ ಬಳಕೆ ಸಂಪೂರ್ಣ ಉಚಿತವಾಗಿರಲಾರದು. ವಹಿವಾಟಿಗೆ ತಕ್ಕಂತೆ, ಕನಿಷ್ಠ ಬ್ರೋಕರೇಜ್ ಅಥವಾ ಕಮಿಷನ್ ಅನ್ನು ಈ ಆ್ಯಪ್‌ಗಳಿಗೂ ನೀಡಬೇಕಾಗುತ್ತದೆ. ಜೊತೆಗೆ, ಪ್ರತಿಯೊಂದು ಆ್ಯಪ್‌ಗೂ ತನ್ನದೇ ಆದ ವೈಶಿಷ್ಟ್ಯಗಳಿವೆ. ಅನುಭವ, ಹೂಡಿಕೆಯ ಗುರಿ, ವಹಿವಾಟಿನ ಅಗತ್ಯತೆಗಳಿಗೆ ಅನುಗುಣವಾಗಿ ಈ ಆ್ಯಪ್‌ಗಳನ್ನು ರೂಪಿಸಲಾಗಿದೆ. ಕೆಲವು ಆ್ಯಪ್‌ಗಳು ವಾರ್ಷಿಕ ಶುಲ್ಕವನ್ನು ಅಥವಾ ವಹಿವಾಟಿಗೆ ತಕ್ಕಂತೆ ಸೇವಾ ಶುಲ್ಕವನ್ನೂ ಯಾಚಿಸುತ್ತವೆ.

ದಿನದ ವೇಳೆ ಕುಳಿತಲ್ಲೇ ವಹಿವಾಟು (ಷೇರುಗಳ ಮಾರಾಟ, ಖರೀದಿ) ನಡೆಸಲು (ಇಂಟ್ರಾ ಡೇ) ನಿರ್ದಿಷ್ಟ ಶುಲ್ಕ (ಹೆಚ್ಚಿನವು ₹20, ಕೆಲವು ಆ್ಯಪ್‌ಗಳಲ್ಲಿ ಉಚಿತ) ವಿಧಿಸುತ್ತವೆ. ಅದೇ ರೀತಿ, ದೀರ್ಘಕಾಲಿಕ ಹೂಡಿಕೆಗೆ ಕೂಡ ಇಂತಿಷ್ಟು ಅಂತ ಕಮಿಷನ್ ಇರುತ್ತದೆ. ಈ ಆ್ಯಪ್‌ಗಳಲ್ಲಿ ಸೈನ್ ಇನ್ ಆಗಿ, ಡಿಮ್ಯಾಟ್ ಖಾತೆ ತೆರೆಯಲು ಸುಮಾರು ₹200ರಿಂದ ₹400ರವರೆಗೆ ಆರಂಭಿಕ ಶುಲ್ಕವನ್ನೂ ಕೆಲವು ಆ್ಯಪ್‌ಗಳು ವಿಧಿಸಬಹುದು (ಷೇರು ವಹಿವಾಟಿಗೆ ಡಿಮ್ಯಾಟ್ ಖಾತೆ ಇರುವುದು ಕಡ್ಡಾಯ, ಕೆಲವು ಬ್ಯಾಂಕುಗಳು ಉಚಿತವಾಗಿ ಮಾಡಿಕೊಡುತ್ತವೆ). ಕೆಲವು ಆ್ಯಪ್‌ಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಶುಲ್ಕ ಇರುವುದಿಲ್ಲ. ಮತ್ತೆ ಕೆಲವು ಆ್ಯಪ್‌ಗಳು, ಹೂಡಿಕೆದಾರರ ವಾರ್ಷಿಕ ಲಾಭಾಂಶ ಶೇ.10 ದಾಟಿದರಷ್ಟೇ ಶೇ.0.5ರಿಂದ ಶೇ.1ರಷ್ಟು ಕಮಿಷನ್ ಪಡೆಯುತ್ತವೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಲಾಭ ಮಾಡುವುದನ್ನು ನಿಧಾನವಾಗಿ ಕಲಿತುಕೊಂಡ ಬಳಿಕ, ಈ ಶುಲ್ಕಗಳೆಲ್ಲ ನಗಣ್ಯ ಎನ್ನಿಸಬಹುದು.

