ಸ್ನೇಹವೆಂಬ ಸೂಕ್ಷ್ಮ ಬೆಸುಗೆ

4
636

ಬದಲಾಗಿರುವ ಜಗತ್ತಿನಲ್ಲಿ ಸ್ನೇಹಕ್ಕೆಲ್ಲಿದೆ ಜಾಗ? ಇಲ್ಲಿ ಪರಸ್ಪರ ಹೊಂದಾಣಿಕೆ, ಅರ್ಥ ಮಾಡಿಕೊಳ್ಳುವಿಕೆಗಳೇ ಸ್ನೇಹಕ್ಕೆ ಮೂಲಾಧಾರವೆಂಬುದು ಗೊತ್ತಿದ್ದರೂ, ಅದಕ್ಕೆಲ್ಲಾ ಪುರುಸೊತ್ತೆಲ್ಲಿದೆ?

ಈ ಸ್ನೇಹದ ಕೊಂಡಿ ಕಳಚಿಕೊಳ್ಳುವುದು ಹೇಗೆ? ಕಳಚಿಕೊಳ್ಳಲು ಕಾರಣಗಳು ಬೇಕಿಲ್ಲ, ಇದೇನಿದ್ದರೂ ಇ-ಮೇಲ್, ಮಿಸ್ಡ್ ಕಾಲ್‌ಗಳೇ ಸ್ನೇಹದ ಕೊಂಡಿಯಾಗಿರುವ ಯುಗ. ಏನಿದ್ದರೂ Instant ಆಗಿರಬೇಕು. ಇಂಥದ್ದರಲ್ಲಿ ಪ್ರೀತಿಯ, ಮಮತೆಯ, ಆತ್ಮೀಯತೆಯ ಬಂಧದಲ್ಲಿ ಒಡಕು ಕಾಣಿಸಿಕೊಳ್ಳುವುದು ಯಾವಾಗ? ಸ್ವಲ್ಪ ನೋಡೋಣ.

ಗೆಳೆಯರು ಅಥವಾ ಗೆಳತಿಯರಲ್ಲಿ ಪಾಪ… ಒಳ್ಳೆಯ ಅಭಿಪ್ರಾಯವೇ ಇರುತ್ತದೆ. ಅವನಿಗೆಲ್ಲಿ ತೊಂದರೆಯಾದೀತೋ, ಅವಳಿಗೆಷ್ಟು ಕೆಲಸವಿದೆಯೋ ಎಂದೆಲ್ಲಾ ತಿಳಿದುಕೊಂಡು ಫೋನ್ ಮಾಡುವುದು ಅಥವಾ ಮೇಲ್ ಕಳುಹಿಸುವುದರಿಂದ ದೂರವಾಗುತ್ತಾರೆ.

ಇಬ್ಬರಲ್ಲೂ ಅದೇ ಅಭಿಪ್ರಾಯವಿರುತ್ತದೆ. ಆದರೆ…. “..ರೆ” ಎಂಬ ಶಂಕೆಯಿಂದಾಗಿ ಸ್ನೇಹದ ತಂಗಾಳಿಗೆ ಪರದೆಯೊಂದು ಬಿದ್ದಿರುತ್ತದೆ. ದಿನಕಳೆದಂತೆ, ನಮ್ಮಲ್ಲಿ ಇನ್ನೊಂದು ಭಾವನೆ ಸಹಜವೋ… ಅಸಹಜವೋ… ಗೊತ್ತಿಲ್ಲ… ಅಂತೂ ಹುಟ್ಟಿಕೊಳ್ಳುತ್ತದೆ. ಅದುವೇ… ಅವನೇ ಮಾತನಾಡಿಸಲಿ, ಇಷ್ಟು ದಿನವಾದ್ರೂ ಸಂಪರ್ಕಿಸಿಲ್ಲ, ನಾನೇಕೆ ಮೇಲೆ ಬಿದ್ದು ಓಲೈಸಲಿ? ಎಂಬ ಹಮ್ಮು, ಬಿಗುಮಾನ ಮೊಳೆತುಕೊಳ್ಳುತ್ತದೆ.

ಈ ಹಂತದಲ್ಲಿ ಸ್ನೇಹದ, ಪ್ರೀತಿಯ, ಆತ್ಮೀಯತೆಯ ಪೊರೆಯು ನಿಧಾನವಾಗಿ ದ್ವೇಷದ ಛಾಯೆಯಾಗಿ ಪರಿವರ್ತನೆಯಾಗುತ್ತದೆ.

