ಜಗತ್ತಿನ ಪ್ರಮುಖ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಾದ ಆ್ಯಪಲ್ ಹಾಗೂ ಸ್ಯಾಮ್ಸಂಗ್ ನಡುವಿನ ಪೇಟೆಂಟ್ ಯುದ್ಧ ಇಂದು-ನಿನ್ನೆಯದಲ್ಲ. ಸ್ಯಾಮ್ಸಂಗ್ ಕಂಪನಿಯು ಯಾವಾಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳನ್ನು ತಯಾರಿಸಲು ಆರಂಭಿಸಿತೋ, ಆವಾಗಲೇ ಈ ಕದನ ಶುರುವಾಗಿತ್ತು. ತೀರಾ ಇತ್ತೀಚೆಗೆ, ಐಫೋನ್ ತಂತ್ರಜ್ಞಾನವನ್ನು ನಕಲು ಮಾಡಿದ್ದಕ್ಕಾಗಿ ತನಗೆ ವಿಧಿಸಲಾಗಿದ್ದ ಕೋಟ್ಯಂತರ ಡಾಲರ್ ದಂಡವನ್ನು ಮರುಪರಿಶೀಲಿಸುವಂತೆ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಅಮೆರಿಕ ಫೆಡರಲ್ ಸರ್ಕ್ಯೂಟ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ. ಈ ಕದನದ ಚರಿತ್ರೆಯತ್ತ ಒಂದು ಹೊರಳು ನೋಟ.
ಪಾಲುದಾರರ ಸಂಘರ್ಷ
ಆಪಲ್ ಹಾಗೂ ಸ್ಯಾಮ್ಸಂಗ್ ಎರಡೂ ಕೂಡ ದೀರ್ಘ ಕಾಲದ ಔದ್ಯಮಿಕ ಪಾಲುದಾರರು. ಸ್ಯಾಮ್ಸಂಗ್ ತಯಾರಿಸಿಕೊಡುವ ಫ್ಲ್ಯಾಶ್ ಮೆಮೊರಿ, ಸ್ಕ್ರೀನ್, ಪ್ರೊಸೆಸರ್‌ಗಳು ಮತ್ತಿತರ ಬಿಡಿ ಭಾಗಗಳಿಗೆ ಆ್ಯಪಲ್ ಕೋಟ್ಯಂತರ ರೂಪಾಯಿ ಪಾವತಿಸುತ್ತಿದೆ. ಇದರ ಹೊರತಾಗಿಯೂ ಸ್ಮಾರ್ಟ್ ಫೋನ್‌ಗಳ ಕ್ಷೇತ್ರದಲ್ಲಿ ಇಬ್ಬರದು ಕೈಕೈ ಮಿಲಾಯಿಸುವ ಸಂಘರ್ಷ.
2010
ಆಪಲ್‌ನ ಕೆಲವು ಪೇಟೆಂಟ್ ತಂತ್ರಜ್ಞಾನ ಬಳಸಿರುವ ಬಗ್ಗೆ ಸ್ಯಾಮ್ಸಂಗ್‌ಗೆ ಎಚ್ಚರಿಕೆ. ಉಭಯರ ಮಧ್ಯೆ ಮಾತುಕತೆ. ಪ್ರತೀ ಫೋನ್‌ಗೆ 30 ಡಾಲರ್‌ನಂತೆ ನೀಡಬೇಕೆಂಬ ಕೋರಿಕೆಗೆ ಸ್ಯಾಮ್ಸಂಗ್ ತಿರಸ್ಕಾರ.
2011
ಏಪ್ರಿಲ್ ತಿಂಗಳಲ್ಲಿ ಸ್ಮಾರ್ಟ್ ಫೋನ್ ವಿನ್ಯಾಸದ ಪೇಟೆಂಟ್ ಉಲ್ಲಂಘನೆಗಾಗಿ ಮೊದಲ ಕೇಸು ದಾಖಲು. ಸ್ಯಾಮ್ಸಂಗ್‌ನಿಂದಲೂ 3ಜಿ ತಂತ್ರಜ್ಞಾನದ ಪೇಟೆಂಟ್ ಉಲ್ಲಂಘಿಸಿದೆ ಎಂದು ಆ್ಯಪಲ್ ವಿರುದ್ಧ ಪ್ರತಿ ದೂರು.
2011, ಏಪ್ರಿಲ್ 15
ಸ್ಯಾಮ್ಸಂಗ್‌ನ ಕೆಲವು ಸಾಧನಗಳು ಆ್ಯಪಲ್‌ನ ಹಲವಾರು ಪೇಟೆಂಟ್‌ಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಆ್ಯಪಲ್‌ನಿಂದ ಕ್ಯಾಲಿಫೋರ್ನಿಯಾ ಕೋರ್ಟ್‌ನಲ್ಲಿ ದಾವೆ.