ಈ ಸ್ಟಾಕ್ ಟ್ರೇಡಿಂಗ್ ಆ್ಯಪ್‌ಗಳ ಮತ್ತೊಂದು ದೊಡ್ಡ ಅನುಕೂಲವೆಂದರೆ, ಯಾವ ಷೇರಿನ ಮೌಲ್ಯ ಇಳಿಕೆಯಾಯಿತು, ಯಾವುದರ ಮೌಲ್ಯ ಏರಿಕೆಯಾಯಿತು ಎಂದು ಆ ಕ್ಷಣದಲ್ಲೇ ತೋರಿಸುತ್ತವೆ. ಇಷ್ಟೇ ಅಲ್ಲ, ನಾವು ಯಾವುದರಲ್ಲಿ ಹೂಡಿಕೆ ಮಾಡಬಹುದು, ಯಾವಾಗ ಷೇರು ಮಾರಾಟ ಮಾಡಬಹುದು, ಯಾವಾಗ ಯಾವುದನ್ನು ಖರೀದಿಸಬಹುದು ಮುಂತಾಗಿ ತಜ್ಞಸಲಹೆಯನ್ನೂ ನೀಡುತ್ತವೆ. ಹೀಗೆ, ಷೇರು ಮಾರುಕಟ್ಟೆಗೆ ಹೊಸದಾಗಿ ಕಾಲಿಟ್ಟವರನ್ನೂ ಮುನ್ನಡೆಸಿ, ತಾವೂ ಬೆಳೆಯುವ ಕೆಲಸವನ್ನು ಈ ಆ್ಯಪ್‌ಗಳು ಮಾಡುತ್ತವೆ.

ಆದರೆ, ಷೇರು ವಹಿವಾಟಿಗೆ ಸಂಬಂಧಿಸಿ ಮೂರು ಗಮನಿಸಲೇಬೇಕಾದ ವಿಚಾರಗಳಿವೆ:

  1. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಲ್ಲಿ ರಿಸ್ಕ್ ಇದೆ. ಯೋಚನೆ ಮಾಡಿ ಹೂಡಿಕೆ ಮಾಡಬೇಕು.
  2. ಒಂದೇ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಬಾರದು (ಎಂದರೆ ಷೇರುಗಳನ್ನು ಖರೀದಿಸಬಾರದು). ವಿಭಿನ್ನ ಕಂಪನಿಗಳ ಷೇರು ಖರೀದಿಸಿದರೆ, ಒಂದರಲ್ಲಿ ನಷ್ಟವಾದರೂ, ಮತ್ತೊಂದರಲ್ಲಿ ಲಾಭ ದೊರೆಯಬಹುದು.
  3. ದಿಢೀರ್ ಲಾಭ ನಿರೀಕ್ಷಿಸದೆ, ತಾಳ್ಮೆಯಿಂದ ಕಾಯಬೇಕಾಗುತ್ತದೆ. ವ್ಯವಸ್ಥಿತವಾಗಿ ಹಂತ ಹಂತವಾಗಿ ಹೂಡಿಕೆ ಹೆಚ್ಚಿಸುತ್ತಾ ಜಾಣ್ಮೆಯಿಂದ ಆದಾಯ ಹೆಚ್ಚಿಸಿಕೊಳ್ಳಬಹುದು.

Tech Tips by Avinash B Published in Prajavani on 06/07 Feb 2024

The post Invest in MF, Shares: ಹೂಡಿಕೆ, ಷೇರು ಮಾರಾಟ – ಖರೀದಿಗೆ ಆ್ಯಪ್‌ಗಳು first appeared on DiGi Kannada | ಡಿಜಿ ಕನ್ನಡ.

]]>
https://digikannada.com/know-the-best-trading-apps-for-investing-in-share-market/feed/ 0 3494