* ಯಾವುದೇ ನಿರ್ದಿಷ್ಟ ಪದ ಗುಚ್ಛ, ಉದಾಹರಣೆಗೆ ಒಂದು ಹಾಡಿನ ಬಗ್ಗೆ ಮಾಹಿತಿ ಬೇಕೆಂದಾದರೆ ಮತ್ತು ಆ ಪದಗಳು ಇರಲೇಬೇಕಾದ ಒಂದು ವಾಕ್ಯವನ್ನು ಹುಡುಕಿ ತೋರಿಸಬೇಕೆಂದಾದರೆ ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ಉದ್ಧರಣ ಚಿಹ್ನೆ (ಕೋಟ್ ಮಾರ್ಕ್ಸ್) ಬಳಸಿ. ಉದಾಹರಣೆಗೆ, “ಕನ್ನಡದಲ್ಲಿ ಬರೆಯುವುದು ಹೇಗೆ” ಅಂತ ಸರ್ಚ್ ಮಾಡಿದರೆ, ಆ ಮೂರೂ ಅಕ್ಷರಗಳು ಒಟ್ಟಾಗಿಯೇ ಇರುವ ಪುಟಗಳು ಮಾತ್ರವೇ ಕಾಣಸಿಗುತ್ತವೆ. ಕೋಟ್ ಮಾರ್ಕ್ ತೆಗೆದರೆ, ಕನ್ನಡ, ಬರೆಯುವುದು, ಹೇಗೆ ಎಂಬ ಅಕ್ಷಗಳಿರುವ ಎಲ್ಲ ಪುಟಗಳೂ ಕಾಣಸಿಗುತ್ತವೆ.
* ನೀವು ಹುಡುಕುವ ಯಾವುದೇ ಮಾಹಿತಿಯಲ್ಲಿ ನಿರ್ದಿಷ್ಟ ಪದ ಇರಲೇಬಾರದು ಅಂತ ನಿರ್ಧರಿಸಿದ್ದರೆ, ಮೈನಸ್ ಚಿಹ್ನೆ ಬಳಸಿ ಆ ಪದವನ್ನು ಹಾಕಿ ಹುಡುಕಿ. ಉದಾ: -ಕನ್ನಡದಲ್ಲಿ ಬರೆಯುವುದು ಹೇಗೆ ಅಂತ ಬರೆದರೆ, ಕನ್ನಡದಲ್ಲಿ ಎಂಬ ಪದ ಬಿಟ್ಟು, ಬೇರೆಲ್ಲ ಹುಡುಕಾಟದ ಪದಗಳು ದೊರೆಯುತ್ತವೆ.
* ಗೂಗಲ್‌ನಲ್ಲಿ ನೇರವಾಗಿ What is the time now in London ಅಂತ ಬರೆದರೆ (ಯಾವುದೇ ವಿದೇಶದ ಊರಿನ ಹೆಸರು ಬದಲಾಯಿಸಿಕೊಳ್ಳಿ) ಆ ಊರಿನಲ್ಲಿ ಈಗಿನ ಸಮಯವೆಷ್ಟೆಂಬುದು ತಕ್ಷಣಕ್ಕೆ ಕಾಣಿಸುತ್ತದೆ.
* ಕ್ಯಾಲ್ಕುಲೇಟರ್ ಆಗಿಯೂ ಗೂಗಲ್ ಅನ್ನು ಬಳಸಿ. ಗೂಗಲ್ ಸರ್ಚ್ ಬಾರ್‌ನಲ್ಲಿ 12345*54321 ಅಂತ ಬರೆದು ಎಂಟರ್ ಒತ್ತಿದಾಕ್ಷಣ ಉತ್ತರ ಲಭ್ಯವಾಗುತ್ತದೆ. ಕೂಡಿಸಲು +, ಕಳೆಯಲು -, ಗುಣಿಸಲು ಸ್ಟಾರ್ (*) ಹಾಗೂ ಭಾಗಿಸಲು ಎದುರು ಬಾಗಿದ ಅಡ್ಡಗೆರೆ (/) ಚಿಹ್ನೆ ಬಳಸಿ.
