ಯಾಹೂ! ಕನ್ನಡದಲ್ಲಿ ಚಾಟ್

6
571

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡಿಗರಿಗೆ ಸಿಹಿ ಸುದ್ದಿ.

ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಇಂಟರ್ನೆಟ್ ದೈತ್ಯ ಸಂಸ್ಥೆ ಯಾಹೂ! ಇಂಡಿಯಾ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಯಾಹೂ! ಮೆಸೆಂಜರ್‌ನ 8.0 ಆವೃತ್ತಿಯಲ್ಲಿ ಇನ್ನು ಮುಂದೆ ಪ್ಲಗ್-ಇನ್ ಸಹಾಯ ಪಡೆದು ಕನ್ನಡದಲ್ಲೇ ಚಾಟ್ ಮಾಡಬಹುದಾಗಿದೆ.

ಇದುವರೆಗೆ ಹಿಂದಿ, ಮರಾಠಿ, ತೆಲುಗು ಮುಂತಾದ ಭಾಷೆಗಳಲ್ಲಿ ಈ ಅವಕಾಶ ಇತ್ತು. ಇದು ಸುವರ್ಣ ಕರ್ನಾಟಕ ಉತ್ಸವ ಸಂದರ್ಭದಲ್ಲಿ ಕನ್ನಡಿಗರಿಗೆ ಯಾಹೂ! ಕೊಡುಗೆ.

ಪರ ಊರಿನಲ್ಲಿರುವ ಕನ್ನಡಿಗರಿಗೆ ತಮ್ಮವರ ಜತೆ ಕನ್ನಡದಲ್ಲೇ ಚಾಟಿಸುವ ಅವಕಾಶ.

6 COMMENTS

  1. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಿದಲ್ಲಿ ಉತ್ತಮ…
    ಅಥವಾ ಅದರ ಬಗ್ಗೆಯೇ ಒಂದು ಬರಹವನ್ನು ನಮ್ಮ ತಾಣ http://www.prakashaka.com ಗೆ ಬರೆಯ ಬಹುದೆ?

    ನಮ್ಮ ವಿಳಾಸ prakashaka@gmail.com ಗೆ ತಿಳಿಸಿದಲ್ಲಿ ಉತ್ತಮ

    ಧನ್ಯವಾದಗಳೊಂದಿಗೆ
    ನಿಮ್ಮ ಪ್ರಕಾಶಕ
    ಪ್ರಕಾಶ್ ಶೆಟ್ಟಿ ಉಳೆಪಾಡಿ

  2. ನಮಸ್ಕಾರ ಪ್ರಕಾಶ್ ಶೆಟ್ರಿಗೆ,
    ನನ್ನ ಬ್ಲಾಗಿಗೆ ಸ್ವಾಗತ.
    ನಿಮ್ಮ ತಾಣ ನೋಡಿ ಸಂತೋಷವಾಯಿತು. ಸದ್ಯಕ್ಕೆ ನಾನು ಕಾರ್ಯ ನಿಮಿತ್ತ ಬೇರೆ ಊರಿನಲ್ಲಿರುವುದರಿಂದಾಗಿ, ಮರಳಿದ ಬಳಿಕ ಈ ಬಗ್ಗೆ ಪ್ರಯತ್ನಿಸುತ್ತೇನೆ.

    ಮತ್ತು ನಿಮ್ಮಲ್ಲಿ ಯುನಿಕೋಡ್‌ನಲ್ಲಿ ಟೈಪ್ ಮಾಡಿದರೆ ಅವಕಾಶವಿದೆಯೇ?

    ಧನ್ಯವಾದಗಳು.

  3. ಪಂಡಿತಾರಾಧ್ಯ ಅವರಿಗೆ ಸ್ವಾಗತ.
    ಯಾಹೂ ಪ್ಲಗ್-ಇನ್‌ನಲ್ಲಿ ಯುನಿಕೋಡ್ ವ್ಯವಸ್ಥೆ ಇರುವುದರಿಂದ ಹೊಸ ವಿಂಡೋಸ್ (ಎಕ್ಸ್‌ಪಿ ಮತ್ತು ನಂತರದ್ದು) ನಲ್ಲಿ ಬಳಸುವವರಿಗೆ ಸುಲಭವಾಗಲಿದೆ.

  4. ಶಿವರಾಜ್ ಅವರಿಗೆ ನಮಸ್ಕಾರ,

    ನಿಮ್ಮ ಅಭಿಮಾನಕ್ಕೆ ಋಣಿ.

    ನಮಸ್ಕಾರ
    -ಅವಿನಾಶ್

Leave a Reply to Shivaraj Karkera Cancel reply

Please enter your comment!
Please enter your name here