ಹುಡುಗಿ: ನಿಂಗೆ ಕಾರಣ ಕೂಡ ಹೇಳಕ್ಕಾಗಲ್ವ? ಮತ್ತೆ ನನ್ನನ್ನು ಇಷ್ಟಪಟ್ಟಿದ್ದೀ ಅಂತ ಅಷ್ಟು ಖಚಿತವಾಗಿ ಹೇಗೆ ಹೇಳ್ತೀ? ನನ್ನ ಪ್ರೀತಿಸ್ತೀ ಅಂತಾನೂ ಹ್ಯಾಗೆ ಹೇಳ್ತೀ?
ಹುಡುಗ: ನಿಜಕ್ಕೂ ನಂಗೆ ಕಾರಣ ಗೊತ್ತಿಲ್ಲ. ಆದ್ರೂ ನಿನ್ನ ಪ್ರೀತಿಸ್ತೀನಿ ಅಂತ ಸಾಬೀತು ಮಾಡಬಲ್ಲೆ.
ಹುಡುಗಿ: ಸಾಬೀತು ಮಾಡ್ತೀಯಾ? ಇಲ್ಲ. ನೀನು ಕಾರಣ ಹೇಳಲೇಬೇಕು. ನನ್ನ ಗೆಳತಿಗೆ ಆಕೆಯ ಬಾಯ್‌ಫ್ರೆಂಡ್ ಕಾರಣ ಹೇಳಬಹುದಾದರೆ, ನಿನಗೇಕೆ ಸಾಧ್ಯವಿಲ್ಲ?
ಹುಡುಗ: ಓಕೆ, ಓಕೆ…ಹ್‌ಮ್…. ನೀನು ಚಂದವಾಗಿದ್ದೀ. ನಿನ್ನ ಮಾತು ಹಿತವಾಗುತ್ತೆ, ನಿನ್ನ ಧ್ವನಿ ಸಂಗೀತದಂತಿದೆ, ನೀನು ತುಂಬಾ ಕೇರಿಂಗ್ ಆಗಿದ್ದೀ. ನೀನು ನನ್ನ ಚೆನ್ನಾಗಿ ಪ್ರೀತಿಸ್ತೀ. ನೀನು ಚೆನ್ನಾಗಿ ಯೋಚನೆ ಮಾಡ್ತೀ. ನಿನ್ನ ನಗೆ ನನಗೆ ಮೋಡಿ ಮಾಡಿದೆ…. ಒಟ್ನಲ್ಲಿ, ನಿನ್ನೆಲ್ಲಾ ಚಟುವಟಿಕೆ, ಚಲನವಲನಗಳು ನನಗೆ ಇಷ್ಟವಾದವು.
ದುರದೃಷ್ಟಕರವೋ ಎಂಬಂತೆ ಕೆಲವು ದಿನಗಳಲ್ಲಿ ಈ ಹುಡುಗಿಗೆ ಅಪಘಾತವಾಗುತ್ತದೆ. ಜೀವಚ್ಛವದಂತೆ ಬದುಕಬೇಕಾಗುತ್ತದೆ. ಇದೇ ಹುಡುಗ ಆಕೆಯ ಬಳಿ ಒಂದು ಪತ್ರವನ್ನಿಡುತ್ತಾನೆ.
ಅದರಲ್ಲಿ ಈ ರೀತಿ ಬರೆದಿತ್ತು:
ಡಿಯರ್,
ನಿನ್ನ ಸಿಹಿಯಾದ ಮಾತಿಗಾಗಿ ನಾನು ನಿನ್ನ ಪ್ರೀತ್ಸಿದೆ… ಆದ್ರೆ ಈಗ ನಿನಗೆ ಮಾತನಾಡಲಾಗುತ್ತದೆಯೇ? ಇಲ್ಲ! ಅದಕ್ಕಾಗಿ ನಾನು ನಿನ್ನ ಪ್ರೀತಿಸೋದಿಲ್ಲ.
ನಿನ್ನ ಕೇರಿಂಗ್ ನೇಚರ್, ಸೌಂದರ್ಯಕ್ಕಾಗಿ ನಾನು ನಿನ್ನ ಪ್ರೀತ್ಸಿದೆ… ಈಗ ಅವೆಲ್ಲಾ ಎಲ್ಲಿ? ಸೋ… ಈ ಕಾರಣದಿಂದ ನಿನ್ನ ಪ್ರೀತ್ಸೋದು ಅಸಾಧ್ಯ.
