Categories: myworldOpinion

ಕೋಪದ ತಾಪ…!

   ಆತ್ಮೀಯರೇ, ನಿಮ್ಮ ಕೋಪ (ಶಾರ್ಟ್ ಟೆಂಪರ್) ತಹಬದಿಗೆ ತರಲು ಇದು ಸಹಾಯಕವಾಗಬಹುದು ಎಂದು ಭಾವಿಸಿದ್ದೇನೆ. ಯೋಚಿಸಿ ನೋಡಿ. ಯಾವುದೇ ರೀತಿಯಲ್ಲಿ ಟೆಂಪರ್ ಕಳೆದುಕೊಳ್ಳದೆ, ಇದರ ಕೊನೆಯ ಸಾಲಿನವರೆಗೂ ತಾಳ್ಮೆಯಿಂದ ಓದಿ.

   ಒಂದಾನೊಂದು ಕಾಲದಲ್ಲಿ ಪ್ರತಿಯೊಂದಕ್ಕೂ ಸಿಡುಕುವ ಅಂದರೆ ಶಾರ್ಟ್ ಟೆಂಪರ್ ಉಳ್ಳ ಹುಡುಗನೊಬ್ಬನಿದ್ದ.

   ಒಂದು ದಿನ ಅವನ ಅಪ್ಪ, ಅವನಿಗೆ ಮೊಳೆಗಳು ತುಂಬಿದ ಚೀಲವೊಂದನ್ನು ಕೊಟ್ಟು, ನೋಡು ಮಗಾ, ನೀನು ಪ್ರತಿಬಾರಿ ಟೆಂಪರ್ ಕಳೆದುಕೊಂಡಾಗ, ಒಂದು ಸುತ್ತಿಗೆ ತೆಗೆದುಕೊಂಡು, ಇದರಲ್ಲಿರುವ ಮೊಳೆಯನ್ನು,  ನೋಡು…. ಆ…. ಅಲ್ಲಿ ಕಾಣುತ್ತಿರುವ ನಮ್ಮ ಮನೆಯ ಮರದ ಗೇಟಿಗೆ ಹೊಡೆಯಬೇಕು ಎಂದು ಸೂಚನೆ ನೀಡಿದ.

   ಸರಿ, ಮೊದಲ ದಿನವೇ ಈ ಹುಡುಗ 48 ಮೊಳೆಗಳನ್ನು ಗೇಟಿಗೆ ಹೊಡೆದುಬಿಟ್ಟ.
ವಾರಗಳುರುಳಿದಂತೆ, ದಿನಂಪ್ರತಿ ಈ ಹುಡುಗ ಗೇಟಿಗೆ ಬಡಿಯುವ ಮೊಳೆಗಳ ಸಂಖ್ಯೆ ಕಡಿಮೆಯಾಗತೊಡಗಿತು. ಅಂದರೆ ಇವನ ಕೋಪ ತಾಪ ಶಮನವಾಗುತ್ತಾ ಬಂತು. ಇದಕ್ಕೆ ಪ್ರಮುಖ ಕಾರಣ, ಈ ಮೊಳೆಗಳನ್ನು ಕಷ್ಟಪಟ್ಟು ಗೇಟಿಗೆ ಬಡಿಯುವ ಬದಲು ಕೋಪವನ್ನು ನಿಯಂತ್ರಿಸುವುದೇ ಸುಲಭ ಎಂಬುದು ಅವನ ಅರಿವಿಗೆ ಬಂತು.

   ಕೊನೆಗೊಂದು ದಿನ ಬಂತು. ಆ ದಿನ ಈ ಹುಡುಗ ಒಂದೇ ಒಂದು ಮೊಳೆಯನ್ನೂ ಗೇಟಿಗೆ ಬಡಿದಿರಲಿಲ್ಲ. ಅಂದರೆ ಆತನ ಮನಸ್ಸು ತಾಳ್ಮೆಗೆ ಒಗ್ಗಿಹೋಗಿತ್ತು.

   ವಿಷಯವನ್ನು ಈ ಹುಡುಗ ಅಪ್ಪನಿಗೆ ಹೇಳಿದ. ಆದರೆ ತಂದೆ ಬಿಡಬೇಕಲ್ಲ. ನೀನು ಕೋಪವನ್ನು ಎಷ್ಟರವರೆಗೆ ನಿಯಂತ್ರಿಸಿಕೊಳ್ಳುತ್ತೀಯೋ, ಅಷ್ಟರವರೆಗೆ ಪ್ರತಿದಿನ, ದಿನಕ್ಕೊಂದರಂತೆ ಮೊಳೆಗಳನ್ನು ಆ ಗೇಟಿನಿಂದ ತೆಗೆಯುತ್ತಿರಿ ಎಂದು ಸೂಚನೆ ನೀಡಿದ.