ಕೊನೆಗೊಂದು ದಿನ ಫಾರ್ವರ್ಡ್ ಮೆಸೇಜ್‌ಗಳಿಗೂ ಕಡಿವಾಣ ಬೀಳುತ್ತದೆ. ಒಂದೇ ಒಂದು ಮೆಸೇಜ್ ಇಲ್ಲ, ಮಾತಿಲ್ಲ, ಮಿಸ್ಡ್ ಕಾಲ್ ಇಲ್ಲ, ಕತೆಯಿಲ್ಲ… ಹೀಗೇ ವಾರಗಳು ಉರುಳುತ್ತವೆ. ಅದೊಂದು ಕೆಟ್ಟ ದಿನ ಇಬ್ಬರ ಮನಸ್ಸೂ ಗಟ್ಟಿಯಾಗಿಬಿಡುತ್ತದೆ. ಮರೆಯಲಾಗದಿದ್ದರೂ ಮರೆಯಲು ಯತ್ನಿಸುತ್ತಾರೆ.

ಅಂಥದ್ದೇ ಮತ್ತೊಂದು ಮರೆಯಲಾರದ ದಿನವೊಂದು ಎದುರಾಗುತ್ತದೆ. ಅದ್ಯಾವುದೋ ಕಾಕತಾಳೀಯ ಪ್ರಸಂಗದಿಂದ ಇಬ್ಬರೂ ಪರಸ್ಪರ ಎದುರಾಗಬೇಕಾಗುತ್ತದೆ… ಆದರೆ ಇಲ್ಲಿ ಅದಾಗಲೇ ಗಟ್ಟಿಯಾಗಿಬಿಟ್ಟಿದ್ದ ಮನಸ್ಸಿನ ಬಿಗುಮಾನ ಬಿಡಬೇಕಲ್ಲ…. “ನೀನೇ ದೂರವಾದೆ” ಎಂಬುದು ಪರಸ್ಪರರ ಆರೋಪವಾಗುತ್ತದೆ.

ಇಲ್ಲಿ ಕೂಡ ಕಳಚಿದ ಬಂಧವನ್ನು ಬೆಸೆಯಲು ಅವಕಾಶವಿರುತ್ತದೆ. ಆದರೆ ಹಮ್ಮು-ಬಿಮ್ಮು ಬಿಡಬೇಕಲ್ಲ…! ಅಲ್ಲಿಗೆ ಜೀವನೋತ್ಸಾಹಕ್ಕೆ ಕಾರಣವಾಗಿದ್ದ, ಆತ್ಮೀಯತೆಯ ಸ್ಪರ್ಶ ನೀಡಿದ್ದ, ಉಲ್ಲಾಸಕ್ಕೆ ಪೂರಕವಾಗಿದ್ದ ಕೊಂಡಿಯೊಂದು ಎಂದೂ ಸರಿಪಡಿಸಲಾಗದಂತೆ ತುಂಡಾಗಿರುತ್ತದೆ.

ಈ ಹಂತದಲ್ಲಿ ಸ್ನೇಹದ ಬಂಧವನ್ನು ಮರುಸ್ಥಾಪಿಸಬಹುದೇ? ಕಳಚಿದ ಬಂಧ ಬೆಸೆಯಬಹುದು…. ಆದರೆ ಅದಾಗಲೇ ಅಲ್ಲಿ ನಂಬಿಕೆ ಎಂಬ ಅಮೂಲ್ಯ ಭಾವನೆಯೊಂದು ಒಳಗೊಳಗೇ ಕೊರೆಯುತ್ತಿರುತ್ತದಲ್ಲಾ…

ಹಾಗಾಗದಂತೆ ನೋಡಿಕೊಳ್ಳಬೇಕಾಗಿದೆ. ಅಪನಂಬಿಕೆಗೆ ಅವಕಾಶ ನೀಡದಂತೆ ಸ್ನೇಹ ನಿಭಾಯಿಸಬೇಕಾಗಿದೆ. ಮಿತ್ರತ್ವವನ್ನು ಕಾಪಾಡಿಕೊಳ್ಳುವುದೂ ಒಂದು ಕಲೆಯೇ. ಅದರ ಬೆಲೆ ಅರಿತವರು ಮಿತ್ರರನ್ನು ನಿರ್ಲಕ್ಷಿಸಲಾರರು. ನಿರಂತರ ಸಂಪರ್ಕವಿರಲಿ, ಮೇಲ್ ಮಾಡಿ, ಮಿಸ್ಡ್ ಕಾಲ್ ಕೊಡಿ ಮತ್ತು ನಿಮ್ಮೆಲ್ಲಾ ಗೆಳೆಯರಿಗೂ ಈ ಸಂದೇಶವನ್ನು ಫಾರ್ವರ್ಡ್ ಮಾಡುತ್ತಾ ಇರಿ.

ಸ್ನೇಹ ನಿರಂತರವಾಗಿರಲಿ
ಗೆಳೆತನಕ್ಕೆ ಜಯವಾಗಲಿ
ಆತ್ಮೀಯತೆ ಚಿರಾಯುವಾಗಲಿ

4 COMMENTS

  1. ಅವಿನಾಶ್ ನನ್ನ ಮನದಲ್ಲಿ (ಎಲ್ಲರಲ್ಲೂ ಇದೇ ಇರಬೇಕು ಎನ್ನಿಸುತ್ತಿದೆ) ಇರುವ ಭಾವನೆಗಳನ್ನೇ ನಿಮ್ಮ ಲೇಖನದಲ್ಲಿ ಅರುಹಿದ್ದೀರಿ. ನೀವೇನಾದರೂ ಮನೋವೈಜ್ಞಾನ ತಿಳಿದಿದ್ದೀರಾ?

    ಇನ್ಮೇಲಿನಿಂದ ನನ್ನ ಸ್ನೇಹಿತರು ಉತ್ತರಿಸಲಿ, ಉತ್ತರಿಸದೇ ಇರಲಿ, ಅಂಚೆ ಕಳುಹಿಸುತ್ತಲೇ ಇರುವೆ. ಮನಸ್ತಾಪಕ್ಕ ಎಡೆ ಕೊಡುವುದಿಲ್ಲ. ನೀವೂ ಹಾಗೆಯೇ ಮಾಡುತ್ತಿದ್ದೀರಾ?

    ತುಂಬಾ ಮನೋಜ್ಞವಾದ ಲೇಖನ ಒದಗಿಸಿದ್ದಕ್ಕೆ ಧನ್ಯವಾದಗಳು.

  2. ಶ್ರೀನಿವಾಸರೆ,
    ಲೇಖನ ಮೆಚ್ಚಿದ್ದಕ್ಕೆ ಧನ್ಯವಾದ.

    ಮನೋವಿಜ್ಞಾನದ ಬಗ್ಗೆ ಆಸಕ್ತಿ ಇದೆ. ಆದ್ರೆ ಹೀಗೇ ಕೂತಿದ್ದಾಗ ನೆನಪಿಗೆ ಬಂತು. ಅದೇನೋ ಹೇಳ್ತಾರಲ್ಲಾ…. ….Devils workshop ಅಂತ… !

    ನೀವು ಆ ನಿರ್ಧಾರ ತೆಗೆದುಕೊಳ್ಳುತ್ತೀರಿ ಅಂದ್ರೆ ಈ ನನ್ನ ಮಾತಿಗೆ ಸಿಕ್ಕ ಮನ್ನಣೆ ಅಂದ್ಕೋತೀನಿ. 🙂

  3. Avinash,

    Thank you! Amoolyavaada salahe kottiddeeri….

    Eega taane obba bahaLa aatmeeya geLeyanige dabaaisi barde. Bareyuva munna nim article Odidre chennagirtittu….

    Neev hELida hammu nanagoo bandittu, aadre adakkinta stong aagiro innod emotion irattalla…. Nijawaada sneha yaavattoo saayalla, prati manastaapada jotegoo baDti aagatte ashte….

    Thanks again for such a beautiful article. Srinivas avru hELdangE mannas artha maaDkoLadralli neevu expect anta tiLisakke E article saaku…

    Haage, Srinivas avrge namaskaara. *Namskaara saar, hEgiddeeri?* 🙂

  4. ಸಿಂಧು, Thanks for your comment.
    ನೀವು ಆತ್ಮೀಯರಿಗೆ ದಬಾಯಿಸಿದ್ದು ಕೇಳಿದ್ರೇ…. ಹೆದರಿಕೆಯಾಗ್ತಿದೆ ಸಿಂಧು. 🙂

    ಆಮೇಲೆ, ಪ್ರತಿ ಮನಸ್ತಾಪದಿಂದ ಸ್ನೇಹ ಹೆಚ್ಚಾಗುತ್ತೆ ಅಂತೀರಲ್ಲಾ… ಅದೀಗ ನನ್ ತಲೆ ಕೊರೆಯಲಾರಂಭಿಸಿದೆ… ಅದ್ಕೇನಾದ್ರೂ ಪರಿಹಾರ ಸೂಚಿಸಿ.

    ಮನಸ್ಸು ಅರ್ಥ ಮಾಡ್ಕೊಳ್ತೀನೋ….. ಅಪಾರ್ಥ ಮಾಡ್ಕೊಳ್ತೀನೋ… ಅನ್ನೋದೇ ನನಗೆ ಅರ್ಥವಾಗದ ಒಗಟು ಆಗಿಬಿಟ್ಟಿದೆ. ಬಹುಶಃ ಈ artcicle ನಾನು… ಬರ್ದಿದ್ದು ಮಾತ್ರ, ಪಾಲಿಸ್ತಾ ಇಲ್ಲ. 🙁

LEAVE A REPLY

Please enter your comment!
Please enter your name here