ನಿನ್ನ ಆ ಸುಂದರ ಹೂನಗೆ, ನಿನ್ನೆಲ್ಲಾ ಚಟುವಟಿಕೆಗಳು ನನಗೆ ಆತ್ಮೀಯವಾಗಿದ್ದರಿಂದ ನಿನ್ನ ಪ್ರೀತ್ಸಿದೆ. ಅವೆಲ್ಲಾ ಗುಣಗಳು ಈಗ ಸಾಧ್ಯವಿಲ್ಲ. ಆದುದರಿಂದ ಆ ಕಾರಣಗಳಿಗಾಗಿ ನಾ ನಿನ್ನ ಪ್ರೀತಿಸಲಾರೆ…..
ಪ್ರೀತಿ ಮಾಡಲು ಕಾರಣಗಳು ಬೇಕೂಂತೇನಾದರೂ ಇದ್ರೆ, ಈಗಿನ ಸ್ಥಿತಿಯ ಪ್ರಕಾರ, ನಿನ್ನನ್ನು ಪ್ರೀತಿಸಲು ಯಾವುದೇ ಕಾರಣಗಳು ಉಳಿದಿಲ್ಲ. ಪ್ರೀತಿಗೆ ಕಾರಣ ಎಂಬುದೇನಾದರೂ ಬೇಕೇ? ಇಲ್ಲ…. ಹೌದು. ನಾನಿನ್ನೂ ನಿನ್ನ ಪ್ರೀತಿಸ್ತಿದೀನಿ…. ಪ್ರೇಮಕ್ಕೆ ಕಾರಣ ಬೇಕಿಲ್ಲ. ಐ ಲವ್ ಯು….
“The best and most beautiful things in the world cannot be seen, not touched… but are felt in the heart”!
And…. ಇದೇ ಕಾರಣಕ್ಕೆ I Love You …
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
View Comments
ಅವಿನಾಶ್‍ರವರೇ,
ನಿಮ್ಮ 'ಪ್ರೀತಿಗೆ ಕಾರಣ' ಮನ ಮುಟ್ಟುತ್ತದೆ.
ಪ್ರೇಮಕ್ಕೆ ಕಾರಣ ಬೇಕಿಲ್ಲ ಎಂಬುದು ಎಷ್ಟು ನಿಜ..
ಬದಲಾವಣೆ ಜಗದ ನಿಯಮ..ಸೊಗಸಾಗಿದೆ ಹೆಸರು.
ಬ್ಲಾಗ್ ಜಗತ್ತಿಗೆ ಸ್ವಾಗತ ಶಿವ್ ಅವರೆ,
ನಿಮ್ಮ ಪಾತರಗಿತ್ತಿ ಹಿಡಿಯಲು ಶೀಘ್ರವೇ ಬರಬೇಕೆಂಬಾಸೆ.
ಧನ್ಯವಾದ.
ಹೃದಯಸ್ಪರ್ಶಿ ಪ್ರೇಮದ ಕಥೆ. ಉಹ್! ನಮ್ಮ ಕಾಲದಲ್ಲಿ ಹೀಗಿರ್ಲಿಲ್ಲ. ಜಗತ್ತು ಏನೂ ಎಂದು ತಿಳಿಯುವ ಮೊದಲೇ ಅಮ್ಮ ಅಪ್ಪ ಗಂಟು ಹಾಕಿಬಿಟ್ರು.
ಅಂದ ಹಾಗೆ ಇದು ನಿಮ್ಮ ಕಥೆಯಾ [:P]
ಶ್ರೀನಿವಾಸ್ ಅವರೆ,
ಈ ಕಥೆ ನಮ್ಮ ನಿಮ್ಮೆಲ್ಲರದೂ ಆಗಿರಬಹುದಲ್ಲ!
ನನ್ನ ಕಥೆಯಂತೂ ಹೀಗಿಲ್ಲ. ಲೋಕವೆಂದರೇನು ಎಂದು ತಿಳಿಯೋಕ್ಕೆ ಮೊದಲೇ ಹಳ್ಳಕ್ಕೆ ಬಿದ್ದಿದ್ದೆ. ಹೇಗೋ ಏದುರಿಸುಬಿಟ್ಕೊಂಡು ಈಜಿಕೊಂಡು ಹೋಗ್ತಿದ್ದೀನಿ.