ಹಾಗಿದ್ದರೆ ಇದನ್ನು ಹೇಗೆ ಸೆಟ್ ಮಾಡುವುದು? ಮೊದಲನೆಯದಾಗಿ ನಿಮ್ಮ ವಾಟ್ಸ್ಆ್ಯಪ್ ಅಪ್‌ಡೇಟ್ ಆಗಿರಬೇಕು (2.11.505 ಆವೃತ್ತಿ). ಇದನ್ನು ಪರೀಕ್ಷಿಸಲು, ವಾಟ್ಸ್ಆ್ಯಪ್‌ನ ಸೆಟ್ಟಿಂಗ್ಸ್ (ಬಲ ಮೇಲ್ತುದಿಯಲ್ಲಿರುವ ಮೂರು ಚುಕ್ಕೆಗಳು) ಎಂಬಲ್ಲಿ, Help ಎಂಬಲ್ಲಿ ಹೋಗಿ, About ನೋಡಿದರೆ ತಿಳಿಯುತ್ತದೆ. ಇಲ್ಲದಿದ್ದರೆ ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್‌ಡೇಟ್ ಮಾಡಿಕೊಳ್ಳಿ. ನಂತರ, ಕಂಪ್ಯೂಟರಿನಲ್ಲಿ web.whatsapp.com ಎಂಬಲ್ಲಿ ಹೋಗಿ. ಅಲ್ಲಿ ಚೌಕಾಕಾರದ ಕಪ್ಪುಬಿಳುಪಿನ ಕ್ಯುಆರ್ ಕೋಡ್ ಇರುವ ಚಿತ್ರದ ಬಾಕ್ಸ್ ಇರುತ್ತದೆ. ಈಗ ಫೋನ್‌ನಲ್ಲಿ ವಾಟ್ಸ್ಆ್ಯಪ್ ತೆರೆದು, ಸೆಟ್ಟಿಂಗ್ಸ್‌ನ ಮೂರು ಚುಕ್ಕೆಗಳನ್ನು ಒತ್ತಿ, ಡ್ರಾಪ್‌ಡೌನ್ ಮೆನುವಿನಲ್ಲಿ ಕಾಣಿಸುವ WhatsApp Web ಕ್ಲಿಕ್ ಮಾಡಿ. (ಚಿತ್ರ ನೋಡಿ) ವಾಟ್ಸ್ಆ್ಯಪ್ ಮೂಲಕ ಕ್ಯಾಮೆರಾ ಓಪನ್ ಆದಾಗ, ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ಕಾಣಿಸುವ ಕ್ಯುಆರ್ ಕೋಡ್ ಮೇಲೆ ಕ್ಯಾಮೆರಾ ಹಿಡಿಯಿರಿ. ಸ್ಕ್ಯಾನ್ ಆದ ಬಳಿಕ ಕಂಪ್ಯೂಟರ್ ಹಾಗೂ ಮೊಬೈಲ್ ಸಂಪರ್ಕವಾದ ಸೂಚನೆ ನಿಮಗೆ ದೊರೆಯುತ್ತದೆ. ಅಷ್ಟೆ. ಕಂಪ್ಯೂಟರಿನಲ್ಲೇ ನೀವು ವಾಟ್ಸ್ಆ್ಯಪ್ ಸಂಭಾಷಣೆ ಮುಂದುವರಿಸಬಹುದು. ಮೊಬೈಲ್‌ನಲ್ಲಿ ಅದು ತನ್ನಿಂತಾನೇ ಸಿಂಕ್ರನೈಸ್ ಆಗುತ್ತದೆ.
-‘ಅವೀ’
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…