* ಡಿಕ್ಷನರಿಯಾಗಿ ಗೂಗಲ್ ಬಳಸಿ: Exception meaning in Kannada ಅಂತ ಸರ್ಚ್ ಮಾಡಿದರೆ, Exception ಪದದ ಅರ್ಥ ನಿಮಗೆ ದೊರೆಯುತ್ತದೆ. ಬೇಕಾದ ಇಂಗ್ಲಿಷ್ ಪದದ ಅರ್ಥ ತಿಳಿಯಲು ಇದನ್ನು ಬಳಸಬಹುದು. ಅದೇ ರೀತಿ, ಕನ್ನಡ ಪದ ಬರೆದು ಇಂಗ್ಲಿಷಿನಲ್ಲಿ ಯಾವ ಪದ ಎಂದೂ ತಿಳಿದುಕೊಳ್ಳಬಹುದು. ಎರಡನೆಯದು ಪರಿಪೂರ್ಣವಲ್ಲ, ಕೆಲವು ಸಾದಾ ಪದಗಳಿಗೆ ಮಾತ್ರ ಅರ್ಥ ದೊರೆಯುತ್ತದೆ ಎಂಬುದು ನೆನಪಿರಲಿ.
* ಯಾವುದೇ ಒಂದು ಪದದ ಪೂರ್ಣ ವಿವರಣೆ ಬೇಕಿದ್ದರೆ, Define: ಅಂತ ಬರೆದು, ಆ ಪದವನ್ನು ಹಾಕಿದರಾಯಿತು. ಉದಾ. Define:Google ಅಂತ ಹುಡುಕಿದರೆ, ಪೂರ್ಣ ವಿವರಣೆ ಲಭ್ಯವಾಗುತ್ತದೆ. ಸದ್ಯಕ್ಕೆ ಕನ್ನಡ ಪದಗಳಿಗೆ ಈ ಭಾಗ್ಯ ಇದ್ದಂತಿಲ್ಲ.
* ಹಿಂದೊಮ್ಮೆ ತಿಳಿಸಿದಂತೆ, ಬೇರೆ ದೇಶಕ್ಕೆ ಹೋಗಬೇಕೆಂದಿದ್ದರೆ, ಅಥವಾ ಬೇರೆ ಯಾವುದೇ ಮಾಹಿತಿಗಾಗಿ, ಉದಾ. ಸಾವಿರ ರೂಪಾಯಿಗೆ ಎಷ್ಟು ಬ್ರಿಟನ್ ಪೌಂಡ್ ಅಂತ ತಿಳಿಯಬೇಕಿದ್ದರೆ, 1000 INR in Pounds ಅಂತಲೋ, 100 Rs. in Euro ಅಂತಲೋ ಇಲ್ಲವೇ 100 INR in Dollar ಅಂತಲೋ ಸರ್ಚ್ ಮಾಡಿ, ಖಚಿತ ಮೊತ್ತ ತಿಳಿದುಕೊಳ್ಳಬಹುದು.
* ಬೇರೆ ಊರಿಗೆ ಹೋಗುತ್ತೀರಿ, ಅಲ್ಲಿ ಮಳೆಯೋ, ಚಳಿಯೋ, ಸೆಖೆಯೋ ಅಂತೆಲ್ಲಾ ತಿಳಿದುಕೊಳ್ಳಬೇಕೇ? ಅದನ್ನೂ ಗೂಗಲ್‌ನಿಂದಲೇ ತಿಳಿದುಕೊಳ್ಳಿ. ಉದಾಹರಣೆಗೆ, ಸರ್ಚ್ ಬಾಕ್ಸ್‌ನಲ್ಲಿ Weather in Hyderabad ಅಂತ ಬರೆದು ಎಂಟರ್ ಒತ್ತಿದಾಕ್ಷಣ, ಇಡೀ ವಾರದ ಪೂರ್ಣ ಮಾಹಿತಿ ಲಭ್ಯವಾಗುತ್ತದೆ.
* ಸ್ಮಾರ್ಟ್ ಫೋನುಗಳಲ್ಲಿರುವಂತೆ ನಿಮ್ಮ ಕಂಪ್ಯೂಟರ್‌ನಲ್ಲಿ ಅನುಕೂಲವಿದೆಯೆಂದಾದರೆ, ಗೂಗಲ್ ಸರ್ಚ್ ಬಾಕ್ಸ್ ಪಕ್ಕದ ಮೈಕ್ ಬಟನ್ ಒತ್ತಿ, ಧ್ವನಿಯ ಮೂಲಕವೂ ಹುಡುಕಾಟ ನಡೆಸಬಹುದು. ಉದಾ. ಮೈಕ್ ಬಟನ್ ಒತ್ತಿ, Tell me joke ಅಂತ ಹೇಳಿದರೆ, ಅದು ಜೋಕ್ಸ್ ಹುಡುಕಿ ಕೊಡುತ್ತದೆ.
ಮಾಹಿತಿ@ತಂತ್ರಜ್ಞಾನ-133 ವಿಜಯ ಕರ್ನಾಟಕ ಅಂಕಣ 06 ಜುಲೈ 2015: ಅವಿನಾಶ್ ಬಿ.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…