ಪ್ರತಿ ದಾವೆ
ಆಪಲ್ ತನ್ನ ಮೊಬೈಲ್ ಸಂವಹನ ತಂತ್ರಜ್ಞಾನಗಳ ಪೇಟೆಂಟನ್ನು ಉಲ್ಲಂಘಿಸಿದೆ ಎಂದು ಸ್ಯಾಮ್ಸಂಗ್ ಕೂಡ ಕೊರಿಯಾ, ಜಪಾನ್, ಬ್ರಿಟನ್, ಅಮೆರಿಕ ಹಾಗೂ ಜರ್ಮನಿಗಳಲ್ಲಿ ಪ್ರತಿ ದಾವೆ ಹೂಡಿತು.
ಸಾಧನಗಳ ಮಾರಾಟ ನಿಷೇಧ
2011 ಸೆಪ್ಟೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ಹಾಗೂ ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿ ಐಪ್ಯಾಡ್‌ಗೆ ಹತ್ತಿರದ ವಿನ್ಯಾಸ ಹೊಂದಿರುವ ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ 10.1ರ ಮಾರಾಟಕ್ಕೆ ನಿರ್ಬಂಧ ವಿಧಿಸುವಲ್ಲಿ ಆ್ಯಪಲ್‌ಗೆ ಯಶಸ್ಸು. ಜರ್ಮನಿಯಲ್ಲಿ ಆ್ಯಪಲ್ ಸಾಧನಗಳ ಮಾರಾಟಕ್ಕೆ ಕೆಲವು ಗಂಟೆಗಳ ಕಾಲ ತಡೆಯೊಡ್ಡುವಲ್ಲಿ ಸ್ಯಾಮ್ಸಂಗ್ ಸಫಲವಾಗಿತ್ತು.
ನಕಲು ಮಾಡಿಲ್ಲ
ಇದೇ ವೇಳೆ, ಇಂಗ್ಲೆಂಡ್ ಕೋರ್ಟೊಂದು, ಸ್ಯಾಮ್ಸಂಗ್ ತಮ್ಮ ವಿನ್ಯಾಸವನ್ನು ನಕಲು ಮಾಡಿಲ್ಲವೆಂದು ಸಾರ್ವಜನಿಕವಾಗಿ ಪ್ರಕಟಿಸುವಂತೆ ಆ್ಯಪಲ್‌ಗೆ ಸೂಚಿಸಿತು.
ಮೊದಲ ನಷ್ಟ ಪರಿಹಾರ ತೀರ್ಪು
2012ರ ಆಗಸ್ಟ್ 24ರಂದು ನ್ಯಾಯಾಲಯದ ತೀರ್ಪು ಆ್ಯಪಲ್ ಪರ ಬಂದಿತ್ತು. 104.9 ಕೋಟಿ ಡಾಲರ್ ಹಾನಿ ಪರಿಹಾರ ನೀಡುವಂತೆ ಸ್ಯಾಮ್ಸಂಗ್‌ಗೆ ಸೂಚಿಸಿತು. ಇದನ್ನು ಸ್ಯಾಮ್ಸಂಗ್ ಪ್ರಶ್ನಿಸಿದ ಬಳಿಕ 2013ರಲ್ಲಿ, 45 ಕೋಟಿ ಡಾಲರ್ ಕಡಿಮೆ ಪರಿಹಾರ ನೀಡಬಹುದು ಎಂದಿತು ಕೋರ್ಟ್. ಇದು ಈಗಲೂ ಮುಂದುವರಿದಿದೆ.
ವಿವಿಧ ದೇಶಗಳು
ಅಮೆರಿಕ ಮಾತ್ರವಲ್ಲದೆ ಜಪಾನ್, ಜರ್ಮನಿ, ಆಸ್ಟ್ರೇಲಿಯಾ, ಇಟಲಿ, ಫ್ರಾನ್ಸ್, ಹಾಲೆಂಡ್ ಮತ್ತು ದಕ್ಷಿಣ ಕೊರಿಯಾಕ್ಕೂ ಆ್ಯಪಲ್ ಮತ್ತು ಸ್ಯಾಮ್ಸಂಗ್ ನಡುವಣ ಸಂಘರ್ಷ ವಿಸ್ತರಣೆಯಾಗಿದೆ.
50ಕ್ಕೂ ಹೆಚ್ಚು ಕೇಸುಗಳು
ವಿವಿಧ ರಾಷ್ಟ್ರಗಳಲ್ಲಿ 50ಕ್ಕೂ ಹೆಚ್ಚು ಕೇಸುಗಳು ಈಗಲೂ ಚಾಲ್ತಿಯಲ್ಲಿವೆ. ಶತಕೋಟಿ ಡಾಲರ್ ನಷ್ಟ ಪರಿಹಾರದ ವ್ಯಾಜ್ಯ ಇನ್ನೂ ಮುಂದುವರಿದಿದೆ. ಅವರಿಬ್ಬರ ವ್ಯಾವಹಾರಿಕ ಪಾಲುದಾರಿಕೆಯೂ ಮುಂದುವರಿದಿದೆ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
View Comments
super
ಧನ್ಯವಾದ ಸರ್.