   ದಿನಗಳು, ವಾರಗಳು, ತಿಂಗಳುಗಳು ಉರುಳಿದವು. "ಎಲ್ಲಾ ಮೊಳೆಗಳನ್ನು ಗೇಟಿನಿಂದ ಕಿತ್ತು ಹಾಕಿಬಿಟ್ಟೆ ಅಪ್ಪಾ" ಎಂದು ಈ ಹುಡುಗ ಹೇಳುವ ದಿನ ಬಂತು. ವಿಷಯ ತಿಳಿಸಿದಾಗ, ಚತುರ ತಂದೆ, ಮಗನನ್ನು ಆ ಮರದ ಗೇಟಿನ ಬಳಿಗೆ ಕರೆದುಕೊಂಡು ಹೋದ.
ಮಗನ ಮುಖವನ್ನೇ ನೋಡುತ್ತಾ ತಂದೆ ಹೇಳುತ್ತಾನೆ:

   "ಒಳ್ಳೆಯದನ್ನೇ ಮಾಡಿದೆ ಮಗಾ, ಆದರೆ ಆ ಮರದ ಗೇಟಿನತ್ತ ಒಮ್ಮೆ ನೋಡಿಬಿಡು…. ಅದರ ಮೈಮೇಲೆ ಎಷ್ಟೊಂದು ತೂತುಗಳು…. ಆ ಗೇಟು ಹಿಂದಿನಂತಾಗುವುದು ಎಂದಿಗೂ ಸಾಧ್ಯವಿಲ್ಲ…..

   ನೀನು ಕೋಪಾವೇಶದಲ್ಲಿ ಏನನ್ನಾದರೂ ಕೂಗಾಡಿಬಿಟ್ಟರೆ, ಆ ಮಾತುಗಳು ಉಳಿದವರ ಮನಸ್ಸಿನಲ್ಲಿ ಇದೇ ರೀತಿಯ ಅಚ್ಚಳಿಯದ ರಂಧ್ರಗಳನ್ನು ಉಳಿಸುತ್ತವೆ.
ನೀನು ಕೋಪದಿಂದ ಒಬ್ಬ ವ್ಯಕ್ತಿಗೆ ತಿವಿಯಬಹುದು, ಕೋಪ ಶಮನವಾದಾಗ ಚಾಕುವನ್ನು ಹೊರಕ್ಕೆಳೆಯಬಹುದು. ನೀನು ಎಷ್ಟೇ ಬಾರಿ "ಸಾರಿ" ಎಂದು ಹೇಳಿದರೂ, ಆ ಗಾಯವಿದೆಯಲ್ಲ…. ಅದು ಎಂದಿಗೂ ಮಾಸಲಾರದು."

   "ಶಾರೀರ"ದ ಗಾಯ ಕೂಡ "ಶರೀರ"ದ ಗಾಯದಷ್ಟೇ ಗಾಢವಾದದ್ದು, ಶಕ್ತಿಯುತವಾದದ್ದು.

ಹೇಗನಿಸುತ್ತದೆ? ಹೌದಲ್ಲವೇ? ಯೋಚನೆ ಮಾಡಿ….

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಪ್ರಿಯ ಅವಿ, ನಿಮ್ಮ ಕಥೆ ಸೊಗಸಾಗಿದೆ. ಆದರೆ ಪ್ರತಿ ಬಾರಿ ತಾಳ್ಮೆಗೆಟ್ಟಾಗಲೆಲ್ಲಾ ಮೊಳೆ ಜಡಿಯಬೇಕಾದ ಕರ್ಮ ಮತ್ತಷ್ಟು ತಾಳ್ಮೆಗೆಡಿಸುವುದಿಲ್ಲವೇ. ಬಹುಶಃ ಆ ಹುಡುಗನಿಗೆ ಮೊಳೆ ಹೊಡೆಯುವಷ್ಟು ತಾಳ್ಮೆ ಇರದಿದ್ದರಿಂದ ಅದರ ಗೋಜಿಗೇ ಹೋಗಲಿಲ್ಲವೇನೊ. ಏನಂತೀರಿ?

  • ಸಾರಥಿ ಅವರೆ,
    ಇದು ತಾಳ್ಮೆಯ ಪರೀಕ್ಷಾ ಕೇಂದ್ರ. ತಾಳಿದವನು ಬಾಳಿಯಾನು ಎಂಬುದೇ ಇದರ ಸಂದೇಶ.

  • ಎನಿಗ್ಮಾಟಿಕ್ಯಾಷ್ ಅವರೆ,
    ಬ್ಲಾಗಿಗೆ ಬಂದು ಒಳ್ಳೇ ಕಥೆ ಅಂದಿದ್ದಕ್ಕೆ ಥ್ಯಾಂಕ್ಸ್.
    ನೀವು ಯಾರು, ಎಲ್ಲಿಂದ ಅಂತ ತಿಳಿದುಕೊಳ್ಳಬಹುದೇ?

Recent Posts

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

6 days ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

4 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

5 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago